ದಂಪತಿಗಳು ಮೂರು ಮಕ್ಕಳನ್ನು ಪಡೆಯಬಹುದು ಎಂಬ ಕಾನೂನನ್ನು ಔಪಚಾರಿಕವಾಗಿ ಅಂಗೀಕರಿಸಿದ ಚೀನಾ

ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡುವುದಾಗಿ ಚೀನಾ ಕಳೆದ ಮೇ ತಿಂಗಳಲ್ಲೇ ಘೋಷಿಸಿತ್ತು. ಆ ನಿರ್ಧಾರವನ್ನು ಈಗ ಔಪಚಾರಿಕವಾಗಿ ಕಾನೂನಿನಲ್ಲಿ ಅಂಗೀಕರಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೀಜಿಂಗ್ (ಆಗಸ್ಟ್​ 20); ಹೆಚ್ಚುತ್ತಿರುವ ಜನ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ನೆರೆಯ ಚೀನಾ ಒಂದಕ್ಕಿಂತ ಹೆಚ್ಚುಮಕ್ಕಳನ್ನು ಪೋಷಕರು ಹೊಂದುವಂತಿಲ್ಲ ಎಂಬ ಕಾನೂನನ್ನು ದಶಕಗಳ ಹಿಂದೆಯೇ ಜಾರಿಗೊಳಿಸಿತ್ತು. ಆದರೆ, ಈ ಕಾನೂನಿನ ಪರಿಣಾಮದಿಂದಾಗಿ ಇದೀಗ ಚೀನಾದಲ್ಲಿ ಯುವಶಕ್ತಿಯ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ಪೋಷಕರು ಮೂರು ಮಕ್ಕಳನ್ನು ಪಡೆಯಲು ಅನುಮತಿ ನೀಡುವ ಬಗ್ಗೆ ಚೀನಾ ಸರ್ಕಾರ ಚಿಂತನೆ ನಡೆಸುತ್ತಿತ್ತು. ಇದೀಗ ಜನನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ದಂಪತಿಗಳು ಮೂರು ಮಕ್ಕಳನ್ನು ಪಡೆಯಲು ಅವಕಾಶ ನೀಡುವ ಕಾನೂನನ್ನು ಚೀನಾ ಸರ್ಕಾರ ಇಂದು  ಔಪಚಾರಿಕವಾಗಿ ಅಂಗೀಕರಿಸಿದೆ ಎಂದು ವರದಿಯಾಗಿದೆ. ದೇಶದ ಉನ್ನತ ಕಾನೂನು ರೂಪಿಸುವ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ) ಸಭೆಯಲ್ಲಿ ಶುಕ್ರವಾರ ಹಲವು ಕಾನೂನು-ಕಾಯ್ದೆಗಳ ಜೊತೆಗೆ ಈ ನೂತನ ಕಾಯ್ದೆಯನ್ನು ಅಂಗೀಕರಿಸಲಾಗಿದೆ.

  ಏನಿದು ಮೂರು ಮಕ್ಕಳ ನೀತಿ?;

  ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡುವುದಾಗಿ ಚೀನಾ ಕಳೆದ ಮೇ ತಿಂಗಳಲ್ಲೇ ಘೋಷಿಸಿತ್ತು. ಆ ನಿರ್ಧಾರವನ್ನು ಈಗ ಔಪಚಾರಿಕವಾಗಿ ಕಾನೂನಿನಲ್ಲಿ ಅಂಗೀಕರಿಸಲಾಗಿದೆ. ಜೊತೆಗೆ ಜನನ ಪ್ರಮಾಣವನ್ನು ಹೆಚ್ಚಿಸುವ ಮತ್ತು ಮಗುವನ್ನು ಬೆಳೆಸುವ ದಂಪತಿಗಳ "ಹೊರೆ ತಗ್ಗಿಸುವ" ಗುರಿಯನ್ನು ಹೊಂದಿರುವ ಹಲವಾರು ನಿರ್ಣಯಗಳನ್ನು ಇಂದಿನ ಮಹತ್ವದ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಇವುಗಳಲ್ಲಿ "ಸಾಮಾಜಿಕ ನಿರ್ವಹಣಾ ಶುಲ್ಕ" ವನ್ನು ರದ್ದುಗೊಳಿಸುವುದು - ಮಿತಿಯನ್ನು ಮೀರಿ ಮಕ್ಕಳನ್ನು ಹೊಂದಲು ದಂಪತಿಗಳು ಪಾವತಿಸುವ ಹಣಕಾಸಿನ ದಂಡ, ಸ್ಥಳೀಯ ಸರ್ಕಾರಗಳನ್ನು ಪೋಷಕರ ರಜೆ ನೀಡಲು ಪ್ರೋತ್ಸಾಹಿಸುವುದು, ಮಹಿಳಾ ಉದ್ಯೋಗ ಹಕ್ಕುಗಳನ್ನು ಹೆಚ್ಚಿಸುವುದು ಮತ್ತು ಶಿಶುಪಾಲನಾ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Opposition Party Meet: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಅಜೆಂಡಾ ಸೆಟ್ ಮಾಡಿದ ಸೋನಿಯಾ ಗಾಂಧಿ

  ಇತ್ತೀಚಿನ ಜನಗಣತಿಯ ಮಾಹಿತಿಯ ಪ್ರಕಾರ ನೆರೆಯ ಚೀನಾದಲ್ಲಿ ಮಕ್ಕಳ ಜನನ ದರದಲ್ಲಿ ತೀವ್ರ ಕುಸಿತವಾಗಿತ್ತು. ಪರಿಣಾಮ 2016 ರಲ್ಲಿ ಚೀನಾ ಸರ್ಕಾರ ತನ್ನ ದಶಕಗಳ ಹಳೆಯ ಒಂದು-ಮಗುವಿನ ನೀತಿಯನ್ನು ರದ್ದು ಮಾಡಿ ಎರಡು-ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಆದರೂ, ಮಕ್ಕಳ ಜನನ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಹೀಗಾಗಿ ಇದೀಗ ಆ ಮಿತಿಯನ್ನು ಮೂರಕ್ಕೆ ಏರಿಸಲಾಗಿದೆ. ನಗರಗಳಲ್ಲಿ ಮಕ್ಕಳನ್ನು ಬೆಳೆಸುವ ವೆಚ್ಚವು ಅಧಿಕವಾಗಿರುವ ಕಾರಣ ಅನೇಕ ಚೀನೀ ದಂಪತಿಗಳು ಹೆಚ್ಚು ಮಕ್ಕಳನ್ನು ಪಡೆಯಲು ಒಲವು ಹೊಂದಿಲ್ಲ ಎನ್ನಲಾಗಿತ್ತು.

  ಇದನ್ನೂ ಓದಿ: ತಾಲಿಬಾನ್-ಭಯೋತ್ಪಾದಕಿಯನ್ನು ಸಂಸದೆಯನ್ನಾಗಿಸಿದ ಬಿಜೆಪಿ ಈ ಎರೆಡೂ ಮೂಲಭೂತವಾದಿಗಳದ್ದು ಒಂದೇ ರಕ್ತ; ಕಾಂಗ್ರೆಸ್​

  ಹೀಗಾಗಿ ಡ್ರ್ಯಾಗನ್ ಸರ್ಕಾರ ಇಂದು ದಂಪತಿಗಳು ಮೂರು ಮಕ್ಕಳನ್ನು ಪಡೆಯುವ ಬಗ್ಗೆ ಕಾನೂನು ರೂಪಿಸುವುದರ ಜೊತೆಗೆ ಅವರ ಆರ್ಥಿಕತೆಯನ್ನೂ ಸಹ ಸುಧಾರಿಸುವ ಬಗ್ಗೆ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಮತ್ತೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸ ಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: