ದೆಹಲಿ: ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅತಿ ಹೆಚ್ಚಿನ ಸಮಯ ಬೇಕಿಲ್ಲ ಎಂದಿದ್ದ ವಿಶ್ವಸಂಸ್ಥೆಯು ಇತ್ತೀಚೆಗೆ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂದು ಜಗತ್ತಿನ ಮುಂದೆ ಪ್ರಸ್ತುತಪಡಿಸಿದೆ. ಯುಎನ್ ಪ್ರಕಾರ, 2023 ರ ಜುಲೈಗೆ ಭಾರತವು 1.428 ಶತಕೋಟಿ ಜನಸಂಖ್ಯೆ (India's Population) ಹೊಂದುವ ಎಲ್ಲಾ ಸಾಧ್ಯತೆಗಳು ಇವೆ. ಅದೇ ಸಮಯಕ್ಕೆ ಚೀನಾದಲ್ಲಿ (China Population) 1.426 ಶತಕೋಟಿ ಜನಸಂಖ್ಯೆ ಆಗುವುದರಿಂದ, ಜನಸಂಖ್ಯೆಯಲ್ಲಿ ಭಾರತವು ನಂಬರ್ 1 ಸ್ಥಾನವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಸಂಸ್ಥೆಯು ಅಭಿಪ್ರಾಯಪಟ್ಟಿದೆ. ಆದರೆ ಇದರ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿರಸ್ಕಾರದ ಅಭಿಪ್ರಾಯವನ್ನು ಹೊಂದಿದ್ದಾರೆ.
ಚೀನಾ ಹೇಳಿದ್ದೇನು?
"ಒಂದು ದೇಶದ ಜನಸಂಖ್ಯೆಯು ಪ್ರಮಾಣ ಮತ್ತು ಗುಣಮಟ್ಟವನ್ನು ಅವಲಂಬಿಸಿರುವುದಿಲ್ಲ. ವಿಶ್ವಸಂಸ್ಥೆಯ ಈ ಮಾಹಿತಿ ಸರಿಯಾಗಿದೆಯೇ ಎಂದು ನಮಗೆ ತಿಳಿದಿಲ್ಲ. ಆದ್ದರಿಂದ ನಾವು ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮುಂದೆ ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುತ್ತದೆ ಎಂದು ನಾವು ಸ್ಪಷ್ಟವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದ ಜನಸಂಖ್ಯೆಯ ಹೆಚ್ಚಿನ ದತ್ತಾಂಶಗಳು ದಶಕಗಳಷ್ಟು ಹಳೆಯ ಡೇಟಾವನ್ನು ಆಧರಿಸಿವೆ. ಏಕೆಂದರೆ ಭಾರತವು 2011 ರಿಂದ ಸರಿಯಾದ ಜನಗಣತಿಯನ್ನೇ ನಡೆಸಿಲ್ಲ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿರಸ್ಕಾರದ ಮಾತನಾಡಿದ್ದಾರೆ.
ಜನಗಣತಿ ಮುಂದೂಡಿದ್ದ ಭಾರತ
ಭಾರತದ ಜನಗಣತಿಯು ವಿಶ್ವದಲ್ಲಿಯೇ ಹೆಚ್ಚು ಗಮನಾರ್ಹವಾದ ಸಂಗತಿಯಾಗಿದೆ. ಪ್ರತಿ ದಶಕಕೊಮ್ಮೆ ಜನಗಣತಿ ನಡೆಯುತ್ತದೆ. ಆದರೆ 2020 ರಲ್ಲಿ ಕೊರೋನಾದಿಂದ ಭಾರತವು ಜನಗಣತಿಯನ್ನು ಮುಂದೂಡಿತ್ತು.
ಭಾರತದ ಜನಸಂಖ್ಯಾ ಸಂಯೋಜನೆ ಹೇಗಿದೆ?
ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ರಚಿಸುವ ಭಾರತದ ಪೌರತ್ವ ಕಾನೂನಿನ ಬದಲಾವಣೆಯು ವಿವಾದಾತ್ಮಕ ಹೆಜ್ಜೆಯಾಗಿ 2019 ರಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಯಿತು. ಏಕೆಂದರೆ ಇದು ಅನೇಕ ಭಾರತೀಯ ಮುಸ್ಲಿಮರನ್ನು ಭಾರತೀಯರಲ್ಲ ಎಂದು ಸಾರುತ್ತಿದೆ ಎಂಬ ಭಯದಿಂದ ಜನಗಣತಿಯನ್ನು ಮುಂದೂಡತ್ತಲೇ ಬರಲಾಗಿದೆ.
ಭಾರತದಲ್ಲಿ 2041 ರ ಹೊತ್ತಿಗೆ ಸರ್ಕಾರದ ಅಂದಾಜಿನ ಪ್ರಕಾರ ಉತ್ತರದ ರಾಜ್ಯವಾದ ಬಿಹಾರವು 2011 ರ ಜನಗಣತಿಯಲ್ಲಿ 50 ಮಿಲಿಯನ್ ಜನರನ್ನು ಹೊಂದಿತ್ತು. ಈ ರಾಜ್ಯ ಇದೀಗ 104 ಮಿಲಿಯನ್ ಜನಸಂಖ್ಯೆ ಹೊಂದುವ ಸಾಧ್ಯತೆ ಇದೆ. ಆದರೆ ದಕ್ಷಿಣದ ರಾಜ್ಯವಾದ ತಮಿಳುನಾಡಿನ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಸಮೀಕ್ಷೆಗಳು ಏನು ಹೇಳ್ತಿವೆ?
ಕೊನೆಯದಾಗಿ ಭಾರತದಲ್ಲಿ ವರ್ಷಕ್ಕೆ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲ. ದೇಶದಲ್ಲಿ 2017 ಮತ್ತು 2018 ರಲ್ಲಿ ನಿರುದ್ಯೋಗ ಕಡಿಮೆಯಾಗಿದೆ ಎಂದು ಹೇಳಲಾದ ಎರಡು ಸರ್ಕಾರಿ ಸಮೀಕ್ಷೆಗಳು 2011 ರ ಜನಗಣತಿಯಲ್ಲಿ 28% ರಷ್ಟು ಕುಟುಂಬಗಳು ಇನ್ನು ಉದ್ಯೋಗವನ್ನು ಅರಸಿ ನಗರಕ್ಕೆ ಬರುತ್ತಿರುವುದು ಕಂಡುಬರುತ್ತಿದೆ ಎಂದು ವರದಿ ಮಾಡಿವೆ.
ಉನ್ನತ ಶಿಕ್ಷಣ ಪಡೆದ ಅದೆಷ್ಟೊ ಯುವಕರು ಕೇವಲ ಕೆಲಸಕ್ಕಾಗಿ ತಾವಿರುವ ಊರು ಬಿಟ್ಟು ವಲಸೆ ಹೋಗಬೇಕಾದ ಪರಿಸ್ಥಿತಿ ಭಾರತದಲ್ಲಿ ಇನ್ನು ಇದೆ. ಇದರ ಬಗ್ಗೆ ವಿಶ್ಲೇಷಿಸಿದಾಗ ತಿಳಿದು ಬರುವ ಸತ್ಯ ಸಂಗತಿ ಎಂದರೆ ಭಾರತದಲ್ಲಿ ಜನಗಣತಿ ಬಗ್ಗೆ ಗುಣಮಟ್ಟದ ಮಾಹಿತಿ ಸಿಗುವುದು ಕಷ್ಟ. ಹಾಗಾಗಿ ಇದು ಸಾಧ್ಯವೇ ಇಲ್ಲ ಎಂದು ಚೀನಾ ದೇಶವು ಭಾರತದ ಜನಗಣತಿ ಬಗ್ಗೆ ಮೂಗು ಮುರಿದಿದೆ.
ಇದನ್ನೂ ಓದಿ: Viral Video: ಬಾಯಲ್ಲಿ ನೋಟಿಟ್ಟುಕೊಂಡು ಡ್ಯಾನ್ಸರ್ಗೆ ತುಟಿಯಿಂದ ತೆಗೆಯಲು ಹೇಳಿದ ಕಾಂಗ್ರೆಸ್ ಶಾಸಕ! ವಿಡಿಯೋ ವೈರಲ್
ಚೀನಾದ ಈ ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ನೀಡಲು ಭಾರತವು ಸಿದ್ಧವಾಗಿಲ್ಲ ಎಂದು ತೋರುತ್ತಿದೆ. ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ದೇಶವಾಗಬಹುದು ಮತ್ತು ಅದು ಹಾಗೆಯೇ ಮುಂದುವರಿಯಬಹುದು ಆದರೆ ಅದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಭಾರತ ಜಗತ್ತಿಗೆ ನೀಡುತ್ತದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ. ಮುಂದೆ ಕಾದು ನೋಡೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ