HOME » NEWS » National-international » CHINA IS CALLING FOR THE WUHAN INSTITUTE OF VIROLOGY TO WIN A NOBEL PRIZE STG SESR

ವುಹಾನ್‌ ವೈರಸ್‌ ಲ್ಯಾಬ್‌ಗೆ ನೊಬೆಲ್‌ ಪ್ರಶಸ್ತಿ ಕೊಡ್ಬೇಕಂತೆ: ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವ ಚೀನಾ..!

ವುಹಾನ್‌ನಲ್ಲಿರುವ ತಂಡವನ್ನು ಟೀಕಿಸುವ ಬದಲು ಕೋವಿಡ್ - 19 ಕುರಿತ ಸಂಶೋಧನೆಗಾಗಿ ಮೆಡಿಸಿನ್‌ನಲ್ಲಿ ನೊಬೆಲ್‌ ಪ್ರಶಸ್ತಿ ನೀಡಬೇಕು

news18-kannada
Updated:June 24, 2021, 8:08 PM IST
ವುಹಾನ್‌ ವೈರಸ್‌ ಲ್ಯಾಬ್‌ಗೆ ನೊಬೆಲ್‌ ಪ್ರಶಸ್ತಿ ಕೊಡ್ಬೇಕಂತೆ: ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವ ಚೀನಾ..!
ಸಾಂದರ್ಭಿಕ ಚಿತ್ರ.
  • Share this:

ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹರಡಿದ್ದು, ಮಿಲಿಯನ್‌ಗಟ್ಟಲೆ ಜನರನ್ನು ಬಲಿ ಪಡೆದಿದೆ. ಈ ಸಾಂಕ್ರಾಮಿಕ ಸೋಂಕು ಪತ್ತೆಯಾಗಿ ಒಂದೂವರೆ ವರ್ಷವಾಗಿದ್ದರೂ, ಸೋಂಕಿನ ಮೂಲ ಮಾತ್ರ ಪತ್ತೆಯಾಗುತ್ತಿಲ್ಲ. ಚೀನಾದಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದರೂ, ಜೀವಂತ ಕೋವಿಡ್ - 19 ವೈರಸ್‌ ಮೊದಲು ಬಂದಿದ್ದು ಎಲ್ಲಿಂದ ಅನ್ನೋದು ಮಾತ್ರ ಗೊತ್ತಾಗಿಲ್ಲ. ಆದರೆ, ಈ ವೈರಸ್‌ ಚೀನಾದ ವುಹಾನ್‌ನ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆ ಎಂಬ ಆರೋಪ, ಚರ್ಚೆ ಆಗಾಗ್ಗೆ ಕೇಳಿಬರುತ್ತದೆ. ಇನ್ನೊಂದೆಡೆ, ಚೀನಾದ ಕ್ಸಿ ಜಿನ್‌ಪಿಂಗ್ ಸರ್ಕಾರ ಮಾತ್ರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕೊರೊನಾ ವೈರಸ್‌ ಸೋಂಕು ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆಯಾ ಎಂಬ ಬಗ್ಗೆ ಪತ್ತೆ ಹಚ್ಚಲು ಅಮೆರಿಕ ತನಿಖೆ ನಡೆಸುತ್ತಿದರೆ, ವುಹಾನ್‌ ಲ್ಯಾಬ್‌ ನೊಬೆಲ್‌ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಚೀನಾ ಪ್ರತಿಪಾದಿಸಿದೆ.


ಕಳೆದ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ಉನ್ನತ ವಕ್ತಾರ ಝಾವೋ ಲಿಜಿಯಾನ್‌, ಜನರು ವುಹಾನ್‌ನಲ್ಲಿ ಕೊರೊನಾ ವೈರಸ್‌ನ ಮೊದಲ ಪ್ರಕರಣ ಕಂಡುಬಂದ ಕಾರಣ ವೈರಸ್ ಪ್ರಯೋಗಾಲಯದಲ್ಲಿ ತಯಾರಿಸಲ್ಪಟ್ಟಿದೆ. ಇಲ್ಲವಾದರೆ, ಇಲ್ಲಿಂದಲೇ ಸೋಂಕು ತಪ್ಪಿ ಹೊರ ಬಂದಿದೆ ಎಂಬ ಸಿದ್ಧಾಂತವನ್ನು ಕೆಲವರು ಭಾವಿಸಿದ್ದಾರೆಂದು ಜನರನ್ನೇ ಟೀಕಿಸಿದರು.ಕೋವಿಡ್-19 ನ ಜೀನೋಮ್ ಅನುಕ್ರಮವನ್ನು ಮೊದಲು ಚೀನಾದ ವಿಜ್ಞಾನಿಗಳು ಗುರುತಿಸಿದ್ದಾರೆ, ಆದರೆ ಇದರರ್ಥ ವುಹಾನ್ ಕೊರೊನಾ ವೈರಸ್‌ನ ಮೂಲ ಎಂದು ಅರ್ಥವಲ್ಲ, ಅಥವಾ ಕೊರೊನಾ ವೈರಸ್‌ ಅನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆಂದು ಊಹಿಸಲಾಗುವುದಿಲ್ಲ ಎಂದು ಝಾವೋ ಲಿಜಿಯಾನ್‌ ಹೇಳಿದರು.


ಇದನ್ನು ಓದಿ: ಇಂದು ಗೋಚರಿಸಲಿದೆ ಗುಲಾಬಿ ಪೂರ್ಣ ಚಂದ್ರ; ಮಿಸ್​ ಮಾಡ್ದೆ ಕಣ್ತುಂಬಿಕೊಳ್ಳಿ

ನಂತರ ಅವರು, ವುಹಾನ್‌ನಲ್ಲಿರುವ ತಂಡವನ್ನು ಟೀಕಿಸುವ ಬದಲು ಕೋವಿಡ್ - 19 ಕುರಿತ ಸಂಶೋಧನೆಗಾಗಿ ಮೆಡಿಸಿನ್‌ನಲ್ಲಿ ನೊಬೆಲ್‌ ಪ್ರಶಸ್ತಿ ನೀಡಬೇಕು ಎಂದು ಹೇಳಿದರು. ಕೋವಿಡ್ - 19 ನಲ್ಲಿನ ಕೆಲಸದಿಂದಾಗಿ ಈ ವರ್ಷ ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನೆ ಪ್ರಶಸ್ತಿಯನ್ನು ಗೆಲ್ಲಲು ಲ್ಯಾಬ್ ಅನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಚೀನಾದ ಸರ್ಕಾರಿ-ಗ್ಲೋಬಲ್ ಟೈಮ್ಸ್ ಪತ್ರಿಕೆ ಭಾನುವಾರ ವರದಿ ಮಾಡಿದೆ.

ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ಒಮ್ಮೆ ಅನೇಕ ತಜ್ಞರು ತಳ್ಳಿಹಾಕಿದರು, ಆದರೆ ಇತ್ತೀಚೆಗೆ ಮತ್ತೆ ಈ ಬಗ್ಗೆ ಅನುಮಾನಗಳು ಮೂಡಿವೆ. ತಜ್ಞರು ಮೊದಲು ಕೋವಿಡ್ - 19 ಪ್ರಕರಣಗಳನ್ನು ಪತ್ತೆಹಚ್ಚುವ ಒಂದು ತಿಂಗಳಿಗಿಂತ ಹೆಚ್ಚು ಕಾಲ ಮೊದಲೇ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಮೂವರು ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂಬ ಯುಎಸ್ ಗುಪ್ತಚರ ವರದಿಯನ್ನು ಕಳೆದ ತಿಂಗಳು ವಾಲ್ ಸ್ಟ್ರೀಟ್ ಜರ್ನಲ್ ಬಹಿರಂಗಪಡಿಸಿತು. ಜರ್ನಲ್ ವರದಿಯ ಕೆಲವು ದಿನಗಳ ನಂತರ, ಅಧ್ಯಕ್ಷ ಜೋ ಬಿಡನ್ ಅವರು ಗುಪ್ತಚರ ಸಮುದಾಯದಿಂದ ವೈರಸ್‌ನ ಉಗಮದ ಬಗ್ಗೆ ಹೊಸ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸತ್ಯಾಸತ್ಯತೆ ಬಹಿರಂಗಪಡಿಸಲು 90 ದಿನಗಳ ಗಡುವು ನೀಡಿದರು.Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: June 24, 2021, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories