Water on Moon: ಚಂದ್ರನ ಮೇಲೆ ಪ್ರಪ್ರಥಮ ಬಾರಿಗೆ ನೀರು ಪತ್ತೆ ಹಚ್ಚಿದ ಚೀನಾದ ಚಂದ್ರ ನೌಕೆ!

ಚಾಂಗ್-5 ಗಗನ ನೌಕೆಯು ಚಂದ್ರನ ಮಧ್ಯ ಎತ್ತರ ಅಕ್ಷಾಂಶದಲ್ಲಿರುವ ಅತ್ಯಂತ ಸಣ್ಣ ಪ್ರಾಯದ ಅಗ್ನಿ ಶಿಲೆಯೊಂದರ ಮೇಲೆ ಇಳಿದಿತ್ತು. ಈ ನೌಕೆಯು 1731 ಗ್ರಾಂ ಮಾದರಿಗಳನ್ನು ಪರೀಕ್ಷಿಸಿ ನೀರನ್ನು ಗುರುತಿಸಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಂದ್ರನ ಮೇಲ್ಮೈನಲ್ಲಿ ಪ್ರಪ್ರಥಮ ಬಾರಿಗೆ ನೀರನ್ನು ಪತ್ತೆ ಹಚ್ಚಿರುವ ಚೀನಾದ (China) ಚಾಂಗ್ 5 ಚಂದ್ರ ನೌಕೆ, (Chang 5 lunar mission) ಈ ನೂತನ ಶೋಧನೆಯಿಂದ ಚಂದ್ರ ಉಪಗ್ರಹವು ಒಣಗಿ ಹೋಗಿದ್ದಕ್ಕೆ ನೂತನ ಸಾಕ್ಷ್ಯ ದೊರೆತಂತಾಗಿದೆ.ಉನ್ನತ ಪರಾಮರ್ಶೆಯ ವಾರ್ತಾಪತ್ರಿಕೆ 'ಸೈನ್ಸ್ ಅಡ್ವಾನ್ಸ್'ನಲ್ಲಿ(Science Advance) ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದ್ದು, ಚಂದ್ರ ನೌಕೆಯು ಇಳಿದಿದ್ದ ಚಂದ್ರನ ಮೇಲ್ಮೈನಲ್ಲಿ 120 ಪಿಪಿಎಂಗಿಂತಲೂ ಕಡಿಮೆ ಪ್ರಮಾಣದಲ್ಲಿನ ನೀರು ಪತ್ತೆಯಾಗಿದೆ. ಹಾಗೆಯೇ ಹಗುರವಾದ, ಬೊಕ್ಕೆಯಂಥ ಕಲ್ಲು 180 ಪಿಪಿಎಂಗಿಂತಲೂ ಕಡಿಮೆ ಪ್ರಮಾಣದ ನೀರು(Water) ಹೊಂದಿದ್ದು, ಇದು ಭೂಮಿಗಿಂತ ಹೆಚ್ಚು ಒಣಗಿದೆ.

ಮೊದಲ ಬಾರಿಗೆ ಪತ್ತೆ
ಚಂದ್ರನ ಮೇಲೆ ನೀರಿನ ಅಂಶವಿರುವುದು ದೂರದ ಅವಲೋಕನಗಳಿಂದ ತಿಳಿದು ಬಂದಿತ್ತಾದರೂ, ಗಗನ ನೌಕೆಯು ಕಲ್ಲು ಹಾಗೂ ಮಣ್ಣಿನಲ್ಲೂ ನೀರಿನ ಚಿಹ್ನೆಗಳಿರುವುದನ್ನು ಪತ್ತೆ ಹಚ್ಚಿದೆ. ಚಂದ್ರ ನೌಕೆಯ ಮೇಲಿದ್ದ ಸಾಧನವು ಮಣ್ಣು ಹಾಗೂ ಕಲ್ಲಿನ ವರ್ಣಪಟಲದ ಪ್ರತಿಫಲನದ ಮೂಲಕ ಚಂದ್ರನ ಮೇಲ್ಮೈನಲ್ಲಿ ನೀರಿರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದೆ. ನೀರಿನ ಕಣ ಅಥವಾ ಹೈಡ್ರಾಕ್ಸಿಲ್ 3 ಮೈಕ್ರೊಮೀಟರ್ ವೇಗದಲ್ಲಿ ಹೀರಿಕೊಳ್ಳುವುದನ್ನು ಮಾಪನ ಮಾಡುವ ಮೂಲಕ ನೀರಿನ ಲಕ್ಷಣ ಅಳೆಯಬಹುದಾಗಿದೆ ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರನ್ನು ಉಲ್ಲೇಖಿಸಿ ಸರ್ಕಾರಿ ಒಡೆತನದ ಕ್ಸಿನುವಾ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಅಧ್ಯಯನ ಬಹಿರಂಗ
ಚಂದ್ರನ ಮಣ್ಣು ಅತಿ ಹೆಚ್ಚು ತೇವಾಂಶ ಹೊಂದಿರಲು ಸೂರ್ಯನ ಗಾಳಿಯು ಕೊಡುಗೆ ನೀಡಿದ್ದು, ಈ ಗಾಳಿಯು ಜಲಜನಕ ತರುವುದರಿಂದ ನೀರು ಉತ್ಪತ್ತಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕಲ್ಲಿನಲ್ಲಿರುವ ಹೆಚ್ಚುವರಿ 60 ಪಿಪಿಎಂ ನೀರು ಚಂದ್ರನ ಒಳಮೈನಿಂದ ಉತ್ಪತ್ತಿಯಾಗಿರಬಹುದು ಎಂದೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Lemon Water: ಅತಿಯಾಗಿ ಸೇವನೆ ಮಾಡಿದ್ರೆ ನಿಂಬೆ ರಸವೂ ವಿಷ

ಹೀಗಾಗಿ ಹೆಚ್ಚು ತಾಪಮಾನದ ಅಗ್ನಿಶಿಲೆಯ ಘಟಕದಿಂದ ಈ ಕಲ್ಲು ಉತ್ಪತ್ತಿಯಾಗಿರುವ ಸಾಧ್ಯತೆಯಿದ್ದು, ಚಂದ್ರ ನೌಕೆಯು ನೆಲಕ್ಕೆ ಇಳಿಯುವ ಮುನ್ನ ಈ ಪ್ರದೇಶವನ್ನೇ ಆಯ್ದುಕೊಂಡಿದೆ. ನಿರ್ದಿಷ್ಟ ಅವಧಿಯಲ್ಲಿ ಚಂದ್ರ ಒಣಗಿ ಹೋಗಿದ್ದು, ಇದಕ್ಕೆ ಚಂದ್ರನ ಶೇಖರಣಾ ಘಟಕದ ಒಳಗಿದ್ದ ಇಂಧನವು ಇಂಗಿ ಹೋಗಿರುವುದು ಕಾರಣವಿರಬಹುದು ಎಂಬ ಅಂಶವನ್ನು ಅಧ್ಯಯನ ಬಹಿರಂಗಗೊಳಿಸಿದೆ.

ಚಂದ್ರನ ಹೊರಮೈ ಮಾಪನ
ಚಾಂಗ್-5 ಗಗನ ನೌಕೆಯು ಚಂದ್ರನ ಮಧ್ಯ ಎತ್ತರ ಅಕ್ಷಾಂಶದಲ್ಲಿರುವ ಅತ್ಯಂತ ಸಣ್ಣ ಪ್ರಾಯದ ಅಗ್ನಿ ಶಿಲೆಯೊಂದರ ಮೇಲೆ ಇಳಿದಿತ್ತು. ಈ ನೌಕೆಯು 1731 ಗ್ರಾಂ ಮಾದರಿಗಳನ್ನು ಪರೀಕ್ಷಿಸಿ ನೀರನ್ನು ಗುರುತಿಸಿತ್ತು. "ಮಾದರಿಯು ಮೇಲ್ಮೈ ಹಾಗೂ ಒಳಭಾಗಗಳೆರಡರಲ್ಲೂ ಹರಳುಗಳ ಮಿಶ್ರಣವನ್ನು ಒಳಗೊಂಡಿದೆ. ಆದರೆ, ಖುದ್ದು ಸ್ಥಳದಲ್ಲೇ ಪತ್ತೆ ಕಾರ್ಯ ಕೈಗೊಂಡಾಗಲಷ್ಟೆ ಚಂದ್ರನ ಹೊರಮೈಯನ್ನು ಮಾಪನ ಮಾಡಲು ಸಾಧ್ಯ" ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧಿನದಲ್ಲಿ ಕಾರ್ಯನಿರ್ವಹಿಸುವ ಭೂಗರ್ಭ ಹಾಗೂ ಭೂಭೌತಿಕ ಶಾಸ್ತ್ರ ವಿಶ್ವವಿದ್ಯಾಲಯದ ಸಂಶೋಧಕರಲ್ಲೊಬ್ಬರಲ್ಲಾದ ಲಿನ್ ಹೊಂಗ್ಲೈ ಕ್ಸಿನುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರಾಥಮಿಕ ವಿಶ್ಲೇಷಣೆ
ಭೂಮಿಯಿಂದಲೇ ಚಂದ್ರನ ಮೇಲ್ಮೈ ಲಕ್ಷಣಗಳನ್ನು ಕರಾರುವಾಕ್ಕಾಗಿ ಮಾಪನ ಮಾಡುವುದು ಸವಾಲಿನ ಕೆಲಸವಾಗಿದ್ದು, ಹೀಗಾಗಿಯೇ ಖುದ್ದು ಮಾಪನ ಅತ್ಯಗತ್ಯವಾಗಿದೆ ಎಂದೂ ಲಿನ್ ಹೇಳಿದ್ದಾರೆ. ಅಧ್ಯಯನದ ಪ್ರಕಾರ, ಚಾಂಗ್-5 ಗಗನ ನೌಕೆ ಮರಳಿಸಿರುವ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯ ಫಲಿತಾಂಶಗಳು ಸ್ಥಿರವಾಗಿವೆ.

ಇದನ್ನೂ ಓದಿ: China's Yutu-2 Roverನಿಂದ ಚಂದ್ರನ ಮೇಲ್ಮೈಯಲ್ಲಿ ನಿಗೂಢ ಘನಾಕಾರದ ವಸ್ತು ಪತ್ತೆ

ಈ ಸಂಶೋಧನೆಗಳು ಚೀನಾದ ಕೈಗೊಳ್ಳಲು ಉದ್ದೇಶಿಸಿರುವ ಚಾಂಗ್-6 ಹಾಗೂ ಚಾಂಗ್-7 ಯೋಜನೆಗಳಿಗೆ ಹೆಚ್ಚು ಸುಳಿವು ನೀಡಿವೆ. ಮುಂದಿನ ದಶಕಗಳಲ್ಲಿ ಮಾನವಸಹಿತ ಚಂದ್ರ ನಿಲ್ದಾಣಗಳು ನಿರ್ಮಾಣಗೊಳ್ಳುವ ಸಾಧ್ಯತೆಗಳಿರುವುದರಿಂದ ಚಂದ್ರನ ಮೇಲ್ಮೈನಲ್ಲಿರುವ ನೀರಿನ ಮೀಸಲು ಮುನ್ನೆಲೆಗೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Published by:vanithasanjevani vanithasanjevani
First published: