• Home
  • »
  • News
  • »
  • national-international
  • »
  • Corona Virus: ಡ್ರ್ಯಾಗನ್​ ರಾಷ್ಟ್ರ ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕಿನ ಆತಂಕ!

Corona Virus: ಡ್ರ್ಯಾಗನ್​ ರಾಷ್ಟ್ರ ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕಿನ ಆತಂಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Corona Virus: ಅಧಿಕಾರಿಗಳು ಹೌಹುಯಿ ಇಕಾಮರ್ಸ್ ಕಂಪನಿಯ 300 ಪ್ಯಾಕೇಜ್‌ಗಳ ಬಟ್ಟೆಗಳನ್ನು ಪರಿಶೀಲಿಸಿದ್ದಾರೆ. ಎರಡು ನಗರಗಳಲ್ಲಿ ಕ್ಸಿಂಜಿ ಮತ್ತು ಜಿನ್‌ಝೌ - ಮತ್ತು ಪ್ರಾಂತೀಯ ಶೆನ್ಜೆ ಪಟ್ಟಣಗಳಲ್ಲಿ ಪಾರ್ಸೆಲ್ ವಿತರಣೆಯನ್ನು ಸ್ಥಗಿತಗೊಳಿಸಿದ್ದಾರೆ.

  • Share this:

ಡ್ರ್ಯಾಗನ್​ ರಾಷ್ಟ್ರದಲ್ಲಿ ಮತ್ತೆ ಕೊರೋನಾ(Corona) ತನ್ನ ಆರ್ಭಟವನ್ನು ಶುರುಮಾಡಿದೆ. ಕೋವಿಡ್-19(Covid-19) ವಿರುದ್ಧ ಇನ್ನಷ್ಟು ಸಂರಕ್ಷಣಾ ಕ್ರಮಗಳನ್ನು ಚೀನಾ(China) ಕೈಗೊಂಡಿದೆ. ದೇಶದ ಅತಿದೊಡ್ಡ ವಾರ್ಷಿಕ ಆನ್‌ಲೈನ್ ಶಾಪಿಂಗ್(Online Shopping) ಮೇಳ ಇನ್ನೇನು ಕೆಲವೇ ಸಮಯಗಳಲ್ಲಿ ನಡೆಯಲಿರುವುದರಿಂದ ಮೇಲ್(Mail) ಮೂಲಕ ಕಳುಹಿಸಲಾದ ಪಾರ್ಸೆಲ್‌(Parcel)ಗಳಿಂದ ವೈರಸ್(Virus) ಹರಡಬಹುದೆಂಬ ಎಚ್ಚರಿಕೆಯನ್ನು ನೀಡಿದೆ. ಈಶಾನ್ಯ ಹೆಬೈ(Hebei) ಪ್ರಾಂತ್ಯದ ಮಕ್ಕಳ ಬಟ್ಟೆ(Children's Cloth) ಉತ್ಪಾದಿಸುವ ಮೂವರು ಕೆಲಸಗಾರರಲ್ಲಿ ಕೋವಿಡ್ ಕಂಡುಬಂದಿರುವುದು ಪತ್ತೆಯಾದ ನಂತರ 1,200 ಮೈಲುಗಳಿಗಿಂತ ಹೆಚ್ಚು ದೂರದಲ್ಲಿರುವ ಅಧಿಕಾರಿಗಳು ಕಂಪನಿಯಿಂದ ಪ್ಯಾಕೇಜ್‌ಗಳನ್ನು ಸ್ವೀಕರಿಸಿದ ಅಥವಾ ಈಗಷ್ಟೇ ನಿರ್ವಹಿಸಿದ ಜನರನ್ನು ಪರೀಕ್ಷಿಸಲು ಆದೇಶಿಸಿದ್ದಾರೆ. ಚೀನಾದ ಆಗ್ನೇಯದಲ್ಲಿರುವ ಗುವಾಂಗ್ಕ್ಸಿಯಲ್ಲಿರುವ ಆರೋಗ್ಯ ಆಯೋಗವು ಪರಿಸ್ಥಿತಿಯನ್ನು "ಕೋವಿಡ್-ಸಂಬಂಧಿತ ಮೇಲ್ ಸರಪಳಿ" ಎಂದು ಉಲ್ಲೇಖಿಸಿದೆ.


300 ಪ್ಯಾಕೇಜ್‌ಗಳ ಪರಿಶೀಲನೆ


ಬೀಜಿಂಗ್‌ಗೆ ಸುತ್ತುವರಿದುಕೊಂಡಿರುವ ಹೆಬೈ ಪ್ರಾಂತ್ಯಕ್ಕೆ ಹಿಂತಿರುಗಿರುವ ಅಧಿಕಾರಿಗಳು ಹೌಹುಯಿ ಇಕಾಮರ್ಸ್ ಕಂಪನಿಯ 300 ಪ್ಯಾಕೇಜ್‌ಗಳ ಬಟ್ಟೆಗಳನ್ನು ಪರಿಶೀಲಿಸಿದ್ದಾರೆ. ಎರಡು ನಗರಗಳಲ್ಲಿ ಕ್ಸಿಂಜಿ ಮತ್ತು ಜಿನ್‌ಝೌ - ಮತ್ತು ಪ್ರಾಂತೀಯ ಶೆನ್ಜೆ ಪಟ್ಟಣಗಳಲ್ಲಿ ಪಾರ್ಸೆಲ್ ವಿತರಣೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸರ್ಕಾರಿ ಹೇಳಿಕೆ ಮಾಹಿತಿ ನೀಡಿದೆ. ಎಲ್ಲಾ ಪರೀಕ್ಷೆಗಳು ನೆಗೆಟೀವ್ ಬಂದಿರುವುದು ಕೊಂಚ ಸಮಾಧಾನಕಾರಿ ಅಂಶವಾಗಿದೆ ಎಂದು ಹೇಳಿಕೆ ತಿಳಿಸಿದೆ.


ಪಾರ್ಸೆಲ್​​ಗಳನ್ನು ಸ್ಯಾನಿಟೈಸ್ ಮಾಡಿ ತೆರೆಯಲು ಸೂಚನೆ


ಪ್ಯಾಕೇಜಿಂಗ್ ಮತ್ತು ಇತರ ಮೇಲ್ಮೈಗಳಲ್ಲಿ ಹರಡುವ ಅಪಾಯವನ್ನು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಕಡಿಮೆಗೊಳಿಸಿದ್ದರೂ ಆಮದು ಮಾಡಿದ ಫ್ರೋಜನ್ ಆಹಾರದ ಸರಕುಗಳನ್ನು ಚೀನಾ ಪರಿಶೀಲನೆ ನಡೆಸುತ್ತಿದೆ. ಸಾಗರೋತ್ತರ ಅಥವಾ ಹೆಚ್ಚಿನ ಅಪಾಯದ ದೇಶೀಯ ಸ್ಥಳಗಳಿಂದ ಪಾರ್ಸೆಲ್‌ಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಚೀನಾದ ಅಧಿಕಾರಿಗಳು ತಿಳಿಸಿದೆ. ಕಡಿಮೆ ಕೋವಿಡ್ ಅಪಾಯವೆಂದು ಪರಿಗಣಿಸಲಾದ ಪ್ರದೇಶಗಳಿಂದ ಸರಕುಗಳನ್ನು ಸ್ವೀಕರಿಸುವಾಗ ಕೂಡ, ಸ್ವೀಕರಿಸುವವರು ವಿತರಣೆಗಳನ್ನು ಎತ್ತಿಕೊಂಡು ಪಾರ್ಸೆಲ್​ ತೆಗೆಯುವ ಮುನ್ನ ಮಾಸ್ಕ್​ ಮತ್ತು ಕೈಗವಸುಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ಸೂಚಿಸಿದೆ.


ಶಾಲೆ ಹಾಗೂ ಮನರಂಜನಾ ಸ್ಥಳಗಳು ಕ್ಲೋಸ್​!


ಇತರ ದೇಶಗಳ ಯೋಜನೆಗಳಿಗೆ ಪ್ರತಿಯಾಗಿ ಚೀನಾ ತನ್ನ ಕೋವಿಡ್ ಶೂನ್ಯ ಕಾರ್ಯತಂತ್ರದೊಂದಿಗೆ ಮುಂದುವರಿಯುತ್ತಿದೆ. 1.4 ಬಿಲಿಯನ್ ರಾಷ್ಟ್ರದಲ್ಲಿ ಕೇವಲ 1,000 ಜನರಿಗೆ ಸೋಂಕು ತಗುಲಿರುವ ಡೆಲ್ಟಾವನ್ನು ಏಕಾಏಕಿ ತಡೆಗಟ್ಟುವ ಪ್ರಯತ್ನದಲ್ಲಿ ತನ್ನೆಲ್ಲಾ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಜನದಟ್ಟಣೆಯ ಪ್ರದೇಶಗಳಲ್ಲಿ ಶಾಲೆ ಹಾಗೂ ಮನರಂಜನಾ ಸ್ಥಳಗಳನ್ನು ಮುಚ್ಚುವ ಮೂಲಕ ಸೋಂಕಿಗೆ ಒಳಗಾಗಿರುವ ಸಾಮಾನ್ಯ ಪ್ರದೇಶದಲ್ಲಿದ್ದ ಜನರಿಗೆ ಪರೀಕ್ಷೆಗಳನ್ನು ನಡೆಸಲು ಸಹ ಸರ್ಕಾರ ಆದೇಶಿಸುತ್ತಿದೆ.


ಇದನ್ನು ಓದಿ: ವಿಶ್ವಕ್ಕೇ ವೈರಸ್​ ಹಂಚಿದ್ದ ಚೀನಾಗೆ ಮತ್ತೆ ಶಾಕ್​: ಕೊರೋನಾ​ ಅಟ್ಟಹಾಸಕ್ಕೆ ವಿಮಾನ, ಶಾಲೆಗಳು ಬಂದ್​


ಶಾಪಿಂಗ್​ ಮಾಡಿದ ಜನರಿಗೆ ಸೋಂಕು!
ಇದರ ನಡುವೆಯೇ ಕಳೆದ ತಿಂಗಳಲ್ಲಿ ಮತ್ತೊಂದು ಬಟ್ಟೆ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಅಥವಾ ಪ್ಯಾಕೇಜ್‌ಗಳನ್ನು ಸ್ವೀಕರಿಸಿದ ಜನರಿಗೆ ಕೋವಿಡ್‌ನ ಲಕ್ಷಣಗಳು ಪತ್ತೆಯಾದ ನಂತರ ಇನ್ನರ್ ಮಂಗೋಲಿಯಾದ ಕ್ಸಿಲಿನ್‌ಹೋಟ್ ನಗರದ ಅಧಿಕಾರಿಗಳು ಸ್ಥಳೀಯ ರೋಗ ತಡೆಗಟ್ಟುವ ವಿಭಾಗಕ್ಕೆ ವರದಿ ಮಾಡುವಂತೆ ತಿಳಿಸಿದ್ದಾರೆ. ಐಟಂಗಳಲ್ಲಿ ಯಾವುದೇ ಪಾಸಿಟಿವ್ ವರದಿಗಳು ದಾಖಲೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಬುಧವಾರ 39 ಸ್ಥಳೀಯವಾಗಿ ಹರಡುವ ಸೋಂಕುಗಳನ್ನು ವರದಿ ಮಾಡಿದೆ.


ಇದನ್ನು ಓದಿ : ಜೈಲಿನಲ್ಲಿ ಚೀನಾ ಪತ್ರಕರ್ತೆಯ ನರಕಯಾತನೆ, ಕೊರೋನಾ ಬಗ್ಗೆ ವರದಿ ಮಾಡಿದ್ದಕ್ಕೆ ಘೋರ ಶಿಕ್ಷೆನಾ?


ವ್ಯಕ್ತಿಯ ಆರೋಗ್ಯ ಪರಿಸ್ಥಿತಿಯನ್ನು ಪತ್ತೆಹಚ್ಚುವ ಸ್ಮಾರ್ಟ್‌ಫೋನ್ ಆ್ಯಪ್‌ನಲ್ಲಿರುವ ಹಸಿರು ಕೋಡ್, ಪ್ಯಾಕೇಜ್ ಪಡೆದ ನಂತರ ಹಳದಿ ಬಣ್ಣಕ್ಕೆ ಮಾರ್ಪಟ್ಟಿದ್ದು ಅವರ ಚಲನವಲನಗಳನ್ನು ಗಮನಿಸಲಾಗುತ್ತಿದೆ ಹಾಗೂ ಅವರನ್ನು ಒತ್ತಾಯಪೂರ್ವಕವಾಗಿ ಮನೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಕೆಲವೊಂದಿಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದಾರೆ

Published by:Vasudeva M
First published: