HOME » NEWS » National-international » CHINA FURIOUS ON AMERICA PASSING UIGHUR SANCTION BILL SNVS

ಚೀನೀ ಉಯ್ಗರ್ ಮುಸ್ಲಿಮರ ರಕ್ಷಣೆಗೆ ಅಮೆರಿಕದಲ್ಲಿ ಹೊಸ ಕಾಯ್ದೆ; ಚೀನಾ ಕೆಂಗಣ್ಣು

ಚೀನಾದಲ್ಲಿ ಉಯ್ಗುರ್ ಮುಸ್ಲಿಮರ ಧ್ವನಿ ಅಡಗಿಸಲು ಅಲ್ಲಿ ಸರ್ಕಾರ ಮರುಶಿಕ್ಷಣದ ಹೆಸರಲ್ಲಿ ಡಿಟೆನ್ಷನ್ ಕ್ಯಾಂಪ್​ಗಳನ್ನ ನಿರ್ಮಿಸುತ್ತಿದೆ. ಇದಕ್ಕೆ ಟ್ರಂಪ್ ಸಹಮತಿ ವ್ಯಕ್ತಪಡಿಸಿದ್ದರೆಂಬ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ಉಯ್ಗುರ್ ಕಾಯ್ದೆ ರೂಪುಗೊಂಡಿದೆ.

news18-kannada
Updated:June 18, 2020, 4:15 PM IST
ಚೀನೀ ಉಯ್ಗರ್ ಮುಸ್ಲಿಮರ ರಕ್ಷಣೆಗೆ ಅಮೆರಿಕದಲ್ಲಿ ಹೊಸ ಕಾಯ್ದೆ; ಚೀನಾ ಕೆಂಗಣ್ಣು
ಇಂಡೋನೇಷ್ಯಾದಲ್ಲಿ ಊಯ್ಗೂರ್ ಮುಸ್ಲಿಮರ ಪರ ಧ್ವನಿ ಎತ್ತುತ್ತಿರುವ ಜನರು
  • Share this:
ವಾಷಿಂಗ್ಟನ್(ಜೂನ್ 18): ಚೀನಾದಲ್ಲಿ ಉಯ್ಘರ್ ಮುಸ್ಲಿಮ್ ಜನಾಂಗೀಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ವಿಚಾರವನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ಉಯ್ಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಿರುವ ಚೀನೀ ಅಧಿಕಾರಿಗಳನ್ನ ನಿಷೇಧಿಸಲು ಅಮೆರಿಕ ಮುಂದಾಗಿದೆ. ಇವತ್ತು ಹೊಸ ಉಯ್ಗುರ್ ಮಾನವ ಹಕ್ಕು ನೀತಿ ಕಾಯ್ದೆಗೆ ಅಮೆರಿಕದ ಸಂಸತ್ ಅನುಮೋದನೆ ನೀಡಿದೆ. ಈ ಬೆಳವಣಿಗೆಯಿಂದ ಚೀನಾ ಆಕ್ರೋಶಗೊಂಡಿದೆ.

ಚೀನಾದ ಪಶ್ಚಿಮ ಭಾಗದಲ್ಲಿರುವ ಉಯ್ಘುರ್ ಮುಸ್ಲಿಮ್ ಜನಾಂಗದವರಲ್ಲಿ ಅನೇಕ ಮಂದಿಯನ್ನ ಚೀನಾ ಡಿಟೆನ್ಷನ್ ಸೆಂಟ್​ಗಳಲ್ಲಿ ಇರಿಸಿಕೊಳ್ಳಲಾಗಿದೆ. ಮುಸ್ಲಿಮರಿಗೆ ಬಲವಂತವಾಗಿ ಮರುಶಿಕ್ಷಣ ನೀಡಲು ಚೀನಾ ವಿಶೇಷ ಬೃಹತ್ ಕ್ಯಾಂಪ್​ಗಳನ್ನ ನಿರ್ಮಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕ್ಯಾಂಪ್​ಗಳ ನಿರ್ಮಾಣಕ್ಕೆ ಸಹಮತಿ ವ್ಯಕ್ತಪಡಿಸಿದರೆಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಉಯ್ಗುರ್ ಮುಸ್ಲಿಮರ ಪರವಾಗಿ ಅಮೆರಿಕ ಕಾಯ್ದೆ ರೂಪಿಸಿರುವ ಬೆಳವಣಿಗೆ ಆಗಿದೆ.

ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಘುರ್, ಕಜಕ್, ಕಿರ್ಗಿಜ್ ಮೊದಲಾದ ಜನಾಂಗೀಯರು ಇದ್ಧಾರೆ. 2017ರಲ್ಲಿ ಚೀನಾ ಸರ್ಕಾರ ಇವರಿಗೆ ಪುನರ್ಶಿಕ್ಷಣ ನೀಡುವ ಯೋಜನೆಯ ನೆಪದಲ್ಲಿ ಬಂಧನಕೇಂದ್ರಗಳಲ್ಲಿ ಇಟ್ಟಿದೆ ಎಂಬ ಆರೋಪ ಇದೆ. ವಿಶ್ವ ಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳು ಚೀನಾ ಸರ್ಕಾರದ ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿವೆ.

ಇದನ್ನೂ ಓದಿ: UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ​ ಸದಸ್ಯತ್ವ ಪಡೆದ ಭಾರತ

ಬೋಲ್ಟಾನ್ ಹೇಳಿದ್ದೇನು?

ಮಾಜಿ ಅಮೆರಿಕ ಭದ್ರತಾ ಸಲಹೆಗಾರ ಆದ ಜಾನ್ ಬೋಲ್ಟನ್ ಅವರು ಆತ್ಮಕಥೆಯೊಂದನ್ನು ಬರೆದಿದ್ದು ಬಿಡುಗಡೆಗೆ ಸಜ್ಜಾಗಿದ್ಧಾರೆ. ಈ ಆತ್ಮಕಥೆಯಲ್ಲಿ ಅವರು ಚೀನಾದ ಈ ಡಿಟೆನ್ಷನ್ ಸೆಂಟರ್ ಇತ್ಯಾದಿ ಅನೇಕ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. 2019ರಲ್ಲಿ ಟ್ರಂಪ್ ಮತ್ತು ಕ್ಸಿ ಜಿನ್​ಪಿಂಗ್ ಭೇಟಿಯಾದಾಗ ಚೀನಾ ಅಧ್ಯಕ್ಷರು ಕ್ಯಾಂಪ್ ನಿರ್ಮಾಣ ಕಾರ್ಯವನ್ನು ಸಮರ್ಥಿಸಿಕೊಂಡಿದ್ದರು. ಆಗ ಅದು ಸರಿ ಎಂದು ಸಮ್ಮತಿಸಿದ್ದ ಟ್ರಂಪ್ ಅವರು ತಮ್ಮ ಅಧ್ಯಕ್ಷೀಯ ಮರು ಆಯ್ಕೆಗೆ ನೆರವು ನೀಡಬೇಕೆಂದು ಕ್ಸಿ ಅವರನ್ನ ಕೇಳಿಕೊಂಡರೆಂದು ಜಾನ್ ಬೋಲ್ಟನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆನ್ನಲಾಗಿದೆ.

ಈಗ ಟ್ರಂಪ್ ಸರ್ಕಾರ ಉಯ್ಗುರ್ ಕಾಯ್ದೆಯನ್ನು ರೂಪಿಸಿದೆ. ಇವತ್ತು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಮತ್ತು ಚೀನಾದ ಕಮ್ಯೂನಿಸ್ಟ್ ಪಕ್ಷದ ವಿದೇಶಾಂಗ ನೀತಿ ನಿರ್ದೇಶಕ ಯಾಂಗ್ ಜೀಚಿ ಮಧ್ಯೆ ನಡೆದ ಮಾತುಕತೆಯ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ. ಈ ವೇದಿಕೆಯಲ್ಲಿ ಅಮೆರಿಕದ ಉಯ್ಗುರ್ ಕಾಯ್ದೆಗೆ ಚೀನಾ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತೆನ್ನಲಾಗಿದೆ.
First published: June 18, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories