ಏಷ್ಯಾ ಖಂಡದಲ್ಲಿ ಭಾರತ ಸೇರಿ ಎರಡೇ ದೇಶ ಮಾತ್ರ ಸೇಫಾ? ಚೀನಾಗೆ ಕಾದಿದೆಯಂತೆ ಗಂಡಾಂತರ


Updated:June 21, 2018, 5:59 PM IST
ಏಷ್ಯಾ ಖಂಡದಲ್ಲಿ ಭಾರತ ಸೇರಿ ಎರಡೇ ದೇಶ ಮಾತ್ರ ಸೇಫಾ? ಚೀನಾಗೆ ಕಾದಿದೆಯಂತೆ ಗಂಡಾಂತರ

Updated: June 21, 2018, 5:59 PM IST
- ನ್ಯೂಸ್18 ಕನ್ನಡ

ನವದೆಹಲಿ(ಜೂನ್ 21): ಇನ್ನು ಮೂರು ವರ್ಷಗಳಲ್ಲಿ ವಿಶ್ವಾದ್ಯಂತ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಕುಸಿತಕ್ಕೊಳಗಾಗುತ್ತವೆ ಎಂಬ ಆತಂಕಕಾರಿ ಸುದ್ದಿಯೊಂದು ಬಂದಿದೆ. ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಆರ್ಥಿಕ ಕುಸಿತದಿಂದ ಬಚಾವಾಗಲಿವೆ. ಅದರಲ್ಲಿ ಭಾರತವೂ ಒಂದಾಗಿದೆ. ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಅತ್ಯಂತ ಹೆಚ್ಚು ಹಾನಿಯಾಗಲಿದೆ ಎಂದು ನೋಮುರಾ ಸಿಂಗಾಪುರ್ ಎಂಬ ಹಣಕಾಸು ಸೇವಾ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಹಾನಿಯಾಗಲಿದೆ. ಆದರೆ, ಹಾಂಕಾಂಗ್​ನಂಥ ಮುಂದುವರಿದ ದೇಶಗಳಿಗೂ ಹಿನ್ನಡೆಯಾಗಲಿದೆ ಎಂದು ಈ ಅಧ್ಯಯನದಲ್ಲಿ ಹೇಳಾಗಿದೆ. ಇದರ ಪ್ರಕಾರ, ಬಹುತೇಕ ಏಷ್ಯನ್ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಭಾರತ ಮತ್ತು ದಕ್ಷಿಣ ಕೊರಿಯಾ ಮಾತ್ರ ಬಚಾವ್ ಆಗಲಿವೆ. ಚೀನಾ ಮತ್ತು ಹಾಂಕಾಂಗ್ ದೇಶಗಳಿಗೆ ಅತೀ ಹೆಚ್ಚು ಹೊಡೆತ ಬೀಳುತ್ತದೆಯಂತೆ. ಭಾರತ ಸೇರಿದಂತೆ ವಿಶ್ವದ 14 ರಾಷ್ಟ್ರಗಳು ಆರ್ಥಿಕ ಹಿನ್ನಡೆಯನ್ನು ಮೀರಿ ಬೆಳೆಯಲಿವೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ಆದರೆ, ಆರ್ಥಿಕ ಸಂಕಷ್ಟ ಎಷ್ಟು ತೀವ್ರ ಮಟ್ಟದಲ್ಲಿ ಬರುತ್ತದೆ ಎಂಬುದನ್ನು ಈ ಅಧ್ಯಯನ ತಿಳಿಸಿಲ್ಲ. ತೊಂಬತ್ತರ ದಶಕದ ಅಂತ್ಯದಲ್ಲಿ ಪ್ರಾರಂಭಗೊಂಡ ವಿಶ್ವ ಆರ್ಥಿಕ ಕುಸಿತದ ರೀತಿಯಲ್ಲೇ ಮತ್ತೊಂದು ಜಾಗತಿಕ ಆರ್ಥಿಕ ಹಿನ್ನಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಹಣಕಾಸು ಬಿಕ್ಕಟ್ಟು ತಲೆದೋರುತ್ತಿದೆ. ಚೀನಾ ದೇಶದ ಆರ್ಥಿಕ ಪ್ರಗತಿ ದರವೂ ಕುಂಠಿತಗೊಳ್ಳುತ್ತಿದೆ. ಇನ್ನೆರಡು ವರ್ಷದಲ್ಲಿ ಪ್ರಗತಿಯ ವೇಗದಲ್ಲಿ ಚೀನಾವನ್ನು ಭಾರತ ಹಿಂದಿಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ