ಛತ್ತೀಸ್​ಗಡದಲ್ಲಿ ಬಾಂಬ್ ಸಿಡಿದು ಸಿಐಎಸ್​ಎಫ್​ ಸಿಬ್ಬಂದಿ ಸೇರಿ ನಾಲ್ವರು ಬಲಿ; ವಾರದ ಅಂತರದಲ್ಲಿಯೇ ಎರಡನೇ ಬಾರಿಗೆ ನಕ್ಸಲ್ ದಾಳಿ

HR Ramesh | news18
Updated:November 8, 2018, 1:55 PM IST
ಛತ್ತೀಸ್​ಗಡದಲ್ಲಿ ಬಾಂಬ್ ಸಿಡಿದು ಸಿಐಎಸ್​ಎಫ್​ ಸಿಬ್ಬಂದಿ ಸೇರಿ ನಾಲ್ವರು ಬಲಿ; ವಾರದ ಅಂತರದಲ್ಲಿಯೇ ಎರಡನೇ ಬಾರಿಗೆ ನಕ್ಸಲ್ ದಾಳಿ
HR Ramesh | news18
Updated: November 8, 2018, 1:55 PM IST
ನ್ಯೂಸ್ 18 ಕನ್ನಡ

ಛತ್ತೀಸ್​ಗಡ (ನ.8): ನಕ್ಸಲ್​ ಇರಿಸಿದ್ದ ಬಾಂಬ್ (ಐಇಡಿ)​ ಸಿಡಿದು  ಸಿಐಎಸ್​ಎಫ್​ ಸೈನಿಕರು ಸೇರಿ ನಾಲ್ವರು ಅಸುನೀಗಿದ ಘಟನೆ ಛತ್ತೀಸ್​ಗಡದ ದಾಂಡೇವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

ಕೇವಲ ಎಂಟು ದಿನದ ಹಿಂದೆಯಷ್ಟೇ ಇದೇ ಇದೇ ನಕ್ಸಲ್​ ಪೀಡಿತ ಪ್ರದೇಶದಲ್ಲಿ ನಕ್ಸಲ್​ ನಡೆಸಿದ ಗುಂಡಿನ ದಾಳಿಗೆ ದೂರದರ್ಶನದ ಕ್ಯಾಮರಮನ್​ ಸೇರಿ ಇಬ್ಬರು ಪೊಲೀಸ್​ ಸಿಬ್ಬಂದಿ ಬಲಿಯಾಗಿದ್ದರು. ಅ.30ರಂದು ಈ ಘಟನೆ ನಡೆದ ಎಂಟೇ ದಿನಕ್ಕೆ ಮತ್ತೆ ನಕ್ಸಲರು ನಾಲ್ವರು ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ.

ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಈ ದಾಳಿ ನಡೆದಿದೆ.  ನಕ್ಸಲ್​ಪೀಡಿತ ಎಂಟು ಜಿಲ್ಲೆಗಳಲ್ಲಿ ಒಟ್ಟು 18 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನವೆಂಬರ್​ 12ರಂದು ಚುನಾವಣೆ ನಡೆಯಲಿದೆ. ಉಳಿದ 72 ಕ್ಷೇತ್ರಗಳಿಗೆ ನವೆಂಬರ್​ 20ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಬಿಜೆಪಿಯಿಂದ ಅಧಿಕಾರವನ್ನು ಮರಳಿ ಪಡೆಯಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. 2003ರಿಂದಲೂ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.Loading...


ನಕ್ಸಲ್​ಪೀಡಿತ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ವೇಳೆಯೇ ವಾರದ ಅಂತರದಲ್ಲಿ ನಕ್ಸಲರು ಎರಡು ಬಾರಿ ದಾಳಿ ನಡೆಸಿದ್ದಾರೆ.

First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626