HOME » NEWS » National-international » CHIRAG PASWAN SAYS PM LIVES IN MY HEART SESR

ನಾನು ಮೋದಿಯವರ ಹನುಮ; ನನ್ನ ಎದೆಬಗೆದರೆ ಕಾಣಸಿಗುವುದು ಪ್ರಧಾನಿ; ಚಿರಾಗ್​ ಪಾಸ್ವಾನ್​

ಮೋದಿ ಫೋಟೊ ಹಿಡಿದು ನಾನು ಚುನಾವಣಾ ಪ್ರಚಾರ ಎದುರಿಸಬೇಕಿಲ್ಲ.ಅವರು ನನ್ನ ಎದೆಯಲ್ಲಿಯಲ್ಲಿದ್ದಾರೆ. ನಾನು ಅವರ ಹನುಮ

news18-kannada
Updated:October 16, 2020, 7:26 PM IST
ನಾನು ಮೋದಿಯವರ ಹನುಮ; ನನ್ನ ಎದೆಬಗೆದರೆ ಕಾಣಸಿಗುವುದು ಪ್ರಧಾನಿ; ಚಿರಾಗ್​ ಪಾಸ್ವಾನ್​
ಚಿರಾಗ್​ ಪಾಸ್ವಾನ್​
  • Share this:
ಬಿಹಾರ (ಅ.16):  ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷದ ನಾಯಕ ಚಿರಾಗ್​ ಪಾಸ್ವಾನ್ ಮಿತ್ರಪಕ್ಷವಾದ  ಬಿಜೆಪಿಯಿಂದ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಎನ್​ಡಿಎ ಮೈತ್ರಿಯಿಂದ ಹೊರ ಬಂದಿರುವ ಚಿರಾಗ್​ ಈಗ ಮೋದಿ ಹೆಸರು ಹೇಳಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಕಮಲ ನಾಯಕರು ಆರೋಪಿಸಿದ್ದಾರೆ. ಈ ಆರೋಪಕ್ಕೆ ತಿರುಗೇಟು ನೀಡಿರುವ ಚಿರಾಗ್​ ಪಾಸ್ವಾನ್​, "ಮೋದಿ ಫೋಟೊ ಹಿಡಿದು ನಾನು ಚುನಾವಣಾ ಪ್ರಚಾರ ಎದುರಿಸಬೇಕಿಲ್ಲ. ನರೇಂದ್ರ ಮೋದಿಯವರು ನನ್ನ ಎದೆಯಲ್ಲಿಯಲ್ಲಿದ್ದಾರೆ. ನಾನು ಅವರ ಹನುಮ. ಬೇಕಾದರೆ, ನನ್ನ ಎದೆ ಬಗೆದು ತೋರಿಸುತ್ತೇನೆ" ಎಂದಿದ್ದಾರೆ. "ನಾನು ನರೇಂದ್ರ ಮೋದಿ ಅವರ ಅಂಧ ಭಕ್ತ. ಆದರೆ, ಬಿಹಾರ ಸಿಎಂ ನಿತೀಶ್​ ಕುಮಾರ್​ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ನನ್ನ ವಿರುದ್ಧ ಮಾತನಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಮೋದಿಯವರಿಗೆ ನಿಷ್ಠೆಯಿಂದ ಇದ್ದೇನೆ. ಮೋಸ ಮಾಡಿಲ್ಲ" ಎಂದರು.

ನಿತೀಶ್​ ಕುಮಾರ್​​​ ಅವರಿಗೆ ಪ್ರಧಾನಿ ಫೋಟೋ ಅವಶ್ಯಕತೆ ಇದೆ. ಕಾರಣ ಅವರಿಗೆ ಸೋಲುವ ಅಭದ್ರತೆ ಇದೆ ಎಂದು ಇದೇ ವೇಳೆ ಟೀಕಿಸಿದರು.

ಕೇಂದ್ರದ ಎನ್​ಡಿಎ ಜೊತೆ ಮೈತ್ರಿ ಹೊಂದಿರುವ ಎಲ್​ಜೆಪಿ, ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ, ಜೆಡಿಯು ಮಾತ್ರ ರಾಜ್ಯದಲ್ಲಿ ಕೂಡ ಮೈತ್ರಿ ಮುಂದುವರೆಸಿ ಬಿಜೆಪಿಯೊಂದಿಗೆ ಚುನಾವಣೆ ಎದುರಿಸುತ್ತಿದೆ. ಮೈತ್ರಿಯಿಂದ ಹೊರ ಬಂದಿರುವ ಕುರಿತು ಮಾತನಾಡಿರುವ ಅವರು, ನ.10ರ ಬಳಿಕ ಫಲಿತಾಂಶ ಬಂದ ಬಳಿಕ  ನಾವು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುತ್ತೇವೆ ಎಂದರು.

ಕಳೆದ ವಾರ ಚಿರಾಗ್​ ಪಾಸ್ವಾನ್​ ತಂದೆ ರಾಮ್​ ವಿಲಾಸ್​ ಪಾಸ್ವಾನ್​ ನಿಧನಹೊಂದಿದ್ದರು. ಇದೇ ವೇಳೆ ಅವರ ತಂದೆಗೆ ಸಂತಾಪ ವ್ಯಕ್ತಪಡಿಸಿದರು. ಇದೇ ವೇಳೆ ನಿತೀಶ್​ ಕುಮಾರ್​ ಅವರು ತಮ್ಮ ತಂದೆಯೇ ದ್ರೋಹ ಮಾಡಿದರು ಎಂದರು.

ಕಳೆದ ವಾರ ರಾಮ್​ ವಿಲಾಸ್​ ಪಾಸ್ವಾನ್​ ದೇಹವನ್ನು ದೆಹಲಿಯಿಂದ ಪಾಟ್ನಾಕ್ಕೆ ವಿಮಾನದ ಮೂಲಕ ತರಲಾಗಿತ್ತು. ಈ ವೇಳೆ ವಿಮಾನನಿಲ್ದಾಣದಲ್ಲಿ ಅವರಿಗೆ ಗೌರವ ಸಲ್ಲಿಸಲು ನಿತೀಶ್​ ಕುಮಾರ್​ ವಿಮಾನ ನಿಲ್ದಾಣದಲ್ಲಿದ್ದರು. ಅವರನ್ನು ಸ್ವೀಕರಿಸಲು ಅಲ್ಲ. ಈ ವೇಳೆ ನಾನು ಅವರ ಪಾದ ಮುಟ್ಟಿ ನಮಸ್ಕರಿಸಿದಾಗ ಅವರು ನನ್ನನ್ನು ಕಡೆಗಣಿಸಿದರು. ಇದನ್ನು ಎಲ್ಲರೂ ಗಮನಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ಬಿಹಾರದ 12 ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಮೋದಿ ; ನಿತೀಶ್​ ಪರ ಮೊದಲ ಬಾರಿ ಮತಯಾಚನೆ

ಬಿಹಾರ ಚುನಾವಣೆಯಲ್ಲಿ ನಿತೀಶ್​ ಕುಮಾರ್​ ಅವರ ಜೆಡಿಯು ಬಿಜೆಪಿಯೊಂದಿಗೆ ಸೀಟು ಹಂಚಿಕೊಂಡು ಚುನಾವಣೆ ಎದುರಿಸುತ್ತಿದೆ. 243 ಕ್ಷೇತ್ರಗಳಲ್ಲಿ ಜೆಡಿಯು 122 ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಬಿಜೆಪಿ 121 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಅಕ್ಟೋಬರ್​ 28ರಿಂದ ಮೂರು ಹಂತದ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ. ನ.10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.ಇನ್ನು ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿ ನಿತೀಶ್​ ಪರ ಮತ ಯಾಚಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ 12 ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ, ನಿತೀಶ್​ ಕುಮಾರ್​ ಜೊತೆ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.
Published by: Seema R
First published: October 16, 2020, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories