ಮೊಬೈಲ್ ಆ್ಯಪ್ ಗಳ ಮೇಲೆ ಕಠಿಣ ನಿಯಂತ್ರಣಕ್ಕೆ ಮುಂದಾದ China..!

2016ರಲ್ಲಿ ಅನುಷ್ಠಾನಗೊಂಡ ಮೊಬೈಲ್ ಆ್ಯಪ್ ನಿಯಂತ್ರಣಗಳನ್ನು ಪರಿಷ್ಕರಿಸಲು ಮುಂದಾಗಿದ್ದು ಸೈಬರ್ ಭದ್ರತಾ ಕ್ರಮಗಳು ವೈಯಕ್ತಿಕ ದತ್ತಾಂಶಗಳ ಖಾಸಗಿತನ ಹಾಗೂ ಎಳೆ ವಯಸ್ಸಿನವರಿಗೆ ಆ್ಯಪ್‌ನಲ್ಲಿ ಕಠಿಣ ಭದ್ರತೆ ಒದಗಿಸಲು ಹೆಚ್ಚು ಗಮನ ನೀಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೀನಾ (China) ತನ್ನ ಭಾರಿ ಅಂತರ್ಜಾಲ ವಲಯವನ್ನು(Internet Sector) ಪರಾಮರ್ಶೆಗೊಳಪಡಿಸಲು ಮುಂದಾಗಿದ್ದು, ಕೆಲವು ಮೊಬೈಲ್ ಆ್ಯಪ್ ನಿರ್ವಾಹಕರ ಕುರಿತು ಪರಾಮರ್ಶೆ ಹಾಗೂ ವಿಶ್ಲೇಷಣೆ ಕೈಗೊಂಡು, ಕಿರಿಯ ಪ್ರಾಯದವರಿಗೆ ಒದಗಿಸಲಾಗುವ ಸುರಕ್ಷತೆಯ (Security Provided) ಬಲವರ್ಧನೆಗೊಳಿಸಲು ಪ್ರಸ್ತಾವನೆಯೊಂದನ್ನು ಮಂಡಿಸಿದೆ. ಈ ನಿಯಮಗಳ ಕರಡಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾರ್ವಜನಿಕರಿಗೆ ಜನವರಿ 20ರವರೆಗೆ ಅವಕಾಶ ನೀಡಲಾಗಿದೆ.ಪ್ರಸ್ತಾವಿತ ನಿಯಮಗಳನ್ನು "ಪಠ್ಯ, ಭಾವಚಿತ್ರ, ಧ್ವನಿ, ವಿಡಿಯೋ ಹಾಗೂ ಇನ್ನಿತರ ಮಾಹಿತಿ ಉತ್ಪಾದನೆಗಳಿಗೆ" ಅನ್ವಯಿಸಬಹುದಾಗಿದೆ. ಇದರೊಂದಿಗೆ ತ್ವರಿತ ಸಂದೇಶ, ಸುದ್ದಿ ಹರಡುವಿಕೆ,(Community Platforms) ಸಮುದಾಯಗಳ ವೇದಿಕೆ, ನೇರ ಪ್ರಸಾರ ಹಾಗೂ ಇ-ವಾಣಿಜ್ಯ ವಹಿವಾಟುಗಳಿಗೆ ಅನ್ವಯಿಸಬಹುದಾಗಿದೆ ಎಂದು ನಿಯಂತ್ರಕರು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ ಎಚ್ಚರಿಕೆ
ಇದರೊಂದಿಗೆ ಮೊಬೈಲ್ ಆ್ಯಪ್ ಸೇವಾದಾರರು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಚಡುವಟಿಕೆಗಳಲ್ಲಿ ಭಾಗಿಯಾಗಬಾರದು ಹಾಗೂ ಬಳಕೆದಾರರಿಗೆ ಅಗತ್ಯವಿಲ್ಲದ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಬಾರದು ಎಂದೂ ನಿಯಂತ್ರಕರು ಸೂಚಿಸಿದ್ದಾರೆ.

ಚೀನಾದ ಬಹುದೊಡ್ಡ ಅಂತರ್ಜಾಲ ನಿಗಾ ಸಂಸ್ಥೆಯಾದ ಸೈಬರ್ ಅಡ್ಮಿನಿಸ್ಟ್ರೇಶನ್ ಆಫ್ ಚೀನಾವು ಬುಧವಾರ ಮೊಬೈಲ್ ಕುರಿತಾದ ತನ್ನ ನಿಯಂತ್ರಣಗಳಿಗೆ ವಿಸ್ತಾರವಾದ ಪರಿಷ್ಕರಣೆ ಮಾಡುವ ಪ್ರಸ್ತಾಪ ಮಂಡಿಸಿದೆ. ಈ ಪ್ರಸ್ತಾವನೆಯ ಪ್ರಕಾರ, ಸುದ್ದಿ ಆ್ಯಪ್‌ಗಳ ನಿರ್ವಾಹಕರು ಸುದ್ದಿ ಪ್ರಸಾರ ಮಾಡಲು ಪರವಾನಗಿ ಪಡೆಯಬೇಕಾಗಿದ್ದು, ಸಾರ್ವತ್ರಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಹಾಗೂ ಸಮಾಜವನ್ನು ಸಂಘಟಿತಗೊಳಿಸುವ ನೂತನ ವೈಶಿಷ್ಟ್ಯಗಳು ಹಾಗೂ ತಂತ್ರಜ್ಞಾನ ಹೊಂದಿರುವ ಆ್ಯಪ್‌ಗಳು ಅವು ಬಿಡುಗಡೆಯಾಗುವುದಕ್ಕೂ ಮುನ್ನ ಭದ್ರತಾ ಪರಾಮರ್ಶೆಗೆ ಒಳಪಡಬೇಕಾಗುತ್ತವೆ.

ಇದನ್ನೂ ಓದಿ: Winter Olympics: ಚಳಿಗಾಲದ ಒಲಿಂಪಿಕ್ಸ್ ಗಾಗಿ ಚೀನಾ ತಯಾರಿ ಮಾಡಿರುವ ಬುಲೆಟ್ ಟ್ರೈನ್ ಹೇಗಿದೆ ನೋಡಿ..

2 ನೂತನ ನಿಯಮ
ಈ ಕುರಿತು 2 ನೂತನ ನಿಯಮಗಳನ್ನು ಜಾರಿಗೊಳಿಸುವುದಾಗಿ ಸೈಬರ್ ಅಡ್ಮಿನಿಸ್ಟ್ರೇಶನ್ ಆಫ್ ಚೀನಾ ಪ್ರಕಟಿಸಿದೆ. ಒಂದು ಮಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಡಿಜಿಟಲ್ ವೇದಿಕೆಯ ಕಂಪನಿಗಳು ಸಾಗರೋತ್ತರ ದೇಶಗಳಲ್ಲಿ ಪಟ್ಟಿ ಮಾಡಿಸುವುದಕ್ಕೂ ಮುನ್ನ ಭದ್ರತಾ ಪರಾಮರ್ಶೆಗೆ ಒಳಪಡಬೇಕು. ಈ ನಿಯಮವು ಫೆಬ್ರವರಿಯಿಂದ ಜಾರಿಗೆ ಬರಲಿದೆ. ಮತ್ತೊಂದು ಶಿಫಾರಸು ಮಾಡಲಾಗಿರುವ ಅಲ್ಗಾದಿದಮ್ ಬಳಸಿರಬೇಕು ಎಂಬ ನಿಯಮವು ಮಾರ್ಚ್‌ನಿಂದ ಅನುಷ್ಠಾನಗೊಳ್ಳಲಿದೆ.

2016ರಲ್ಲಿ ಅನುಷ್ಠಾನಗೊಂಡ ಮೊಬೈಲ್ ಆ್ಯಪ್ ನಿಯಂತ್ರಣಗಳನ್ನು ಪರಿಷ್ಕರಿಸಲು ಮುಂದಾಗಿದ್ದು, ಸೈಬರ್ ಭದ್ರತಾ ಕ್ರಮಗಳು, ವೈಯಕ್ತಿಕ ದತ್ತಾಂಶಗಳ ಖಾಸಗಿತನ ಹಾಗೂ ಎಳೆ ವಯಸ್ಸಿನವರಿಗೆ ಆ್ಯಪ್‌ನಲ್ಲಿ ಕಠಿಣ ಭದ್ರತೆ ಒದಗಿಸಲು ಹೆಚ್ಚು ಗಮನ ನೀಡಲಾಗಿದೆ. ವಿಶ್ವದಲ್ಲೇ ಅತ್ಯಂತ ಕಠಿಣ ಖಾಸಗಿ ಮಾಹಿತಿ ರಕ್ಷಣಾ ಕಾನೂನು ಒಳಗೊಂಡಂತೆ ಹಲವಾರು ಅಂತರ್ಜಾಲ ಸಂಬಂಧಿ ಕಾನೂನುಗಳನ್ನು 2021ರಲ್ಲಿ ಚೀನಾದಲ್ಲಿ ಜಾರಿಗೊಳಿಸಲಾಗಿದೆ ಎಂದು ಚೀನಾದ ಬೌದ್ಧಿಕ ಹಕ್ಕು ವಕೀಲರ ಜಾಲದ ಸದಸ್ಯರ ಪೈಕಿ ಒಬ್ಬರಾಗಿರುವ ಕ್ಸು ಕ್ಸಿನ್‌ಮಿಂಗ್ ತಿಳಿಸಿದ್ದಾರೆ.

ಡಿಜಿಟಲ್ ವೇದಿಕೆಯ ನಿರ್ವಾಹಕರು
ಚೀನಾ ಸರ್ಕಾರವು ಮಂಗಳವಾರ ಬಿಡುಗಡೆ ಮಾಡಿರುವ ವಿದೇಶಗಳಲ್ಲಿ ತಮ್ಮ ಕಂಪನಿಗಳನ್ನು ಪಟ್ಟಿ ಮಾಡುವ ಮುನ್ನ ಡಿಜಿಟಲ್ ವೇದಿಕೆಯ ನಿರ್ವಾಹಕರು ಸೈಬರ್ ಭದ್ರತಾ ಪರಾಮರ್ಶೆಗೊಳಪಡಬೇಕು ಎಂಬ ನಿಯಮ ಸೇರಿದಂತೆ ಇನ್ನಿತರ ಕ್ರಮಗಳು ಯಾವುದೇ ಅಚ್ಚರಿ ಮೂಡಿಸಿಲ್ಲ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ದತ್ತಾಂಶ ಸಂಗ್ರಹ ಮಾಡುವ ಆ್ಯಪ್ ತಯಾರಕರಿಗೆ ಅಧಿಕಾರಿಗಳು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು.

ಸುದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿರುವ ಅಂತರ್ಜಾಲ ವಿಶ್ಲೇಷಕ ಚುನ್ ಊಂಗ್, "ವೈಯಕ್ತಿಕವಾಗಿ ನಾನು ಈ ನಿಯಮಗಳ ಕುರಿತು ತಟಸ್ಥ ನಿಲುವು ತಳೆದಿದ್ದು, ಈ ಸೈಬರ್ ಭದ್ರತಾ ನಿಯಂತ್ರಣಗಳು ಇನ್ನೂ ಕೆಲವು ಕಾಲ ಕಠಿಣವಾಗಿಯೇ ಉಳಿಯುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Chinese Man: 30 ವರ್ಷಗಳಿಂದ ದೂರವಾಗಿದ್ದ ಮಗ ಮತ್ತೆ ತಾಯಿ ಮಡಿಲು ಸೇರಿದ ಕಥೆ... ಹೇಗೆ ಗೊತ್ತಾ?

ತಂತ್ರಜ್ಞಾನ ವಲಯ
ಕಳೆದ ಕೆಲವು ವರ್ಷಗಳಿಂದ ಚೀನಾ ಪ್ರಾಧಿಕಾರಗಳು ಗೇಮಿಂಗ್, ರಿಯಲ್ ಎಸ್ಟೇಟ್‌ನಿಂದ ಮೊದಲ್ಗೊಂಡು ಶಿಕ್ಷಣ ಉದ್ಯಮದವರೆಗೆ ತನ್ನ ನಿಯಂತ್ರಣಗಳನ್ನು ಬಿಗಿಗೊಳಿಸಿತ್ತು. ಸೈಬರ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾವು ದೇಶದ ತಂತ್ರಜ್ಞಾನ ವಲಯವನ್ನು ಗುರಿಯಾಗಿಸಿಕೊಂಡು ಅಸಂಖ್ಯಾತ ಕ್ರಮಗಳನ್ನು ಜಾರಿಗೊಳಿಸಿದೆ.
ಆದರೆ, ಸೈಬರ್ ಅಡ್ಮಿನಿಸ್ಟ್ರೇಶನ್ ಆಫ್ ಚೀನಾ ಯಾವುದೇ ನಿರ್ದಿಷ್ಟ ಆ್ಯಪ್‌ಗಳು ಕುರಿತಾಗಲಿ ಅಥವಾ ಭದ್ರತಾ ಪರಾಮರ್ಶೆಗಳ ಕುರಿತಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಈ ನಿಯಮಗಳು ರಾಷ್ಟ್ರೀಯ ನಿಯಂತ್ರಣಗಳಿಗುನುಣವಾಗಿ ಜಾರಿಯಾಗಲಿವೆ ಎಂದು ಮಾತ್ರ ಹೇಳಿದೆ.
Published by:vanithasanjevani vanithasanjevani
First published: