ಸುಂದರ ಯುವತಿಯ ಆಸೆ ಈಡೇರಿಸಿದ್ದಕ್ಕೆ ಸಸ್ಪೆಂಡ್ ಆದ ಪೈಲಟ್

ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ನಿಯಮದ ಪ್ರಕಾರ ಪ್ರಯಾಣಿಕರು ಕಾಕ್​ಪಿಟ್​ನೊಳಗೆ ಪ್ರವೇಶ ಮಾಡುವಂತಿಲ್ಲ. ವಿಶೇಷ ಅನುಮತಿ ಪಡೆದು ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಒಳಗೆ ಪ್ರವೇಶಿಸಲು ಅವಕಾಶವಿದೆ.

Sushma Chakre | news18-kannada
Updated:November 5, 2019, 10:55 PM IST
ಸುಂದರ ಯುವತಿಯ ಆಸೆ ಈಡೇರಿಸಿದ್ದಕ್ಕೆ ಸಸ್ಪೆಂಡ್ ಆದ ಪೈಲಟ್
ಪೈಲಟ್ ಸೀಟಿನಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡ ಯುವತಿ
  • Share this:
ಎಲ್ಲ ಯುವಕ-ಯುವತಿಯರಿಗೂ ತಾನೊಂದು ದಿನ ಆಕಾಶದಲ್ಲಿ ಹಾರಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಇಂದಿನ ಕಾಲದಲ್ಲಿ ಆಕಾಶದಲ್ಲಿ ವಿಮಾನ ಪ್ರಯಾಣ ಮಾಡುವುದು ಕಷ್ಟದ ವಿಷಯವೇನಲ್ಲ. ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೆ, ಚೀನಾದ ಯುವತಿಯೊಬ್ಬಳಿಗೆ ತಾನು ಪೈಲಟ್ ಸೀಟ್​ನಲ್ಲಿ ಕುಳಿತುಕೊಳ್ಳಬೇಕೆಂಬ ಆಸೆಯಿತ್ತು.

ಆ ಯುವತಿ ತನ್ನ ಬಯಕೆಯನ್ನು ಪೈಲಟ್ ಬಳಿ ಹೇಳಿಕೊಳ್ಳುತ್ತಿದ್ದಂತೆ ಒಪ್ಪಿಗೆ ನೀಡಿದ ಪೈಲಟ್ ತನ್ನ ಸೀಟನ್ನು ಯುವತಿಗೆ ಬಿಟ್ಟುಕೊಟ್ಟ. ಆ ಪೈಲಟ್ ಸೀಟಿನಲ್ಲಿ ಕುಳಿತ ಯುವತಿ ಫೋಟೋ ಕ್ಲಿಕ್ಕಿಸಿಕೊಂಡಳು. ಅಷ್ಟೇ ಅಲ್ಲ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ 'ನನಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟ ಕ್ಯಾಪ್ಟನ್​ಗೆ ಧನ್ಯವಾದಗಳು' ಎಂದು ಕೂಡ ಬರೆದಿದ್ದಳು.

ಜೀವಕ್ಕೇ ಕುತ್ತು ತಂದ ಸೆಲ್ಫೀ; ಮದುವೆಯಾಗುವವನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಬಾವಿಗೆ ಬಿದ್ದ ಯುವತಿ

ಕಾಕ್​ಪಿಟ್​ನಲ್ಲಿ ಪ್ರಯಾಣಿಕಳು ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಿಂದ ವಿಮಾನದ ಪ್ರಯಾಣಿಕರ ಸುರಕ್ಷತೆ, ವಿಮಾನ ಸಂಸ್ಥೆಯ ಮೇಲಿನ ನಂಬಿಕೆ ಹಾಳಾಗುತ್ತದೆ ಎಂದು ಕೋಪಗೊಂಡ ಅಧಿಕಾರಿಗಳು ಆ ಪೈಲಟ್​​ನನ್ನು ಅನಿರ್ದಿಷ್ಟಾವಧಿಗೆ ಸಸ್ಪೆಂಡ್ ಮಾಡಿದ್ದಾರೆ.ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ನಿಯಮದ ಪ್ರಕಾರ ಪ್ರಯಾಣಿಕರು ಕಾಕ್​ಪಿಟ್​ನೊಳಗೆ ಪ್ರವೇಶ ಮಾಡುವಂತಿಲ್ಲ. ವಿಶೇಷ ಅನುಮತಿ ಪಡೆದು ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಒಳಗೆ ಪ್ರವೇಶಿಸಲು ಅವಕಾಶವಿದೆ. ಆದರೆ, ನಿಯಮ ಮೀರಿ ಆ ಯುವತಿಯನ್ನು ಒಳಗೆ ಬಿಟ್ಟಿದ್ದಲ್ಲದೆ, ಪೈಲಟ್ ಸೀಟಿನಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಆ ಪೈಲಟ್​ ಜೊತೆಗೆ ಇತರೆ ಸಿಬ್ಬಂದಿಯನ್ನೂ ಸಸ್ಪೆಂಡ್ ಮಾಡಲಾಗಿದೆ.

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ