ಚೀನಾ ಬೀಜಿಂಗ್ (ಮೇ 20); ಚೀನಾ ದೇಶದಿಂದ ತೈವಾನ್ ಭೂ ಭಾಗವನ್ನು ಬೇರ್ಪಡಿಸುವ ಯಾವುದೇ ಕೆಲಸವನ್ನು ಬೀಜಿಂಗ್ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ತೈವಾನ್ ಸಂಸ್ಥೆಯ ಉನ್ನತ ವಕ್ತಾರ ತ್ಸೈ ಇಂಗ್-ವೆನ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಹೇಳಿಕೆ ಬಿಡುಗಡೆ ಮಾಡಿರುವ ತ್ಸೈ ಇಂಗ್-ವೆನ್, “ತೈವಾನ್ ದ್ವೀಪದಲ್ಲಿ ಸ್ವ ಆಡಳಿತ ಇದೆ. ಆದರೂ, ಈ ಭೂ ಭಾಗ ಚೀನಾ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಯಾವುದೇ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಅಥವಾ ಚೀನಾದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವ ಬಾಹ್ಯ ಶಕ್ತಿಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಅಗತ್ಯ ಇದ್ದರೆ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಲೂ ಸಹ ಚೀನಾ ಸಿದ್ದವಾಗಿದೆ” ಎಂದು ಗುಡುಗಿದ್ದಾರೆ.
“ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಚೀನಾಗೆ ಸಾಕಷ್ಟು ಸಾಮರ್ಥ್ಯವಿದೆ. ಹೀಗಾಗಿ ತೈವಾನೀಸ್ ಸ್ವಾತಂತ್ರ್ಯ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ದೇಶದಲ್ಲಿ ಸ್ಥಾನವಿಲ್ಲ. ಚೀನಾ ಎಂದಿಗೂ ಸಹ ಶಾಂತಿಯುತ ಪುನರ್ ಏಕೀಕರಣಕ್ಕಾಗಿ ಒಂದು ದೇಶ ಎರಡು ವ್ಯವಸ್ಥೆ ಎಂಬ ತತ್ವಕ್ಕೆ ಬದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.
ತೈವಾನ್ ಚೀನಾದಿಂದ ಕೂಗಳತೆಯ ದೂರದಲ್ಲಿರುವ ದ್ವೀಪ ರಾಷ್ಟ್ರ. ತೈವಾನ್ ಸ್ವಯಂ ಆಡಳಿತ ಹೊಂದಿದ್ದಾಗ್ಯೂ ಸಹ ಈ ದೇಶವನ್ನೂ ಸಹ ಚೀನಾದ ಭೂ ಭಾಗ ಎಂದೇ ಗುರುತಿಸಲಾಗುತ್ತದೆ. ಹೀಗಾಗಿ ಹಾಂಕಾಂಗ್ನಂತೆ ತೈವಾನ್ನಲ್ಲೂ ಸಹ ಸ್ವತಂತ್ಯ್ರ ಹೋರಾಟಕ್ಕೆ ದಶಕದ ಇತಿಹಾಸ ಇದೆ.
ಈ ನಡುವೆ ಇತ್ತೀಚಿನ ಕೆಲಸ ದಿನಗಳಿಂದ ಕೆಲವು ರಾಜತಾಂತ್ರಿಕ ಮಿತ್ರ ರಾಷ್ಟ್ರಗಳು ತೈವಾನ್ ಅನ್ನು ಪ್ರತ್ಯೇಕಿಸಿ ಚೀನಾ-ತೈವಾನ್ ಜಲಸಂಧಿಯಲ್ಲಿ ತನ್ನ ಮಿಲಿಟರ್ ಪ್ರಾಬಲ್ಯವನ್ನು ಹೆಚ್ಚಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಚೀನಾ ತನ್ನ ಜಲಸಂಧಿಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿರುವ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಇದನ್ನೂ ಓದಿ; ವಿಶ್ವದಲ್ಲಿ 50 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ; 11ನೇ ಸ್ಥಾನದಲ್ಲಿ ಭಾರತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ