HOME » NEWS » National-international » CHINESE MAN DOES SIT UPS ATOP ELECTRIC POLE ARRESTED AFTER CAUSING POWER CUT IN THOUSANDS OF HOMES STG LG

ವಿದ್ಯುತ್ ಕಂಬ ಏರಿದ ಭೂಪನಿಂದ 10 ಸಾವಿರ ಮನೆಗಳಿಗೆ ಕರೆಂಟ್ ಕಟ್; ಆರೋಪಿಯ ಬಂಧನ

ಯುಟಿಲಿಟಿ ಕಂಬದ ಮೇಲೆ ಏರಿ ವ್ಯಕ್ತಿ ಕುಳಿತ ತಕ್ಷಣವೇ ಅಲ್ಲಿನ ಸ್ಥಳೀಯರು ಗಾಬರಿಗೊಂಡಿದ್ದಾರೆ. ಕೂಡಲೇ ಸ್ಥಳೀಯ ವಿದ್ಯುತ್ ಕಂಪನಿಯು ತುರ್ತಾಗಿ ವಿದ್ಯುತ್ ಕಡಿತಗೊಳಿಸಿದೆ. ಇದರಿಂದಾಗಿ ಹತ್ತಾರು ಸಾವಿರ ಮನೆಗಳಲ್ಲಿ ವಿದ್ಯುತ್ ಸಮಸ್ಯೆ ಆಗಿತ್ತು ಎಂದು ಪೀಪಲ್ಸ್ ಡೈಲಿ ಹೇಳಿದೆ.

news18-kannada
Updated:February 24, 2021, 8:12 AM IST
ವಿದ್ಯುತ್ ಕಂಬ ಏರಿದ ಭೂಪನಿಂದ 10 ಸಾವಿರ ಮನೆಗಳಿಗೆ ಕರೆಂಟ್ ಕಟ್; ಆರೋಪಿಯ ಬಂಧನ
ಪ್ರಾತಿನಿಧಿಕ ಚಿತ್ರ
  • Share this:
ಯಾರೋ ಮಾಡಿರುವ ತಪ್ಪಿಗೆ ಮತ್ತೊಬ್ಬರಿಗೆ ಕಷ್ಟಗಳು ಆದಾಗ ಕೋಪ ಬರುವುದು ಸಹಜ. ಚೀನಾದ ವ್ಯಕ್ತಿಯೊಬ್ಬರು 10 ಮೀಟರ್ ಉದ್ದದ ಯುಟಿಲಿಟಿ ಕಂಬವನ್ನು ಏರಿ ಕುಳಿತುಕೊಂಡ ಪರಿಣಾಮ ಸಾವಿರಾರು ಮನೆಗೆ ವಿದ್ಯುತ್ ಕಡಿತಗೊಳಿಸಿದ ಘಟನೆ ಚೀನಾದಲ್ಲಿ ನಡೆದಿದೆ ಎಂದು ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ. ಕಂಬ ಏರಿದ ವ್ಯಕ್ತಿಯನ್ನು ಭಾನುವಾರ ಸಾಯಂಕಾಲದಂದು ಚೀನಾದ ಚೆಂಗ್ಡು ಹೊರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಹೆಸರು ಗೌಪ್ಯವಾಗಿದೆ.

ಇನ್ನು, ಯಾವ ಕಾರಣಕ್ಕಾಗಿ ಈತ ಯುಟಿಲಿಟಿ ಕಂಬವನ್ನು ಏರಿ ಕುಳಿತಿದ್ದಾನೆ ಎಂದು ತಿಳಿದುಬಂದಿಲ್ಲ ಎಂದು ಪೀಪಲ್ಸ್ ಡೈಲಿ ವರದಿ ಮಾಡಿದೆ. ಯುಟಿಲಿಟಿ ಕಂಬದ ಮೇಲೆ ಏರಿ ವ್ಯಕ್ತಿ ಕುಳಿತ ತಕ್ಷಣವೇ ಅಲ್ಲಿನ ಸ್ಥಳೀಯರು ಗಾಬರಿಗೊಂಡಿದ್ದಾರೆ. ಕೂಡಲೇ ಸ್ಥಳೀಯ ವಿದ್ಯುತ್ ಕಂಪನಿಯು ತುರ್ತಾಗಿ ವಿದ್ಯುತ್ ಕಡಿತಗೊಳಿಸಿದೆ. ಇದರಿಂದಾಗಿ ಹತ್ತಾರು ಸಾವಿರ ಮನೆಗಳಲ್ಲಿ ವಿದ್ಯುತ್ ಸಮಸ್ಯೆ ಆಗಿತ್ತು ಎಂದು ಪೀಪಲ್ಸ್ ಡೈಲಿ ಹೇಳಿದೆ. ಘಟನಾ ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ತುರ್ತು ಸೇವೆಗಳು ಧಾವಿಸಿವೆ ಎಂದು ಶಾಂಘೈನ ಪತ್ರಿಕೆ ತಿಳಿಸಿದೆ.

Crime News: ಮಹಿಳೆಯರ ಡ್ರೆಸ್ಸಿಂಗ್ ರೂಂನಲ್ಲಿ ವಿಡಿಯೋ ಮಾಡಿ ಸಿಕ್ಕಿ ಬಿದ್ದ ಅಸಾಮಿ

1.7 ಮಿಲಿಯನ್ ವೀಕ್ಷಣೆ ಪಡೆದ ಘಟನೆಗೆ ಸಂಬಂಧಿಸಿದ ಹ್ಯಾಶ್ಟ್ಯಾಗ್

ಟ್ವಿಟ್ವರ್ ರೀತಿಯ ವೈಬೊ, ವ್ಯಕ್ತಿಯು ಕಂಬ ಏರಿರುವ ವಿಡಿಯೋವನ್ನು ಪ್ರಕಟ ಮಾಡಿದೆ. ಈ ವಿಡಿಯೋವನ್ನು ವೀಕ್ಷಿಸಿದ ವೈಬೊ ಬಳಕೆದಾರನೊಬ್ಬನು ಮನುಷ್ಯನ ವರ್ತನೆ ತುಂಬಾ ಅಪಾಯಕಾರಿ ಎಂದು ಬರೆದುಕೊಂಡಿದ್ದಾರೆ. ಇದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದ ಒಂದು ಹ್ಯಾಶ್ಟ್ಯಾಗ್ ಕನಿಷ್ಠ 1.7 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ವೈಬೊದಲ್ಲಿ ಬಳಕೆದಾರರೊಬ್ಬರು ‘ವಿದ್ಯುತ್ ಇಲ್ಲದ ಕಾರಣ ನನಗೆ ಸಿಟ್ಟು ಬಂತು. ಸುದ್ದಿಯನ್ನು ನೋಡಿ ಕಾರಣವನ್ನು ತಿಳಿದಾಗ ಕಿರಿಕಿರಿ ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2015ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ. ಆಗ ಚೀನಾದ ವ್ಯಕ್ತಿಯೊಬ್ಬರು ಹೈ-ವೋಲ್ಟೇಜ್ ವಿದ್ಯುತ್ ಕಂಬವನ್ನು ಏರಿ ಬೂದಿ ಆಗಿದ್ದರು. ವರದಿಗಳ ಪ್ರಕಾರ, ಈತನು ತನ್ನ ಗೆಳತಿಯೊಂದಿಗೆ ಜಗಳ ಆಡಿದ ನಂತರ ಕಂಬ ಏರುವ ನಿರ್ಧಾರಕ್ಕೆ ಬಂದಿದ್ದನು ಎಂದು ವರದಿ ಆಗಿತ್ತು.
Published by: Latha CG
First published: February 24, 2021, 7:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories