CISF: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹೆಡ್ ಕಾನ್​​ಸ್ಟೆಬಲ್ ಹುದ್ದೆಗಳ ನೇಮಕಾತಿ; ಕ್ರೀಡಾ ಸ್ಪರ್ಧಿಗಳಿಗೆ ಆದ್ಯತೆ

CISF Recruitment Notification 2019; ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಕ್ರೀಡೆಯಲ್ಲಿ ರಾಷ್ಟ್ರಮಟ್ಟ, ರಾಜ್ಯ ಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು. ಪ್ರಮಾಣ ಪತ್ರವನ್ನು ಹೊಂದಿರಬೇಕು.

news18-kannada
Updated:November 14, 2019, 4:25 PM IST
CISF: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹೆಡ್ ಕಾನ್​​ಸ್ಟೆಬಲ್ ಹುದ್ದೆಗಳ ನೇಮಕಾತಿ; ಕ್ರೀಡಾ ಸ್ಪರ್ಧಿಗಳಿಗೆ ಆದ್ಯತೆ
CISF
  • Share this:
ಕೇಂದ್ರ ಸಶಸ್ತ್ರ ಭದ್ರತಾ ಪಡೆಗಳಲ್ಲಿ ಒಂದಾದ ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯೂರಿಟಿ ಫೋರ್ಸ್​ ಅಗತ್ಯವಿರುವ (ಜನರಲ್​ ಡ್ಯೂಟಿ) ಹುದ್ದೆಗಳ ನೇಮಕಾತಿಗೆ ಆಹ್ವಾನ ಹೊರಡಿಸಿದೆ. ಸುಮಾರು 300 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.

ಕೇಂದ್ರ ಭದ್ರತಾ ಪಡೆ ಹೆಡ್​ ಕಾನ್​​ಸ್ಟೆಬಲ್​ ಹುದ್ದೆಯನ್ನು ಕ್ರೀಡಾ ಕೋಟದಡಿ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಕ್ರೀಡೆಯಲ್ಲಿ ರಾಷ್ಟ್ರಮಟ್ಟ, ರಾಜ್ಯ ಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು. ಪ್ರಮಾಣ ಪತ್ರವನ್ನು ಹೊಂದಿರಬೇಕು.

ವಯೋಮಿತಿ:

ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರದ ನಿಯಮದ ಪ್ರಕಾರ ಜಾತಿವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ:ಕ್ರೀಡಾ ಕೋಟದಡಿ ನೇಮಕಾತಿ ನಡೆಸಲಾಗುತ್ತದೆ. ಸಿಐಎಸ್​ಎಫ್​ ಅಧಿಸೂಚನೆಯಲ್ಲಿ ಸೂಚಿಸಿರುವ ನಿಗದಿತ ಸ್ಥಳಕ್ಕೆ, ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆ ಪ್ರಕಾರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ತಲುಪಿಸಬೇಕು. ಅರ್ಜಿ ಜೊತೆಗೆ ಅಗತ್ಯ ದಾಖಲೆಗಳ ಜೆರಾಕ್ಸ್​ ಲಗತ್ತಿಸಿರಬೇಕು.

ಅರ್ಜಿ ಶುಲ್ಕ:

-ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿ, ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿ್ಳಿಗೆ ರೂ. 100

- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್​ 17, 2019

ಈಶಾನ್ಯ ವಲಯದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24,2019

ಸಿಐಎಸ್‌ಎಫ್ ವೆಬ್‌ಸೈಟ್‌ಗಾಗಿ ಕ್ಲಿಕ್ ಮಾಡಿ

ಅಧಿಸೂಚನೆಗೆ ಕ್ಲಿಕ್​ ಮಾಡಿ

ಇದನ್ನೂ ಓದಿ: ಬಿಎಸ್​ಎನ್​ಎಲ್​ ಹೊಸ ಪ್ರಿಯೇಯ್ಡ್​ ಪ್ಲಾನ್​; 97 ರೂ. ರಿಚಾರ್ಜ್​ ಮಾಡಿದರೆ 2GB ಡೇಟಾ ಉಚಿತ!

ಇದನ್ನೂ ಓದಿ: ‘ಹರೇ ರಾಮ ಹರೇ ಕೃಷ್ಣ‘ ಹೆಸರಿನ ಬಿಕಿನಿ ತೊಟ್ಟ ವಾಣಿ ಕಪೂರ್; ಸಾಮಾಜಿಕ ತಾಣದಲ್ಲಿ ಟ್ರೋಲ್​ ಆದ್ರು ‘ವಾರ್​‘ ಬೆಡಗಿ

First published: November 14, 2019, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading