Chip Shortage: ದೇಶೀಯ ಚಿಪ್ ಕೊರತೆ ನಿವಾರಣೆಗೆ ಭಾರತ ತೈವಾನ್ ಒಪ್ಪಂದ; ಚೀನಾಗೆ ಹೆಚ್ಚಿದ ಉದ್ವಿಗ್ನತೆ

ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಬಳಸಲಾಗುವ ಹತ್ತಾರು ಉತ್ಪನ್ನಗಳ ಮೇಲಿನ ಸುಂಕ ಕಡಿತವನ್ನು ಒಳಗೊಂಡ ದ್ವಿಪಕ್ಷೀಯ ಹೂಡಿಕೆಯ ಒಪ್ಪಂದದಲ್ಲಿ ತ್ವರಿತ ಪ್ರಗತಿಯನ್ನು ತೈಪೆ ಅಧಿಕಾರಿಗಳು ಬಯಸಿದ್ದಾರೆ.

(Photo: Google)

(Photo: Google)

 • Share this:
  ದಕ್ಷಿಣ ಏಷ್ಯಾಕ್ಕೆ ಚಿಪ್ ಉತ್ಪಾದನೆಯನ್ನು ತರುವ ಹಾಗೂ ವರ್ಷದ ಅಂತ್ಯದ ವೇಳೆಗೆ ಸೆಮಿಕಂಡಕ್ಟರ್‌ಗಳನ್ನು (ಅರೆವಾಹಕ) ಉತ್ಪಾದಿಸುವ ಘಟಕಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಒಪ್ಪಂದದ ಕುರಿತಾಗಿ ಭಾರತ (India) ಹಾಗೂ ತೈವಾನ್ (Taiwan) ಮಾತುಕತೆ ನಡೆಸುತ್ತಿದ್ದು ಇದು ಚೀನಾಕ್ಕೆ (China) ಹೆಚ್ಚಿನ ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂಬ ಅಂಶ ಸ್ಪಷ್ಟವಾಗಿದೆ.

  5G ಡಿವೈಸ್‌ಗಳಿಂದ ಆರಂಭಗೊಂಡು ಎಲೆಕ್ಟ್ರಿಕ್ ಕಾರುಗಳವರೆಗೆ ಪ್ರತಿಯೊಂದನ್ನು ಭಾರತಕ್ಕೆ ಪೂರೈಸುವ ಅಂದಾಜು $7.5 ಮಿಲಿಯನ್ ವೆಚ್ಚದ ಚಿಪ್ ಪ್ಲಾಂಟ್ ಅನ್ನು ತರುವ ಒಪ್ಪಂದದ ಕುರಿತು ನವದೆಹಲಿ ಹಾಗೂ ತೈಪೆಯಲ್ಲಿರುವ ಅಧಿಕಾರಿಗಳು ಇತ್ತೀಚಿನ ವಾರಗಳಲ್ಲಿ ಭೇಟಿಯಾಗಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ. ಭಾರತವು ಪ್ರಸ್ತುತ ಸಾಕಷ್ಟು ಭೂಮಿ, ನೀರಾವರಿ ಹಾಗೂ ಮಾನವ ಶಕ್ತಿಯೊಂದಿಗೆ ಸಂಭವನೀಯ ಸ್ಥಳಗಳನ್ನು ಕುರಿತು ಅಧ್ಯಯನ ನಡೆಸುತ್ತಿದೆ, ಇದರೊಂದಿಗೆ 2023 ರಿಂದ ಬಂಡವಾಳದ ವೆಚ್ಚದ 50% ನೆರವನ್ನು ನೀಡುವುದರ ಜೊತೆಗೆ ತೆರಿಗೆ ವಿನಾಯಿತಿಗಳು ಹಾಗೂ ಇತರ ಪ್ರೋತ್ಸಾಹಗಳನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

  ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಬಳಸಲಾಗುವ ಹತ್ತಾರು ಉತ್ಪನ್ನಗಳ ಮೇಲಿನ ಸುಂಕ ಕಡಿತವನ್ನು ಒಳಗೊಂಡ ದ್ವಿಪಕ್ಷೀಯ ಹೂಡಿಕೆಯ ಒಪ್ಪಂದದಲ್ಲಿ ತ್ವರಿತ ಪ್ರಗತಿಯನ್ನು ತೈಪೆ ಅಧಿಕಾರಿಗಳು ಬಯಸಿದ್ದಾರೆ. ಇದು ವ್ಯಾಪಕ ಒಪ್ಪಂದದ ಮುನ್ಸೂಚಕವೂ ಪರಿಗಣನೆಯಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳನ್ನು ಗುರುತಿಸದಂತೆ ನಿಗಾ ವಹಿಸುತ್ತಿದ್ದು, ಈ ಕುರಿತು ತೈವಾನ್ ಕ್ಯಾಬಿನೆಟ್ ವ್ಯಾಪ್ತಿಯಲ್ಲಿರುವ ವ್ಯಾಪಾರ ಮಾತುಕತೆ ಕಚೇರಿಯು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು ಭಾರತದ ವ್ಯಾಪಾರ ಸಚಿವಾಲಯದ ವಕ್ತಾರರು ಕೂಡ ಟೆಕ್ಸ್ಟ್ ಮೆಸೇಜ್‌ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ ಎಂದಾಗಿದೆ.

  ಪ್ರಪಂಚದಾದ್ಯಂತ ಅನೇಕ ಶಕ್ತಿಶಾಲಿ ರಾಷ್ಟ್ರಗಳು ಚೀನಾದ ವಿರುದ್ಧ ಸಡ್ಡುಹೊಡೆಯಲು ಆರ್ಥಿಕ ಹಾಗೂ ಮಿಲಿಟರಿ ಬಾಂಧವ್ಯಗಳನ್ನು ಅಭಿವೃದ್ಧಿಗೊಳಿಸುವ ಮಾತುಕತೆಗಳಲ್ಲಿ ತೊಡಗಿವೆ. ಭಾರತದೊಂದಿಗೆ ಒಪ್ಪಂದವನ್ನು ತೈವಾನ್ ಬಹುಕಾಲದಿಂದ ಬಯಸುತ್ತಿದ್ದರೆ, ನವ ದೆಹಲಿಯಲ್ಲಿರುವ ಅಧಿಕಾರಿಗಳು ಬೀಜಿಂಗ್‌ನ ಕೋಪಕ್ಕೆ ಒಳಗಾಗದಂತೆ ಹಿಂಜರಿಯುತ್ತಿದ್ದಾರೆ ಏಕೆಂದರೆ ತೈವಾನ್ ಪ್ರಜಾಭುತ್ವವನ್ನು ಬೀಜಿಂಗ್ ತನ್ನದು ಎಂದು ಹೇಳಿಕೊಳ್ಳುತ್ತಿದೆ.

  Read Also: Soybean Growers: ಧೀಡಿರ್ ಬೆಲೆ ಕುಸಿತದಿಂದ ಸಂಕಷ್ಟ ಸಿಲುಕಿದ ಸೋಯಾಬಿನ್ ಬೆಳೆಗಾರರು; ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕೈವಾಡ ಶಂಕೆ!

  ಇತ್ತೀಚಿನ ದಿನಗಳಲ್ಲಿ ಯುಎಸ್ ಅಧ್ಯಕ್ಷರಾದ ಜೋ ಬೈಡನ್ ಚಿಪ್‌ಗಳ ಪೂರೈಕೆಯನ್ನು ಹೆಚ್ಚಿಸಲು ಪ್ರಜಾಪ್ರಭುತ್ವಗಳ ನಡುವೆ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಹಾಗೂ ಈ ಪ್ರದೇಶದಲ್ಲಿ ಮಿಲಿಟರಿ ಸಾಮರ್ಥ್ಯಗಳನ್ನು ಉನ್ನತಗೊಳಿಸಲು ಪ್ರಯತ್ನಿಸುತ್ತಿರುವ ಚರ್ಚೆಗಳು ಕ್ಷಿಪ್ರವಾಗಿ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾ ಹಾಗೂ ಜಪಾನ್ ನಾಯಕರೊಂದಿಗೆ ಕ್ವಾಡ್ ಸಭೆಯ ಭಾಗವಾಗಿ ಆತಿಥ್ಯ ವಹಿಸಲಿದ್ದು, ಈ ದೇಶಗಳು ಚೀನಾದ ಪ್ರಭಾವವನ್ನು ಎದುರಿಸುತ್ತಿವೆ ಎನ್ನಲಾಗಿದೆ.

  2020 ರಲ್ಲಿ ಗಡಿ ಬಿಕ್ಕಟ್ಟಿನ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯರು ಹಾಗೂ ನಾಲ್ವರು ಚೀನೀ ಸೈನಿಕರು ಮೃತಗೊಂಡ ನಂತರ ಭಾರತವು ಚೀನಾವನ್ನು ಎದುರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಸರಕು, ಸೇವೆಗಳು ಹಾಗೂ ಹೂಡಿಕೆಗಳು ಸೇರಿದಂತೆ ಸಮಗ್ರ ವ್ಯಾಪಾರ ಒಪ್ಪಂದವನ್ನು ಚರ್ಚಿಸಲು ಭಾರತ ಹಾಗೂ ತೈವಾನ್ ಅಡಿಪಾಯ ಹಾಕುತ್ತಿದ್ದರೆ ತೈವಾನ್‌ನ ಅಧಿಕಾರಿಗಳು ಕೆಲವೊಂದು ಪ್ರಾರಂಭ ಪ್ರಗತಿಯನ್ನು ಕಂಡುಕೊಳ್ಳಲು ಹೂಡಿಕೆ ಒಪ್ಪಂದವನ್ನು ಪರಿಷ್ಕರಿಸುವ ನಿಟ್ಟಿನಲ್ಲಿದ್ದಾರೆ.

  ಚಿಪ್‌ಗಳ ಮೇಲೆ ಹೆಚ್ಚು ಸ್ವಾವಲಂಬನೆ ಹೊಂದಲು ಭಾರತವು ಉನ್ನತ ತಂತ್ರಜ್ಞಾನದ ಹೂಡಿಕೆಗಳನ್ನು ಸೆಳೆಯಲು ಪ್ರಯತ್ನಿಸಿದೆ, ಆದರೆ ಚೀನಾದ ಒತ್ತಡದ ವಿರುದ್ಧ ತೈವಾನ್ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಬಲಪಡಿಸಲು ಬಯಸುತ್ತದೆ. ಶತಕೋಟ್ಯಾಧಿಪತಿ ಮುಕೇಶ್ ಅಂಬಾನಿಯವರ ರಿಲಾಯನ್ಸ್ ಇಂಡಸ್ಟ್ರೀಸ್‌ ಮೂಲಕ ಗೂಗಲ್‌ನೊಂದಿಗೆ ಸಂಯೋಜಿತಗೊಂಡಿರುವ ಹೆಚ್ಚು ನಿರೀಕ್ಷಿತ ಸ್ಮಾರ್ಟ್‌ಫೋನ್ ಲಾಂಚ್‌ನಿಂದಾಗಿ ಚಿಪ್ ಕೊರತೆಯು ವಿಳಂಬವಾಗಿದೆ. ಪ್ರಸ್ತುತ ಭಾರತವು ಹೆಚ್ಚು ಕಡಿಮೆ ಎಲ್ಲಾ ಸೆಮಿಕಂಡಕ್ಟರ್‌ಗಳನ್ನು ಆಮದು ಮಾಡಲಿದ್ದು ಪ್ರಸ್ತುತ $24 ಬಿಲಿಯನ್‌ನಿಂದ ಇದು ಅಂದಾಜು $ 100 ಬಿಲಿಯನ್ ಅನ್ನು 2025 ರ ವೇಳೆಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

  Read Also: Bhabanipur By Election Fight: ಟಿಎಂಸಿ ಕಾರ್ಯಕರ್ತರು ನನ್ನನ್ನು ಕೊಲ್ಲಲು ಬಂದರು, ಬಿಜೆಪಿಯ ದಿಲೀಪ್ ಘೋಷ್ ಗಂಭೀರ ಆರೋಪ

  2018 ರಲ್ಲಿ ಭಾರತ ಮತ್ತು ತೈವಾನ್ ಎರಡು ರಾಷ್ಟ್ರಗಳ ನಡುವೆ ಹೂಡಿಕೆ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಭಾರತದ ವ್ಯಾಪಾರ ಸಚಿವಾಲಯದ ಪ್ರಕಾರ, ಮಾರ್ಚ್ ಅಂತ್ಯದ ಹಣಕಾಸು ವರ್ಷದಲ್ಲಿ ದೇಶಗಳ ನಡುವಿನ ವ್ಯಾಪಾರವು $ 5.6 ಬಿಲಿಯನ್ ಆಗಿತ್ತು ಎಂದಾಗಿದೆ.
  First published: