CISCE Board Exam: ಆಫ್‍ಲೈನ್‍ನಲ್ಲಿ CISCE ಎಕ್ಸಾಂ ನಡೆಸಲು ನಿರ್ಧಾರ; ಬದಲಾದ ವೇಳಾಪಟ್ಟಿ ಹೀಗಿದೆ..!

ಪರೀಕ್ಷೆಗಳು 10ನೇ ತರಗತಿಗೆ ಬೆಳಗ್ಗೆ 11 ಗಂಟೆಗೆ ಮತ್ತು 12ನೇ ತರಗತಿಗೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತವೆ. ಪ್ರವೇಶ ಪತ್ರದಲ್ಲಿ ರಿಪೋರ್ಟಿಂಗ್ ಸಮಯವನ್ನು ನಮೂದಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವೆಂಬರ್ 15ರಿಂದ ಆರಂಭವಾಗಬೇಕಿದ್ದ 2022ರ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (Council For Indian School Certificate Examinations- CISCE) ಬೋರ್ಡ್ ಪರೀಕ್ಷೆಗಳು(Board Exams) ಈಗ ನವೆಂಬರ್ 22ರಿಂದ ಆರಂಭವಾಗಲಿದೆ. ICSE ಮತ್ತು ISC ಎರಡಕ್ಕೂ ಪರಿಷ್ಕೃತ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022ರ ಬೋರ್ಡ್ ಪರೀಕ್ಷೆಗಳಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಆಯ್ಕೆಗಳನ್ನು ನೀಡುವ ತನ್ನ ನಿರ್ಧಾರದ ಮೇಲೆ CISCE ಯು-ಟರ್ನ್ ತೆಗೆದುಕೊಂಡಿದೆ. CISCE ತನ್ನ ಇತ್ತೀಚಿನ ಸೂಚನೆಯಲ್ಲಿ ಬೋರ್ಡ್ ಪರೀಕ್ಷೆಗಳು 2022 ಅನ್ನು ಆಫ್‍ಲೈನ್‌ನಲ್ಲಿ(Offline) ಮಾತ್ರ ನಡೆಸಲಾಗುವುದು ಎಂದು ಹೇಳಿದೆ.

CBSE ವಿದ್ಯಾರ್ಥಿಗಳು ಆನ್‍ಲೈನ್ ಮತ್ತು ಆಫ್‍ಲೈನ್ ಪರೀಕ್ಷೆಗಳ ಆಯ್ಕೆ ಕೋರಿದ ನಂತರ ಆಫ್‍ಲೈನ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಂಡಿದೆ. CISCEಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ CBSE ಬೋರ್ಡ್ ಪರೀಕ್ಷೆಗಳಿಗಿಂತ ಕಡಿಮೆ.

ಈ ವರ್ಷ ISC ಮತ್ತು ICSE ಬೋರ್ಡ್ ಪರೀಕ್ಷೆಗಳು ಎರಡು ಅವಧಿಗಳಲ್ಲಿ ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಪಡೆಯುತ್ತಾರೆ. ಎಲ್ಲಾ ಅಭ್ಯರ್ಥಿಗಳು ತಮ್ಮ ವೇಳಾಪಟ್ಟಿಗೆ ಅನುಗುಣವಾಗಿ ತಯಾರಾಗಬೇಕಾಗುತ್ತದೆ. ಪರೀಕ್ಷೆಗಳು 10ನೇ ತರಗತಿಗೆ ಬೆಳಗ್ಗೆ 11 ಗಂಟೆಗೆ ಮತ್ತು 12ನೇ ತರಗತಿಗೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತವೆ. ಪ್ರವೇಶ ಪತ್ರದಲ್ಲಿ ರಿಪೋರ್ಟಿಂಗ್ ಸಮಯವನ್ನು ನಮೂದಿಸಲಾಗುತ್ತದೆ. ಪರೀಕ್ಷೆಯು 10ನೇ ತರಗತಿಗೆ ಒಂದು ಗಂಟೆ ಮತ್ತು 12ನೇ ತರಗತಿಗೆ 1 ಗಂಟೆ 30 ನಿಮಿಷಗಳ ಕಾಲ ನಡೆಯಲಿದೆ.

ಇದನ್ನೂ ಓದಿ:Karnataka Jobs: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನ; ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಅವಕಾಶ

ಐಸಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿ 2022

ನವೆಂಬರ್ 29: ಇಂಗ್ಲೀಷ್ 1
ನವೆಂಬರ್ 30: ಇಂಗ್ಲೀಷ್ 2
ಡಿಸೆಂಬರ್ 1: ಕಮರ್ಶಿಯಲ್ ಸ್ಟಡೀಸ್
ಡಿಸೆಂಬರ್ 2: ಇತಿಹಾಸ ಮತ್ತು ನಾಗರಿಕತೆ
ಡಿಸೆಂಬರ್ 3: ಹಿಂದಿ
ಡಿಸೆಂಬರ್ 6: ಗಣಿತ
ಡಿಸೆಂಬರ್ 7: ಭೂಗೋಳ
ಡಿಸೆಂಬರ್ 8: ಎಲೆಕ್ಟೀವ್ ಗ್ರೂಪ್ III
ಡಿಸೆಂಬರ್ 9: ಭೌತಶಾಸ್ತ್ರ
ಡಿಸೆಂಬರ್ 10: ಎರಡನೇ ಭಾಷೆ ಮತ್ತು ಆಧುನಿಕ ಭಾಷೆ
ಡಿಸೆಂಬರ್ 13: ರಸಾಯನಶಾಸ್ತ್ರ
ಡಿಸೆಂಬರ್ 14: ಅರ್ಥಶಾಸ್ತ್ರ / ಸಂಸ್ಕೃತ / ಫ್ರೆಂಚ್
ಡಿಸೆಂಬರ್ 15: ಜೀವಶಾಸ್ತ್ರ
ಡಿಸೆಂಬರ್ 16: ಪರಿಸರ ವಿಜ್ಞಾನ

ಐಎಸ್‍ಸಿ ಬೋರ್ಡ್ ಪರೀಕ್ಷೆಗಳು 2022

ನವೆಂಬರ್ 22: ಇಂಗ್ಲೀಷ್ 2
ನವೆಂಬರ್ 23: ಇಂಗ್ಲೀಷ್ 1
ನವೆಂಬರ್ 25: ಭೌತಶಾಸ್ತ್ರ ಪತ್ರಿಕೆ 1
ನವೆಂಬರ್ 26: ಭಾರತೀಯ ಭಾಷೆ, ಆಧುನಿಕ ಭಾಷೆ, ಶಾಸ್ತ್ರೀಯ ಭಾಷೆ
ನವೆಂಬರ್ 27: ಎಲೆಕ್ಟೀವ್ ಇಂಗ್ಲೀಷ್, ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್, ಭಾರತೀಯ ಸಂಗೀತ, ಪಾಶ್ಚಾತ್ಯ ಸಂಗೀತ
ನವೆಂಬರ್ 29: ಗಣಿತ
ನವೆಂಬರ್ 30: ವ್ಯಾಪಾರ ಅಧ್ಯಯನ
ಡಿಸೆಂಬರ್ 1: ಸಮಾಜಶಾಸ್ತ್ರ
ಡಿಸೆಂಬರ್ 2: ಭೂಗೋಳ, ಜಿಯೋಮೆಟ್ರಿಕಲ್ ಮತ್ತು ಮೆಕ್ಯಾನಿಕಲ್ ಡ್ರಾಯಿಂಗ್
ಡಿಸೆಂಬರ್ 3: ಜೀವಶಾಸ್ತ್ರ
ಡಿಸೆಂಬರ್ 4: ಗೃಹ ವಿಜ್ಞಾನ
ಡಿಸೆಂಬರ್ 6: ಅರ್ಥಶಾಸ್ತ್ರ
ಡಿಸೆಂಬರ್ 7: ಜೈವಿಕ ತಂತ್ರಜ್ಞಾನ
ಡಿಸೆಂಬರ್ 8: ದೈಹಿಕ ಶಿಕ್ಷಣ
ಡಿಸೆಂಬರ್ 9: ರಾಜಕೀಯ ವಿಜ್ಞಾನ
ಡಿಸೆಂಬರ್ 10: ವಾಣಿಜ್ಯ
ಡಿಸೆಂಬರ್ 11: ಸಮೂಹ ಮಾಧ್ಯಮ, ಫ್ಯಾಷನ್ ಡಿಸೈನ್
ಡಿಸೆಂಬರ್ 13: ರಸಾಯನಶಾಸ್ತ್ರ
ಡಿಸೆಂಬರ್ 14: ಸೈಕಾಲಜಿ, ಎಲೆಕ್ಟ್ರಿಸಿಟಿ ಮತ್ತು ಎಲೆಕ್ಟ್ರಾನಿಕ್ಸ್
ಡಿಸೆಂಬರ್ 15: ಕಂಪ್ಯೂಟರ್ ವಿಜ್ಞಾನ
ಡಿಸೆಂಬರ್ 16: ಇತಿಹಾಸ
ಡಿಸೆಂಬರ್ 17: ಪರಿಸರ ವಿಜ್ಞಾನ
ಡಿಸೆಂಬರ್ 20: ಅಕೌಂಟ್ಸ್

ಇದನ್ನೂ ಓದಿ:NFL Recruitment 2021: ಪದವಿ ಆದವರಿಗೆ ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್​ನಲ್ಲಿ ಉದ್ಯೋಗ, ತಿಂಗಳ ಸಂಬಳ ₹50,000

ಪ್ರಶ್ನೆ ಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ 10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಬುಕ್‌ಲೆಟ್‌ ಅನ್ನು 10ನೇ ತರಗತಿಗೆ ಬೆಳಗ್ಗೆ 10:50 ಕ್ಕೆ ನೀಡಲಾಗುತ್ತದೆ. 12ನೇ ತರಗತಿಗೆ, ಮಧ್ಯಾಹ್ನ 1:50ಕ್ಕೆ ಪ್ರಶ್ನೆ ಪತ್ರಿಕೆ ವಿತರಿಸಲಾಗುತ್ತದೆ.
Published by:Latha CG
First published: