ಭಾರತದ ವಿರುದ್ಧ ಗಡಿಯ ಉದ್ದಕ್ಕೂ ಚೀನಾ ಸೇನೆ ಆಕ್ರಮಣಶೀಲ ನೀತಿ ಅನುಸರಿಸುತ್ತಿದೆ; ಸರ್ಕಾರಿ ಮೂಲದ ಮಾಹಿತಿ

ಮುಖಪಾರಿ ಶಿಖರ ಮತ್ತು ರೆಜಾಂಗ್-ಲಾ ಪ್ರದೇಶಗಳಲ್ಲಿನ ಭಾರತೀಯ ಸೈನ್ಯವನ್ನು ಆಯಕಟ್ಟಿನ ಎತ್ತರದಿಂದ ಹಿಂದಕ್ಕೆ ಸರಿಸುವುದು ಚೀನಾ ಸೈನ್ಯದ ಉದ್ದೇಶವಾಗಿದೆ. ಕಳೆದ ಮೂರು-ನಾಲ್ಕು ದಿನಗಳಲ್ಲಿ ಇದೇ ಕಾರ್ಯತಂತ್ರದದ ಮೇಲೆ ಚೀನಾ ಎತ್ತರದ ಪ್ರದೇಶವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ. ಅಲ್ಲದೆ, ಸೋಮವಾರ ಸಂಜೆ ವೇಳೆಗೆ ಗಡಿಯಲ್ಲಿರುವ ಕಬ್ಬಿಣದ ಬೇಲಿಯನ್ನು ಚೀನಾ ಸೇನೆ ಹಾನಿಗೊಳಿಸಿದೆ ಎನ್ನಲಾಗುತ್ತಿದೆ.

ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉದ್ದಕ್ಕೂ ನಿಯೋಜನೆಗೊಂಡಿರುವ ಚೀನಾ ದೇಶದ ಸೈನಿಕರು.

ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉದ್ದಕ್ಕೂ ನಿಯೋಜನೆಗೊಂಡಿರುವ ಚೀನಾ ದೇಶದ ಸೈನಿಕರು.

 • Share this:
  ಲಡಾಖ್‌ (ಸೆಪ್ಟೆಂಬರ್‌ 08); ಪೂರ್ವ ಲಡಾಖ್‌ನ ರೆಜಾಂಗ್-ಲಾ ರಿಡ್ಜ್‌ಲೈನ್‌ನ ಮುಖ್ಪಾರಿ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ನಿರ್ಬಂಧಿಸುವ ಸಲುವಾಗಿ ಸೋಮವಾರ ಸಂಜೆ ಚೀನಾದ ಪಡೆಗಳು ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಿಕೊಂಡು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅದೇ ಸ್ಥಳದಲ್ಲಿ ಬೀಡುಬಿಟ್ಟಿದೆ ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಇದೇ ಸಂದರ್ಭದಲ್ಲಿ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ) ಯಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್ಎ) ಸುಮಾರು 50-60 ಸೈನಿಕರು ಸಂಜೆ 6 ಗಂಟೆ ಸುಮಾರಿಗೆ ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯಲ್ಲಿರುವ ಭಾರತೀಯ ಸೇನಾ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ಜೂನ್ 15 ರಂದು ಪೂರ್ವ ಲಡಾಖ್‌ನಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯ ಸಂದರ್ಭದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರನ್ನು ಅಮಾನುಷವಾಗಿ ಕೊಂದಿದ್ದರು. ಈ ನಂತರ ಎರಡೂ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಮತ್ತಷ್ಟು ಉದ್ವಿಗ್ನ ಸ್ಥಿತಿಗೆ ತಲುಪಿದ್ದು, ದಿನದಿಂದ ದಿನಕ್ಕೆ ಕಾವು ಏರುತ್ತಲೇ ಇದ್ದು, ನಿನ್ನೆ ಪೂರ್ವ ಲಡಾಖ್ನ ರೆಜಾಂಗ್-ಲಾ ರಿಡ್ಜ್‌ಲೈನ್‌ನ ಮುಖ್ಪಾರಿ ಪ್ರದೇಶದಲ್ಲಿ ನಡೆದಿರುವ ಘಟನೆಯಿಂದಾಗಿ ಭಾರತ ಸೇನೆ ಮತ್ತಷ್ಟು ವ್ಯಗ್ರವಾಗಿದೆ ಎನ್ನಲಾಗುತ್ತಿದೆ.

  ಇನ್ನೂ ಭಾರತೀಯ ಸೈನ್ಯವು ಚೀನಾದ ಸೈನ್ಯವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವರು ಭಾರತೀಯ ಸೈನಿಕರನ್ನು ಬೆದರಿಸಲು 10-15 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 45 ವರ್ಷಗಳ ನಂತರ ಎಲ್ಎಸಿಯ ಉದ್ದಕ್ಕೂ ಇದೇ ಮೊದಲ ಬಾರಿಗೆ ಬಂದೂಕುಗಳನ್ನು ಬಳಸಲಾಗಿದೆ. ಡಿ-ಫ್ಯಾಕ್ಟೋ ಗಡಿಯಲ್ಲಿ ಈ ಹಿಂದೆ ಗುಂಡು ಹಾರಿಸಿದ ಉದಾಹರಣೆಯೇ ಇಲ್ಲ. 1975 ರ ನಂತರ ಈ ಗಡಿಯಲ್ಲಿ ಭಾರತ ಮತ್ತು ಚೀನಾ ಈವರೆಗೆ ಯಾವುದೇ ಬಂದೂಕನ್ನು ಬಳಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

  ಇದನ್ನೂ ಓದಿ : ನಟಿ ಸಂಯುಕ್ತ ಹೆಗಡೆ ಪ್ರಕರಣ; ರಾಜಕೀಯ ಒತ್ತಡದಿಂದಾಗಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ ಎಂದ ಕವಿತಾ ರೆಡ್ಡಿ

  ಮುಖಪಾರಿ ಶಿಖರ ಮತ್ತು ರೆಜಾಂಗ್-ಲಾ ಪ್ರದೇಶಗಳಲ್ಲಿನ ಭಾರತೀಯ ಸೈನ್ಯವನ್ನು ಆಯಕಟ್ಟಿನ ಎತ್ತರದಿಂದ ಹಿಂದಕ್ಕೆ ಸರಿಸುವುದು ಚೀನಾ ಸೈನ್ಯದ ಉದ್ದೇಶವಾಗಿದೆ. ಕಳೆದ ಮೂರು-ನಾಲ್ಕು ದಿನಗಳಲ್ಲಿ ಇದೇ ಕಾರ್ಯತಂತ್ರದದ ಮೇಲೆ ಚೀನಾ ಎತ್ತರದ ಪ್ರದೇಶವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ. ಅಲ್ಲದೆ, ಸೋಮವಾರ ಸಂಜೆ ವೇಳೆಗೆ ಗಡಿಯಲ್ಲಿರುವ ಕಬ್ಬಿಣದ ಬೇಲಿಯನ್ನು ಚೀನಾ ಸೇನೆ ಹಾನಿಗೊಳಿಸಿದೆ ಎನ್ನಲಾಗುತ್ತಿದೆ.

  ಮೊಲ್ಡೊ ಪ್ರದೇಶವನ್ನು ಚೀನಾ ಸೇನೆ ವಶಪಡಿಸಿಕೊಳ್ಳಲು ಮುಂದಾಗಿದ್ದರೂ ಇದನ್ನು ಕಡೆಗಣಿಸಿರುವ ಭಾರತ ಸೇನೆ ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯ ಸುತ್ತಲಿನ ಶಿಖರಗಳಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಇನ್ನೂ ಸೋಮವಾರ ತಡರಾತ್ರಿ ಭಾರತೀಯ ಪಡೆಗಳು ಎಲ್ಎಸಿ ದಾಟಿ ಪಂಗೊಂಗ್ ಸರೋವರದ ಬಳಿ ಅತಿರೇಕದಿಂದ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಭಾರತೀಯ ಸೇನೆ ಮಂಗಳವಾರ ತಿರಸ್ಕರಿಸಿದೆ.
  Published by:MAshok Kumar
  First published: