ಚೀನಾದ ಹೈಪರ್​ಸಾನಿಕ್ ಯುದ್ಧವಿಮಾನ; ಇದು ವಿಶ್ವದ ಯಾವುದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಛೇದಿಸಬಲ್ಲುದು


Updated:August 6, 2018, 8:02 PM IST
ಚೀನಾದ ಹೈಪರ್​ಸಾನಿಕ್ ಯುದ್ಧವಿಮಾನ; ಇದು ವಿಶ್ವದ ಯಾವುದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಛೇದಿಸಬಲ್ಲುದು

Updated: August 6, 2018, 8:02 PM IST
- ನ್ಯೂಸ್18 ಕನ್ನಡ

ಬೀಜಿಂಗ್(ಆ. 06): ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಬಲಾತಿಬಲವೆನಿಸುವ ಕ್ಷಿಪಣಿಗಳಿವೆ. ಮಹಾಭಾರತ, ರಾಮಾಯಣದಂಥ ಪುರಾಣಗಳಲ್ಲಿ ಅಸ್ತ್ರಕ್ಕೆ ಪ್ರತ್ಯಸ್ತ್ರವಿದ್ದಂತೆ, ಈಗ ಕ್ಷಿಪಣಿಗಳಿಗೆ ಪ್ರತಿಯಾಗಿ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿವೆ. ಅಮೆರಿಕದಂಥ ರಾಷ್ಟ್ರಗಳಲ್ಲಿ ಶತ್ರುಗಳ ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲೇ ತುಂಡರಿಸಬಲ್ಲ ಅತ್ಯಾಧುನಿಕ ಕ್ಷಿಪಣಿ ನಿರೋಧಕ ತಂತ್ರಜ್ಞಾನಗಳಿವೆ. ಭಾರತದಲ್ಲೂ ಇಂಥ ಆ್ಯಂಟಿ-ಮಿಸೈಲ್ ಸಿಸ್ಟಮ್ಸ್ ಇವೆ. ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಮೀರಿ ದಾಳಿ ಮಾಡಬಲ್ಲ ಕ್ಷಿಪಣಿಗಳ ಅಭಿವೃದ್ಧಿಗೆ ಜಗತ್ತಿನ ರಾಷ್ಟ್ರಗಳು ಮುಂದಾಗಿವೆ. ಚೀನಾ ಈ ವಿಚಾರದಲ್ಲಿ ಎಲ್ಲರನ್ನೂ ಮೀರಿಸಿ ಮುಂದೋಡುತ್ತಿದೆ. ವಿಶ್ವದ ಯಾವುದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಛೇದಿಸಿ ಮುನ್ನುಗ್ಗಿ ಗುರಿ ಹೊಡೆದುರುಳಿಸಬಲ್ಲ ಹೈಪರ್​ಸಾನಿಕ್ ಕ್ಷಿಪಣಿಯನ್ನು ಚೀನಾ ಅಭಿವೃದ್ಧಿಪಡಿಸಿದೆ. ಕ್ಸಿಂಗ್​ಕಾಂಗ್-2 ಅಥವಾ ಸ್ಟಾರಿ ಸ್ಕೈ-2 ಎಂದು ಕರೆಯಲಾದ ಹೈಪರ್​ಸಾನಿಕ್ ಕ್ಷಿಪಣಿಯನ್ನು ಚೀನಾ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ರಾಕೆಟ್ ಮೂಲಕ ಉಡಾವಣೆಗೊಂಡ ಈ ಯುದ್ಧವಿಮಾನ 10 ನಿಮಿಷದ ನಂತರ ರಾಕೆಟ್​ನಿಂದ ಬೇರ್ಪಟ್ಟು ಬಳಿಕ ಹಲವು ಬಾರಿ ಸ್ವತಂತ್ರವಾಗಿ ಸುರುಳಿ ಸುತ್ತುಗಳನ್ನು ಮಾಡುತ್ತಾ ತನ್ನ ಗುರಿಯನ್ನ ಮುಟ್ಟಿತು. ಇದರೊಂದಿಗೆ ಈ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಭೂಮಿಯಿಂದ 30 ಕಿಮೀ ಎತ್ತರದವರೆಗೆ ಏರಿದ ಈ ವಿಮಾನವು ಮ್ಯಾಚ್ 6ವರೆಗಿನ (ಗಂಟೆಗೆ ಸುಮಾರು 6,000 ಕಿಮೀ ವೇಗ) ವೇಗದಲ್ಲಿ ಹಾರಿದ್ದು ವಿಶೇಷ.

ವೇವ್ ರೈಡರ್ ಟೆಕ್ನಿಕ್:
ವೇವ್ ರೈಡರ್ ತಂತ್ರಜ್ಞಾನ ಬಳಸಿ ಈ ವಿನೂತನ ಯುದ್ಧ ವಿಮಾನ ಹಾರುತ್ತದೆ. ವೇವ್ ರೈಡಿಂಗ್ ಎಂದರೆ, ಒಂದು ವಿಮಾನದ ಹಾರಾಟದಿಂದ ಸೃಷ್ಟಿಯಾಗುವ ಘರ್ಷಣಾ ಅಲೆ(ಶಾಕ್ ವೇವ್)ಯ ಸಹಾಯದಿಂದ ಇನ್ನಷ್ಟು ವೇಗ ಪಡೆದುಕೊಂಡು ಹಾರುವುದು. ಕೆಲವಾರು ದಶಕಗಳಿಂದ ಇಂಥದ್ದೊಂದು ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಿದೆ. ಅಮೆರಿಕದವರು ಇದರ ಮೊದಲ ಪ್ರಯೋಗ ಮಾಡಿದರು. ಈಗ ಚೀನಾದವರು ಇನ್ನೂ ಒಂದು ಹೆಜ್ಜೆ ಮುಂದಿಕ್ಕಿದ್ದಾರೆ.

ಹೈಪರ್ ಸಾನಿಕ್ ಎಂದರೆ?
ಸಾನಿಕ್(Sonic) ಎಂದು ಶಬ್ದದ ವೇಗವಾಗಿದೆ. ಗಂಟೆಗೆ ಸುಮಾರು 1,235 ಕಿಲೋಮೀಟರ್ ವೇಗವಾಗಿದೆ. ಸೂಪರ್​ಸಾನಿಕ್ ಎಂದರೆ ಶಬ್ದವನ್ನು ಮೀರಿಸಿದ ವೇಗ. ಹೈಪರ್​ಸಾನಿಕ್ ಎಂದರೆ ಮ್ಯಾಚ್-5 ಅನ್ನು ಮೀರಿಸಿದ ವೇಗ. ಅಂದರೆ ಗಂಟೆಗೆ ಸುಮಾರು 5,200 ಕಿಮೀ ವೇಗದ ಗಡಿಯನ್ನು ದಾಟಿದರೆ ಅದು ಹೈಪರ್​ಸಾನಿಕ್ ಎನಿಸುತ್ತದೆ.

ಭಾರತದ ಇಸ್ರೋ ಕೂಡ ಹೈಪರ್​ಸಾನಿಕ್ ವೇಗದಲ್ಲಿ ಚಾಲಿಸಬಲ್ಲ ಸ್ಕ್ರಾಮ್​ಜೆಟ್(Scramjet) ಎಂಜಿನ್ ಇರುವ ವಿಮಾನವನ್ನ ಅಭಿವೃದ್ಧಿಪಡಿಸಿದೆ. ಇದು ಮ್ಯಾಚ್-6ರಲ್ಲಿ, ಅಂದರೆ ಗಂಟೆಗೆ 6 ಸಾವಿರ ಕಿ.ಮೀ. ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...