• Home
  • »
  • News
  • »
  • national-international
  • »
  • Maglev Train: ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧಗಂಟೆ ಪ್ರಯಾಣ! ಚೀನಾದಲ್ಲಿ ಇಷ್ಟು ಫಾಸ್ಟ್ ರೈಲು ಶುರು!

Maglev Train: ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧಗಂಟೆ ಪ್ರಯಾಣ! ಚೀನಾದಲ್ಲಿ ಇಷ್ಟು ಫಾಸ್ಟ್ ರೈಲು ಶುರು!

ಮಾಗ್ಲೇವ್ ರೈಲು

ಮಾಗ್ಲೇವ್ ರೈಲು

ಈ ರೈಲು ಪ್ರತಿ ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಅಂದರೆ ಈ ವೇಗದಲ್ಲಿ ಸಾಗುವ ರೈಲಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸಬಹುದು.

  • Share this:

ರೈಲು ನಿರ್ಮಾಣ, ರೈಲು ಅವಿಷ್ಕಾರ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಚೀನಾ ಇತರ ದೇಶಗಳಿಗಿಂತ ಮಂಚೂಣಿಯಲ್ಲಿದೆ. ಇದೀಗ ವಿಶ್ವದ ಅತೀ ವೇಗದ ರೈಲನ್ನು ಚೀನಾ (China) ಅನಾವರಣ ಮಾಡಿದೆ. ಇದು ಗಂಚೆಗೆ 600 ಕಿ.ಮೀ ವೇಗದಲ್ಲಿ ಚಲಿಸಲಿದೆ. ಈ ಹಿಂದೆ ವೇಗದ ತಂತ್ರಜ್ಞಾನದ ಹಲವು ಪ್ರಯೋಗಗಳಿಗೆ ಬೇಕಾದ ವಸ್ತುಗಳಿಗಾಗಿ ಆಮದುಗಳ ಮೇಲೆ ಅವಲಂಬಿತರಾಗಿದ್ದ ಚೀನಿಯರು ಈಗ ವೇಗದ ರೈಲು ಮ್ಯಾಗ್ಲೆವ್‌ ಅನ್ನು (Maglev Train In China) ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೈಸ್ಪೀಡ್ ರೈಲು ಸೇವೆಯಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸುವ ಮೂಲಕ ಚೀನಾ ದೇಶವು ಹೊಸ ಮೈಲಿಗಲ್ಲು ಸಾಧಿಸಿದೆ. ಚೀನಾದಲ್ಲಿ ಮ್ಯಾಗ್ಲೆವ್ ಎಂಬ ಹೊಸ ಹೈಸ್ಪೀಡ್ ರೈಲು (Maglev Train) ಆರಂಭವಾಗಲಿದೆ.


ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧ ಗಂಟೆ
ಈ ರೈಲು ಪ್ರತಿ ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಅಂದರೆ ಈ ವೇಗದಲ್ಲಿ ಸಾಗುವ ರೈಲಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸಬಹುದು. ಈ ಹೈಸ್ಪೀಡ್ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲನ್ನು ಚೀನಾ ಅನಾವರಣಗೊಳಿಸಿದೆ.


ಮ್ಯಾಗ್ನೆಟಿಕ್ ಫೀಲ್ಡ್​ನಿಂದ ಚಲನೆ!
ಈ ರೈಲು ಭೂಮಿಯ ಮೇಲೆ ಚಲಿಸುವ ವಿಶ್ವದ ಅತಿ ವೇಗದ ವಾಹನವಾಗಿದೆ. ಸಾಂಪ್ರದಾಯಿಕ ರೈಲುಗಳಿಗಿಂತ ಭಿನ್ನವಾಗಿ ಈ ರೈಲು ಮ್ಯಾಗ್ನೆಟಿಕ್ ಫೀಲ್ಡ್'ನಿಂದ ಚಲಿಸುತ್ತದೆ. ಈ ಕಾರಣದಿಂದಾಗಿ ಮ್ಯಾಗ್ಲೆವ್ ರೈಲು ಇತರ ರೈಲುಗಳಿಗಿಂತ ವೇಗವಾಗಿ ಚಲಿಸುತ್ತದೆ.


ಮ್ಯಾಗ್ಲೆವ್‌ ರೈಲಿನಲ್ಲಿ ಬಳಸಲಾಗುವ ತಂತ್ರಜ್ಞಾನ
ಮ್ಯಾಗ್ನೆಟಿಕ್ ಲೆವಿಟೇಶನ್ ಎಂಬ ನೂತನ ತಂತ್ರಜ್ಞಾನವು ಅಲ್ಟ್ರಾ-ಹೈ-ಸ್ಪೀಡ್ ಚೈನೀಸ್ ರೈಲು ವ್ಯವಸ್ಥೆಯಲ್ಲಿ ಪೋರ್ಟ್‌ಮ್ಯಾನ್ಟೋವನ್ನು ಒದಗಿಸುತ್ತದೆ. ಅಂದರೆ ರೈಲು ಮತ್ತು ಬೋಗಿಯ ನಡುವೆ ಯಾವುದೇ ಭೌತಿಕ ಸಂಪರ್ಕವಿಲ್ಲದೆ ಟ್ರ್ಯಾಕ್‌ನ ಮೇಲೆ ಅಕ್ಷರಶಃ ಚಲಿಸುತ್ತದೆ.


ಇದನ್ನೂ ಓದಿ: Gujarat: 150 ಕೋಟಿ ರೂಪಾಯಿ ಜಿಲೇಬಿ ಮಾರಾಟ! ಇದು ನವರಾತ್ರಿ ವಿಶೇಷ


ಇದು "ಲೆವಿಟೇಟ್" ಮಾಡಲು ವಿದ್ಯುತ್ಕಾಂತೀಯ ಬಲವನ್ನು ಬಳಸುವ ಸಾರಿಗೆ ವ್ಯವಸ್ಥೆಯನ್ನು ಸೂಚಿಸುತ್ತದೆ. ರೈಲಿನಲ್ಲಿರುವ ಆಯಸ್ಕಾಂತಗಳ ಧ್ರುವಗಳು ಮತ್ತು ರೈಲಿನ ಬೋಗಿಯಲ್ಲಿರುವ ನಡುವಿನ ವಿಕರ್ಷಣೆಯ ಬಲದಿಂದಾಗಿ ರೈಲು ಲೆವಿಟೇಟ್ ಆಗಿ ವೇಗವಾಗಿ ಚಲಿಸುತ್ತದೆ.


ಎಲ್ಲಿ ಬಳಕೆ ಮಾಡಲಾಗುತ್ತಿದೆ?
ಹೈಸ್ಪೀಡ್‌ ಮ್ಯಾಗ್ಲೆವ್ ರೈಲನ್ನು ಈಗಾಗಲೇ ಚೀನಾದ ಶಾಂಘೈ ಪ್ರದೇಶದಲ್ಲಿ ಬಳಕೆ ಮಾಡಲಾಗುತ್ತಿದೆ. ಶಾಂಘೈ ವಿಮಾನ ನಿಲ್ದಾಣದಿಂದ ನಗರಕ್ಕೆ ಮತ್ತು ನಗರದಿಂದ ವಿಮಾನ ನಿಲ್ದಾಣಕ್ಕೆ ಜನರನ್ನು ತಲುಪಿಸುವ ಕೆಲಸವನ್ನು ಈ ರೈಲು ಅತ್ಯಂತ ವೇಗವಾಗಿ ಮಾಡುತ್ತಿದೆ. ಈ ರೈಲಿನಲ್ಲಿ ಬೀಜಿಂಗ್‌ನಿಂದ ಶಾಂಘೈ ತಲುಪಲು ಕೇವಲ 2.5 ಗಂಟೆ ಸಾಕು. ಇನ್ನು ಬೀಜಿಂಗ್‌ನಿಂದ ಶಾಂಘೈಗೆ ವಿಮಾನದ ಮೂಲಕ ಪ್ರಯಾಣಿಸಲು 3 ಗಂಟೆ ತೆಗೆದುಕೊಳ್ಳಲಿದೆ.


ಸಂಶೋಧನೆಗಳು ಏನ್‌ ಹೇಳ್ತಿವೆ?
ಚೀನಾದ ಶಾಂಘೈ ಮತ್ತು ಚೆಂಗ್ಡುವಿನಂತಹ ನಗರಗಳಲ್ಲಿ ಈ ಹೈಸ್ಪೀಡ್‌ ರೈಲಿನ ಬಳಕೆ ಹೆಚ್ಚಿದೆ. ಈ ರೈಲಿನ ವೇಗವು ಅಂತರ್‌ ನಗರ ಮತ್ತು ಅಂತರ್‌ ಪ್ರ್ಯಾಂತೀಯ ಪ್ರಯಾಣವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ.


ಚೀನಾದ ಈ ನಗರಗಳು ಅಲ್ಟ್ರಾ-ಫಾಸ್ಟ್ ಮತ್ತು ದೀರ್ಘವಾದ ದೂರ ಸಾರಿಗೆಯ ಕಾರ್ಯಸಾಧ್ಯತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ. ಇತರ ದೇಶಗಳಾದ ಜಪಾನ್ ಮತ್ತು ಜರ್ಮನಿ ದೇಶಗಳು ಚೀನಾ ಸಾಧಿಸಿದ ವೇಗದ ರೈಲನ್ನು ತರಲು ಪ್ರಯತ್ನಿಸುತ್ತಿರುವಾಗ, ಚೀನಾ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಮ್ಯಾಗ್ಲೆವ್ ಕಾರುಗಳ ಪ್ರಯೋಗವನ್ನು ಪ್ರಾರಂಭಿಸಿದೆ.


ಇದನ್ನೂ ಓದಿ: Smart Watch Blast: ಸ್ಮಾರ್ಟ್​ಫೋನ್ ಆಯ್ತು, ಈಗ ಕೈಗೆ ಕಟ್ಟಿದ ವಾಚ್ ಸಹ ಬ್ಲಾಸ್ಟ್ ಆಯ್ತು!


ಚೀನಾದ 37,900 ಕಿಮೀ ಉದ್ದದ ಹೈಸ್ಪೀಡ್ ರೈಲು (HSR ಅಥವಾ ಬುಲೆಟ್ ರೈಲುಗಳು) 2035 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಚೀನಾವು ತನ್ನ ದೇಶದ ನಾಗರಿಕರಿಗೆ ಉತ್ತಮವಾಗಿ ಸೇವೆ ಸಲ್ಲಿಸುವ ಭರವಸೆಯನ್ನು ನೀಡಿದೆ.


ಅತ್ಯಂತ ವೇಗದ ಈ ರೈಲಿನಲ್ಲಿರುವ ಸೌಲಭ್ಯಗಳೇನು?
ಇನ್ನು ರೈಲಿನಲ್ಲಿ ಪ್ರತಿ ಸೀಟಿಗೂ ಬೆಲ್ಟ್ ನೀಡಲಾಗಿದೆ. ವಿಮಾನ ಪ್ರಯಾಣದಲ್ಲಿರುವಂತೆ ಹೈಸ್ಪೀಡ್ ರೈಲಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕ ಸೀಟ್ ಬೆಲ್ಟ್ ಧರಿಸಬೇಕು. ಈ ಮೂಲಕ ಅತೀವೇಗದಿಂದ ಸೃಷ್ಟಿಯಾಗುವ ಅಪಾಯ ತಪ್ಪಲಿದೆ.ರೈಲಿನಲ್ಲಿ ವೈಫ್, ವೈಯರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: