Manipur Attack- ಮಣಿಪುರ ಮಾರಣಹೋಮದಲ್ಲಿ ಚೀನೀ ಸೇನೆ ಕೈವಾಡ? ಯಾಕಿಂಥ ಸೇಡು?

China Army alleged support to Anti-India Forces- ಈಶಾನ್ಯ ಭಾರತದಲ್ಲಿ ವಿಭಜನಾ ಶಕ್ತಿಗಳಿಗೆ ಚೀನಾದ ಕುಮ್ಮಕ್ಕು ಸಿಗುತ್ತಿದೆ. ಮಣಿಪುರ ದಾಳಿಗೂ ಚೀನಾ ಬೆಂಬಲ ಇದೆ ಎನ್ನಲಾಗಿದೆ. ಚೀನಾದ ಇಷ್ಟು ಕಟುವಾದ ಭಾರತ ವಿರೋಧಿ ಧೋರಣೆಗೆ ಏನು ಕಾರಣ?

ಅಸ್ಸಾಮ್ ರೈಫಲ್ಸ್

ಅಸ್ಸಾಮ್ ರೈಫಲ್ಸ್

 • News18
 • Last Updated :
 • Share this:
  ಾಮ್ನವದೆಹಲಿ, ನ. 16: ಮಣಿಪುರ ರಾಜ್ಯದಲ್ಲಿ ಕಳೆದ ವಾರ ಉಗ್ರಗಾಮಿಗಳು ದಾಳಿ ನಡೆಸಿ ಸೇನಾ ಯೋಧರು ಮತ್ತು ಕುಟುಂಬ ಸದಸ್ಯರ ಮಾರಣಹೋಮ ನಡೆಸಿದ್ದರು. ಆ ಘಟನೆಯ ಹಿಂದೆ ಚೀನಾದ ಕುಮ್ಮಕ್ಕು ಇರುವ ಬಲವಾದ ಶಂಕೆ ಇದೆ. ಭಾರತೀಯ ಗುಪ್ತಚರರು ಈ ನಿಟ್ಟಿನಲ್ಲಿ ಅನುಮಾನ ಹೊಂದಿದ್ದಾರೆ. ಈ ದಾಳಿ ಘಟನೆಯಲ್ಲಿ ಚೀನಾದ ಪಾತ್ರ ಏನಿದೆ ಎಂಬುದನ್ನು ಬಹಳ ಕೂಲಂಕಶವಾಗಿ ಪರಿಶೀಲಿಸಲಾಗುತ್ತಿದೆ.

  ಕಳೆದ ವಾರ ಮಣಿಪುರದ ಚೂರಚಂದಪುರ್ ಜಿಲ್ಲೆಯಲ್ಲಿರುವ ಮಯನ್ಮಾರ್ ಗಡಿಭಾಗದ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಮ್ ರೈಫಲ್ಸ್ ಪಡೆಯ ಕರ್ನಲ್ ವಿಪ್ಲವ್ ತ್ರಿಪಾಠಿ ಹಾಗೂ ಅವರ ಪತ್ನಿ ಮತ್ತು ಮಗ ಸೇರಿ ಏಳು ಮಂದಿ ಬಲಿಯಾಗಿದ್ದರು. ಇದರಲ್ಲಿ ರಫೈಲ್ಸ್ ಪಡೆಯ ಇತರ ನಾಲ್ವರು ಯೋಧರೂ ಇದ್ದಾರೆ. ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ (People’s Liberation Army, Manipur) ಮತ್ತು ಮಣಿಪುರ ನಾಗ ಪೀಪಲ್ಸ್ ಫ್ರಂಟ್ (Manipur Naga People’s Front) ಎಂಬ ಎರಡು ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿವೆ. ಈ ಎರಡೂ ಸಂಘಟನೆಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿವೆ.

  ಮಯನ್ಮಾರ್ ದೇಶದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಸಂಘಟನೆಯ ಸದಸ್ಯರಿಗೆ ಚೀನೀ ಸೇನೆಯಿಂದ ತರಬೇತಿ ಸಿಕ್ಕಿರುವ ಅನುಮಾನ ಇದೆ. ಹಾಗೆಯೇ, ದಾಳಿಗೆ ಬೇಕಾದ ಶಸ್ತ್ರಾಸ್ತ್ರವನ್ನು ಚೀನೀ ಸೇನೆಯೇ ಪೂರೈಕೆ ಮಾಡಿರಬಹುದು. ಚೀನೀ ಸೇನೆಯ ಪ್ರಮುಖ ಅಧಿಕಾರಿಗಳು ಮಯನ್ಮಾರ್​ನಲ್ಲಿನ ತರಬೇತಿ ಶಿಬಿರಗಳಲ್ಲಿ ಖುದ್ದಾಗಿ ಉಪಸ್ಥಿತರಿದ್ದಿರುವ ಶಂಕೆ ಇದೆ.

  ಭಾರತದ ಮೇಲೆ ಚೀನಾ ಸೇಡು?

  ಭಾರತದ ಪ್ರತ್ಯೇಕತಾ ಶಕ್ತಿಗಳಿಗೆ ಚೀನಾ ಉದ್ದೇಶಪೂರ್ವಕವಾಗಿ ಕುಮ್ಮಕ್ಕು ಕೊಡುತ್ತಿರುವುದು ತಿಳಿದುಬಂದಿದೆ. ತೈವಾನ್ ಮತ್ತು ಟಿಬೆಟ್​ನಲ್ಲಿನ ಚೀನಾ ವಿರೋಧಿ ಶಕ್ತಿಗಳ ಜೊತೆ ಭಾರತ ಸ್ನೇಹದಿಂದ ಇರುವುದು ಚೀನಾದ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ, ಭಾರತದ ಈಶಾನ್ಯ ಪ್ರದೇಶಗಳಲ್ಲಿರುವ ಪ್ರತ್ಯೇಕತಾವಾದಿ ಶಕ್ತಿಗಳಿಗೆ ಚೀನಾ ಬೆಂಬಲ ಕೊಡುತ್ತಿದೆ ಎಂಬುದು ಭಾರತೀಯ ಗುಪ್ತಚರರ ಶಂಕೆ.

  ಇದನ್ನೂ ಓದಿ: Manipur Attack: ಮಣಿಪುರದಲ್ಲಿ ಉಗ್ರರ ದಾಳಿ: ಕಮಾಂಡಿಂಗ್​ ಆಫೀಸರ್​ ಸೇರಿದಂತೆ 7 ಮಂದಿ ಹತ್ಯೆ

  ಈಶಾನ್ಯ ರಾಜ್ಯಗಳಲ್ಲಿರುವ ಉಗ್ರಗಾಮಿಗಳಿಗೆ ಮಯನ್ಮಾರ್​ನಲ್ಲಿ ಚೀನಾ ಬೆಂಬಲವಿರುವ ಸಂಘಟನೆಗಳ ಜೊತೆ ನೇರ ಸಂಬಂಧ ಇದೆ. ಈ ಸಂಘಟನೆಗಳನ್ನ ಭಾರತದ ವಿರುದ್ಧ ಕಾರ್ಯಾಚರಿಸುವಂತೆ ಮಾಡುವ ಪ್ರಯತ್ನ ನಡೆದೇ ಇದೆ ಎಂದು ಹೇಳುವ ಗುಪ್ತಚರ ಮೂಲಗಳು, ಈಶಾನ್ಯ ರಾಜ್ಯಗಳ ಉಗ್ರರಿಗೆ ಮಯನ್ಮಾರ್ ಸೇನೆಯ ಬೆಂಬಲ ಇರುವ ಸಾಧ್ಯತೆಯೂ ಇದೆ ಎಂದು ಸಂದೇಹಿಸಿದ್ಧಾರೆ.

  ಮಯನ್ಮಾರ್​ನ ಉರ್ ಟಗಾ ಪ್ರದೇಶಗಳಲ್ಲಿ ಈ ಉಗ್ರ ಸಂಘಟನೆಗಳು ನೆಲಸಿರುವುದನ್ನು ಭಾರತ ಪತ್ತೆ ಹಚ್ಚಿದೆ. ಮಯನ್ಮಾರ್ ದೇಶಕ್ಕೆ ಇದರ ಮಾಹಿತಿ ರವಾನಿಸಲಾಗಿದ್ದು, ಈ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಹಾಕಲಾಗುತ್ತಿರುವುದು ತಿಳಿದುಬಂದಿದೆ.

  ಹೇಡಿಗಳ ಕೃತ್ಯ:

  ಕಳೆದ ವಾರ ನಡೆದ ಉಗ್ರದಾಳಿ ಘಟನೆಯನ್ನ ಮಣಿಪುರ ಮುಖ್ಯಮಂತ್ರಿ ನೊಂಗ್ತೋಂಬಮ್ ಬಿರೇನ್ ಸಿಂಗ್ ಬಲವಾಗಿ ಖಂಡಿಸಿದ್ದರು. ಅಲ್ಲದೇ ಇಂತಹ ಹೇಡಿತನದ ಕೃತ್ಯವನ್ನು ಸುಲಭವಾಗಿ ಬಿಡುವುದಿಲ್ಲ ಎಂದು ಹೇಳಿದ್ದರು. ತಪ್ಪಿತಸ್ಥರನ್ನು ಕಾನೂನಾತ್ಮಕವಾಗಿ ಬಂಧಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದರು.

  ಅಧಿಕಾರಿಯ 8 ವರ್ಷದ ಕಂದನೂ ಉಗ್ರರ ಗುಂಡಿಗೆ ಬಲಿ:

  ಸಾವನ್ನಪ್ಪಿದ ಕಮಾಂಡಿಂಗ್ ಅಧಿಕಾರಿ ಕರ್ನಲ್ ವಿಪ್ಲವ್ ತ್ರಿಪಾಠಿ ಅವರು ಮ್ಯಾನ್ಮಾರ್ ಗಡಿಯಲ್ಲಿನ ತಮ್ಮ ಕೋಯ್ ಪೋಸ್ಟ್‌ಗಳಿಂದ ಹಿಂತಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸತ್ತವರಲ್ಲಿ ಒಬ್ಬ ಅಧಿಕಾರಿ, ಮೂವರು ಕ್ವಿಕ್ ರೆಸ್ಪಾನ್ಸ್ ಟೀಮ್‌ಗೆ ಸೇರಿದವರಾಗಿದ್ದಾರೆ. ಭಯೋತ್ಪಾದಕರು ಭಾರೀ ಶಸ್ತ್ರಸಜ್ಜಿತವಾಗಿ ಸೆಹ್ಕೆನ್ ಗ್ರಾಮದ ಬಳಿ ಕ್ಯೂಆರ್‌ಟಿಯನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ. ಕರ್ನಲ್ ತ್ರಿಪಾಠಿ ಅವರ ಚಾಲಕ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ರಕ್ಷಣಾ ಸಚಿವರಿಂದ ಸಂತಾಪ:

  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಈ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮಣಿಪುರದ ಚುರಾಚಂದ್‌ಪುರದಲ್ಲಿ ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ನಡೆದ ಹೇಡಿತನದ ದಾಳಿ. ಇದು ಅತ್ಯಂತ ನೋವಿನ ಮತ್ತು ಖಂಡನೀಯವಾಗಿದೆ ದೇಶವು CO 46 AR ಮತ್ತು ಇಬ್ಬರು ಕುಟುಂಬ ಸದಸ್ಯರನ್ನು ಒಳಗೊಂಡಂತೆ 5 ವೀರ ಸೈನಿಕರನ್ನು ಕಳೆದುಕೊಂಡಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.
  Published by:Vijayasarthy SN
  First published: