ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ; ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ಸುದೀರ್ಘ ವಿಚಾರಣೆ

ಗುರುವಾರ ಚಿನ್ಮಯಾನಂದ ಆಶ್ರಮ ತಲುಪಿದ ಎಸ್​ಐಟಿ  ಸಂಜೆ 6.20ರ ಸುಮಾರಿಗೆ ತನಿಖೆ ಶುರು ಮಾಡಿದ ತಂಡ ಮಧ್ಯರಾತ್ರಿ 1ಗಂಟೆವರೆಗೂ ವಿಚಾರಣೆ ನಡೆಸಿತ್ತು. ತನಿಖೆ ಕುರಿತು ಪ್ರತಿಕ್ರಿಯಿಸಿದ ಚಿನ್ಮಯಾನಂದ ಪರ ವಕೀಲರು, ತನಿಖೆಗೆ ಸಂಪೂರ್ಣ ಸಹಕರಿಸಿದ್ದು, ಮತ್ತೆ ಕೂಡ ತನಿಖೆಗೆ ಹಾಜರಾಗುತ್ತೇವೆ ಎಂದರು.

Seema.R | news18-kannada
Updated:September 13, 2019, 11:07 AM IST
ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ; ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ಸುದೀರ್ಘ ವಿಚಾರಣೆ
ಸ್ವಾಮಿ ಚಿನ್ಮಯಾನಂದ
  • Share this:
ಶಹಜಾನ್​ಪುರ್​ (ಸೆ.13): ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ಸತತ 7 ಗಂಟೆಗಳ ವಿಚಾರಣೆಗೆ ಒಳಪಡಿಸಿದೆ.

ಸ್ವಾಮಿ ಚಿನ್ಮಯಾನಂದ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಕೂಡ ನನ್ನ ಬಳಿ ಇದೆ ಎಂದು ಕಾನೂನು ವಿದ್ಯಾರ್ಥಿನಿ ಸಾರ್ವಜನಿಕವಾಗಿ ವಿಡಿಯೋ ಮೂಲಕ ಆಪಾದಿಸಿದ್ದರು. ಘಟನೆ ನಡೆದು 15 ದಿನ ಕಳೆದರೂ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸುಪ್ರೀಂ ಕೋರ್ಟ್​ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿತು.

ಗುರುವಾರ ಚಿನ್ಮಯಾನಂದ ಆಶ್ರಮ ತಲುಪಿದ ಎಸ್​ಐಟಿ  ಸಂಜೆ 6.20ರ ಸುಮಾರಿಗೆ ತನಿಖೆ ಶುರು ಮಾಡಿದ ತಂಡ ಮಧ್ಯರಾತ್ರಿ 1ಗಂಟೆವರೆಗೂ ವಿಚಾರಣೆ ನಡೆಸಿತ್ತು. ತನಿಖೆ ಕುರಿತು ಪ್ರತಿಕ್ರಿಯಿಸಿದ ಚಿನ್ಮಯಾನಂದ ಪರ ವಕೀಲರು, ತನಿಖೆಗೆ ಸಂಪೂರ್ಣ ಸಹಕರಿಸಿದ್ದು, ಮತ್ತೆ ಕೂಡ ತನಿಖೆಗೆ ಹಾಜರಾಗುತ್ತೇವೆ ಎಂದರು.

ಇದನ್ನು ಓದಿ: ಅನೇಕ ಹುಡುಗಿಯರ ಜೀವನ ಹಾಳು ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವರ ವಿರುದ್ಧ ಆರೋಪಿಸಿದ್ದ ವಿದ್ಯಾರ್ಥಿನಿ ನಾಪತ್ತೆ

ಕಳೆದ ವರ್ಷ ಚಿನ್ಮಯಾನಂದ ನಡೆಸುತ್ತಿದ್ದ ಕಾನೂನು ಕಾಲೇಜಿಗೆ ಸೇರಿದ ವಿದ್ಯಾರ್ಥಿ ಬ್ಲಾಕ್​ ಮೇಲ್​ ಮಾಡಿ ದೌರ್ಜನ್ಯ ಮಾಡಿದ್ದಾಗಿ ವಿದ್ಯಾರ್ಥಿನಿ ತಿಳಿಸಿದ್ದಳು. ಅಲ್ಲದೇ ಘಟನೆ ಕುರಿತು ತನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಕೂಡ ತಿಳಿಸಿ ಉತ್ತರ ಪ್ರದೇಶ ಸಿಎಂ ಹಾಗೂ ಪ್ರಧಾನಿ ಮೋದಿಗೆ ಸಂದೇಶ ನೀಡಿದ್ದರು. ಬಳಿಕ ನಾಪತ್ತೆಯಾಗಿದ್ದ ಯುವತಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಳು.

First published: September 13, 2019, 11:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading