ಚೀನಾ ಸರ್ಕಾರದಿಂದ ಕ್ರೈಸ್ತರ ದಬ್ಬಾಳಿಕೆ; ಶಿಲುಬೆ ಒಡೆದು ಕಮ್ಯೂನಿಸ್ಟ್‌ ನಾಯಕರ ಚಿತ್ರ ಹಾಕುವಂತೆ ಆದೇಶ

ಚೀನಾದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯದ ಕೆಂಡಕಾರುತ್ತಿದೆ. ಈ ನಡುವೆ ಇಂದು ಅಂತಹದ್ದೇ ಮತ್ತೊಂದು ವಿವಾದ ಬಯಲಾಗಿದ್ದು, ಚೀನಾ ಕಮ್ಯೂನಿಸ್ಟ್‌ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.

  • Share this:
ಬೀಜಿಂಗ್ [ಚೀನಾ]: ಈ ಹಿಂದೆ ದಕ್ಷಿಣ ಚೀನಾದಲ್ಲಿ ಅಲ್ಪ ಸಂಖ್ಯಾತ ಮುಸ್ಲೀಂ ಸಮುದಾಯದವರ ಮೇಲೆ ದಬ್ಬಾಳಿಕೆಯಾದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಇದೀಗ ಈ ದಬ್ಬಾಳಿಕೆ ಕ್ರೈಸ್ತ ಸಮುದಾಯದವರ ಕಡೆಗೆ ತಿರುಗಿದೆ ಎನ್ನಲಾಗುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದಬ್ಬಾಳಿಕೆಯನ್ನು ಮುಂದುವರೆಸುತ್ತಿರುವ ಚೀನಾದ ಅಧಿಕಾರಿಗಳು ಈಗ ಕ್ರೈಸ್ತರ ಚರ್ಚ್‌‌ಗಳಿಗೆ ನುಗ್ಗಿ ಶಿಲುಬೆಗಳನ್ನು ಒಡೆಯಲು ಮುಂದಾಗಿದ್ದಾರೆ. ಅಲ್ಲದೆ, ಯೇಸುವಿನ ಚಿತ್ರಗಳನ್ನು ತಮ್ಮ ಮನೆಗಳಿಂದ ತೆಗೆದುಹಾಕಿ ಕಮ್ಯುನಿಸ್ಟ್ ನಾಯಕರ ಚಿತ್ರಗಳನ್ನು ಹಾಕುವಂತೆ ಆದೇಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

“ಅನ್ಹುಯಿ, ಜಿಯಾಂಗ್ಸು, ಹೆಬೈ ಮತ್ತು ಸೆಜಿಯಾಂಗ್ ಸೇರಿದಂತೆ ಅನೇಕ ಪ್ರಾಂತ್ಯಗಳಲ್ಲಿರುವ ಚರ್ಚುಗಳಿಗೆ ನುಗ್ಗಿರುವ ಚೀನಾದ ಅಧಿಕಾರಿಗಳು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಚಿಹ್ನೆಗಳನ್ನು ಬಲವಂತವಾಗಿ ನಾಶಪಡಿಸಿದ್ದಾರೆ” ಎಂದು ಅಮೆರಿಕ ಮೂಲದ ಸುದ್ದಿ ತಾಣ ರೇಡಿಯೋ ಫ್ರೀ ಏಷ್ಯಾ ವರದಿ ಮಾಡಿದೆ.

ಅಮೆರಿಕ ಮೂಲದ ಮತ್ತೊಂದು ಸುದ್ದಿ ಜಾಲತಾಣವಾದ ’ಡೈಲಿ ಮೇಲ್’, “ಈ ಘಟನೆಯನ್ನು ಕಟುವಾಗಿ ವಿರೋಧಿಸಿದ್ದು, ಚರ್ಚ್‌‌ಗಳಿಗೆ ನುಗ್ಗಿರುವ ಪೊಲೀಸರು ಧಾರ್ಮಿಕ ಚಿತ್ರಗಳನ್ನು ದ್ವಂಸಗೊಳಿಸಿ ಕಮ್ಯೂನಿಸ್ಟ್ ನಾಯಕರ ಚಿತ್ರಗಳನ್ನು ಇಲ್ಲಿ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ” ಎಂದು ಆರೋಪಿಸಿದೆ.

ಚೀನಾದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯದ ಕೆಂಡಕಾರುತ್ತಿದೆ. ಈ ನಡುವೆ ಇಂದು ಅಂತಹದ್ದೇ ಮತ್ತೊಂದು ವಿವಾದ ಬಯಲಾಗಿದ್ದು, ಚೀನಾ ಕಮ್ಯೂನಿಸ್ಟ್‌ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.

ಕ್ಸಿನ್ಜಿಯಾಂಗ್ ಭಾಗದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ದಬ್ಬಾಳಿಕೆ ಪ್ರಕರಣ ಇದೆ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಈ ಕುರಿತು ವರದಿಯಾಗಿದೆ. ಆದರೆ, ಈ ಭಾರಿ ಕ್ರೈಸ್ತ ಸಮುದಾಯದವರ ಮೇಲೆ ಭಾರೀ ಪ್ರಮಾಣ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ, ಆಡಳಿತರೂಢ ಚೀನಿ ಕಮ್ಯೂನಿಸ್ಟ್ ಪಕ್ಷ (ಸಿಸಿಪಿ) ಲಕ್ಷಾಂತರ ಅಲ್ಪ ಸಂಖ್ಯಾತ ಜನರನ್ನು ಬಂಧಿಸಿದೆ. ಹೀಗಾಗಿ ಈ ದೌರ್ಜನ್ಯದ ವಿರುದ್ಧ ಚೀನಾ ಸರ್ಕಾರ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯದ ಎದುರು ಟೀಕೆಗಳನ್ನು ಎದುರಿಸುವಂತಾಗಿದೆ.

ಚೀನಾದಲ್ಲಿ ಕ್ಸಿ-ಜಿನ್ಪಿಂಗ್ ಅಧಿಕಾರ ವಹಿಸಿಕೊಂಡ ನಂತರ ಸಿಸಿಪಿ ಪಕ್ಷ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳ ಮೇಲೆ ಭಾರಿ ಹಿಡಿತ ಸಾಧಿಸುತ್ತಿದೆ. ಕ್ಸಿ ಜಿನ್ಪಿಂಗ್ ಆದೇಶಕ್ಕೆ ಅನುಗುಣವಾಗಿ ಎಲ್ಲಾ ಧರ್ಮದವರೂ ಸಹ ತಮ್ಮ ಪಕ್ಷಕ್ಕೆ ನಿಷ್ಠರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಚೀನಾ ಸರ್ಕಾರ ಇಂತಹ ಕೆಲಸಗಳಿಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Viral Video: ಅಪಾಯಕಾರಿ ಶಾರ್ಕ್‌ ಮೀನಿನ ಬಾಯಿಯಿಂದ ಹುಡುಗನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಅಧಿಕಾರಿಇದಲ್ಲದೆ ಚೀನಾ ಸರ್ಕಾರ ಸ್ಥಳೀಯವಾಗಿ ಬಿಡುಗಡೆಯಾಗುವ ಎಲ್ಲಾ ಧಾರ್ಮಿಕ ಪುಸ್ತಕಗಳ ಅನುವಾದಿತ ಆವೃತ್ತಿಗಳ ಸೆನ್ಸಾರ್ಗೂ ಮುಂದಾಗಿದೆ. ಯಾವುದೇ ಧಾರ್ಮಿಕ ಪುಸ್ತಕವಾದರೂ ಅದನ್ನು ಪರಿಶೀಲಿಸಿ ಸಂಪಾದಿಸಲು ಆದೇಶಿಸಲಾಗಿದೆ. ಈ ಎಲ್ಲಾ ಪುಸ್ತಕಗಳಲ್ಲೂ ಸಮಾಜವಾದದ ತತ್ವಗಳನ್ನು ಪ್ರತಿಬಿಂಬಿಸಬೇಕು, ಕಮ್ಯೂನಿಸ್ಟ್ ಪಕ್ಷದ ನಂಬಿಕೆಗಳ ವಿರುದ್ಧ ಯಾವುದೇ ವಿಷಯವನ್ನೂ ಹೊಂದಿರಬಾರದು” ಎಂದು ಈಗಾಗಲೇ ಸೂಚನೆ ನೀಡಲಾಗಿರುವುದು ಉಲ್ಲೇಖಾರ್ಹ.
Published by:MAshok Kumar
First published: