China Journalists: ಜೈಲಿನಲ್ಲಿ ಚೀನಾ ಪತ್ರಕರ್ತೆಯ ನರಕಯಾತನೆ, ಕೊರೋನಾ ಬಗ್ಗೆ ವರದಿ ಮಾಡಿದ್ದಕ್ಕೆ ಘೋರ ಶಿಕ್ಷೆನಾ?

China Journalists: ಕೊರೋನಾ ವಸ್ತುಸ್ಥಿತಿ ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಇದೀಗ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. 

ಪತ್ರಕರ್ತೆ ಝಾಂಗ್ ಝಾನ್

ಪತ್ರಕರ್ತೆ ಝಾಂಗ್ ಝಾನ್

  • Share this:
ಮಹಾಮಾರಿ ಕೊರೋನಾ(Corona) ಕಪಿ ಮುಷ್ಟಿಯಲ್ಲಿ ಸಿಲುಕಿ ಇಡೀ ವಿಶ್ವವೇ ನಲುಗಿಹೋಗಿತ್ತು. ಎಲ್ಲೋ ದೂರದ ಚೀನಾ(China)ದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್​, ನೋಡ ನೋಡುತ್ತಿದ್ದಂತೆ ಇಡೀ ಪ್ರಪಂಚಕ್ಕೆ ಹಬ್ಬಿಕೊಂಡಿತ್ತು. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಜೀವವನ್ನೇ ಕಸಿದುಕೊಂಡಿತ್ತು. ಆದರೆ ಇಡೀ ವಿಶ್ವಕ್ಕೆ ಕೊರೋನಾ ಹಂಚಿದ್ದು ಚೀನಾ ಎಂದು ಎಲ್ಲರಿಗೂ ತಿಳಿದಿದೆ. ಈ ಹೆಮ್ಮಾರಿ ಕೊರೋನಾ ವೈರಸ್​ ಹುಟ್ಟುಹಾಕಿದ್ದೇ(The Coronavirus Virus was Born) ಚೀನಾ ಎಂದು ಹೇಳಲಾಗುತ್ತೆ. ಇದು ಹಲವು ಬಾರಿ ಕೂಡ ಸಾಬೀತಾಗಿದೆ. ಆದರೆ ಈ ಆರೋಪಗಳನ್ನು ಚೀನಾ ತಳ್ಳಿ ಹಾಕಿದೆ. ಆದರೆ ಮತ್ತೆ ಚೀನಾದಲ್ಲಿ ಪರಿಸ್ಥಿತಿ ಕೈ ಮಿರುತ್ತಿದೆ. ಮತ್ತೆ ಕೊರೋನಾ ತನ್ನ ಆರ್ಭಟವನ್ನು ಶುರುಮಾಡಿದೆ. ಆದರೆ ಚೀನಾ ವಾಸ್ತವದ ಬಗ್ಗೆ ವರದಿ(Report on the Reality of China) ಮಾಡಿದ್ದ ಅದೆಷ್ಟೋ ಪತ್ರಕರ್ತರು(Journalists) ನಾಪತ್ತೆಯಾಗಿದ್ದಾರೆ. ಚೀನಾ ಕುತಂತ್ರ ಬಯಲು ಮಾಡಲು ಯತ್ನಿಸಿದ ಪತ್ರಕರ್ತರೆಲ್ಲ ಕಾಣೆಯಾಗಿದ್ದಾರೆ( Journalists are Missing) ಕೆಲ ವರು ನಿಗೂಡವಾಗಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರನ್ನು ಜೈಲಿಗೆ ಹಾಕಿ ಘನಘೋರ ಶಿಕ್ಷೆಗಳನ್ನ ಚೀನಾ ಸರ್ಕಾರ ನೀಡುತ್ತಿದೆಯಂತೆ.  ಕೊರೋನಾ ವಸ್ತುಸ್ಥಿತಿ ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಇದೀಗ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. 

ಕ್ಷೀಣಿಸುತ್ತಿದೆ ಪತ್ರಕರ್ತೆ ಝಾಂಗ್ ಝಾನ್
2020ರಲ್ಲಿ ಕೊರೋನಾ ಅಬ್ಬರ ಜೋರಾಗಿತ್ತು. ಈ ವೇಳೆ 38 ವರ್ಷದ ಝಾಂಗ್ ಝಾನ್ ಎಂಬ ಪತ್ರಕರ್ತೆ ವುಹಾನ್​ ಕೊರೋನಾ ಬಗ್ಗೆ ವರದಿ ಮಾಡಿದ್ದರು. ವುಹಾನ್​ ವಾಸ್ತವದ ಬಗ್ಗೆ ಜನರಿಗೆ ತಿಳಿಸುಲು ಯತ್ನಿಸಿದ್ದರು. ಇದು ಚೀನಾ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿತ್ತು. ಕೂಡಲೇ ಚೀನಾ ಹಾಗೂ ಸರ್ಕಾರದ ವಿರುದ್ಧ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತೆಯನ್ನು ಬಂಧಿಸಲಾಗಿತ್ತು. ಫೆಬ್ರವರಿ 2020ರಲ್ಲಿ ಝಾಂಗ್ ವುಹಾನ್‌ಗೆ ತೆರಳಿ ವರದಿ ಮಾಡಿದ್ದರು. ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ನಡೆ ಚೀನಾವನ್ನು ಮತ್ತಷ್ಟು ಕೆರಳಿಸಿತ್ತು. 2020ರ ಮೇ ತಿಂಗಳಲ್ಲಿ ಪತ್ರಕರ್ತೆಯನ್ನು ಚೀನಾ ಸರ್ಕಾರ ಬಂಧಿಸಿತ್ತು.

ಇದನ್ನು ಓದಿ : ಶ್ವಕ್ಕೇ ವೈರಸ್​ ಹಂಚಿದ್ದ ಚೀನಾಗೆ ಮತ್ತೆ ಶಾಕ್​: ಕೊರೋನಾ​ ಅಟ್ಟಹಾಸಕ್ಕೆ ವಿಮಾನ, ಶಾಲೆಗಳು ಬಂದ್

ಜೈಲಿನಲ್ಲಿ ಚಿತ್ರಹಿಂಸೆ ನೀಡುತ್ತಿದೆಯಂತೆ ಚೀನಾ
ಹೌದು, 2020ರ ಮೇ ತಿಂಗಳಲ್ಲಿ ಪತ್ರಕರ್ತೆಯನ್ನು ಚೀನಾ ಸರ್ಕಾರ ಬಂಧಿಸಿತ್ತು. ದೇಶದ ವಿರುದ್ಧ ಮಾತನಾಡಿದ ಆರೋಪ ಹೊರಿಸಿ 4 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೈಲಿನಲ್ಲೂ ಚೀನಾ ಇನ್ನಿಲ್ಲದ ಚಿತ್ರಹಿಂಸೆ ನೀಡಲಾಗಿತ್ತು. ಜೈಲಿನಲ್ಲಿದ್ದ ಝಾಂಗ್ ಝಾನ್ ಆರೋಗ್ಯ ಕ್ಷೀಣಿಸತೊಡಗಿದೆ. ಸರಿಯಾದ ಆಹಾರ ನೀಡದೇ, ಸೌಲಭ್ಯಗಳನ್ನು ನೀಡದೇ ಚಿತ್ರ ಹಿಂಸೆ ನೀಡುತ್ತಿದೆಯಂತೆ. ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಜೈಲಿನೊಳಗೆ ಪತ್ರಕರ್ತೆ ಝಾಂಗ್ ಝಾನ್ ನರಕಯಾತನೆ ಅನುಭವಿಸುತ್ತಿದ್ದಾರೆ.

ಪತ್ರಕರ್ತೆ ಝಾಂಗ್ ಉಪವಾಸ ಸತ್ಯಾಗ್ರಹ
ಏನೂ ತಪ್ಪು ಮಾಡದ ತನ್ನ ಜೈಲಿನಲ್ಲಿ ಕೂಡಿಟ್ಟ ಚೀನಾ ಸರ್ಕಾರದ ವಿರುದ್ಧ ಪತ್ರಕರ್ತೆ ಝಾಂಗ್ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಜೈಲಿನಲ್ಲೇ ಉಪವಾಸ ಸತ್ಯಗ್ರಹ ಆರಂಭಿಸಿದ ಝಾಂಗ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ತನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು. ಆದರೆ ಚೀನಾ ಮಾತ್ರ ಯಾವುದೇ ದಯೆ ತೋರಲಿಲ್ಲ.  ಸಾವು ಬದುಕಿನ ನಡುವೆ ಹೋರಾಡುತ್ತಿರುವ ಝಾಂಗ್ ಝಾನ್ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಝಾಂಗ್ ಹೆಚ್ಚು ದಿನ ಬದುಕುವ ಸಾಧ್ಯತೆ ಇಲ್ಲ. ಆಕೆಯನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ಕುಟುಂಬ ಮನವಿ ಮಾಡಿದೆ.

ಇದನ್ನು ಓದಿ : ಹೆಚ್ಚು ಮಕ್ಕಳು ಪಡೆಯುವಂತೆ ಪ್ರೋತ್ಸಾಹಿಸಲು ಚೀನಾ ಸರ್ಕಾರದಿಂದ ಮಹತ್ವದ ಘೋಷಣೆ

ಕ್ಷಮೆ ನೀಡಲು ಸಾಧ್ಯವಿಲ್ಲ ಎಂದ ಚೀನಾ
ಝಾಂಗ್ ಝಾನ್ ವಿರುದ್ಧ ಚೀನಾ ಸರ್ಕಾರ ದೇಶ ದ್ರೋಹ ಆರೋಪ ಹೊರಿಸಿದೆ. ದೇಶ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ಆರೋಪಗಳನ್ನು ಹೊತ್ತಿರುವ ಪತ್ರಕರ್ತೆ ಬಿಡುಗಡೆ ಅಸಾಧ್ಯ ಎಂದು ಚೀನಾ ಹೇಳಿದೆ. ಚೀನಾ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ. ಅದರಲ್ಲೂ ದೇಶ ದ್ರೋಹ ತಪ್ಪಾಗಿರುವ ಕಾರಣ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
Published by:Vasudeva M
First published: