Punjab Result: ಪಂಜಾಬ್​ನಲ್ಲಿ AAP ಗೆಲುವಿಗೆ ಚೋಟಾ ಅರವಿಂದ್​ ಕೇಜ್ರಿವಾಲ್​​ ಸಂಭ್ರಮ

ಕಳೆದೆರಡು ವರ್ಷಗಳ ಹಿಂದೆ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್​ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕರಿಸುವಾಗ ಈ ಬಾಲಕ ಅವರಂತೆ ಸ್ವೇಟರ್​ ಧರಿಸಿ ಗಮನ ಸೆಳೆದಿದ್ದ.

ಚೋಟಾ ಅರವಿಂದ್​ ಕೇಜ್ರಿವಾಲ್​​

ಚೋಟಾ ಅರವಿಂದ್​ ಕೇಜ್ರಿವಾಲ್​​

  • Share this:
    ಪಂಜಾಬ್​ನಲ್ಲಿ (Punjab) ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದು, ಆಮ್ ಆದ್ಮಿ ಪಕ್ಷ (Aam Aadmi Party) ಬಹುಮತದತ್ತ ಸಾಗಿದೆ. ಪಂಜಾಬ್​ ಜನರು ಅರವಿಂದ್​ ಕೇಜ್ರೀವಾಲ್ (Arvind Kejriwal) ನೇತೃತ್ವದ​ ಪಕ್ಷಕ್ಕೆ ಈ ಬಾರಿ ಅಧಿಕಾರ ಚುಕ್ಕಾಣಿ ಕೊಡಲು ಮುಂದಾಗಿದ್ದಾರೆ. ಇಂದು ಮತ ಏಣಿಕೆ ಆರಂಭವಾಗುತ್ತಿದ್ದಂತೆ ಎಎಪಿ ಮುನ್ನಡೆ ಕಾಯ್ದುಕೊಂಡಿದ್ದು, 117 ವಿಧಾನಸಭಾ ಸ್ಥಾನಗಲ್ಲಿ 90ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮಟ್ಟಿದೆ. ಈ ನಡುವೆ ಎಎಪಿ ಕೂಡ ಈ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದೆ.

    ಗಮನಸೆಳೆದ ಚೋಟಾ ಅರವಿಂದ್​​
    ಇನ್ನು ಈ ಸಂಭ್ರಮ ಹೆಚ್ಚು ಮಾಡಲು ಚೋಟಾ ಕೇಜ್ರಿವಾಲ್​ ನೆಟ್ಟಿಗರ ಗಮನಸೆಳೆದಿದ್ದಾನೆ. 2020ರಲ್ಲಿ ಅರವಿಂದ್​ ಕೇಜ್ರಿವಾಲ್​ ರಂತೆ ವೇಷ ತೊಟ್ಟು ಸಣ್ಣ ಕೇಜ್ರಿವಾಲ್ ಎಂದೇ ಖ್ಯಾತಿಗೊಂಡಿದ್ದ ಪುಟ್ಟ ಬಾಲಕ ಮತ್ತೆ ಈಗ ಎಲ್ಲರ ಆಕರ್ಷಿಸಿದ್ದಾನೆ. ಪಕ್ಷ ಬಹುಮತದತ್ತ ಸಾಗುತ್ತಿದ್ದಂತೆ ಎಎಪಿ ಕಚೇರಿಯಲ್ಲಿ ಕಾಣಿಸಿಕೊಂಡ ಈ ಪುಟ್ಟ ಅರವಿಂದ್​ ಕೇಜ್ರಿವಾಲ್​ ಪಕ್ಷದ ಸಂಭ್ರಮದಲ್ಲಿ ಭಾಗಿಯಾಗಿದ್ದಾನೆ.

    ಇದನ್ನು ಓದಿ: ಅಜಯ್ ಸಿಂಗ್ ಬಿಷ್ಟ್ ಯೋಗಿ ಆದಿತ್ಯನಾಥ್ ಆದ ರೋಚಕ ಕಥೆ!

    ಪಂಜಾಬಿ ಟರ್ಬನ್​ನಲ್ಲಿ ಬಾಲಕ
    ಹಳದಿ ಟರ್ಬನ್​​, ಮರೂನ್ ಸ್ವೆಟರ್ ಮತ್ತು ಕಪ್ಪು ಮಫ್ಲರ್ ಧರಿಸಿದ್ದ ಬಾಲಕ ಎಎಪಿ ಬೆಂಬಲಿಗರೊಂದಿಗೆ ವಿಜಯದ ಚಿಹ್ನೆಯನ್ನು ಹಿಡಿದು ಚಿತ್ರಗಳಿಗೆ ಪೋಸ್ ನೀಡಿದ್ದಾನೆ.
    ಎಎಪಿ ಈ ಬಾಲಕನ ಚಿತ್ರವನ್ನು ತಮ್ಮ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಸಣ್ಣ ಮಫ್ಲರ್​ ಮ್ಯಾನ್​ (ಸ್ವೇಟರ್​ ಧರಿಸಿದ ಹುಡುಗ) ಇದೀಗ ಪಂಜಾಬ್​ನಲ್ಲಿ ಭಗವಂತ್ ಮಾನ್​ ಅವರನ್ನು ಸಿಎಂ ಮಾಡಲು ತಯಾರಾಗಿದ್ದಾರೆ ಎಂದಿದೆ.

    ಅರವಿಂದ್​​ ಪ್ರಮಾಣವಚನದ ವೇಳೆ ಗಮನಸೆಳೆದಿದ್ದ ಬಾಲಕ
    ಕಳೆದೆರಡು ವರ್ಷಗಳ ಹಿಂದೆ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್​ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕರಿಸುವಾಗ ಈ ಬಾಲಕ ಅವರಂತೆ ಸ್ವೇಟರ್​ ಧರಿಸಿ ಗಮನ ಸೆಳೆದಿದ್ದ. ಈ ವೇಳೆ ಅನೇಕ ಭಗವಂತ್​​ ಮಾನ್​ ಸೇರಿದಂತೆ ಅನೇಕ ಎಎಪಿ ನಾಯಕರು ಈ ಬಾಲಕ ಗಲ್ಲ ಸವರಿ ಫೋಟೋಗೆ ಫೋಸ್​​ ನೀಡಿದ್ದರು.

    ಇದನ್ನು ಓದಿ: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

    91 ಸ್ಥಾನಗಳಲ್ಲಿ ಎಎಪಿ ಮುನ್ನಡೆ

    ಸದ್ಯ 1. 20ರ ಮಾಹಿತಿಯಂತೆ ಪಂಜಾಬ್​ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್‌ಗೆ ಪ್ರಸ್ತುತ 17 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸಿದ್ದ ಚಮಕೌರ್ ಸಾಹಿಬ್ ಮತ್ತು ಭದೌರ್ ಎರಡೂ ಕ್ಷೇತ್ರಗಳಲ್ಲಿ ಅವರು ಗೆಲುವಿನಿಂದ ಹಿಂದೆ ಉಳಿದಿದ್ದಾರೆ. ಇನ್ನು ಇತ್ತ ನವಜೋತ್​ ಸಿಂಗ್ ಸಿಧು ಕೂಡ ಎಎಪಿ ಅಭ್ಯರ್ಥಿ ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್​ನ ಆಂತರಿಕ ಬಿಕ್ಕಟ್ಟು ಪಕ್ಷದ ಹಿನ್ನಡೆಗೆ ಕಾರಣವಾಗಿದೆ ಎಂಬ ಮಾತು ಕೇಳಿ ಬಂದಿದೆ.

    ದೆಹಲಿ ಮಾದರಿ ಆಡಳಿತಕ್ಕೆ ಸಿಕ್ಕ ಜಯ ಇದು
    ಕಳೆದ ಐದು ವರ್ಷಗಳ ಹಿಂದೆ ಪಂಜಾಬ್​ನಲ್ಲಿ ಎರಡನೇ ಸ್ಥಾನದಲ್ಲಿದ್ದ ಎಎಪಿ ಇದೀಗ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಗೆ ಸಿದ್ದವಾಗಿದೆ. ಈ ಗೆಲುವಿನ ಕುರಿತು ಮಾತನಾಡಿರುವ ಎಎಪಿ ನಾಯಕ ಮನೀಷ್​​ ಸಿಸೋಡಿಯಾ, ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಮತ್ತು ಆಮ್​ ಆದ್ಮಿ ಪಕ್ಷದ ಆಡಳಿತ ಮಾದರಿಗೆ ಸಂದ ಜಯ ಇದು. ಈಗಾಗಲೇ ಇದು ನಮಗೆ ದೆಹಲಿಯಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಏರುವಂತೆ ಮಾಡಿದೆ. ಇದೀಗ ಪಂಜಾಬ್​ನಲ್ಲೂ ನಮಗೆ ದೆಹಲಿ ಸರ್ಕಾರದ ಆಡಳಿತ ಮಾದರಿ ಅಧಿಕಾರಕ್ಕೆ ಏರುವಂತೆ ಮಾಡಿದೆ ಎಂದಿದ್ದಾರೆ.
    Published by:Seema R
    First published: