ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ ಸಭೆಯಲ್ಲಿ ಚೀನಾ, ಪಾಕಿಸ್ತಾನಕ್ಕೆ ಛೀಮಾರಿ

ಚೀನಾದಲ್ಲಿ ಮುಸ್ಲಿಮ್, ಟಿಬೆಟಿಯನ್ ಬೌದ್ಧರು ಮೊದಲಾದವರು ಹಾಗೂ ಪಾಕಿಸ್ತಾನದಲ್ಲಿ ಹಿಂದೂ, ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯೊಂದರಲ್ಲಿ ಆತಂಕ ವ್ಯಕ್ತವಾಗಿದೆ.

news18
Updated:August 23, 2019, 1:05 PM IST
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ ಸಭೆಯಲ್ಲಿ ಚೀನಾ, ಪಾಕಿಸ್ತಾನಕ್ಕೆ ಛೀಮಾರಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಒಂದು ಪ್ರಾತಿನಿಧಿಕ ಚಿತ್ರ
  • News18
  • Last Updated: August 23, 2019, 1:05 PM IST
  • Share this:
ವಿಶ್ವಸಂಸ್ಥೆ(ಆ. 23): ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಆಪ್ತಮಿತ್ರರಾದ ಚೀನಾ ಮತ್ತು ಪಾಕಿಸ್ತಾನಕ್ಕೆ ಛೀಮಾರಿ ಬಿದ್ದಿದೆ. ಈ ಎರಡೂ ದೇಶಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಅಮೆರಿಕ, ಬ್ರಿಟನ್ ಮತ್ತು ಕೆನಡಾ ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ.

ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ವಿಚಾರವಾಗಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಈ ಬೆಳವಣಿಗೆಯಾಗಿದೆ. ಚೀನಾ ಮತ್ತು ಪಾಕಿಸ್ತಾನದಲ್ಲಿ ಆತಂಕಪಡುವಷ್ಟು ಮಟ್ಟದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮುಂದುವರಿದಿದೆ. ಅಲ್ಲಿಯ ಕ್ರೈಸ್ತರು, ಹಿಂದೂ, ಅಹ್ಮದಿ ಮತ್ತಿತರ ಅಲ್ಪಸಂಖ್ಯಾತರ ವಿರುದ್ಧ ಸರ್ಕಾರದ ಕಾನೂನುಗಳಿಂದಲೂ ತಾರತಮ್ಯವಾಗುತ್ತಿದೆ. ಸರ್ಕಾರಕ್ಕೆ ಸೇರದ ವಿವಿಧ ಸಂಘಟನೆಗಳೂ ಕೂಡ ಅಲ್ಪಸಂಖ್ಯಾತರನ್ನು ಗುರಿಯಾಗಿಸಿವೆ ಎಂದು ಸಭೆಯಲ್ಲಿ ಚರ್ಚೆಯಾಯಿತು.

ಅಮೆರಿಕದ ರಾಯಭಾರಿ ಸ್ಯಾಮುಯೆಲ್ ಬ್ರೌನ್​ಬ್ಯಾಕ್ ಅವರು ಹೆಚ್ಚು ಧ್ವನಿ ಎತ್ತಿದರು. ದೇಶದ ಭದ್ರತೆಯ ಹೆಸರಿನಲ್ಲಿ ಚೀನಾ ಮೊದಲಾದ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಚೀನಾದಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಉಯ್ಗುರ್ ಮುಸ್ಲಿಮರು, ಕಜಕ್, ಟಿಬೆಟಿಯನ್ ಬೌದ್ಧರು, ಕ್ರೈಸ್ತರ ಮೇಲೆ ದೌರ್ಜನ್ಯವಾಗುತ್ತಿದೆ. ಚೀನಾ ಸರ್ಕಾರ ತನ್ನ ದೇಶದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಬೇಕು ಎಂದು ಬ್ರೌನ್​ಬ್ಯಾಕ್ ಆಗ್ರಹಪಡಿಸಿದರು.

ಅಮೆರಿಕದ ರಾಯಭಾರಿಯ ಮಾತಿಗೆ ಕೆನಡಾ, ಬ್ರಿಟನ್ ದೇಶಗಳ ರಾಯಭಾರಿಗಳೂ ಧ್ವನಿಗೂಡಿಸಿದರು. ವಿಶ್ವದೆಲ್ಲೆಡೆ ಧಾರ್ಮಿಕ ಸ್ವಾತಂತ್ರ್ಯ ಇರುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಸಭೆಯಲ್ಲಿ ಕರೆ ಕೊಡಲಾಯಿತು.

(ಪಿಟಿಐ ವರದಿ)
First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ