Xi Jinping: ಗೃಹ ಬಂಧನದಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್?

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಟ್ವಿಟರ್‌ನಲ್ಲಿ ಬೀಜಿಂಗ್‌ನ ಮೇಲೆ ಯಾವುದೇ ವಾಣಿಜ್ಯ ವಿಮಾನಗಳು ಹಾರಾಟ ನಡೆಸುತ್ತಿಲ್ಲ ಎಂಬ ವದಂತಿಗಳು ಸಹ ಹರಿದಾಡುತ್ತಿವೆ.

  • Share this:

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಚೀನಾ ಸೇನೆ (China Military) ದಂಗೆ ಎದ್ದಿದೆ ಎಂದು ವದಂತಿಗಳು ಹರಡುತ್ತಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು (Chinese President Xi Jinping) ಚೀನಾ ಸೇನೆ ಗೃಹ ಬಂಧನದಲ್ಲಿ ಇರಿಸಿದೆ ಎಂದು ಟ್ವಿಟರ್​ನಲ್ಲಿ ಪುಂಖಾನುಪುಂಖ ಟ್ವೀಟ್​ಗಳ ಸುರಿಮಳೆಯೇ ಸುರಿಯುತ್ತಿದೆ. ಜಿನ್‌ಪಿಂಗ್ ವಿರೋಧಿ ಅಭಿಯಾನದಿಂದಾಗಿ ಕ್ಸಿ ಜಿನ್​ಪಿಂಗ್ ಗೃಹ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಚೀನಾದ ಕಮ್ಯುನಿಸ್ಟ್ ಪಕ್ಷ ಅಥವಾ ಸರ್ಕಾರಿ ಮಾಧ್ಯಮದಿಂದ ಇನ್ನೂ ಅಧಿಕೃತ ದೃಢೀಕರಣ ನೀಡಲಾಗಿಲ್ಲ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಈ ವದಂತಿಯನ್ನು ಪರಿಶೀಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಲವು ನಾಯಕರು SCO ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಇತ್ತೀಚಿಗಷ್ಟೇ ಭೇಟಿಯಾಗಿದ್ದರು.


ಇದನ್ನೂ ಓದಿ: Fake Jobs: ಉದ್ಯೋಗಗಳ ಹೆಸರಿನಲ್ಲಿ ಯುವಕರಿಗೆ ವಂಚನೆ; ನಕಲಿ ಉದ್ಯೋಗ ಜಾಲದ ವಿರುದ್ಧ ಎಚ್ಚರವಾಗಿರಲು MEA ಕರೆ


ಲೇಖಕ ಗಾರ್ಡನ್ ಜಿ ಚಾಂಗ್ 'ವಿಡಿಯೋಗ್ರಾಫಿಕ್ ಪುರಾವೆ' ತೋರಿಸಲು ಹೇಳಿಕೊಳ್ಳುವ ಟ್ವೀಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ. ಆ ಟ್ವೀಟ್ ಪ್ರಕಾರ ಚೀನಾ ಮಿಲಿಟರಿ ವಾಹನಗಳು ಸೆಪ್ಟೆಂಬರ್ 22 ರಂದು ಬೀಜಿಂಗ್‌ಗೆ ಹೋಗುತ್ತಿರುವುದು ಕಂಡುಬಂದಿದೆ.


ಟ್ವಿಟರ್‌ನಲ್ಲಿ ಬೀಜಿಂಗ್‌ನ ಮೇಲೆ ಯಾವುದೇ ವಾಣಿಜ್ಯ ವಿಮಾನಗಳು ಹಾರಾಟ ನಡೆಸುತ್ತಿಲ್ಲ ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ಆದರೂ ಕೆಲವು ಚೀನಾ ತಜ್ಞರು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಹರಡುತ್ತಿರುವ ವದಂತಿಗಳನ್ನು ಮೀರಿ ಇನ್ನೂ ದಂಗೆಯ ನಿಜವಾದ ಲಕ್ಷಣಗಳಿಲ್ಲ ಎಂದು ವ್ಯಾಖ್ಯಾನಿಸುತ್ತಿದ್ದಾರೆ.


ಇದನ್ನೂ ಓದಿ: Viral News: ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ; ನೋಡಲು ಸುಂದರವಾಗಿರಬೇಕು, ವಯಸ್ಸು 18-25ರ ಒಳಗಿರಬೇಕು!


ಚೀನಾದಲ್ಲಿ ಹಿಂದಿನ ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಅನಿರೀಕ್ಷಿತವಾಗಿ 2.9% ರಷ್ಟು ಕುಸಿದಿತ್ತು. ಜೊತೆಗೆ ಚಿಲ್ಲರೆ ಮಾರಾಟವು ಅವಧಿಯಲ್ಲಿ ಶೇಕಡಾ 11.1 ರಷ್ಟು ಸಂಕುಚಿತಗೊಂಡಿತ್ತು. ಇದು ಯೋಜಿತ 6.6% ಕುಸಿತಕ್ಕಿಂತ ದುರ್ಬಲವಾಗಿದೆ. ನಿರುದ್ಯೋಗ ದರವು 6.1% ಕ್ಕೆ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಯುವಸ ಸಮುದಾಯದಲ್ಲಿ ನಿರುದ್ಯೋಗ ದರವು ದಾಖಲೆಯ ಮಟ್ಟವನ್ನು ಮುಟ್ಟಿದೆ.

Published by:ಗುರುಗಣೇಶ ಡಬ್ಗುಳಿ
First published: