Covid-19: ಕೊರೋನಾ, ಭಯಾನಕ: ದೀರ್ಘಕಾಲದ ಸೋಂಕಿನಿಂದ ಮೆದುಳಿನ ಗಡ್ಡೆ, ನಿರ್ಲಕ್ಷ್ಯ ಬೇಡ!

ವೈದ್ಯಕೀಯ ಕ್ಷೇತ್ರದಲ್ಲಿ ಈ ಕೊರೋನಾ ಭಾರಿ ನಷ್ಟವನ್ನುಂಟು ಮಾಡಿದೆ ಎಂಬ ವರದಿಗಳು ದಿನನಿತ್ಯ ಸುದ್ದಿಯಾಗುತ್ತಲೇ ಇರುತ್ತವೆ. ಇಂದಿಗೂ, ಈ ಕೊರೋನಾ ರೋಗದ ಜೊತೆ ಜೀವನ ನಡೆಸುತ್ತಿದ್ದೇವೆ ಎಂದು ಎಲ್ಲರಿಗೂ ಅನಿಸದೇ ಇರದು. ಹೌದು, ಇದು ಅಕ್ಷರಶಃ ನಿಜ. ಏಕೆಂದರೆ ಈ ಕೊರೋನಾ ಜನರ ಮೇಲೆ ಬೀರಿದಷ್ಟು ಪರಿಣಾಮ ಬೇರೆ ಯಾವುದು ಬೀರಿರಲಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್‌-19 (Covid-19) ಸಾಂಕ್ರಾಮಿಕ ರೋಗ (Disease) ಬಂದ ನಂತರ ಜನ-ಜೀವನದ ಮೇಲೆ ಮಾತ್ರವಲ್ಲದೇ, ಜಗತ್ತಿನಾದ್ಯಂತ ಇರುವ ವೈದ್ಯಕೀಯ ವ್ಯವಸ್ಥೆಯ (Medical system) ಮೇಲೂ ಪರಿಣಾಮ ಬೀರಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಕೊರೋನಾ (Corona) ಭಾರಿ ನಷ್ಟವನ್ನುಂಟು (Loss) ಮಾಡಿದೆ ಎಂಬ ವರದಿಗಳು ದಿನನಿತ್ಯ ಸುದ್ದಿಯಾಗುತ್ತಲೇ ಇರುತ್ತವೆ. ಇಂದಿಗೂ, ಈ ಕೊರೋನಾ ರೋಗದ ಜೊತೆ ಜೀವನ (Life) ನಡೆಸುತ್ತಿದ್ದೇವೆ ಎಂದು ಎಲ್ಲರಿಗೂ ಅನಿಸದೇ ಇರದು. ಹೌದು, ಇದು ಅಕ್ಷರಶಃ ನಿಜ. ಏಕೆಂದರೆ ಈ ಕೊರೋನಾ ಜನರ (People) ಮೇಲೆ ಬೀರಿದಷ್ಟು ಪರಿಣಾಮ ಬೇರೆ ಯಾವುದು ಬೀರಿರಲಿಲ್ಲ.

ನೀವು ಈಗ ಏನಾದರೂ ನನಗೆ ಗಂಟಲು ನೋಯುತ್ತಿದೆ, ತುಂಬಾ ಸುಸ್ತಾಗುತ್ತಿದೆ ಎಂದು ಹೇಳಿದರೆ ಎಲ್ಲರ ತಲೆಯಲ್ಲೂ ಮೊದಲು ಬರುವ ವಿಷಯ ಎಂದರೆ ಇದು ಕೋವಿಡ್‌ -19 ಇರಬಹುದೇ ಎಂಬನಿಸಿಕೆ. ಈ ಕೋವಿಡ್‌ ಇದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುವ ಇತರ ರೋಗಗಳನ್ನು ಮರೆಮಾಡಿದೆ ಎಂದು ಹೇಳಬಹುದು. ಈ ಮರೆಯಾಗಿರುವ ರೋಗಲಕ್ಷಣಗಳು ಮುಂದೆ ಹೆಚ್ಚು ಗಂಭೀರವಾದ ಪರಿಣಾಮ ಉಂಟುಮಾಡುತ್ತವೆ ಎಂಬುದು ಈಗ ಎಲ್ಲರಿಗೂ ಹಂತ ಹಂತವಾಗಿ ತಿಳಿಯುತ್ತಿದೆ.

ಯುನೈಟೆಡ್ ಕಿಂಗ್‌ಡಂನಲ್ಲಿ ಹದಿಹರೆಯದ ಹುಡುಗನೊಬ್ಬನು ಕೋವಿಡ್‌-19 ನಿಂದ ಎದುರಿಸಿದ ರೋಗ ಲಕ್ಷಣಗಳನ್ನು ಇಲ್ಲಿ ತಿಳಿಯೋಣ.
ಆ ಹುಡುಗನ ಹೆಸರು ಕೇನ್ ಆಲ್‌ಕಾಕ್, ಆತನಿಗೆ ಇನ್ನು 15 ವರ್ಷ ವಯಸ್ಸು. ಈ ಹುಡುಗ ಮಹತ್ವಾಕಾಂಕ್ಷಿ ಫುಟ್‌ಬಾಲ್ ಆಟಗಾರ ಆಗಿದ್ದಾನೆ. ಕಳೆದ ವರ್ಷ ಹೊಸ ವರ್ಷದ ಆರಂಭದಲ್ಲಿ ಈತನು ಕೋವಿಡ್‌-19 ಪರೀಕ್ಷೆ ಮಾಡಿಸಿದಾಗ ಆತನಿಗೆ ಪಾಸಿಟಿವ್‌ ಎಂದು ಬಂದಿತ್ತು. ಆದಾದ ನಂತರ ಆ ಹುಡುಗನಿಗೆ ನಿರಂತರ ತಲೆನೋವು ಆರಂಭವಾಯಿತು. ಹಲವು ಬಾರಿ ವೈದ್ಯರಿಗೆ ತೋರಿಸಿದರೂ ಆ ತಲೆನೋವು ಮಾತ್ರ ಕಡಿಮೆ ಆಗಲಿಲ್ಲ.

ಪ್ರಾಥಮಿಕ ರೋಗನಿರ್ಣಯದ ಪ್ರಕಾರ, ತಲೆನೋವು ಎಂಬುದು SARs-CoV-2 ವೈರಸ್‌ನ ನಂತರದ ಪರಿಣಾಮವಾಗಿದೆ ಎಂದು ವೈದ್ಯರು ಹೇಳಿದರು ಮತ್ತು ವೈದ್ಯರು ಆ ಹುಡುಗನಿಗೆ ಕೆಲವು ನೋವು ನಿವಾರಕ ಔಷಧಿಗಳನ್ನು ಸೂಚಿಸಿದರು. ಆದರೂ ಸಹ ತಲೆನೋವು ಮಾತ್ರ ಕಡಿಮೆ ಆಗಲೇ ಇಲ್ಲ. ತಲೆನೋವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಅವನು ಎಲ್ಲ ಸಮಯವೂ ಸುಸ್ತಾದವರಂತೆ ಇರುವುದು, ತಲೆತಿರುಗಿದಂತೆ ಆಗುತ್ತದೆ ಎಂದು ತನ್ನ ತಾಯಿಯ ಹತ್ತಿರ ಹೇಳುತ್ತಿದ್ದನು.

ಇದನ್ನೂ ಓದಿ:  Covid 19: ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಕೇಂದ್ರದಿಂದ ರಾಜ್ಯಗಳಿಗೆ ಮಹತ್ವದ ಸೂಚನೆ!

ಇದಕ್ಕೆ ಆತಂಕಗೊಂಡ ಅವನ ತಾಯಿ ನಿಕಿ, "ಇಲ್ಲಿ ಏನೋ ಸರಿಯಿಲ್ಲ. ನನ್ನ ಮಗ ಕೇನ್ ಅವನ ತಲೆಯನ್ನು ಹಿಡಿದುಕೊಂಡು ಸಂಕಟದಿಂದ ಒದ್ದಾಡುತ್ತಿದ್ದನು. ಅವನಿಗೆ ನಡೆಯಲು ಆಗದಷ್ಟು ನಿಶಕ್ತಿಯನ್ನು ಅನುಭವಿಸುತ್ತಿದ್ದನು.” ಎಂದು ಹೇಳಿದರು.

ತಲೆಯಿಂದ ಗೆಡ್ಡೆ ತೆಗೆಯವು ಶಸ್ತ್ರಚಿಕಿತ್ಸೆ 
ನಂತರ ಅವನ ತಾಯಿ ತಮ್ಮ ಮಾತು ಮುಂದುವರಿಸುತ್ತಾ, "ವೈದ್ಯರು ಕೆಲವು ರಕ್ತ ಪರೀಕ್ಷೆಗಳನ್ನು ಮಾಡಿದರು ಮತ್ತು ಕೆಲವು ನೋವು ನಿವಾರಕ ಮಾತ್ರೆಗಳನ್ನು ನೀಡಿದರು. ಆದರೂ ಸಹ ಅವನ ತಲೇನೋವು ಮಾತ್ರ ಗುಣವಾಗಲೇ ಇಲ್ಲ. ಇದರ ಕುರಿತು ನಾನು ಹೆಚ್ಚು ಗಂಭಿರವಾಗಿ ವೈದ್ಯರ ಹತ್ತಿರ ಮಾತಾಡಿದೆ. ಆಗ ನಮ್ಮನ್ನು ಮೌಲ್ಯಮಾಪನ ಮಾಡಲು ವಾರ್ಡ್‌ಗೆ ಕರೆದುಕೊಂಡು ಹೋದಾಗ, ನಾನು ಈ ಪ್ರಕರಣವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ ನರ್ಸ್‌ ಜೊತೆ ಮಾತನಾಡಿದೆ ಮತ್ತು ಕೇನ್‌ನ ತಲೆಯ ಹಿಂಭಾಗದಲ್ಲಿ ಒಂದು ಗಡ್ಡೆ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದು ನಾನು ಅವಳಿಗೆ ಹೇಳಿದೆ.

ಕೇವಲ ಎರಡು ದಿನಗಳ ನಂತರ, ಅವರು ನನ್ನ ಮಗನನ್ನು ಆಪರೇಷನ್‌ ಥಿಯೇಟರ್‌ಗೆ ಕರೆದುಕೊಂಡು ಹೋದರು, ಈ ಗಡ್ಡೆಯನ್ನು ತೆಗೆದುಹಾಕಲು 7.5 ಗಂಟೆಗಳ ಸತತ ಆಪರೇಷನ್ ಮಾಡಿದರು. ನಂತರ, ಅದೃಷ್ಟವಶಾತ್, ಕೇನ್ ಅವರ ಶಸ್ತ್ರಚಿಕಿತ್ಸೆ ಮಾಡಿದ ಶಸ್ತ್ರಚಿಕಿತ್ಸಕ, ಶ್ರೀ ಮಲ್ಲುಸಿ, ಎಲ್ಲ ಗಡ್ಡೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು. ಅವರು ಅತ್ಯಂತ ಯಶಸ್ವಿ ಶಸ್ತ್ರಚಿಕಿತ್ಸಕ" ಎಂದು ಅವರು ತಮ್ಮ ಮಗನ ತಲೆನೋವಿನ ಬಗ್ಗೆ ಹೇಳಿದರು.

ದೀರ್ಘವಾದ ಕೋವಿಡ್‌-19 ವರ್ಸ್‌ಸ್‌ ಮೆದುಳಿನ ಗಡ್ಡೆ:
ದೀರ್ಘವಾದ ಕೋವಿಡ್‌-19 ನಿಂದ ವಿಪರೀತ ತಲೆನೋವು ಬರುವ ಸಂದರ್ಭ ಹೆಚ್ಚು ಎಂದು ಇದರಿಂದ ತಿಳಿದು ಬರುತ್ತದೆ. ಇದರ ಲಕ್ಷಣಗಳು - ಇದು ತಲೆಯ ಎರಡೂ ಬದಿಗಳ ಮಧ್ಯದಲ್ಲಿ ತೀವ್ರವಾದ ನೋವು ಕಂಡುಬರುತ್ತದೆ. ಹಣೆ, ತಲೆ ಮತ್ತು ಕಣ್ಣುಗಳ ಸುತ್ತಲೂ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಸರಳವಾಗಿ ಹೇಳುವುದಾದರೆ, ಇದು ಒತ್ತಡದಿಂದ ಬರುವ ತಲೆನೋವು ಆಗಿದೆ.

ಇದನ್ನೂ ಓದಿ: Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಈ ಕೋವಿಡ್‌-19 ನಿಂದ ಬರುವ ತಲೆನೋವಿನಿಂದ ಮೆದುಳಿನಲ್ಲಿ ಗಡ್ಡೆ ಬೆಳೆಯುವ ಸಾಧ್ಯತೆ ಹೆಚ್ಚು. ಇವು ಮೆದುಳಿನ ಅಂಗಾಂಶದ ಕಾರ್ಯಚಟುವಟಿಕೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ ಮತ್ತು ಬದಲಾಯಿಸುತ್ತವೆ, ಇದು ತಲೆನೋವು, ವಾಕರಿಕೆ ಮತ್ತು ಸಮತೋಲನ ಸಮಸ್ಯೆಗಳಂತಹ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ಮೇಯೊ ಕ್ಲಿನಿಕ್ ತಿಳಿಸುತ್ತದೆ.
Published by:Ashwini Prabhu
First published: