HOME » NEWS » National-international » CHINA OPPOSES APPS BAN ASKS INDIA TO RECTIFY PRACTICES VIOLATING WTO RULES MAK

ಚೀನಾದ 43 ಅಪ್ಲಿಕೇಶನ್​ಗಳು ಬ್ಯಾನ್; ಭಾರತದ ಕ್ರಮ WTO ನಿಯಮಗಳ ಉಲ್ಲಂಘನೆ ಎಂದ ಡ್ರ್ಯಾಗನ್ ರಾಷ್ಟ್ರ

ಚೀನಾ ಒಡೆತನದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಸಲುವಾಗಿ ಭಾರತವು ರಾಷ್ಟ್ರೀಯ ಭದ್ರತೆಯ ನೆಪವೊಡ್ಡುವುದನ್ನು ನಾವು ಖಂಡಿಸುತ್ತೇವೆ ಎಂದು ಚೀನಾ ರಾಯಭಾರಿ ಕಚೇರಿಯ ವಕ್ತಾರ ಜಿ ರೊಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:November 25, 2020, 8:03 PM IST
ಚೀನಾದ 43 ಅಪ್ಲಿಕೇಶನ್​ಗಳು ಬ್ಯಾನ್; ಭಾರತದ ಕ್ರಮ WTO ನಿಯಮಗಳ ಉಲ್ಲಂಘನೆ ಎಂದ ಡ್ರ್ಯಾಗನ್ ರಾಷ್ಟ್ರ
ಪ್ರಾತಿನಿಧಿಕ ಚಿತ್ರ.
  • Share this:
ಲಡಾಕ್​ನ ಗಾಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರು ನಡುವೆ ಕಳೆದ ಜೂನ್​.15 ರಂದು ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ಭಾರತದಾದ್ಯಂತ ಚೀನಾ ವಿರೋಧಿ ಅಲೆ ಎದ್ದಿತ್ತು. ತತಕ್ಷಣದ ಕ್ರಮವಾಗಿ ಭಾರತ ಚೀನಾದ 267ಕ್ಕೂ ಅಧಿಕ ಮೊಬೈಲ್ ಅಪ್ಲಿಕೇಶನ್​ ಅನ್ನು ಬ್ಯಾನ್ ಮಾಡಿತ್ತು. ಆದರೆ, ಇದೀಗ ಮತ್ತೆ ಚೀನಾ ಭೂತಾನ್​ನ ದೋಕ್ಲಾಮ್​ನಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಮುಂದಾಗಿದ್ದು ಭಾರತಕ್ಕೆ ಮತ್ತೊಂದು ರೀತಿಯಲ್ಲಿ ಸಮಸ್ಯೆ ನೀಡಲು ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಚೀನಾ ಒಡೆತನದ ಸುಮಾರು 43 ಅಪ್ಲಿಕೇಶನ್‌ಗಳನ್ನು ನಿನ್ನೆ ಮತ್ತೆ ನಿಷೇಧಿಸಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, "ಭಾರತದ ಈ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ (WTO) ನಿಯಮಗಳನ್ನು ಉಲ್ಲಂಘಿಸಿದೆ" ಎಂದು ಆರೋಪಿಸಿದೆ.

ಭಾರತ-ಚೀನಾ ಗಡಿ ತಂಟೆಯಿಂದಾಗಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಭಾರತ ಸರ್ಕಾರ ಇದು ನಾಲ್ಕನೇ ಬಾರಿ ಚೀನಾ ಮೊಬೈಲ್​ ಅಪ್ಲಿಕೇಶನ್​ಗಳನ್ನು ನಿಷೇಧಿಸಲು ಮುಂದಾಗಿದೆ ಎಂಬುದು ಉಲ್ಲೇಖಾರ್ಹ

ಆದರೆ, ಚೀನಾ ಸರ್ಕಾರ ಭಾರತದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಜಿ ರೊಂಗ್, "ಚೀನಾ ಒಡೆತನದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಸಲುವಾಗಿ ಭಾರತವು ರಾಷ್ಟ್ರೀಯ ಭದ್ರತೆಯ ನೆಪವೊಡ್ಡುವುದನ್ನು ನಾವು ಖಂಡಿಸುತ್ತೇವೆ. ಇದು ಸರಿಯಾದ ಕ್ರಮವಲ್ಲ ಮತ್ತು ವಿಶ್ವ ವ್ಯಾಪಾರ ಸಂಸ್ಥೆಯ (WTO) ಸ್ಪಷ್ಟ ನಿಯಮಗಳ ಉಲ್ಲಂಘನೆ. ಹೀಗಾಗಿ ಭಾರತ ಸರ್ಕಾರ ಶೀಘ್ರದಲ್ಲೇ ಈ ಆದೇಶವನ್ನು ಹಿಂಪಡೆಯಬೇಕು" ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ,  "ಚೀನಾ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆ ಭಾಗಿದಾರರಿಗೆ ನ್ಯಾಯಯುತ, ನಿಸ್ಪಕ್ಷಪಾತ ಮತ್ತು ತಾರತಮ್ಯರಹಿತವಾದ ವ್ಯಾಪಾರ ವಾತಾವರಣವನ್ನು ಭಾರತವು ಒದಗಿಸಿಕೊಡುತ್ತದೆ ಮತ್ತು WTO ನಿಯಮಗಳನ್ನು ಉಲ್ಲಂಘಿಸುವ ಕ್ರಮಗಳನ್ನು ಸರಿಪಡಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ : ಡಿಬಿಎಸ್​ ಬ್ಯಾಂಕ್​ನೊಂದಿಗೆ ಲಕ್ಷ್ಮಿ ವಿಲಾಸ್​ ಬ್ಯಾಂಕ್ ವಿಲೀನ; ಅನುಮೋದನೆ ನೀಡಿದ ಕೇಂದ್ರ ಸಂಪುಟ

ಎರಡೂ ಕಡೆಯವರು ಪರಸ್ಪರ ಲಾಭಕ್ಕಾಗಿ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಸರಿಯಾದ ಹಾದಿಗೆ ತರಬೇಕು. ಸಂವಾದ ಮತ್ತು ಸಮಾಲೋಚನೆಯ ಆಧಾರದ ಮೇಲೆ ಫಲಿತಾಂಶಗಳನ್ನು ಪಡೆಯಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಆರಂಭದಲ್ಲಿ 59 ಚೀನಾ ಮೂಲದ ಅಪ್ಲಿಕೇಶನ್‌ಗಳನ್ನು ಜೂನ್ 29 ರಂದು ನಿಷೇಧಿಸಿತ್ತು. ನಂತರ ಜುಲೈ 28 ರಂದು 47, ​​ಸೆಪ್ಟೆಂಬರ್ 2 ರಂದು 118 ಮತ್ತು ನವೆಂಬರ್ 24 ರಂದು 43 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಮಂಗಳವಾರ ನಿಷೇಧಿಸಲಾದ ಅಪ್ಲಿಕೇಶನ್‌ಗಳಲ್ಲಿ ಚೀನಾದ ಅತಿದೊಡ್ಡ ಇ-ಕಾಮರ್ಸ್ ಅಲಿಬಾಬಾದ ಅಲಿ ಎಕ್ಸ್‌ಪ್ರೆಸ್ ಅಪ್ಲಿಕೇಶನ್ ಕೂಡಾ ಒಂದು.
Published by: MAshok Kumar
First published: November 25, 2020, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories