Shocking: ವಿದೇಶಗಳಲ್ಲಿ ಅಕ್ರಮ ಪೊಲೀಸ್ ಸ್ಟೇಷನ್ ತೆರೆದ ಚೀನಾ!

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಚೀನಾ ಸರ್ಕಾರವು ಈ ಅಕ್ರಮ ಪೊಲೀಸ್ ಠಾಣೆಗಳ ಮೂಲಕ ಕೆಲವು ದೇಶಗಳ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ತನಿಖಾ ಪತ್ರಿಕೋದ್ಯಮ ವರದಿಕಾ ವರದಿ ಮಾಡಿದೆ.

  • Share this:

ಬೀಜಿಂಗ್: ಜಾಗತಿಕ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಬೇಕೆಂದು ಚಿಕ್ಕ ಚಿಕ್ಕ ದೇಶಗಳನ್ನು ತನ್ನ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ಕುರಿತು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.  ಅಭಿವೃದ್ಧಿ ಹೊಂದಿದ ದೇಶಗಳಾದ ಕೆನಡಾ ಮತ್ತು ಐರ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕಾನೂನುಬಾಹಿರ ಪೊಲೀಸ್ ಠಾಣೆಗಳನ್ನು (China Opens Illegal Police Stations) ಚೀನಾ ತೆರೆದಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಈ ಸುದ್ದಿ ಮಾನವ ಹಕ್ಕುಗಳ ಪ್ರಚಾರಕರಲ್ಲಿ ಕಳವಳವನ್ನು ಉಂಟುಮಾಡಿದೆ. ಇದಲ್ಲದೆ ಚೀನಾ ಸರ್ಕಾರವು ಈ ಅಕ್ರಮ ಪೊಲೀಸ್ ಠಾಣೆಗಳ ಮೂಲಕ ಕೆಲವು ದೇಶಗಳ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ತನಿಖಾ ಪತ್ರಿಕೋದ್ಯಮ ವರದಿಕಾ ವರದಿ ಮಾಡಿದೆ.


ಕೆನಡಾ ದೇಶದಲ್ಲಿ ಸಾರ್ವಜನಿಕ ಭದ್ರತಾ ಬ್ಯೂರೋದೊಂದಿಗೆ (PSB) ಸಂಯೋಜಿತವಾಗಿರುವ ಇಂತಹ ಅನೌಪಚಾರಿಕ ಪೊಲೀಸ್ ಸೇವಾ ಕೇಂದ್ರಗಳನ್ನು ಚೀನಾದ ವಿರೋಧಿಗಳನ್ನು ಮಟ್ಟಹಾಕಲು ಸ್ಥಾಪಿಸಲಾಗಿದೆ ಎಂದು ತನಿಖಾ ವರದಿಯೊದು ಉಲ್ಲೇಖಿಸಿದೆ.


21 ದೇಶಗಳಲ್ಲಿ 30 ಪೊಲೀಸ್ ಸ್ಟೇಷನ್
21 ದೇಶಗಳಲ್ಲಿ ಈಗಾಗಲೇ 30 ಇಂತಹ ಪೊಲೀಸ್ ಸ್ಟೇಷನ್​ಗಳನ್ನು ತೆರೆದಿದೆ ಎಂದು ಫುಝೌ ಪೊಲೀಸರು ಹೇಳಿದ್ದಾರೆ. ಉಕ್ರೇನ್, ಫ್ರಾನ್ಸ್, ಸ್ಪೇನ್, ಜರ್ಮನಿ ಮತ್ತು ಬ್ರಿಟನ್​ ದೇಶಗಳಲ್ಲಿ ಚೀನೀ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ತನಿಖಾ ವರದಿಯೊಂದು ಉಲ್ಲೇಖಿಸಿದೆ.  ಈ ಮೂಲಕ ಚೀನಾ ವಿದೇಶಗಳ ಮೇಲೆ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವುದು ಮತ್ತೆ ಬಯಲಾಗಿದೆ. 


ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೃಹ ಬಂಧನ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಚೀನಾ ಸೇನೆ (China Military) ದಂಗೆ ಎದ್ದಿದೆ ಎಂದು ವದಂತಿಗಳು ಹರಡುತ್ತಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು (Chinese President Xi Jinping) ಚೀನಾ ಸೇನೆ ಗೃಹ ಬಂಧನದಲ್ಲಿ ಇರಿಸಿದೆ ಎಂದು ಟ್ವಿಟರ್​ನಲ್ಲಿ ಪುಂಖಾನುಪುಂಖ ಟ್ವೀಟ್​ಗಳ ಸುರಿಮಳೆಯೇ ಸುರಿಯುತ್ತಿದೆ. ಜಿನ್‌ಪಿಂಗ್ ವಿರೋಧಿ ಅಭಿಯಾನದಿಂದಾಗಿ ಕ್ಸಿ ಜಿನ್​ಪಿಂಗ್ ಗೃಹ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಚೀನಾದ ಕಮ್ಯುನಿಸ್ಟ್ ಪಕ್ಷ ಅಥವಾ ಸರ್ಕಾರಿ ಮಾಧ್ಯಮದಿಂದ ಇನ್ನೂ ಅಧಿಕೃತ ದೃಢೀಕರಣ ನೀಡಲಾಗಿಲ್ಲ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಈ ವದಂತಿಯನ್ನು ಪರಿಶೀಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Mohammed Bin Salman: ಸೌದಿಗೆ ಹೊಸ ಪ್ರಧಾನಿ; ಮೊಹಮದ್ ಬಿನ್ ಸಲ್ಮಾನ್ ಕೈಗೆ ಆಡಳಿತ


ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಲವು ನಾಯಕರು SCO ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಇತ್ತೀಚಿಗಷ್ಟೇ ಭೇಟಿಯಾಗಿದ್ದರು.


ಲೇಖಕ ಗಾರ್ಡನ್ ಜಿ ಚಾಂಗ್ 'ವಿಡಿಯೋಗ್ರಾಫಿಕ್ ಪುರಾವೆ' ತೋರಿಸಲು ಹೇಳಿಕೊಳ್ಳುವ ಟ್ವೀಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ. ಆ ಟ್ವೀಟ್ ಪ್ರಕಾರ ಚೀನಾ ಮಿಲಿಟರಿ ವಾಹನಗಳು ಸೆಪ್ಟೆಂಬರ್ 22 ರಂದು ಬೀಜಿಂಗ್‌ಗೆ ಹೋಗುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ: Vijay Rupani: ರಾತ್ರೋ ರಾತ್ರಿ ರಾಜೀನಾಮೆ: ವರ್ಷದ ಬಳಿಕ 'ಹೈಕಮಾಂಡ್​' ರಹಸ್ಯ ಬಿಚ್ಚಿಟ್ಟ ಗುಜರಾತ್ ಮಾಜಿ ಸಿಎಂ ರೂಪಾನಿ!


ಚೀನಾದಲ್ಲಿ ಆರ್ಥಿಕತೆ ಕುಸಿತ
ಚೀನಾದಲ್ಲಿ ಹಿಂದಿನ ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಅನಿರೀಕ್ಷಿತವಾಗಿ 2.9% ರಷ್ಟು ಕುಸಿದಿತ್ತು. ಜೊತೆಗೆ ಚಿಲ್ಲರೆ ಮಾರಾಟವು ಅವಧಿಯಲ್ಲಿ ಶೇಕಡಾ 11.1 ರಷ್ಟು ಸಂಕುಚಿತಗೊಂಡಿತ್ತು. ಇದು ಯೋಜಿತ 6.6% ಕುಸಿತಕ್ಕಿಂತ ದುರ್ಬಲವಾಗಿದೆ. ನಿರುದ್ಯೋಗ ದರವು 6.1% ಕ್ಕೆ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಯುವಸ ಸಮುದಾಯದಲ್ಲಿ ನಿರುದ್ಯೋಗ ದರವು ದಾಖಲೆಯ ಮಟ್ಟವನ್ನು ಮುಟ್ಟಿದೆ.

First published: