ಬೀಜಿಂಗ್: ಚೀನಾದಲ್ಲಿರುವ ಅತಿ ಶ್ರೀಮಂತ ಕುಟುಂಬಗಳು (China's Billionaires) ಹೆಚ್ಚಿನ ಸಂಖ್ಯೆಯಲ್ಲಿ ಸಿಂಗಾಪುರಕ್ಕೆ (Singapore) ಆಗಮಿಸುತ್ತಿದ್ದು, ಕಮ್ಯುನಿಸ್ಟ್ ಪಕ್ಷಗಳ (Communist Party) ದಬ್ಬಾಳಿಕೆ ಹಾಗೂ ಸಂದೇಹ ಪ್ರವೃತ್ತಿಯಿಂದ ಬೇಸತ್ತಿರುವ ಚೀನೀ ಶ್ರೀಮಂತರು ತಮ್ಮ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಸುರಕ್ಷಿತ ಸ್ಥಳವನ್ನು ಅನ್ವೇಷಿಸುತ್ತಿದ್ದಾರೆ. ಶ್ರೀಮಂತ ಟೆಕ್ ಬಿಲಿಯನೇರ್‌ಗಳು ಹಾಗೂ ಸೆಲೆಬ್ರಿಟಿಗಳ ಮೇಲೆ ಬೀಜಿಂಗ್‌ನಲ್ಲಿ ಇತ್ತೀಚೆಗೆ ನಡೆದ ದಬ್ಬಾಳಿಕೆ ಪ್ರಕರಣಗಳು ಅತಿ ಶ್ರೀಮಂತ ಚೀನೀ ಕುಟುಂಬಗಳಿಗೆ ಭಯವನ್ನುಂಟು ಮಾಡಿದ್ದು ಮುಂದಿನ ಭವಿಷ್ಯವೇನು ಎಂಬ ಕಳವಳನ್ನುಂಟು ಮಾಡಿದೆ.
ಮುಂದೇನಾಗಲಿದೆಯೋ ಎಂಬ ಹೆದರಿಕೆಯಿಂದಲೇ ಕಾಲ ಕಳೆಯುತ್ತಿರುವ ಹೆಚ್ಚಿನ ಶ್ರೀಮಂತ ಕುಟುಂಬಗಳು ಸಿಂಗಾಪುರಕ್ಕೆ ಟಿಕೆಟ್ ಕಾಯ್ದಿರಿಸಿವೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಸಿಂಗಾಪುರಕ್ಕೆ ಧಾವಿಸಲು ಕಾರಣಗಳೇನು?
ಪ್ರಮುಖ ಏಷ್ಯನ್ ಹಣಕಾಸು ಕೇಂದ್ರವಾಗಿರುವ ಸಿಂಗಾಪುರ್, ಉದ್ಯಮಿಗಳನ್ನು ಸ್ಥಳಾಂತರಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ. ಸಿಂಗಾಪುರವನ್ನು ಕಳೆದ ಆರು ದಶಕಗಳಿಂದ ಒಂದು ಪಕ್ಷ ಆಳುತ್ತಿದೆ. ಅದೇ ರೀತಿ ಕಾರ್ಮಿಕ ಮುಷ್ಕರಗಳು ಮತ್ತು ಬೀದಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ತೆರಿಗೆಗಳು ತುಲನಾತ್ಮಕವಾಗಿ ಕಡಿಮೆ ಮತ್ತು ಜನಸಂಖ್ಯೆಯು ಪ್ರಧಾನವಾಗಿ ಜನಾಂಗೀಯ ಚೈನೀಸ್ ಆಗಿದೆ.
ಐಷಾರಾಮಿ ಮನೆಗಳೇ ಬೇಕು
ಸಿಂಗಾಪುರಕ್ಕೆ ಆಗಮಿಸುತ್ತಿರುವ ಚೀನೀಯರ ಪ್ರಭಾವ ನಗರದ ಮೇಲೆ ಹೆಚ್ಚಿನ ಪ್ರಭಾವವನ್ನುಂಟು ಮಾಡುತ್ತಿದೆ. ಏಕೆಂದರೆ ಸ್ಥಳಾಂತರ ನಡೆಸುತ್ತಿರುವ ಚೀನೀಯರು ಐಷಾರಾಮಿ ಮನೆಗಳನ್ನೇ ಹುಡುಕುತ್ತಿದ್ದು ಸೆಂಟೋಸಾ ದ್ವೀಪದಲ್ಲಿ ಹೆಚ್ಚಿನ ಚೀನೀಯರು ನೆಲೆಗೊಳ್ಳುತ್ತಿದ್ದು ಇದು ಥೀಮ್ ಪಾರ್ಕ್, ಕ್ಯಾಸಿನೊ ಮತ್ತು ಪ್ರತಿಷ್ಠಿತ ಗಾಲ್ಫ್ ಕ್ಲಬ್ ಅನ್ನು ಒಳಗೊಂಡಿದೆ.
ಚೀನೀಯರು ಹಣ ಖರ್ಚುಮಾಡುವ ವಿಧಾನ ನಿಜವಾಗಿಯೂ ಊಹೆಗೂ ಮೀರಿದ್ದು ಎಂದು ತಿಳಿಸಿರುವ ವಲಸೆ ಮತ್ತು ಸ್ಥಳಾಂತರ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ AIMS ನ ಸಿಇಒ ಪಿಯರ್ಸ್ ಚೆಂಗ್, ಸಿರಿವಂತ ಚೀನಿಯರು ಕ್ರೇಜಿಯಾಗಿ ನೀರಿನಂತೆ ಹಣ ಖರ್ಚುಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದು ಹುಚ್ಚುತನದ ಪರಮಾವಧಿ ಎಂದೇ ಪಿಯರ್ಸ್ ಉಲ್ಲೇಖಿಸಿದ್ದಾರೆ.
ನೀರಿನಂತೆ ಹಣ ಖರ್ಚುಮಾಡುತ್ತಿರುವ ಚೀನೀಯರು
ಒಂದು ಬಾಟಲ್‌ಗೆ $800,000 ಮೌಲ್ಯವಿರುವ ಅಪರೂಪದ ಜಪಾನಿನ "ಯಮಝಕಿ 55" ವಿಸ್ಕಿಯನ್ನು ಸರಬರಾಜು ಮಾಡಿದ ಗ್ರಾಹಕರೊಬ್ಬರ ಪಾರ್ಟಿಯಲ್ಲಿ ಭಾಗವಹಿಸಿದ್ದನ್ನು ಪಿಯರ್ಸ್ ನೆನಪಿಸಿಕೊಂಡರು.
ಚೆಂಗ್ ನಡೆಸುವ ಸಂಸ್ಥೆಯು ಷಾರಾಮಿ ಮನೆಗಳನ್ನು ಹುಡುಕಲು, ಚಾಲಕರನ್ನು ನೇಮಿಸಿಕೊಳ್ಳಲು ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಸಹಾಯ ಮಾಡುತ್ತದೆ. ಸಂಸ್ಥೆಯು ಒಮ್ಮೆ $61,000 ಮೌಲ್ಯದ ಸಿಗಾರ್‌ಗಳನ್ನು ಕೂಡ ಗ್ರಾಹಕರಿಗಾಗಿ ಒದಗಿಸಿದೆ ಎಂದು ತಿಳಿಸಿದ್ದಾರೆ.
ನಗರಕ್ಕೆ ಹೊಸದಾಗಿ ಆಗಮಿಸುತ್ತಿರುವ ಚೀನೀಯರು ರೋಲ್ಸ್ ರಾಯ್ಸ್ ಮತ್ತು ಬೆಂಟ್ಲೀಸ್‌ಗೆ ಆದ್ಯತೆ ನೀಡುತ್ತಿದ್ದು ವಿದೇಶಿ ಸದಸ್ಯರು ವರ್ಷಕ್ಕೆ $670,000 ಪಾವತಿಸುವ ವಿಶೇಷ ಸೆಂಟೋಸಾ ಗಾಲ್ಫ್ ಕ್ಲಬ್‌ನಂತಹ ಉನ್ನತ-ಶ್ರೇಣಿಯ ಗಾಲ್ಫ್ ಕ್ಲಬ್‌ಗಳಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನನ್ನ ಹಣ ನನ್ನದು
ಚೀನಾದ ಶ್ರೀಮಂತ ಸಂಪತ್ತು ಬೀಜಿಂಗ್‌ನ ವ್ಯಾಪ್ತಿಯನ್ನು ಮೀರಿದ್ದು, ಇತ್ತೀಚಿನ ಉನ್ನತ ಮಟ್ಟದ ದಬ್ಬಾಳಿಕೆಗಳು ಬಿಲಿಯನೇರ್‌ಗಳನ್ನು ದಂಗುಬಡಿಸಿದೆ. ಜ್ಯಾಕ್ ಮಾ, 2020 ರಲ್ಲಿ ಚೈನೀಸ್ ನಿಯಂತ್ರಕರಿಂದ ಅಂದಾಜು $25 ಶತಕೋಟಿಯನ್ನು ಕಳೆದುಕೊಂಡರು.
ಇದನ್ನೂ ಓದಿ: Stampede: ಉಚಿತ ಸೀರೆ, ಪಂಚೆ ಆಸೆಗೆ ಜೀವ ಕಳೆದುಕೊಂಡ ಜನರು! ಕಾಲ್ತುಳಿತಕ್ಕೆ ಸಿಲುಕಿ ನಾಲ್ವರು ಸಾವು
ಚೀನಾದ ಶ್ರೀಮಂತ ಉದ್ಯಮಿಗಳು ಕಮ್ಯುನಿಸ್ಟ್ ಪಕ್ಷವು ಇದೇ ರೀತಿಯ ಒತ್ತಡವನ್ನು ತಮ್ಮ ಮೇಲೆ ಹೇರಬಹುದು ಎಂದು ಭಯಗೊಂಡಿದ್ದಾರೆ. ಇಲ್ಲವೇ ಕಡಿಮೆ ಬೆಲೆಯಲ್ಲಿ ತಮ್ಮ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಆತಂಕಕ್ಕೊಳಗಾಗಿದ್ದಾರೆ.
ಸಂಪತ್ತಿನ ಸಂರಕ್ಷಣೆ
ಶ್ರೀಮಂತ ಚೀನೀಯರು ಸಿಂಗಾಪುರಕ್ಕೆ ತೆರಳುವುದು ಕುಟುಂಬದ ಸಂಪತ್ತನ್ನು ಸುರಕ್ಷಿತವಾಗಿರಿಸಲು ಸಹಕಾರಿಯಾಗಿದೆ ಎಂದು ನಂಬಿದ್ದು ಹಲವಾರು ತಲೆಮಾರುಗಳವರೆಗೆ ಶ್ರೀಮಂತಿಕೆ ಉಳಿಯುತ್ತದೆ ಎಂದು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾದ ಕಟ್ಟುನಿಟ್ಟಾದ ಶೂನ್ಯ-ಕೋವಿಡ್ ನೀತಿ ಮತ್ತು ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗಿದ್ದರೂ ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ರಾಜಕೀಯ ಉದ್ವಿಗ್ನತೆಗಳು ಚೀನಾದ ಕೆಲವು ಶ್ರೀಮಂತರು ವಿದೇಶಕ್ಕೆ ತೆರಳುವ ಬಯಕೆಯನ್ನು ಬಲಪಡಿಸುತ್ತಿವೆ.
ಇದನ್ನೂ ಓದಿ: Pakistan: ಅಣುಬಾಂಬ್ ಹಿಡಿದು ಜಗತ್ತಿನಿಂದ ಹಣ ವಸೂಲಿ ಮಾಡಿ! ಪಾಕಿಸ್ತಾನಕ್ಕೆ ಮುಸ್ಲಿಂ ನಾಯಕನ ಬಿಟ್ಟಿ ಸಲಹೆ
ವಾಷಿಂಗ್ಟನ್ ಮತ್ತು ಬೀಜಿಂಗ್‌ನೊಂದಿಗಿನ ತನ್ನ ಸಂಬಂಧಗಳನ್ನು ಚತುರವಾಗಿ ನಿರ್ವಹಿಸಿರುವ ಸಿಂಗಾಪುರ್ ಚೀನಾದೊಂದಿಗೆ ದೃಢವಾದ ವ್ಯಾಪಾರ ಸಂಪರ್ಕಗಳನ್ನು ಉಳಿಸಿಕೊಂಡು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ನಿಕಟ ಭದ್ರತಾ ಸಂಬಂಧಗಳನ್ನು ನಿರ್ವಹಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ