HOME » NEWS » National-international » CHINAS 5G DESIGNS SUSPECTED TO BE BEHIND VANDALISATION OF TELECOM TOWERS DURING FARMERS PROTEST SNVS

Opinion - ರೈತರ ಪ್ರತಿಭಟನೆ ವೇಳೆ ಟೆಲಿಕಾಂ ಟವರ್ ಧ್ವಂಸ: ಘಟನೆ ಹಿಂದಿದೆಯಾ ಚೀನಾ 5ಜಿ ಕುತಂತ್ರ?

ರೈತರ ಪ್ರತಿಭಟನೆಗಳ ವೇಳೆ ರಿಲಾಯನ್ಸ್ ಆಸ್ತಿಪಾಸ್ತಿಯ ನಾಶ ಮಾಡುವುದರ ಹಿಂದೆ ನಮ್ಮ ನೆರೆ ರಾಷ್ಟ್ರಗಳ ಚಿತಾವಣೆ ಇರುವಂತೆ ತೋರುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲುದು.

news18
Updated:December 31, 2020, 11:08 AM IST
Opinion - ರೈತರ ಪ್ರತಿಭಟನೆ ವೇಳೆ ಟೆಲಿಕಾಂ ಟವರ್ ಧ್ವಂಸ: ಘಟನೆ ಹಿಂದಿದೆಯಾ ಚೀನಾ 5ಜಿ ಕುತಂತ್ರ?
ಸಾಂದರ್ಭಿಕ ಚಿತ್ರ
  • News18
  • Last Updated: December 31, 2020, 11:08 AM IST
  • Share this:
ನವದೆಹಲಿ: ರೈತರ ಪ್ರತಿಭಟನೆ ವೇಳೆ ಮೊನ್ನೆ ಕೆಲ ದುಷ್ಕರ್ಮಿಗಳು ಬರೋಬ್ಬರಿ 1,500 ಟೆಲಿಕಾಂ ಟವರ್​ಗಳನ್ನ ಧ್ವಂಸ ಮಾಡಿದ್ದರು. ಇದು ರೈತರ ಆಕ್ರೋಶದ ಸ್ಯಾಂಪಲ್ ಅಷ್ಟೇ ಎಂದು ಮೇಲ್ನೋಟಕ್ಕೆ ತೋರಬಹುದು. ಆದರೆ, ಘಟನೆ ಹಿಂದೆ ದೊಡ್ಡ ಚಿತಾವಣೆ ಇರುವುದರ ಸುಳಿವು ಸಿಗಬೇಕೆಂದರೆ ನೀವು ತುಸು ಆಳಕ್ಕೆ ಹೋಗಬೇಕಾಗುತ್ತದೆ. ತುಸು ನೇರವಾಗಿ ಹೇಳಬೇಕೆಂದರೆ ಚೀನಾದ 5ಜಿ ಸಾಮ್ರಾಜ್ಯ ಸ್ಥಾಪನೆಯ ಹಪಾಹಪಿಯ ಒಂದು ಸಣ್ಣ ಭಾಗವಾಗಿ ಆ ಘಟನೆ ಕಾಣುತ್ತದೆ. ಇದನ್ನ ಅರಿಯಬೇಕಾದರೆ ಚೀನಾದ ಇತ್ತೀಚಿನ ನಡೆಗಳು ಮತ್ತು ಭವಿಷ್ಯದ ಅದರ ಮಹತ್ವಾಕಾಂಕ್ಷಿ ಗುರಿಗಳನ್ನ ಅರಿತುಕೊಳ್ಳುವುದು ಒಳ್ಳೆಯದರು.

5G ಎಂಬುದು ನಮ್ಮ ಸದ್ಯೋಭವಿಷ್ಯದ ತಂತ್ರಜ್ಞಾನವಾಗಿದೆ. ಈಗ ಭಾರತದಲ್ಲಿ ನಾವು 4ಜಿ ತಂತ್ರಜ್ಞಾನದಲ್ಲಿದ್ದೇವೆ. 5ಜಿಗೆ ಅಡಿ ಇಡಲು ತಯಾರಾಗಿದ್ದೇವೆ. ಹಾಗೆಯೇ, ಜಗತ್ತಿನ ಹಲವು ದೇಶಗಳು ಅಣಿಯಾಗಿವೆ. ಈ 5ಜಿ ತಂತ್ರಜ್ಞಾನ ವಿಚಾರದಲ್ಲಿ ಚೀನಾ ಅಧಿಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಹಲವು ದೇಶಗಳಲ್ಲಿ 5ಜಿ ನೆಟ್​ವರ್ಕ್ ಸ್ಥಾಪಿಸಲು ಚೀನಾದ ಕಂಪನಿಗಳು ಭಾರೀ ಮೊತ್ತದ ಹಣವನ್ನು ಹೂಡಿಕೆ ಮಾಡಿವೆ. ಚೀನಾದ ಬೆಲ್ಟ್ ಅಂಡ್ ರೋಡ್ ಯೋಜನೆ ಬಗ್ಗೆ ನೀವು ಕೇಳಿರಬಹುದು. ಇದು ಭೌತಿಕವಾಗಿ ಜಗತ್ತಿನಲ್ಲಿ ಪಾರಮ್ಯ ಮೆರೆಯಲು ಚೀನಾದ ಪ್ರಯತ್ನವಾಗಿದೆ. ಆದರೆ, 5ಜಿ ನೆಟ್​ವರ್ಕ್ ಮತ್ತು 5ಜಿ ಸೌಕರ್ಯದ ಮೂಲಕ ಅಂತರ್ಜಾಲ ಜಗತ್ತನ್ನು ಆಳುವುದು ಚೀನಾದ ಮಹತ್ವಾಕಾಂಕ್ಷೆ. ಹುವಾಯೇ (Huawei) ಮತ್ತು ಝಡ್​ಟಿಇ ಸಂಸ್ಥೆಗಳು ಚೀನಾದ ಅಜೆಂಡಾವನ್ನು ಸಾಕಾರಗೊಳಿಸಲು ಸಿದ್ಧವಾಗಿವೆ.

ಇದನ್ನೂ ಓದಿ: Opinion | ಭಾರತದ ಚೀನಾ ಏಜೆಂಟೆರು ರೈತರ ಪೂರ್ವಭಾವಿ ಪ್ರತಿಭಟನೆ ಮೂಲಕ ಯುದ್ಧ ಆರಂಭಿಸಿದ್ದಾರೆ

5ಜಿ ಸೌಕರ್ಯ ಎಂದರೆ ಅದು ಇಂಟರ್ನೆಟ್ ಜಗತ್ತಿನಲ್ಲಿ ಕ್ರಾಂತಿ ಸ್ಥಾಪಿಸುವುದಾಗಿದೆ. ಇಂಟರ್ನೆಟ್ ಸ್ಪೀಡ್ ನೂರು ಪಟ್ಟು ಹೆಚ್ಚಿರುತ್ತವೆ. ಜಗತ್ತಿನ ಬಹುತೇಕ ವ್ಯವಸ್ಥೆ ಇಂಟರ್ನೆಟ್ ಆಧಾರಿತವಾಗಿರುವುದು ಇನ್ನೂ ಹೆಚ್ಚಾಗುತ್ತದೆ. ಭಾರತದಲ್ಲೂ 5ಜಿ ತಂತ್ರಜ್ಞಾನವನ್ನು ಅಳವಡಿಸಲು ಚೀನಾ ಪ್ರಯತ್ನ ಮಾಡುತ್ತಿದೆ. ಆದರೆ ಭಾರತದಲ್ಲಿ ರಿಲಾಯನ್ಸ್ ಸಂಸ್ಥೆ ಪ್ರಬಲವಾಗಿ ಬೆಳೆದಿದ್ದು ದೇಶೀಯವಾಗಿಯೇ 5ಜಿ ತಂತ್ರಜ್ಞಾನ ಸೌಕರ್ಯವನ್ನು ಕಲ್ಪಿಸಲು ಸಿದ್ಧವಾಗಿದೆ. ಭಾರತದಲ್ಲಷ್ಟೇ ಅಲ್ಲ ವಿಶ್ವದ ಇತರ ಭಾಗಗಳಿಗೂ ರಿಲಾಯನ್ಸ್ 5ಜಿ ಸೌಕರ್ಯ ಕಲ್ಪಿಸುವ ಉದ್ದೇಶದಲ್ಲಿದೆ. ಇದು ಚೀನಾದ ಮಹತ್ವಾಕಾಂಕ್ಷೆಗೆ ಧಕ್ಕೆ ತರುವಂಥ ಬೆಳವಣಿಗೆಯೇ ಆಗಿದೆ.

ಇಷ್ಟೇ ಅಲ್ಲ, ರಿಲಾಯನ್ಸ್ ಸಂಸ್ಥೆ ಗೂಗಲ್ ಸಹಯೋಗದಲ್ಲಿ 5ಜಿ ಸಾಮರ್ಥ್ಯದ ಸ್ಮಾರ್ಟ್​ಫೋನ್ ಅಭಿವೃದ್ಧಿಪಡಿಸುತ್ತಿದೆ. ಒಂದು ವೇಳೆ ಅಂದುಕೊಂಡಂತೆ ಈ ಸ್ಮಾರ್ಟ್​ಫೋನ್ ರೂಪುಗೊಂಡಲ್ಲಿ ಚೀನಾದ ಅಗ್ಗದ ದರ ಸ್ಮಾರ್ಟ್​ಫೋನ್​ಗಳಿಗೆ ಭಾರೀ ಪೈಪೋಟಿ ಸೃಷ್ಟಿಯಾಗುತ್ತದೆ. ಶವೋಮಿ (Xiaomi), ವಿವೊ, ಒಪ್ಪೊ ಮೊದಲಾದ ಕಂಪನಿಗಳಿಗೆ ಈಗಲೇ ಬೆವರಿಳಿಯಲು ಆರಂಭವಾಗಿದೆ. ಇನ್ನು, ರಿಲಾಯನ್ಸ್ ಸಂಸ್ಥೆ ಅಮೆರಿಕ ಮೂಲಕ ಕ್ವಾಲ್​ಕಾಮ್ (Qualcomm) ಸಂಸ್ಥೆ ಸಹಯೋಗದಲ್ಲಿ 5ಜಿ ತಂತ್ರಜ್ಞಾನದ ಪ್ರಯೋಗ ಪ್ರಾರಂಭಿಸಿದೆ. ಒಂದು ಸೆಕೆಂಡ್​ಗೆ 1 ಗಿಗಾಬೈಟ್ ವೇಗದ ಇಂಟರ್ನೆಟ್ ಸಾಧ್ಯವಾಗಿದೆ ಎಂದು ರಿಲಾಯನ್ಸ್ ಹೇಳಿಕೊಂಡಿದೆ. ಈಗ ನಾವು ಬಳಸುವ ಇಂಟರ್ನೆಟ್ ಒಂದು ಸೆಕೆಂಡ್​ಗೆ 10 ಎಂಬಿಪಿಎಸ್ ವೇಗ ಇರುತ್ತದೆ. 1 ಗಿಗಾಬೈಟ್ ಎಂದರೆ 1 ಸಾವಿರ ಎಂಬಿಪಿಎಸ್. ಎಷ್ಟೊಂದು ವೇಗದ ಇಂಟರ್ನೆಟ್ ಇರಬಹುದು ಊಹಿಸಿ. 2021ರಲ್ಲಿ ರಿಲಾಯನ್ಸ್ ಜಿಯೋ ಭಾರತದಲ್ಲಿ 5ಜಿ ತಂತ್ರಜ್ಞಾನದ ಅಳವಡಿಕೆಗೆ ಅವಕಾಶ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಚೀನಾ ಕುಪಿತಗೊಂಡಿದೆ.

ಇದನ್ನೂ ಓದಿ: OPINION | ಪ್ರತಿಭಟನೆ ಹೆಸರಿನಲ್ಲಿ ಸಾಂಪ್ರದಾಯಿಕ ಉದ್ಯಮಗಳ ದುರ್ಬಳಕೆ, ಸಂಪತ್ತು ನಾಶದಿಂದ ಭಾರತದ ಆರ್ಥಿಕತೆ ಸುಧಾರಿಸಲಿದೆಯೇ?

ಇನ್ನು, ರೈತರ ಪ್ರತಿಭಟನೆಗಳ ವಿಚಾರಕ್ಕೆ ಬಂದರೆ ನೀವು ಗಮನಿಸಬೇಕಾದ ಅಂಶ ಎಂದರೆ ಈ ಪ್ರತಿಭಟನೆಗಳ ಹಿಂದೆ ಯಾರಾರಿದ್ದಾರೆ ಎಂಬುದು. ಕಾಂಗ್ರೆಸ್, ಆಮ್ ಆದ್ಮಿ ಮೊದಲಾದ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಯಾವುದೇ ಜನತಾ ಪ್ರತಿಭಟನೆಗಳಿಗೆ ವಿಪಕ್ಷಗಳ ಬೆಂಬಲ ಇರುವುದು ಸಹಜ ಹೌದು. ರೈತರ ಪ್ರತಿಭಟನೆಯಲ್ಲಿ ಹೆಚ್ಚಿನವರು ಪಂಜಾಬ್ ರೈತರು. ಇವರಿಗೆ ಹಣದ ನೆರವು ಅಮೆರಕ, ಕೆನಡಾ ಬ್ರಿಟನ್ ಮೊದಲಾದ ದೇಶಗಳಲ್ಲಿರುವ ಅನಿವಾಸಿ ಪಂಜಾಬಿಗಳಿಂದಲೇ. ಖಲಿಸ್ತಾನೀ ಸಂಘಟನೆಗಳಿಂದಲೂ ಫಂಡಿಂಗ್ ಬರುತ್ತಿರುವ ಶಂಕೆ ಇದೆ. ಪಂಜಾಬಿಗಳಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂದು ದಶಕಗಳ ಹಿಂದೆ ರೂಪುಗೊಂಡ ಸಂಘಟನೆ ಖಲಿಸ್ತಾನೀ. ಇದು ಭಾರತದಲ್ಲಿ ನಿಷೇಧವಾಗಿದೆ. ಆದರೆ, ಬೇರೆ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಖಲಿಸ್ತಾನೀ ಗ್ಯಾಂಗ್​ಗಳಿಗೆ ಪಾಕಿಸ್ತಾನದ ಐಎಸ್​ಐ ನೀರೆರೆದು ಪೋಷಿಸುತ್ತಿದೆ. ಆದರೆ, ತನಗೇ ಹಣವಿಲ್ಲದೆ ಹತಾಶೆಯಲ್ಲಿರುವ ಪಾಕಿಸ್ತಾನ ಇಂಥ ವಿಛಿದ್ರಕಾರಕ ಶಕ್ತಿಗಳಿಗೆ ಫಂಡಿಂಗ್ ಹೇಗೆ ಮಾಡುತ್ತೆ ಎಂದು ಅಚ್ಚರಿ ಆಗಬಹುದು. ಇಲ್ಲೇ ಇರುವುದು ಚೀನಾದ ಪಾತ್ರ.ಪಾಕಿಸ್ತಾನ ಇತ್ತೀಚಿನ ವರ್ಷಗಳಿಂದ ಚೀನಾ ಮೇಲೆ ಎಲ್ಲದಕ್ಕೂ ಅವಲಂಬಿತವಾಗಿದೆ. ಪಾಕಿಸ್ತಾನದ ಪಾಲಿಗೆ ಸರ್ವಋತು ಸ್ನೇಹಿ ಎನಿಸಿರುವ ಚೀನಾ ತನ್ನ ಸಾಲದ ಹಣದ ಮೂಲಕ ಪಾಕಿಸ್ತಾನವನ್ನು ಕಟ್ಟಿಹಾಕಿ ಕೈಗೊಂಬೆ ಮಾಡಿಕೊಳ್ಳುತ್ತಿದೆ. ಈಗ ರೈತರ ಪ್ರತಿಭಟನೆಗಳ ಮೂಲಕ ತನ್ನ 5ಜಿ ಹುನ್ನಾರವನ್ನು ಸಾಕಾರಗೊಳಿಸಲು ಚೀನಾಗೆ ಪಾಕಿಸ್ತಾನದ ಐಎಸ್​ಐ ಪ್ರಮುಖ ದಾಳವಾಗಿದೆ. ಐಎಸ್​ಐ ಮೂಲಕ ಖಲಿಸ್ತಾನೀ ಶಕ್ತಿಗಳಿಂದ ರೈತರಿಗೆ ಕುಮ್ಮಕ್ಕು ಕೊಟ್ಟು ರಿಲಾಯನ್ಸ್ ಜಿಯೋ ಸಂಸ್ಥೆಯ ಆಸ್ತಿಪಾಸ್ತಿಯನ್ನು ಗುರಿಯಾಗಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಪಾಕಿಸ್ತಾನಕ್ಕೆ ಫಂಡಿಂಗ್ ಮಾಡುತ್ತಿರುವ ಸಾಧ್ಯತೆ ಕಾಣುತ್ತಿದೆ.

ಮಾಹಿತಿ ಕೃಪೆ: ಕುಲಬೀರ್ ಕೃಷ್ಣನ್, ಸಶಸ್ತ್ರ್ ಸೀಮಾ ಬಲ್​ನ ಮಾಜಿ ಡಿಜಿ-ಐಜಿಪಿ

(ಈ ಲೇಖನದಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
Published by: Vijayasarthy SN
First published: December 31, 2020, 10:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories