China Taiwan Crisis: ತೈವಾನ್‌ ಮೇಲೆ ಮುಗಿಬಿದ್ದ ಚೀನಾ, 27 ವಿಮಾನಗಳಿಂದ ಮಿಲಿಟರಿ ಕಾರ್ಯಾಚರಣೆ!

ನ್ಯಾನ್ಸಿ ಪೆಲೋನಿ ಅಮೆರಿಕಕ್ಕೆ ಹಿಂತಿರುಗುತ್ತಿದ್ದಂತೆ, ತೈವಾನ್‌ ಸುತ್ತಮುತ್ತ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ತೈವಾನ್ ರಾಜಧಾನಿ ತೇಪೆ (Taipei) ಸೇರಿದಂತೆ ಹಲವು ನಗರಗಳ ವಾಯು ರಕ್ಷಣಾ ವಲಯದಲ್ಲಿ (air defense zone) ಚೀನಾ ಯುದ್ಧ ವಿಮಾನಗಳು ಹಾರಾಡಿವೆ.

ಚೀನಾ-ತೈವಾನ್ ಸಂಘರ್ಷ

ಚೀನಾ-ತೈವಾನ್ ಸಂಘರ್ಷ

  • Share this:
ತೇಪೆ, ತೈವಾನ್: ಚೀನಾ (China) ಹಾಗೂ ತೈವಾನ್ (Taiwan) ನಡುವಿನ ಸಂಘರ್ಷ (conflict) ಮುಂದುವರೆದಿದೆ. ಅಮೆರಿಕಾ ಸಂಸತ್ ಸ್ಪೀಕರ್ (US House Speaker) ನ್ಯಾನ್ಸಿ ಪೆಲೋಸಿ (Nancy Pelosi) ಅವರ ತೈವಾನ್ ಭೇಟಿಯನ್ನು (Taiwan Visit) ಚೀನಾ ವಿರೋಧಿಸಿತ್ತು. ಆದರೂ ಅದನ್ನು ಲೆಕ್ಕಿಸದ ಅಮೆರಿಕಾ, ತನ್ನ ಸಂಸತ್ ಸ್ಪೀಕರ್‌ರನ್ನು ತೈವಾನ್‌ಗೆ ಕಳಿಸಿತ್ತು. ತೈವಾನ್ ಭೇಟಿ ಬಳಿಕ ಸ್ಪೀಕರ್ ನ್ಯಾನ್ಸಿ ಪೆಲೋನಿ ಅಮೆರಿಕಕ್ಕೆ ಹಿಂತಿರುಗಿದ್ದಾರೆ. ಇದರ ಬೆನ್ನಲ್ಲೇ ತೈವಾನ್ ಮೇಲೆ ಚೀನಾ ಮುಗಿಬಿದ್ದಿದೆ. ನ್ಯಾನ್ಸಿ ಪೆಲೋನಿ ಅಮೆರಿಕಕ್ಕೆ ಹಿಂತಿರುಗುತ್ತಿದ್ದಂತೆ, ತೈವಾನ್‌ ಸುತ್ತಮುತ್ತ ಚೀನಾ ಯುದ್ಧ ವಿಮಾನಗಳು (warplanes) ಹಾರಾಟ ನಡೆಸಿವೆ. ತೈವಾನ್ ರಾಜಧಾನಿ ತೇಪೆ (Taipei) ಸೇರಿದಂತೆ ಹಲವು ನಗರಗಳ (Cities) ವಾಯು ರಕ್ಷಣಾ ವಲಯದಲ್ಲಿ (air defense zone) ಚೀನಾ ಯುದ್ಧ ವಿಮಾನಗಳು ಹಾರಾಡಿವೆ. ಸದ್ಯ ತೈವಾನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇವೆಲ್ಲವನ್ನೂ ಅಮೆರಿಕಾ (America) ಗಮನಿಸುತ್ತಿದ್ದು, ಚೀನಾ ನಡೆ ವಿರುದ್ಧ ಗರಂ ಆಗಿದೆ.ಚೀನಾದ 27 ಯುದ್ಧ ವಿಮಾನಗಳ ಹಾರಾಟ

ಚೀನಾದ 27 ಯುದ್ಧ ವಿಮಾನಗಳು ತೈವಾನ್‌ ವಾಯು ರಕ್ಷಣಾ ವಲಯದಲ್ಲಿ ಹಾರಾಟ ನಡೆಸಿವೆ. ತೈವಾನ್‌ ದ್ವೀಪ ರಾಷ್ಟ್ರವನ್ನು ಚೀನಾ ತನ್ನ ಪ್ರದೇಶವನ್ನು ಪರಿಗಣಿಸಿದೆ. 'ಚೀನಾದ 27 ಯುದ್ಧ ವಿಮಾನಗಳು ಆಗಸ್ಟ್‌ 3ರಂದು ರಿಪಬ್ಲಿಕ್‌ ಆಫ್‌ ಚೀನಾದ ಸುತ್ತಲಿನ ವಲಯವನ್ನು ಪ್ರವೇಶಿಸಿದೆ' ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಚೀನಾ ಯುದ್ಧವಿಮಾನಗಳ ಹಾರಾಟ


ದಟ್ಟ ಹೊಗೆ ಮತ್ತು ಭಾರೀ ಶಬ್ದ

ಗಡಿ ದ್ವೀಪವಾದ ಪಿಂಗ್ಟಾನ್‌ನಲ್ಲಿರುವ AFP ಪತ್ರಕರ್ತರು ಹಲವಾರು ಸಣ್ಣ ಸ್ಪೋಟಕಗಳು ಆಕಾಶಕ್ಕೆ ಹಾರುತ್ತಿರುವುದನ್ನು ನೋಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ದಟ್ಟ ಹೊಗೆ ಮತ್ತು ಭಾರೀ ಶಬ್ದ ಕೇಳಿಸಿದ್ದಾಗಿ ಪತ್ರಕರ್ತರು ಹೇಳಿದ್ದಾರೆ.

ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ಜಲಸಂಧಿ ಸಮೀಪ ಚೀನಾ ವಿಮಾನ ಸುತ್ತಾಟ

ತೈವಾನ್‌ ವಾಯು ಪ್ರದೇಶಕ್ಕೆ ಅಮೆರಿಕದ ವಿಮಾನವು ಪ್ರವೇಶಿಸುವುದಕ್ಕೂ ಮುನ್ನ, ಚೀನಾದ ಯುದ್ಧ ವಿಮಾನಗಳು ತೈವಾನ್‌ ಜಲಸಂಧಿಯ ಸಮೀಪ ಭೋರ್ಗರೆದಿದ್ದವು. ಅನಂತರ ಜಪಾನ್‌ನ ವಾಯುನೆಲೆಯಿಂದ ಅಮೆರಿಕ ವಾಯುಪಡೆಯ 13 ವಿಮಾನಗಳು ರಕ್ಷಣಾ ಹಾರಾಟ ಆರಂಭಿಸಿದ್ದವು. ತೈವಾನ್‌ನ ಯುದ್ಧ ವಿಮಾನಗಳು ನ್ಯಾನ್ಸಿ ಅವರು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಬೆಂಗಾವಲಾಗಿ ಹಾರಾಟ ನಡೆಸಿದ್ದವು.

ಯುದ್ಧ ವಿಮಾನ ಹಾರಾಟದ ಗ್ರಾಫಿಕ್ಸ್ ಚಿತ್ರ


ತೈವಾನ್ ಸುತ್ತಮುತ್ತ ಚೀನಾ ಸಮರಾಭ್ಯಾಸ

ಇನ್ನು ತೈವಾನ್‌ನ ಸುತ್ತಮುತ್ತಲಿನ ಬಹು ವಲಯಗಳಲ್ಲಿ ಚೀನಾ ಸೈನಿಕರು ಸಮರಾಭ್ಯಾಸ ನಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಸಮುದ್ರ ತೀರದಿಂದ ಕೇವಲ 20 ಕಿಲೋಮೀಟರ್ (12 ಮೈಲುಗಳು) ಒಳಗೆ ಕೆಲವು ಹಂತಗಳಲ್ಲಿ ಸಮರಾಭ್ಯಾಸ ನಡೆಯುತ್ತಿದೆ.

ಚೀನಾಗೆ ಪೈಪೋಟಿ ನೀಡಲು ತೈವಾನ್ ಸಜ್ಜು

ಇತ್ತ ಚೀನಾಗೆ ಪೈಪೋಟಿ ನೀಡಲು ತೈವಾನ್ ಸಜ್ಜಾಗಿದೆ. ಚೀನಾ ತನ್ನ ಯುದ್ಧ ನೌಕೆಗಳು, ಯುದ್ಧ ವಿಮಾನಗಳನ್ನು ಸನ್ನದ್ಧಗೊಳಿಸುವ ಮೂಲಕ ಬೆದರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಪ್ರತಿಯಾಗಿ ತೈವಾನ್ ಸರ್ಕಾರ ಕೂಡ ಸೇನೆಯ ಜಮಾವಣೆ ಹೆಚ್ಚಿಸುವ ಘೋಷಣೆ ಮಾಡಿದೆ.

ಇದನ್ನೂ ಓದಿ: China Taiwan Crisis: ಯಾರು ಈ ನ್ಯಾನ್ಸಿ ಪೆಲೋಸಿ? ಈಕೆಯನ್ನು ಕಂಡ್ರೆ ಚೀನಾಗೇಕೆ ಅಷ್ಟೊಂದು ಉರಿ?

ತೈವಾನ್ ಮೇಲೆ ಚೀನಾ ವ್ಯಾಪಾರ ನಿರ್ಬಂಧ

ಇನ್ನು ತೈವಾನ್ ಮೇಲೆ ಚೀನಾ ವ್ಯಾಪಾರ ನಿರ್ಬಂಧ ಹೇರಿದೆ. ತೈವಾನ್‌ನಿಂದ ಹಣ್ಣು ಮತ್ತು ಮೀನುಗಳ ಆಮದಿನ ಮೇಲೆ ಬುಧವಾರವೇ ನಿರ್ಬಂಧ ಹೇರಿದೆ.ತೈವಾನ್‌ಗೆ ನ್ಯಾನ್ಸಿ  ಪೆಲೋಸಿ ಪ್ರವಾಸವು ರಾಜತಾಂತ್ರಿಕ ಬಿರುಗಾಳಿಯನ್ನು ಹೊತ್ತಿಸಿದ್ದು, ತೈವಾನ್‌ನ ಹಲವು ಆಹಾರೋತ್ಪನ್ನ ಕಂಪನಿಗಳಿಂದ ಮಂಗಳವಾರವೇ ಚೀನಾ ಆಮದನ್ನು ನಿಲ್ಲಿಸಿರುವುದನ್ನು ತೈವಾನ್‌ನ ಕೃಷಿ ಮಂಡಳಿ ಕೂಡ ಖಚಿತಪಡಿಸಿದೆ.
Published by:Annappa Achari
First published: