HOME » NEWS » National-international » CHINA VIRUS DEATHS RISE TO 25 NEARLY 20 MILLION PEOPLE QUARANTINED MAK

ಮಾರಣಾಂತಿಕ ಕೊರೊನಾ ವೈರಸ್​; ಚೀನಾದಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದರಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಕರೊನಾ ವೈರಸ್​ಗೆ ಮೃತಪಟ್ಟರ ಸಂಖ್ಯೆ ಚೀನಾದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

MAshok Kumar | news18-kannada
Updated:January 24, 2020, 10:03 PM IST
ಮಾರಣಾಂತಿಕ ಕೊರೊನಾ ವೈರಸ್​; ಚೀನಾದಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ
ವೈರಸ್​ ಸೋಂಕಿನ ಭೀತಿಯಲ್ಲಿ ಚೀನಾದ ಜನ.
  • Share this:
ಬೀಜಿಂಗ್ (ಜನವರಿ 24); ಚೀನಾದ ಮಾರಣಾಂತಿಕ ಕೊರೊನಾ ವೈರಸ್​ಗೆ ಸಾವನ್ನಪ್ಪಿದವರ ಸಂಖ್ಯೆ ಏಕಾಏಕಿ 25ಕ್ಕೆ ಏರಿದೆ. ಅಲ್ಲದೆ, ಈ ಸೋಂಕಿಗೆ ಒಳಗಾದವರ ಸಂಖ್ಯೆಯೂ 830 ರ ಗಡಿದಾಟಿದೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ಇಂದು ದೃಢಪಡಿಸಿದೆ.

ಚೀನಾದ ವುಹಾನ್ ನಗರದಲ್ಲಿ ಅಧಿಕ ಸಂಖ್ಯೆಯ ಜನ ಈ ಸೋಂಕಿಗೆ ಒಳಗಾಗಿದ್ದು, ಈವರೆಗೆ ಶಂಕಿತ 1,072 ಪ್ರಕರಣಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದರಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಕರೊನಾ ವೈರಸ್​ಗೆ ಮೃತಪಟ್ಟರ ಸಂಖ್ಯೆ ಚೀನಾದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ದಿನೇ ದಿನೇ ವೈರಸ್ ಸೋಂಕು ಹೆಚ್ಚುತ್ತಿರುವ ಕಾರಣ ವುಹಾನ್ ಮತ್ತು ಅದರ ಹತ್ತಿರದ ನಗರದ ಸುಮಾರು 20 ಮಿಲಿಯನ್ ಜನ ಮನೆಯಿಂದ ಹೊರಗೆ ಬರದಂತೆ ಸ್ಥಳೀಯ ಆಡಳಿತ ನಿರ್ಬಂಧ ವಿಧಿಸಿದೆ. ಹೊಸ ವರ್ಷದ ರಜಾ ದಿನಗಳ ಪ್ರಯುಕ್ತ ಲಕ್ಷಾಂತರ ಜನ ಪ್ರಯಾಣ ಆರಂಭಿಸಿರುವುದರಿಂದ ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಚೀನಾ ಸರ್ಕಾರ ಈ ನಿರ್ಬಂಧವನ್ನು ವಿಧಿಸಿದೆ. ಅಲ್ಲದೆ, ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಾದ ಎಲ್ಲಾ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ನಿರ್ಬಂಧದಿಂದಾಗಿ ನಗರ ಪ್ರದೇಶದ ಜನ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ 11 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ವುಹಾನ್ ನಗರದ ರಸ್ತೆ, ಕೈಗಾರಿಕೆ ಮತ್ತು ವ್ಯಾಪಾರ ವಹಿವಾಟು ಸ್ಥಳಗಳು ಖಾಲಿಖಾಲಿಯಾಗಿ ಕಾಣಿಸುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಪತ್ಥಲ್​ಗಡ್ ಹೋರಾಟದ ಉಗ್ರಾವತಾರ: ಆದೇಶ ಮೀರಿದವರ ದಮನ; ಹತ್ಯೆಯಾದವರ ಸಂಖ್ಯೆ ಏಳಕ್ಕಿಂತಲೂ ಹೆಚ್ಚು
First published: January 24, 2020, 10:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories