ವಿಶ್ವದ ಯಾವುದೇ ಭಾಗವನ್ನಾದರೂ ದಾಳಿ ಮಾಡಬಲ್ಲ ಚೀನಾದ ಡೋಂಗ್​ಫೆಂಗ್ ಮಿಸೈಲ್; ನ್ಯಾಷನಲ್ ಪೆರೇಡ್​ನಲ್ಲಿ ಚೀನೀ ಮಿಲಿಟರಿ ಸಾಮರ್ಥ್ಯ ಅನಾವರಣ

ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷ 70 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಈ ವರ್ಷದ ನ್ಯಾಷನಲ್ ಡೇ ಪೆರೇಡ್ ವಿಶೇಷವಾಗಿದೆ. ಈವರೆಗೂ ರಹಸ್ಯವಾಗಿದ್ದ ಕೆಲ ಚೀನೀ ಶಸ್ತ್ರಾಸ್ತ್ರ ಹಾಗೂ ಯುದ್ದೋಪಕರಣಗಳು ಈ ಸಂದರ್ಭದಲ್ಲಿ ಅನಾವರಗೊಂಡಿವೆ.

Vijayasarthy SN | news18
Updated:October 1, 2019, 4:17 PM IST
ವಿಶ್ವದ ಯಾವುದೇ ಭಾಗವನ್ನಾದರೂ ದಾಳಿ ಮಾಡಬಲ್ಲ ಚೀನಾದ ಡೋಂಗ್​ಫೆಂಗ್ ಮಿಸೈಲ್; ನ್ಯಾಷನಲ್ ಪೆರೇಡ್​ನಲ್ಲಿ ಚೀನೀ ಮಿಲಿಟರಿ ಸಾಮರ್ಥ್ಯ ಅನಾವರಣ
ಚೀನಾದ ಕ್ಷಿಪಣಿ
  • News18
  • Last Updated: October 1, 2019, 4:17 PM IST
  • Share this:
ಬೀಜಿಂಗ್(ಅ. 01): ಒಂದೆರಡು ದಶಕದಿಂದೀಚೆ ಪ್ರಪಂಚದ ಅತ್ಯಂತ ಬಲಾಢ್ಯ ದೇಶಗಳಲ್ಲೊಂದಾಗಿ ಬೆಳೆದಿರುವ ಚೀನಾ ಈಗ ಎಲ್ಲಾ ರಂಗದಲ್ಲೂ ಪಾರುಪತ್ಯ ಮೆರೆಯುತ್ತಿದೆ. 70 ವರ್ಷಗಳ ಕಮ್ಯೂನಿಸ್ಟ್ ಆಡಳಿತ ಪೂರೈಸಿದ ಖುಷಿಯಲ್ಲಿರುವ ಚೀನಾ ಇದೇ ಹಿನ್ನೆಲೆಯಲ್ಲಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಟಿಯೆನ್ಮೆನ್ ಸ್ಕ್ವಯರ್​ನಲ್ಲಿ ನಡೆದ ನ್ಯಾಷನಲ್ ಡೇ ಪೆರೇಡ್​ನಲ್ಲಿ ಚೀನಾ ಸೇನಾಪಡೆಯ 15 ಸಾವಿರ ಸೈನಿಕರು ಪಾಲ್ಗೊಂಡಿದ್ದರು. ಇದರಲ್ಲಿ 160ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಇಲ್ಲಿ ಸಾಗಿಸಿ ತರಲಾಗಿತ್ತು.

ಚೀನಾದ ಬತ್ತಳಿಕೆಯಲ್ಲಿರುವ ಪ್ರಬಲ ಶಸ್ತ್ರಾಸ್ತ್ರಗಳನ್ನು ಈ ನ್ಯಾಷನಲ್ ಡೇ ಪೆರೇಡ್​ನಲ್ಲಿ ಕಾಣಬಹುದಾಗಿತ್ತು. ಈವರೆಗೂ ರಹಸ್ಯವಾಗಿಟ್ಟಿದ್ದ ಚೀನಾದ ಶೇ. 40ರಷ್ಟು ಶಸ್ತ್ರಾಸ್ತ್ರಗಳು ಪೆರೇಡ್​ನಲ್ಲಿ ಅನಾವರಣಗೊಂಡಿದ್ದವು. ಶತ್ರುಗಳಿಗೆ ತನ್ನ ಮಿಲಿಟರಿ ಸಾಮರ್ಥ್ಯವನ್ನು ತೋರಿಸುವುದು ಚೀನಾ ಉದ್ದೇಶವಿತ್ತೆಂಬುದು ಸ್ಪಷ್ಟ.

ಇದನ್ನೂ ಓದಿ: ರಷ್ಯಾದಿಂದ ನಾವು ಏನನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅಮೆರಿಕಕ್ಕೆ ಇಲ್ಲ ; ಸಚಿವ ಜೈಶಂಕರ್​ ಖಡಕ್ ಹೇಳಿಕೆ

ಚೀನಾದ ಅತ್ಯಂತ ಹೆಮ್ಮೆಯ ಯುದ್ಧಾಸ್ತ್ರವೆಂದರೆ ಡೋಂಗ್​ಫೆಂಗ್-41 ಕ್ಷಿಪಣಿ. ಖಂಡಾಂತರ ಬ್ಯಾಲಿಸ್ಟಿಕ್ ಮಿಸೈಲ್ ಡಿಎಫ್-41 ಭೂಮಿಯ ಯಾವುದೇ ಭಾಗವನ್ನಾದರೂ ದಾಳಿ ಮಾಡಬಲ್ಲುದಾಗಿದೆ. 14 ಸಾವಿರ ಕಿಲೋಮೀಟರ್​ಗೂ ಹೆಚ್ಚು ದಊರ ಕ್ರಮಿಸಬಲ್ಲ ಈ ಖಂಡಾಂತರ ಕ್ಷಿಪಣಿಯು ವಿಶ್ವದ ಅತೀ ಹೆಚ್ಚು ದೂರ ಕ್ರಮಿಸಬಲ್ಲ ಕ್ಷಿಪಣಿ ಎನಿಸಿದೆ. ಅಮೆರಿದ ಅತ್ಯಾಧುನಿಕ ಎಲ್​ಜಿಎಂ-30 ಮೈನ್ಯೂಟ್​ಮ್ಯಾನ್ ಕ್ಷಿಪಣಿಯ ಸಾಮರ್ಥ್ಯವನ್ನೂ ಇದು ಮೀರಿಸಿದೆ. ಚೀನಾದ ಈ ಕ್ಷಿಪಣಿಯು ಅಮೆರಿಕ ದೇಶವನ್ನು ಕೇವಲ 30 ನಿಮಿಷದಲ್ಲಿ ತಲುಪಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ, ಡಾಂಗ್​ಫೆಂಗ್-17 ಕ್ಷಿಪಣಿಯು ಶಬ್ದಕ್ಕಿಂತ ಹೆಚ್ಚು ವೇಗವಾಗಿ ಸಾಗಬಲ್ಲುದು. ಇದೂ ಕೂಡ ಅಮೆರಿಕದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭೇದಿಸಿ ದಾಳಿ ಮಾಡಲು ಸಮರ್ಥವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ವಿಶ್ವ ದಾಖಲೆ; ಒಂದೇ ದಿನ 1 ಲಕ್ಷ 26 ಸಾವಿರ ಜನರಿಗೆ ಸರ್ಕಾರಿ ಕೆಲಸ

ಡಿಎಫ್-26 ಮಿಸೈಲ್, ಹೆಚ್​ಕ್ಯೂ-9ಬಿ ಸರ್ಫೇಸ್-ಟು-ಏರ್ ಮಿಸೈಲ್ ಮೊದಲಾದ ಕ್ಷಿಪಣಿಗಳು ಪೆರೇಡ್​ನಲ್ಲಿ ಅನಾವರಣಗೊಂಡವು. ಜೊತೆಗೆ, ವಿವಿಧ ರೀತಿಯ ಯುದ್ಧವಿಮಾನಗಳು ಹಾಗೂ ಕ್ಷಿಪಣಿಗಳನ್ನು ಪತ್ತೆ ಮಾಡಬಲ್ಲ ಚೀನಾದ ಅತ್ಯಾಧುನಿಕ ರೇಡಾರ್ ಸಿಸ್ಟಮ್ ಅನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 1, 2019, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading