Chinese scam: 2 ತಿಂಗಳಲ್ಲಿ 5 ಲಕ್ಷ ಭಾರತೀಯರಿಗೆ 150 ಕೋಟಿ ಪಂಗನಾಮ ಹಾಕಿದ್ದ ಚೀನೀಯರು! ಈಗ ಅರೆಸ್ಟ್

Money laundering scam: ಚೀನಾ ಮೂಲದ ಕಂಪನಿಯಲ್ಲಿ ಸುಮಾರು 5 ಲಕ್ಷ ಭಾರತೀಯ ಮಂದಿ ಬಂಡವಾಳ ಹೂಡಿದ್ದರು. ವೇಗವಾಗಿ ದುಪ್ಪಟ್ಟು ಹಣ ಮಾಡುವ ದುರಾಸೆಯಿಂದ ಇದರಲ್ಲಿ ಬಂಡವಾಳ ಹಾಕಿದ್ದರು. ಆದರೀಗ ಅವರೆಲ್ಲರು ಆ್ಯಪ್ ಮೂಲಕ ಮೋಸ ಹೋಗಿದ್ದಾರೆ. ಚೀನಾ ಮೂಲದ ವಂಚಕರು 5 ಲಕ್ಷ ಭಾರತೀಯರ ಡೇಟಾವನ್ನು ಎಗರಿಸಿದ್ದಾರೆ. ಹಾಗಿದ್ದರೆ, ನಿಮ್ಮ ದುಡ್ಡು ಇದರಲ್ಲಿ ಸೇರಿದೆಯಾ? ನೀವು ವಂಚನೆಗೆ ಒಳಗಾಗಿದ್ದೀರಾ ನೋಡ್ಕೊಳಿ!

Photo: Google

Photo: Google

 • Share this:
  ದೇಶದಲ್ಲಿ ಹಣಕಾಸು ವಂಚನೆ ಪ್ರಕರಣಗಳು ಆಗಾಗ ಕೇಳಿಬರುತ್ತಿರುತ್ತದೆ. ಆದರೀಗ ನೆರೆಯ ರಾಷ್ಟ ಚೀನಾ ಮೂಲದ ಕಂಪನಿಯೊಂದು ಭಾರತದಾದ್ಯಂತ ನಡೆಸುತ್ತಿದ್ದ ಭಾರೀ ಪ್ರಮಾಣದ ಹಣಕಾಸು ವಂಚನೆಯನ್ನು ದೆಹಲಿ ಪೊಲೀಸರು ಬಯಲು ಮಾಡಿದ್ದಾರೆ. ಇಬ್ಬರು ಸಿಎಗಳು , ವಿಬೆಟಿಯನ್​ ಮಹಿಳೆ ಸೇರಿದಂತೆ ಇತರೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಚೀನಾ ಮೂಲದ ಕಂಪನಿಯಲ್ಲಿ ಸುಮಾರು 5 ಲಕ್ಷ ಭಾರತೀಯ ಮಂದಿ ಬಂಡವಾಳ ಹೂಡಿದ್ದರು. ವೇಗವಾಗಿ ದುಪ್ಪಟ್ಟು ಹಣ ಮಾಡುವ ದುರಾಸೆಯಿಂದ ಇದರಲ್ಲಿ ಬಂಡವಾಳ ಹಾಕಿದ್ದರು. ಆದರೀಗ ಅವರೆಲ್ಲರು ಆ್ಯಪ್ ಮೂಲಕ ಮೋಸ ಹೋಗಿದ್ದಾರೆ. ಚೀನಾ ಮೂಲದ ವಂಚಕರು 5 ಲಕ್ಷ ಭಾರತೀಯರ ಡೇಟಾವನ್ನು ಎಗರಿಸಿದ್ದಾರೆ.

  ವೇಗವಾಗಿ ಹಣ ಗಳಿಸುವ ಮುಂದಾಲೋಚನೆಯಲ್ಲಿ ಸುಮಾರು 5 ಲಕ್ಷ ಭಾರತೀಯರು ಆನ್​ಲೈನ್​ ಮಲ್ಟಿ-ಲೆವೆಲ್​ ಮಾರ್ಕೆಟಿಂಗ್​ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೀಗ ಭಾರತೀಯರ ಡೇಟಾವನ್ನು ಚೀನಿ ವಂಚಕರು ಕದ್ದಿದ್ದಾರೆ. ಎರಡು ತಿಂಗಳಲ್ಲಿ ಸುಮಾರು 150 ಕೋಟಿ ರೂ ದೋಚಿದ್ದಾರೆ ಎಂದು ಹೆಹಲಿ ಪೊಲೀಸ್​​ ಕಮೀಷನರ್​ ಎಸ್​ ಎನ್​ ಶ್ರೀವಾಸ್ತವ  ತಿಳಿಸಿದ್ದಾರೆ.

  ಚೀನಾದ ವಂಚಕರಿಗೆ ನೆರವಾಗಲು ದೆಹಲಿದ ಸಮೀಪವಿರುವ ಗುರಗಾಂವ್​ ಬಳಿ ನೆಲೆಸಿದ್ದ ಚಾರ್ಟೆಂಡ್​ ಅಕೌಂಟೆಂಟ್​ ಒಬ್ಬ ವಾಸವಿದ್ದನು. ಆತ ಚೀನಾದ ವಂಚಕರಿಗೆ ನೆರವಾಗಲು 110 ಬೇನಾಮಿ ಕಂಪನಿ ತೆರೆದಿದ್ದನು. ಇದನ್ನು ಪತ್ತೆಹತ್ತಲು ಹೊರಟಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆತನಿಂದ ನಾನಾ ಬ್ಯಾಂಕ್​ ಖಾತೆ ಮತ್ತು ಪೇಮೆಂಟ್​ ಗೇಟ್​ವೇಗಳಲ್ಲಿ ಸ್ಥಗಿತಗೊಂಡ 11 ಕೋಟಿ ರೂಪಾಯಿ ಮತ್ತು 97 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

  ಗೂಗಲ್​ ಪ್ಲೇ ಸ್ಟೋರ್​ನಲ್ಲಿ 4ನೇ ಸ್ಥಾನ!

  ಭಾರತೀಯರ ಹಣವನ್ನು ದ್ವಿಗುಣಗೊಳಿಸುತ್ತೇವೆಂದು ಹೇಳಿ ವಂಚಿಸುತ್ತಿದ್ದ  ಚೀನಾ ಮೂಲದ ವಂಚಕರು 5 ಲಕ್ಷ ಜನರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಅದರಲ್ಲೂ 24-35 ದಿನದಲ್ಲಿ ಹಣವನ್ನು ದುಪ್ಪಟ್ಟು ಮಾಡುತ್ತೇವೆಂದು ವಂಚಿಸುತ್ತಿದ್ದರು. ಅದರ ಜತೆಗೆ ಗಂಟೆ ಲೆಕ್ಕ ಮತ್ತು ದಿನದ ಲೆಕ್ಕದಲ್ಲಿ ಬಂಡವಾಳವನ್ನು ಲೆಕ್ಕಮಾಡಿ ಎರಡು ಪಟ್ಟು ಹೆಚ್ಚಿಗೆ ಕೊಡುತ್ತೇವೆ ಎಂದು ವಂಚಿಸಿದ್ದರು. 300 ರೂ.ನಿದ ಪ್ರಾರಂಭವಾಗಿ ಲಕ್ಷಾಂತರ ಹಣವನ್ನು ಬಂಡವಾಳ ಹೂಡುವ ಆಸೆ ತೋರಿಸಿದ್ದರು. ಇತ್ತೀಚೆಗೆ ಚೀನಾ ವಂಚಕರು ವಂಚಿಸಲು ಬಳಸುತ್ತಿದ್ದ ಪವರ್​ ಬ್ಯಾಂಕ್​ ಎಂಬ ಆ್ಯಪ್​​ ಗೂಗಲ್​ ಪ್ಲೇಸ್ಟೋರ್​ನಲ್ಲಿ 4ನೇ ಸ್ಥಾನದಲ್ಲಿ ಟ್ರೆಂಡ್​ ಆಗಿತ್ತು.

  ಚೀನಾ ವಂಚಕರ ಕಾರ್ಯಚರಣೆಯ ಮೂಲವನ್ನು ವಿವರಿಸಿದ ಡಿಸಿಪಿ ಅನೀಶ್​ ರಾಯ್​​, PowerBank​ ಮತ್ತು EZ​Plan​ ಎಂಬ ಅಪ್ಲಿಕೇಶನ್​ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪೋಸ್ಟ್​ ಹರಿಬಿಡುವ ಮೂಲಕ ಗಮನಕ್ಕೆ ತಂದಿದ್ದರು. ಸೈಬರ್​ ಕ್ರೈಂ ಸೆಲ್​ ಇದನ್ನು ಪರಿಶೀಲಿಸಿ ಹೊರಟಾಗ, ಅದರ ಕುರಿತಾಗಿ ತನಿಖೆ ಮಾಡಿದಾಗ ಈ ವಂಚನೆ ಜಾಲ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

  :

  ಬೆಂಗಳೂರು ಮೂಲದ ಸ್ಟಾರ್ಟ್​ ಅಪ್​ ಕಂಪನಿ ನಂಟು!

  ಎಸಿಪಿ ಆದಿತ್ಯ ಗೌತಮ್​​​ ಈ ಜಾಲವನ್ನು ಪತ್ತೆಹಚ್ಚಲು ಹೊರಟಾಗ, ಇಝೆಡ್​​ಪ್ಲಾನ್​ www.ezplan.in. ವೆಬ್​ಸೈಟ್​ನಲ್ಲಿ ಇದರ ಮಾಹಿತಿ ಸಿಕ್ಕಿದೆ. ಇನ್ನು ಪವರ್ ​​ಬ್ಯಾಂಕ್​​ ಆ್ಯಪ್​ ಪ್ರಾಜೆಕ್ಟ್​​ಗೆ ಬೆಂಗಳೂರು ಮೂಲದ ಸ್ಟಾರ್ಟ್​ ಅಪ್​ ಕಂಪನಿಯಾದ ಕ್ವಿಕ್​​ ಚಾಜಿಂಗ್​ ಟೆಕ್ನಾಲಜಿ ಕಂಪನಿಯನ್ನು ಬಳಸಿಕೊಂಡಿದೆ ಎಂದು ಗೊತ್ತಾಗಿದೆ.

  ಈ ವಂಚನೆ ಆ್ಯಪ್​ಗಳಲ್ಲಿ ಎಂಬ ಗುಪ್ತ ಮಾಹಿತಿ ಸಂಗ್ರಹಕ್ಕಾಗಿ  access to camera’, ‘read contact details’ ಮತ್ತು ‘read and write to external storage’ ಆಯ್ಕೆ ಮೂಲಕ ಸ್ಮಾರ್ಟ್​ಫೋನ್​ ಪ್ರವೇಶ ಪಡೆಯುತ್ತಿತ್ತು. ಹೆಚ್ಚು ಜನರನ್ನು ಹೂಡಿಕೆ ಮಾಡಲು ಪ್ರಚೋದಿಸುವುದಕ್ಕಾಗಿ ಶೇ.5-10 ವೇತನ ನೀಡುತ್ತಿತ್ತು. ಇದರ ಮೂಲಕ ಜನರಿಗೆ ನಂಬಿಕೆ ಬರುವಂತೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.

  ಬಂಡವಾಳಶಾಹಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಚೀನಿ ವಂಚಕರು ವಾಟ್ಸ್​ಆ್ಯಪ್​, ಟೆಲಿಗ್ರಾಂ ಮೂಲಕ ವಿವಿಧ ಚಟುವಟಿಕೆ ನಡೆಸುತ್ತಿದ್ದರು. ವಂಚನೆಗಾಗಿ Power Bank ಸೇರಿದಂರೆ EZCoin, Sun Factory, Lightening Power Bank ಆ್ಯಪ್​ ಮೂಲಕ ವಂಚಿಸುತ್ತಿದ್ದರು. Google Play Storeನಲ್ಲೂ ಇಂತಹ ನಕಲಿ ಆ್ಯಪ್​ಗಳಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
  Published by:Harshith AS
  First published: