Corona Alert: ವಿಶ್ವಕ್ಕೇ ವೈರಸ್​ ಹಂಚಿದ್ದ ಚೀನಾಗೆ ಮತ್ತೆ ಶಾಕ್​: ಕೊರೋನಾ​ ಅಟ್ಟಹಾಸಕ್ಕೆ ವಿಮಾನ, ಶಾಲೆಗಳು ಬಂದ್​

China Fights New Covid Outbreak: ಚೀನಾದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಅಲ್ಲಿಗೆ ಬಂದಿದ್ದ ಪ್ರವಾಸಿಗರ ಗುಂಪಿನಲ್ಲಿದ್ದ ವೃದ್ಧ ದಂಪತಿ ಕಾರಣ ಎಂದು ಹೇಳಲಾಗುತ್ತಿದೆ. ಅವರು ಸಾಕಷ್ಟು ಕಡೆ ಓಡಾಡಿದ್ದು, ಅವರಿಂದಲೇ ಕೊರೋನಾ ಕೇಸ್​ಗಳ ಹೆಚ್ಚಾಗಿದೆಯಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
China Fights New Covid Outbreak: ಕಳೆದ ಒಂದೂವರೆ ವರ್ಷ ಇಡೀ ವಿಶ್ವ(World)ವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಹಿಂಡಿ ಹಿಪ್ಪೆ ಮಾಡಿತ್ತು ಕೊರೋನಾ(Corona). ಈ ಸಾಂಕ್ರಾಮಿಕ ರೋಗದಲ್ಲಿ ಪ್ರಾಣಬಿಟ್ಟವರ ಸಂಖ್ಯೆ ನಿಜಕ್ಕೂ ಭಯ(Fear) ಹುಟ್ಟಿಸುತ್ತೆ. ಕೆಲ ದಿನಗಳಿಂದ ಕೆಲ ದೇಶಗಳಲ್ಲಿ ಕ್ರೂರಿ ಕೊರೋನಾ ಅಬ್ಬರ ಕಡಿಮೆಯಾಗಿದೆ. ಆದ್ರೆ ಇಡೀ ವಿಶ್ವಕ್ಕೆ `ಮಹಾಮಾರಿ’ ಹಂಚಿದ್ದ ಚೀನಾ(China)ದಲ್ಲಿ ಮತ್ತೆ ಕೊರೋನಾ ತನ್ನ ರೌದ್ರನರ್ತನ ತೋರಲು ಸಜ್ಜಾಗಿದೆ. ಎಲ್ಲವೂ ಮುಗಿದುಹೋಯ್ತು ಎಂದುಕೊಂಡಿದ್ದ ಚೀನಿಯರಿಗೆ, ತಾವೇ ಸೃಷ್ಟಿಸಿದ ಕೊರೋನಾ ಮತ್ತೆ ಶಾಕ್​(Shock) ನೀಡಿದೆ. ಡ್ರ್ಯಾಗನ್​ ರಾಷ್ಟ್ರದಲ್ಲಿ ಈಗಾಗಲೇ 100 ಕೋಟಿಗೂ ಹೆಚ್ಚು ಡೋಸ್ ವ್ಯಾಕ್ಸಿನ್(Vaccine)​​ ನೀಡಲಾಗಿದೆ. ಆದರೂ ಸೋಂಕು ಮತ್ತೆ ಕಾಣಿಸಿಕೊಂಡಿರುವುದು ಆಂತಕ ಸೃಷ್ಟಿಸಿದೆ. ಬೇರೆ ದೇಶಗಳಲ್ಲಿ ಲಸಿಕೆಗಳನ್ನು ನೀಡುತ್ತಿರುವುದರಿಂದ ಕೋವಿಡ್​ ಕೇಸ್​​ಗಳು ಕಡಿಮೆಯಾಗುತ್ತಿವೆ. ಆದರೆ, ಚೀನಾದಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಎಲ್ಲಾ ದೇಶಗಳಲ್ಲೂ ಲಾಕ್​ಡೌನ್(Lockdown)​ ನಿಯಮಗಳನ್ನ ಸಡಿಲಗೊಳಿಸಲಾಗುತ್ತಿದೆ, ಡ್ರ್ಯಾಗನ್​ ರಾಷ್ಟ್ರದಲ್ಲಿ ಮಾತ್ರ ಮತ್ತೆ ಲಾಕ್​ಡೌನ್​ ಮಾಡವತಂಹ ಪರಿಸ್ಥಿತಿ ಎದುರಾಗಿದೆ.

ಪ್ರವಾಸಿಗರಿಂದ ಹರಡಿದ ಸೋಂಕು

ಚೀನಾದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಅಲ್ಲಿಗೆ ಬಂದಿದ್ದ ಪ್ರವಾಸಿಗರ ಗುಂಪಿನಲ್ಲಿದ್ದ ವೃದ್ಧ ದಂಪತಿ ಕಾರಣ ಎಂದು ಹೇಳಲಾಗುತ್ತಿದೆ. ಅವರು ಸಾಕಷ್ಟು ಕಡೆ ಓಡಾಡಿದ್ದು, ಅವರಿಂದಲೇ ಕೊರೋನಾ ಕೇಸ್​ಗಳ ಹೆಚ್ಚಾಗಿದೆಯಂತೆ. ಆ ವೃದ್ಧ ದಂಪತಿ ಭೇಟಿ ನೀಡಿದ್ದ ಸ್ಥಳಗಳನ್ನ ಪತ್ತೆ ಹಚ್ಚಲಾಗಿದೆ. ವೃದ್ಧ ದಂಪತಿ ಸಂಪರ್ಕಕ್ಕೆ ಬಂದಿರುವವರನ್ನ ಪತ್ತೆ ಹಚ್ಚಿ ಅವರ ಮೇಲೆ ನಿಗಾ ಇಡಲಾಗಿದೆ. ಈ ಹಿನ್ನಲೆಯಲ್ಲಿ ಬೀಜಿಂಗ್‌ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರವಾಸಿಗರ ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಕೋವಿಡ್ ಹಬ್ಬುವಿಕೆ ಕುರಿತು ನಿಗಾವಹಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಲಾಗಿದೆ.

ವಿಮಾನಯಾನ ಸ್ಥಗಿತ, ಶಾಲೆಗಳು ಬಂದ್​​

ಇನ್ನೂ ಬೇರೆ ದೇಶಗಳಿಗೆ ಹೋಗುವ ವಿಮಾನಗಳ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಕ್ಸಿಯಾನ್ ಮತ್ತು ಲಾನ್ಸೂದಲ್ಲಿನ ಎರಡು ಮುಖ್ಯ ವಿಮಾನ ನಿಲ್ದಾಣಗಳಿಗೆ ಸುಮಾರು ಶೇ. 60ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಪ್ರವಾಸಿ ತಾಣಗಳು ಮತ್ತು ಮನರಂಜನಾ ಸ್ಥಳಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನೂ ಶಾಲೆಗಳನ್ನೂ ಕೂಡ ಮುಚ್ಚಲಾಗಿದೆ. ನಿಯಮಗಳು ಸಡಿಲಿಕೆಗೊಂಡ ನಂತರ ಮತ್ತೆ ಶಾಲೆಗಳನ್ನ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್‌ ಕೂಡ ವಿಧಿಸಲಾಗಿದೆ. ಎರೆನ್​ ಹೋಟ್​ ನಗರದ ಒಳಗೆ ಹಾಗೂ ಹೊರಗೆ ಜನರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ಇದನ್ನು ಓದಿ: ವಿಶ್ವದಲ್ಲೇ ವೇಗವಾದ ಲಸಿಕಾ ಅಭಿಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ; ಖ್ಯಾತ ವೈದ್ಯರು, ತಜ್ಞರು ಹೇಳಿದ್ದೇನು?

ಕಠಿಣ ಕ್ರಮಗಳನ್ನು ಕೈಗೊಂಡ ಚೀನಾ

1. ಲಾನ್ಸೂ ಸೇರಿದಂತೆ ಹಲವು ಪ್ರದೇಶಗಳು, ವಾಯುವ್ಯ ಚೀನಾದ ಕೆಲವು ನಗರದಲ್ಲಿ ಅಗತ್ಯವಿದ್ದಲ್ಲಿ ಮಾತ್ರ ನಿವಾಸಿಗಳು ಹೊರಗೆ ಬರುವಂತೆ ಆದೇಶ ನೀಡಲಾಗಿದೆ.

2. ಕೋವಿಡ್​ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿರುವ ನಗರಗಳನ್ನ ಬಿಟ್ಟು ಹೋಗಬೇಕಾದರೆ ಕೋವಿಡ್​​-19 ನೆಗೆಟಿವ್​ ರಿಪೋರ್ಟ್ ಕಡ್ಡಾಯ

3. ಕ್ಸಿಯನ್​​, ಗನ್ಸು ಪ್ರಾಂತ್ಯದಲ್ಲಿ ಹೆಚ್ಚು ವಿಮಾನಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

4. ಮಂಗೋಲಿಯಾ ನಗರದ ಒಳಗೆ ಮತ್ತು ಹೊರಗೆ ಸಂಚಾರ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

5. ನಿನ್ನೆ ವಿವಿಧ ನಗರಗಳಲ್ಲಿ ಹೆಚ್ಚಿನ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಸೋಂಕು ಹರಡದಂತೆ ಕಠಿಣ ಕ್ರಮಗಳನ್ನ ಇಲ್ಲಿನ ಸರ್ಕಾರ ಕೈಗೊಂಡಿದೆ.

ಇದನ್ನು ಓದಿ: ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಲಸಿಕೆ ನೀಡಲಾಗಿದ್ಯಾ? ಅಸಮಾನತೆ ಬಗ್ಗೆ ಏರುತ್ತಿದೆ ಧ್ವನಿ

ಬೀಜಿಂಗ್​ನಲ್ಲಿ ಸಿಲುಕಿದ ಭಾರತೀಯರು

ಕೋವಿಡ್​ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತಕ್ಕೆ ವಾಪಸ್​ ಆಗಲು ಸಾಧ್ಯವಾಗದೇ ಬೀಜಿಂಗ್​ನಲ್ಲಿ ಸಾವಿರಾರು ಭಾರತೀಯರು ಇದ್ದಾರೆ. ಮತ್ತೆ ಕಳೆದ ವರ್ಷದಂತೆ ಲಾಕ್​ಡೌನ್ ಆಗುವ ಭೀತಿಯಲ್ಲಿ ಭಾರತೀಯರು ಇದ್ದಾರೆ. ತಾಯ್ನಾಡಿಗೆ ವಾಪಸ್​ ಬರಲು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಚೀನಾದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಿದೆ.
Published by:Vasudeva M
First published: