ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಬಗೇಲಾ ಅವರು ಭಾನುವಾರದಂದು ಹೇಳಿಕೆ ನೀಡಿದ್ದು. ಕಾಂಗ್ರೆಸ್ ಹೈ ಕಮಾಂಡ್ ರಾಜ್ಯದ ಉಸ್ತುವಾರಿಯನ್ನಾಗಿ ಯಾರನ್ನೇ ನೇಮಿಸಿದರು ನಾನು ಅದನ್ನು ಸ್ವಾಗತಿಸುತ್ತೇನೆ. ಇಂತಹ ಘಟನೆಗಳು ನಡೆಯುವುದು ಸಮ್ಮಿಶ್ರ ಸರ್ಕಾರದಂತಹ ಸಂದರ್ಭದಲ್ಲಿ ಮಾತ್ರ ಎಂದು ಹೇಳಿದರು. ಇವರ ಈ ಹೇಳಿಕೆ ಬರಲು ಕಾರಣ ಛತ್ತೀಸ್ಘಡದಲ್ಲಿ ಎರಡುವರೆ ವರ್ಷ ಮಾತ್ರ ಒಬ್ಬರು ಮುಖ್ಯಮಂತ್ರಿ ಎನ್ನುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅವರ ಅವಧಿ ಮುಗಿಯುತ್ತಾ ಬಂದ ಕಾರಣ ಈ ಮಾತು ಹೇಳಲಾಗಿದೆ ಎಂಬುದು ಲೆಕ್ಕಾಚಾರ.
ಕಾಂಗ್ರೆಸ್ ಹೈಕಮಾಂಡ್ ಹೇಳಿತ್ತು ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಎಂದು ಅದರಂತೆ ನಾನು ನಡೆದುಕೊಂಡೆ. ಈಗ ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಈಗ ನೀವು ಬೇಡ ಬೇರೆಯವರಿಗೆ ಅವಕಾಶ ಕೊಡಿ ಎಂದರೂ ನಾನು ಖಂಡಿತಾ ಹೈಕಮಾಂಡ್ ಆದೇಶಕ್ಕೆ ಬದ್ದನಿದ್ದೇನೆ. ಇದೆಲ್ಲಾ ನಡೆಯುವುದು ಸಮ್ಮಿಶ್ರ ಸರ್ಕಾರದಲ್ಲಿ ಎಂದು ಉಲ್ಲೇಖಿಸಿದರು ಎಂದು ಎಎನ್ಐ ವರದಿ ಮಾಡಿದೆ. ಇದೆಲ್ಲಾ ನಡೆದಿದ್ದು ಭಾನುವಾರ ಪಕ್ಷದ ಮುಖಂಡೆ ಪ್ರಿಯಾಂಕ ಗಾಂಧಿ ಅವರ ಜೊತೆಗೆ ನಡೆದ ಮಾತುಕಥೆ ನಂತರ ಎಂದು ವರದಿಯಾಗಿದೆ.
ಛತ್ತೀಸ್ಘಡದಲ್ಲಿ ಕಾಂಗ್ರೆಸ್ ಪಕ್ಷವು 3/4 ಬಹುಮತ ಹೊಂದಿದ್ದು. ಪಕ್ಷದ ಹೈಕಮಾಂಡ್ ನನಗೆ ಯಾವುದೇ ಜವಾಬ್ದಾರಿ ನೀಡಿದರು ಅದನ್ನು ನಾನು ನಿರ್ವಹಿಸುತ್ತೇನೆ. ಉತ್ತರ ಪ್ರದೇಶ ಚುನಾವಣೆ ಹತ್ತಿರದಲ್ಲಿ ಇದ್ದು ಅಲ್ಲಿನ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ಬದ್ದ ಎಂದು ನುಡಿದರು.
ಛತ್ತೀಸ್ಘಡದಲ್ಲಿ ಕಾಂಗ್ರೆಸ್ ಪಕ್ಷವು 3/4 ಬಹುಮತ ಹೊಂದಿದ್ದು. ನಾನು ಈಗ ತಾನೇ ಪಕ್ಷದ ಜನರಲ್ ಸೆಕ್ರೆಟರಿ ಪ್ರಿಯಾಂಕ ಗಾಂಧಿ ಹಾಗೂ ಹಿರಿಯ ಮುಖಂಡ ಪೂನಿಯಾ ಜೀ ಅವರನ್ನು ಭೇಟಿ ಮಾಡಿ ಮಾತನಾಡಿದೆ. ಅವರು ಮುಂಬರುವ ಉತ್ತರ ಪ್ರದೇಶ ಚುನಾವಣೆ ವೇಳೆ ಯಾವುದೇ ಜವಾಬ್ದಾರಿ ಕೊಟ್ಟರು ಅದನ್ನು ನಿರ್ವಹಿಸಲು ತಯಾರಿದ್ದೇನೆ ಎಂದು ಹೇಳಿದ್ದೇನೆ ಎಂದರು.
ಇದರ ಜೊತೆಗೆ ರಾಜ್ಯ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ದಿಯೋ ಈ ವಿಚಾರವಾಗಿ ಅಂದರೆ ಮೈತ್ರಿ ಸೂತ್ರದ ಕುರಿತು, ಮುಂದಿನ ಮುಖ್ಯಮಂತ್ರಿಯ ಕುರಿತು ಮಾತನಾಡಲು ಇಚ್ಚಿಸಲಿಲ್ಲ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಸ್ಟಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ
ಛತ್ತೀಸ್ಘಡದಲ್ಲಿ ಕಾಂಗ್ರೆಸ್ 3/4 ಬಹುಮತ ಹೊಂದಿದೆ. ಈಗ ಚಾಲ್ತಿಯಲ್ಲಿರುವ ಮೈತ್ರಿ ಸೂತ್ರದಲ್ಲಿ ಅರ್ಥವಿಲ್ಲಎಂದು ರಾಜ್ಯದ ಪಕ್ಷದ ಉಸ್ತುವಾರಿ ಪುನಿಯಾ ಅವರು ಹೇಳಿದ್ದಾರೆ. ಬಗೇಲಾ ಅವರನ್ನು ಬದಲಾಯಿಸುವುದು ಬಿಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ, ನಮ್ಮಲ್ಲಿ ಮೈತ್ರಿ ಸೂತ್ರ ಎಂದು ಹೇಳಲಾಗುತ್ತಿದೆ. ಆದರೆ ನಾವೇ ಹೆಚ್ಚಿನ ಸೀಟು ಗೆದ್ದಿದ್ದೇವೆ. ನೋಡೋಣ ಏನಾಗುತ್ತದೆ ಎಂದು ಹೇಳಿರುವುದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ