ಭಾರತೀಯ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಹುನ್ನಾರ; ಸಿಎಬಿ ಕುರಿತು ಅಮೆರಿಕನ್ ಕಾಂಗ್ರೆಸ್ ಕಿಡಿ

ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತೀಯ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಎರಡನೇ ದರ್ಜೆಯ ನಾಯಕರೀಕರನ್ನಾಗಿ ಮಾಡುವ ಪ್ರಯತ್ನವಾಗಿದೆ ಎಂದು ಅಮೆರಿಕನ್ ಕಾಂಗ್ರೆಸ್ ಸದಸ್ಯ ಆಂಡ್ರೆ ಕಾರ್ಸನ್ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:December 12, 2019, 10:14 AM IST
ಭಾರತೀಯ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಹುನ್ನಾರ; ಸಿಎಬಿ ಕುರಿತು ಅಮೆರಿಕನ್ ಕಾಂಗ್ರೆಸ್ ಕಿಡಿ
ಅಮೆರಿಕನ್ ಕಾಂಗ್ರೆಸ್ ಸದಸ್ಯ ಆಂಡ್ರೆ ಕಾರ್ಸನ್.
  • Share this:
ವಾಷಿಂಗ್ಟನ್: ಭಾರತದ ಪೌರತ್ವ ತಿದ್ದುಪಡಿ ಮಸೂದೆಯ ಮೂಲಕ ದೇಶದ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರ ಸ್ಥಾನಕ್ಕೆ ಇಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಸ್ಲಿಂ ಅಮೆರಿಕನ್ ಕಾಂಗ್ರೆಸಿಗರು ಆರೋಪ ಮಾಡಿದ್ದಾರೆ.

ನೆರೆ ರಾಷ್ಟ್ರವಾದ ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಆಘ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬರುವ ಮುಸ್ಲೀಮೇತರ ನಿರಾಶ್ರಿತರಿಗೆ ಮಾತ್ರ ಭಾರತೀಯ ಪೌರತ್ವ ನೀಡಲು ಯತ್ನಿಸುತ್ತಿರುವ ಈ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ.

ಈ ಕುರಿತು ಕಳವಳ ವ್ಯಕ್ತಪಡಿಸಿರುವ ಮುಸ್ಲಿಂ ಅಮೆರಿಕನ್ ಕಾಂಗ್ರೆಸ್, “ಈ ಕಾಯ್ದೆಯ ಮೂಲಕ ಭಾರತೀಯ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಎರಡನೇ ದರ್ಜೆಯ ನಾಯಕರೀಕರನ್ನಾಗಿ ಮಾಡುವ ಪ್ರಯತ್ನವಾಗಿದೆ” ಎಂದು ಅಮೆರಿಕನ್ ಕಾಂಗ್ರೆಸ್ ಸದಸ್ಯ ಆಂಡ್ರೆ ಕಾರ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕ್ಯಾಬ್​ಗೆ ಅನುಮೋದನೆ: ತ್ರಿಪುರಾ ಸ್ತಬ್ಧ, ಅಸ್ಸಾಂ ಮುಖ್ಯಮಂತ್ರಿ ಮನೆ ಮೇಲೆ ಕಲ್ಲು ತೂರಾಟ

ಈ ಹಿಂದೆ ಕೇಂದ್ರ ಸರ್ಕಾರ ಕಲಂ 370 ಅನ್ನು ರದ್ದುಗೊಳಿಸಿದ ಸಂದರ್ಭದಲ್ಲೂ ಆಂಡ್ರೆ ಕಾರ್ಸನ್ ಸರ್ಕಾರದ ನಡೆಗೆ ಆತಂಕ ವ್ಯಕ್ತಪಡಿಸಿದ್ದರು. “ಆಗಸ್ಟ್ 05 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ನರೇಂದ್ರ ಮೋದಿ ಸರ್ಕಾರ ಏಕಪಕ್ಷೀಯ ನಿರ್ಧಾರ ಘೋಷಿಸಿದಾಗ ಮುಂದಾಗಬಹುದಾದ ಪರಿಣಾಮ ಮತ್ತು ಕಣಿವೆ ರಾಜ್ಯದ ಭವಿಷ್ಯದ ಕುರಿತು ಆತಂಕ ಮೂಡುತ್ತಿದೆ” ಎಂದಿದ್ದರು.

ಅಲ್ಲದೆ, “ಅಂತಾರಾಷ್ಟ್ರೀಯ ಮಾನದಂಡಗಳನ್ನು ಕಡೆಗಣಿಸುವುದು ಅಪಾಯಕಾರಿ ನಡೆ, ಕಾಶ್ಮೀರಿ ಜನರ ಪ್ರಜಾಪ್ರಭುತ್ವ ಭಾಗವಹಿಸುವಿಕೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಭಾರತೀಯ ಸಾಂವಿಧಾನಿಕತೆಯ ಶ್ರೀಮಂತಿಕೆಯನ್ನು ದುರ್ಬಲಗೊಳಿಸಿದೆ. ಇದು ದೇಶದ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮುಂದಿಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ : ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ರಾಜೀನಾಮೆ ನೀಡಿದ ಐಪಿಎಸ್​ ಅಧಿಕಾರಿ 


 
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading