China: ಚೀನಾದಲ್ಲಿ ಫುಲ್ ಹೀಟ್! ತಲೆಬಿಸಿ ಮಾಡಿಕೊಂಡ ಕಮ್ಯುನಿಸ್ಟ್ ಸರ್ಕಾರ

ಚೀನಾದಲ್ಲಿ ಜನಸಂಖ್ಯೆ ಏರುಗತಿಯಲ್ಲಿ ಏರುವುದರೊಂದಿಗೆ ಈಗ ಜಾಗತಿಕ ತಾಪಮಾನವು ಮತ್ತಷ್ಟು ಹೆಚ್ಚಳಗೊಳ್ಳುತ್ತಿದೆ. ಕಳೆದ 70 ವರ್ಷಗಳಲ್ಲಿ ಚೀನಾದ ಭೂ ತಾಪಮಾನವು ಜಾಗತಿಕ ತಾಪಮಾನದ ಸರಾಸರಿಗಿಂತ ಹೆಚ್ಚು ವೇಗವಾಗಿ ಏರುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಚೀನಾದಲ್ಲಿ ಜನಸಂಖ್ಯೆ (China Population) ಏರುಗತಿಯಲ್ಲಿ ಏರುವುದರೊಂದಿಗೆ ಈಗ ಜಾಗತಿಕ ತಾಪಮಾನವು ಮತ್ತಷ್ಟು ಹೆಚ್ಚಳಗೊಳ್ಳುತ್ತಿದೆ. ಕಳೆದ 70 ವರ್ಷಗಳಲ್ಲಿ ಚೀನಾದ ಭೂ ತಾಪಮಾನವು ಜಾಗತಿಕ ತಾಪಮಾನದ ಸರಾಸರಿಗಿಂತ ಹೆಚ್ಚು ವೇಗವಾಗಿ ಏರುತ್ತಿದೆ. ಇದರಿಂದ ಹವಾಮಾನ ಬದಲಾವಣೆಯ (Weather Changes) ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭವಿಷ್ಯದಲ್ಲಿ ಮತ್ತಷ್ಟು ಭೂ ತಾಪಮಾನ (Earth Temperature) ಹೆಚ್ಚಾಗುತ್ತದೆ ಎಂಬ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಇದರ ಕುರಿತು ಈ ವಾರ ಪ್ರಕಟವಾದ ಚೀನಾದ ಹವಾಮಾನ ಇಲಾಖೆಯ ವಾರ್ಷಿಕ ಹವಾಮಾನ ಮೌಲ್ಯಮಾಪನದಲ್ಲಿ, "ಜಾಗತಿಕ ಹವಾಮಾನ ಬದಲಾವಣೆಯಲ್ಲಿ (Global Climate Change) ಚೀನಾವು ಒಂದು ಸೂಕ್ಷ್ಮ ಪ್ರದೇಶ" ಎಂದು ವಿವರಿಸಿದೆ.

ಜಾಗತಿಕ ತಾಪಮಾನ ಸರಾಸರಿ 0.15 ಡಿಗ್ರಿಗಳಿಗೆ ಹೋಲಿಸಿದರೆ ಚೀನಾ ದೇಶದ ತಾಪಮಾನವು 1951 ರಿಂದ ಒಂದು ದಶಕದಿಂದ 0.26 ಡಿಗ್ರಿ ಸೆಲ್ಸಿಯಸ್ (0.47 ಡಿಗ್ರಿ ಫ್ಯಾರನ್‌ಹೀಟ್)  ಏರಿಕೆಯಾಗಿದೆ” ಎಂದು ಚೀನಾ ಸರ್ಕಾರವು ಹೇಳಿಕೆ ನೀಡಿದೆ.

ಚೀನಾದಲ್ಲಿ ಹೆಚ್ಚಿದ ತಾಪಮಾನ
"ಮುಂದೆ ಭವಿಷ್ಯದಲ್ಲಿ, ಚೀನಾದಲ್ಲಿ ಪ್ರಾದೇಶಿಕ ಭೂ ತಾಪಮಾನವು ಸರಾಸರಿ ತಾಪಮಾನದಲ್ಲಿ ಹೆಚ್ಚಳ ಕಾಣುತ್ತದೆ. ಇದು ಪ್ರಪಂಚದಲ್ಲಿ ಅತಿ ಹೆಚ್ಚು ತಾಪಮಾನ ಹೊಂದುವ ದೇಶವಾಗಬಹುದು” ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರದ (ಎನ್‌ಸಿಸಿ) ಉಪಾಧ್ಯಕ್ಷ ಯುವಾನ್ ಜಿಯಾಶುಂಗ್ ಬುಧವಾರ ಬ್ರೀಫಿಂಗ್‌ನಲ್ಲಿ ಹೇಳಿದರು.

ತಾಪಮಾನ ಏರಿಕೆಯಿಂದ ಆಗುತ್ತಿರುವ ಪರಿಣಾಮಗಳು
“ಚೀನಾದಲ್ಲಿ ಹವಾಮಾನ ಮಾದರಿಗಳನ್ನು ಬದಲಾಯಿಸುವುದರಿಂದ ನೀರಿನ ಸಂಪನ್ಮೂಲಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದು ಪರಿಸರ ವ್ಯವಸ್ಥೆಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ ಮತ್ತು ಬೆಳೆ ಇಳುವರಿಯನ್ನು ಕಡಿಮೆ ಮಾಡುತ್ತದೆ” ಎಂದು ಅವರು ದೇಶದ ಜನತೆಯನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Pakistan: ಹಿಂದೂ ದೇವಾಲಯ ಪುನರ್​ ಸ್ಥಾಪಿಸಲು ಮುಂದಾದ ನೆರೆಯ ಪಾಕಿಸ್ತಾನ!

 ಚೀನಾದಲ್ಲಿ ಇತ್ತೀಚಿನ ವಾರಗಳಲ್ಲಿ ವಿಪರೀತ ಭೂ ತಾಪಮಾನವು ಸಂಭವಿಸಿರುವುದರಿಂದ, ಅನೇಕ ಜೀವಗಳು ಹಾನಿಗೊಳಾಗಿವೆ. ಸುದೀರ್ಘ ಸೂರ್ಯನ ತಾಪಮಾನದಿಂದ ದೇಶದ ಎಲ್ಲ ಕಡೆ ಬರ ಮತ್ತು ಕಾಡುಗಳಿಗೆ ಕಾಡ್ಗಿಚ್ಚು ಸಂಭವಿಸುತ್ತಿದೆ. ಚೀನಾ ದೇಶದ ಕೆಲವು ಪ್ರದೇಶಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮಳೆ ಬಂದು ಪ್ರವಾಹಕ್ಕೆ ಕಾರಣವಾಗಿದೆ.

ಹಾಗಿದ್ರೆ ಈಗ ಚೀನಾದಲ್ಲಿ ತಾಪಮಾನ ಎಷ್ಟಿದೆ
ಚೀನಾದ ನೈಋತ್ಯ ಯುನ್ನಾನ್ ಮತ್ತು ಚೀನಾ ದೇಶದ ಉತ್ತರದ ಭಾಗವಾದ ಹೆಬೈನಲ್ಲಿ ತಾಪಮಾನವು 44 ಸೆಂಟಿಗ್ರೇಡ್ (111F) ಗಿಂತ ಹೆಚ್ಚಿನ ತಾಪಮಾನವನ್ನು ತಲುಪುವುದರೊಂದಿಗೆ ಚೀನಾ ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನವು ಹೆಚ್ಚಾಗುತ್ತಲೆ ಇದೆ. ಎನ್‌ಸಿಸಿ ದತ್ತಾಂಶದ ಪ್ರಕಾರ, 131 ಚೀನೀ ಹವಾಮಾನ ಕೇಂದ್ರಗಳು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಸಮನಾದ ಅಥವಾ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ. ಕಳೆದ ವರ್ಷ 62 ಕೇಂದ್ರಗಳಿಂದ ಈ ವರ್ಷ 131 ಕೇಂದ್ರಗಳಲ್ಲಿ ಹವಾಮಾನ ತಾಪಮಾನ ಹೆಚ್ಚಳ ಕಂಡಿದೆ.

ಚೀನಾದ 2021 ರ ಹವಾಮಾನ ಮೌಲ್ಯಮಾಪನವು 1980 ರಿಂದ ಕಳೆದ ವರ್ಷ ಕರಾವಳಿಯ ನೀರಿನ ಮಟ್ಟವು ಅತ್ಯಧಿಕವಾಗಿದೆ ಎಂದು ಹೇಳಿದೆ. ಕ್ವಿಂಗ್ಹೈ-ಟಿಬೆಟ್ ಹೆದ್ದಾರಿಯ ಉದ್ದಕ್ಕೂ ಸಕ್ರಿಯ ಪರ್ಮಾಫ್ರಾಸ್ಟ್ ತಾಪಮಾನದ ದಾಖಲೆಯ ಎತ್ತರವನ್ನು ತಲುಪಿತು ಮತ್ತು ಅಂತರ್ಜಲದ ಮಟ್ಟವು ಕುಸಿಯುತ್ತಲೇ ಇದೆ. 2001 ರಿಂದ 2020ರ ಸರಾಸರಿಗೆ ಹೋಲಿಸಿದರೆ 2021 ರಲ್ಲಿ ಚೀನಾವು ಸಸ್ಯವರ್ಗದ ಬೆಳವಣಿಗೆಯಲ್ಲಿ 7.9% ಹೆಚ್ಚಳವನ್ನು ದಾಖಲಿಸಿದೆ ಮತ್ತು ಈ ಮೌಲ್ಯಮಾಪನವು ಆರಂಭವಾಗುವ ಮುಂಚೆಯೇ ಅನೇಕ ಸಸ್ಯಗಳ ಬೆಳವಣಿಗೆಯ ಅವಧಿಗಳು ಪ್ರತಿ ವರ್ಷಕ್ಕಿಂತ ಮುಂಚಿತವಾಗಿ ಪ್ರಾರಂಭವಾಗಿವೆ.

ಇದನ್ನೂ ಓದಿ: Tamil Nadu: 50 ವರ್ಷದ ನಂತ್ರ ಅಮೆರಿಕದಲ್ಲಿ ಸಿಕ್ತು ತಮಿಳುನಾಡಿನಿಂದ ಕಳುವಾಗಿದ್ದ ಪಾರ್ವತಿ ಮೂರ್ತಿ!

ಜಾಗತಿಕ ತಾಪಮಾನ ಏರಿಕೆಯೆಂದರೆ 20 ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ ಎಂದು ಹೇಳಬಹುದು. ಜಾಗತಿಕ ತಾಪಮಾನದಲ್ಲಿನ ಏರಿಕೆಯು ಸಮುದ್ರ ಮಟ್ಟದ ಏರಿಕೆಗೆ ಕಾರಣವಾಗಲಿದ್ದು, ಅವಕ್ಷೇಪನದ ಪ್ರಮಾಣ ಮತ್ತು ಮಾದರಿಗಳಲ್ಲಿ ವ್ಯತ್ಯಾಸವನ್ನುಂಟು ಮಾಡಲಿದ್ದು, ಉಷ್ಣವಲಯದ ಮರಳುಗಾಡುಗಳ ಸಂಭಾವ್ಯ ವಿಸ್ತರಣೆಗೆ ಕಾರಣವಾಗಲಿದೆ.
Published by:Ashwini Prabhu
First published: