CAB: ದೇಶದ ಆತ್ಮವನ್ನು ಘಾಸಿಗೊಳಿಸಿದಂತೆ ಎಂದ ಕಾಂಗ್ರೆಸ್​; ಭಾರತದ ಮುಸಲ್ಮಾನರು ಭಯಪಡುವ ಅಗತ್ಯವಿಲ್ಲ ಎಂದ ಶಾ

Citizenship Amendment Bill (CAB): ಇದು ಸಂವಿಧಾನಬಾಹಿರ ಎಂದು ನಮಗೆ ಅನಿಸುತ್ತದೆ, ಇದು ನಮ್ಮ ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ದೇಶದ ಆತ್ಮದಂತಿರುವ ಸಂವಿಧಾನವನ್ನು ಇದು ಘಾಸಿಗೊಳಿಸಲಿದೆ. ನಮ್ಮ ಸಂವಿಧಾನದ ಪ್ರಸ್ತಾವಕ್ಕೆ ಇದು ವಿರುದ್ಧವಾಗಿದೆ.

Seema.R | news18-kannada
Updated:December 11, 2019, 3:33 PM IST
CAB: ದೇಶದ ಆತ್ಮವನ್ನು ಘಾಸಿಗೊಳಿಸಿದಂತೆ ಎಂದ ಕಾಂಗ್ರೆಸ್​; ಭಾರತದ ಮುಸಲ್ಮಾನರು ಭಯಪಡುವ ಅಗತ್ಯವಿಲ್ಲ ಎಂದ ಶಾ
ಸಂಸತ್​ನಲ್ಲಿ ಮಸೂದೆ ಮಂಡನೆ ಮಾಡಿದ ಅಮಿತ್ ಶಾ
  • Share this:
ನವದೆಹಲಿ (ಡಿ.11): ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನದ ಆತ್ಮಕ್ಕೆ ಘಾಸಿಗೊಳಿಸಲಿದೆ ಎಂದು ಕಾಂಗ್ರೆಸ್​ ನಾಯಕ ಆನಂದ್​ ಶರ್ಮಾ ಕಳವಳ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಬಳಿಕ ಮಾತನಾಡಿದ ಅವರು, ಈ ಮಸೂದೆ ಪಾಸ್​ ಆದರೆ, ನಮ್ಮ ಸಂಸ್ಥಾಪಕರಿಗೆ ಅವಮಾನ ಮಾಡಿದಂತೆ. ಶ್ರೀಮಂತ ಇತಿಹಾಸ ಇಂತಹ ನಾಚಿಕೆಗೇಡಿನ ಸಂಗತಿಯನ್ನು ನೆನಪಿನಲ್ಲಿಡಬೇಕಾಗುತ್ತದೆ ಎಂದರು.

ಈ ಮಸೂದೆ ಮೂಲಕ ಮುಸ್ಲಿಂಮೇತರ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಿರಾಶ್ರಿತರು ಭಾರತದ ಪ್ರಜೆಗಳಾಗಲು ಸಾಧ್ಯ ಎಂದು ತೋರಿಸಲಾಗುತ್ತಿದೆ. ಆದರೆ ಒದಿ ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

ಈ ಮಸೂದೆ ಬಗ್ಗೆ ನಾನು, ನಮ್ಮ ಪಕ್ಷ ಒಪ್ಪುವುದಿಲ್ಲ, ಇದು ಸಂವಿಧಾನಬಾಹಿರ ಎಂದು ನಮಗೆ ಅನಿಸುತ್ತದೆ, ಇದು ನಮ್ಮ ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ದೇಶದ ಆತ್ಮದಂತಿರುವ ಸಂವಿಧಾನವನ್ನು ಇದು ಘಾಸಿಗೊಳಿಸಲಿದೆ. ನಮ್ಮ ಸಂವಿಧಾನದ ಪ್ರಸ್ತಾವಕ್ಕೆ ಇದು ವಿರುದ್ಧವಾಗಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅಮಿತ್​ ಶಾ, ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ಇದು ಮುಸ್ಲೀಂರನ್ನು ತಾರತಮ್ಯ ಮಾಡುವುದಿಲ್ಲ ಅಲ್ಲದೇ ವಿಧಿ 14ರನ್ನು ಉಲ್ಲಂಘಿಸುವುದಿಲ್ಲ. ಕಾನೂನಿನ ಮುಂದೆ ಎಲ್ಲರಿಗೂ ನ್ಯಾಯ ದೊರಕಿಸಲಿದ್ದು, ಎಲ್ಲರನ್ನೂ ಸರಿಸಮಾನವಾಗಿ ನೋಡಲಿದೆ ಎಂದರು.

ಮುಸ್ಲಿಂರು ಭಯಪಡುವ ಅವಶ್ಯಕತೆ ಇಲ್ಲ

ಈ ಮಸೂದೆಯಿಂದಾಗಿ ದೇಶದ ಮುಸ್ಲಿಂರು ಭಯಪಡುವ ಅಗತ್ಯವಿಲ್ಲ, ಅವರು ನಮ್ಮ ದೇಶದ ನಾಗರಿಕರಾಗಿರಲಿದ್ದಾರೆ ಎಂದು ಗೃಹ ಸಚಿವ ಅಮಿತ್​ ಶಾ ತಿಳಿಸದರು.ಈ ಮಸೂದೆ ಮುಸ್ಲಿಂರ ವಿರುದ್ಧವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಸಲಾಗಿದೆ. ಆದರೆ, ಈ ರೀತಿಯಾಗಿ ಮಸೂದೆಯಲ್ಲಿ ಯಾವುದೇ ಅಂಶವಿಲ್ಲ ಎಂಬುದನ್ನು ದಾಖಲಿಸಬಲ್ಲೆ. ಈ ಮಸೂದೆ ನೆರೆಯ ಅಲ್ಪ ಸಂಖ್ಯಾತರಿಗೆ. ಭಾರತದ ಮುಸ್ಲಿಂರಿಗೆ ಏನು ಆಗುವುದಿಲ್ಲ. ಭಾರತದ ಮುಸ್ಲಿಂರು ಸುರಕ್ಷಿತವಾಗಿದ್ದು, ಸುರಕ್ಷಿತವಾಗಿರಲಿದ್ದಾರೆ ಎಂದು ಅಭಯ ನೀಡಿದರು.


First published: December 11, 2019, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading