China News Strategy : ತನ್ನ ಯೋಜನೆಗಳಿಗೆ ಲಂಕಾದ ಮೇಲೆ ಕಣ್ಣಿಟ್ಟಿರುವ ಚೀನಾ; ಭಾರತಕ್ಕೆ ಇದು ಅಪಾಯದ ಮುನ್ಸೂಚನೆನಾ?

India-China: ಚೀನಾ ದೇಶವು ಈಗಾಗಲೇ ಶ್ರೀಲಂಕಾದಲ್ಲಿ ತನ್ನ ಪ್ರಬಲ ಕಾರ್ಯತಂತ್ರ ಒಳಹರಿವುಗಳನ್ನು ರೂಪಿಸಿದ್ದು ಭಾರತದ ಕರಾವಳಿಗೆ ಹತ್ತಿರವಿರುವ ದ್ವೀಪ ರಾಷ್ಟ್ರದಲ್ಲಿ ತನ್ನ ಅಸ್ತಿತ್ವ ರೂಪಿಸುವ ನಿಟ್ಟಿನಲ್ಲಿ ಚೀನಾ ಶ್ರಮಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಭಾರತದಲ್ಲಿ ಚೀನಾ ಆ್ಯಪ್‌ಗಳಿಗೆ ಹಾಗೂ ಸಂಸ್ಥೆಗಳಿಗೆ ನಿರ್ಬಂಧ ಹೇರಿರುವ ಕಾರಣವನ್ನು ಮುಂದಿಟ್ಟುಕೊಂಡು ಪ್ರಸ್ತುತ ಚೀನಾ ತನ್ನ ಹದ್ದಿನ ಕಣ್ಣನ್ನು ಶ್ರೀಲಂಕಾದ ಮೇಲಿರಿಸಿದ್ದು ತನ್ನ ಉದ್ಯಮವನ್ನು ಲಂಕಾದಲ್ಲಿ ವಿಸ್ತರಿಸುವ ಉದ್ದೇಶವನ್ನಿಟ್ಟುಕೊಂಡಿದೆ ಎಂಬ ಅಂಶ ದಟ್ಟವಾಗುತ್ತಿದೆ. ಚೀನಾ ದೇಶವು ಈಗಾಗಲೇ ಶ್ರೀಲಂಕಾದಲ್ಲಿ ತನ್ನ ಪ್ರಬಲ ಕಾರ್ಯತಂತ್ರ ಒಳಹರಿವುಗಳನ್ನು ರೂಪಿಸಿದ್ದು ಭಾರತದ ಕರಾವಳಿಗೆ ಹತ್ತಿರವಿರುವ ದ್ವೀಪ ರಾಷ್ಟ್ರದಲ್ಲಿ ತನ್ನ ಅಸ್ತಿತ್ವ ರೂಪಿಸುವ ನಿಟ್ಟಿನಲ್ಲಿ ಚೀನಾ ಶ್ರಮಿಸುತ್ತಿದೆ. ಇದು ಭಾರತಕ್ಕೆ ಕೊಂಚ ಕಳವಳಕಾರಿಯಾಗಿದೆ ಎಂಬುದಾಗಿ ಭಾರತೀಯ ಸುರಕ್ಷತಾ ಮೂಲಗಳು ಮಾಹಿತಿ ನೀಡಿವೆ.


ಚೀನಾದ ಆರ್ಥಿಕ ಚಟುವಟಿಕೆಗಳ ಆರಂಭ ಅದೇ ರೀತಿ ಶ್ರೀಲಂಕಾದ ಉತ್ತರ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ನಂತರ ಚೀನಾ ತನ್ನ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳುವ ಅಂಶ ದಟ್ಟವಾಗಿದ್ದು ಇದು ಭಾರತದ ಮೇಲೆ ಪರಿಣಾಮ ಬೀರಲಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.


ಆರಂಭದಲ್ಲಿ ಚೀನಾದ ಸಂಸ್ಥೆಗಳನ್ನು ಆರ್ಥಿಕ ಚಟುವಟಿಕೆಗಳನ್ನು ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ತೀವ್ರ ನಿರ್ಬಂಧಕ್ಕೆ ಒಳಪಡಿಸಲಾಗಿತ್ತು. ಆದರೆ ಗೋತಬಯ ರಾಜಪಕ್ಸ ಸರಕಾರವು ಹಲವಾರು ಚೀನೀ ಉದ್ಯಮಗಳ ಆರಂಭಕ್ಕೆ ಲಂಕಾದಲ್ಲಿ ಅನುಕೂಲ ಒದಗಿಸುತ್ತಿದ್ದು ಅಲ್ಲಿ ನೆಲೆಸಿರುವ ತಮಿಳು ನಿವಾಸಿಗಳ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲವೆಂದು ಅಲ್ಲಿನ ನಿವಾಸಿಗಳ ದೂರಾಗಿದೆ.


ಇದನ್ನೂ ಓದಿ: ಸುಪಾರಿ ಕಿಲ್ಲರ್, ಡಾನ್ ಬಾಂಬೆ ರವಿ ಕೊರೋನಾಗೆ ಬಲಿ

ಪ್ರಸ್ತುತ ಭಾರತವು ಜಾಫ್ನಾ ಪರ್ಯಾಯದ್ವೀಪದ ಮೂರು ಭಾಗಗಳಲ್ಲಿ ಚೀನಾದ ಸಿನೋಸಾರ್-ಎಟೆಕ್ವಿನ್‌ಗೆ ಮೂರು ವಿಧಾನ ಪಾಲುದಾರಿಕೆಯನ್ನು $ 12 ಮಿಲಿಯನ್ ಡಾಲರ್ ಹೈಬ್ರಿಡ್ ವಿಂಡ್ ಮತ್ತು ಫೋಟೊ ವೋಲ್ಟಾಯಿಕ್ ಪವರ್‌ಟೈನಿಂಗ್ ಒದಗಿಸುವ ಶ್ರೀಲಂಕಾದ ಆಯ್ಕೆಯನ್ನು ವಿರೋಧಿಸಿದೆ.


ಈ ದ್ವೀಪಗಳು ತಮಿಳುನಾಡು ಕರಾವಳಿ ತೀರದಿಂದ 50 ಕಿಮೀ ದೂರದಲ್ಲಿರುವುದರಿಂದ ಭಾರತವು ಶ್ರೀಲಂಕಾಗೆ 12 ಮಿಲಿಯನ್ ಡಾಲರ್ ಅನುದಾನದ ಸಲಹೆಯೊಂದಿಗೆ ಈ ಯೋಜನೆಗಳನ್ನು ಆರಂಭಿಸಿತು. ರೈತರ ಬೆಳೆ ಭೂಮಿಯನ್ನು ಚೀನೀ ಕೈಗಾರಿಕೆಗಳನ್ನು ಸ್ಥಾಪಿಸಲು ಶ್ರೀಲಂಕಾವು ಒಪ್ಪಿಗೆ ನೀಡಿ ಕರಾವಳಿಯ ಹಳ್ಳಿ ಪ್ರದೇಶವೊಂದನ್ನು ಮಂಜೂರು ಮಾಡಿದೆ. ಇಲ್ಲಿನ ರೈತರು ದೇಶದ ಈ ಕ್ರಮವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹೀಗೆ ಲಂಕಾವು ಚೀನಾಕ್ಕೆ ಅನೇಕ ವಿಧವಾಗಿ ಸಹಾಯಗಳನ್ನು ಮಾಡುತ್ತಿದೆ. ಜಪಾನ್‌ನೊಂದಿಗೆ ಒಟ್ಟುಸೇರಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೇನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದವನ್ನು ಲಂಕಾದೊಂದಿಗೆ ಮುಂದುವರಿಸಲು ಭಾರತವು ಅಸಮಾಧಾನವನ್ನು ಹೊರಹಾಕಿದೆ. ಈ ಯೋಜನೆಯ ನಂತರ ಟ್ರಿಂಕೋಮಲೈನಲ್ಲಿ ತೈಲ ಟ್ಯಾಂಕ್‌ಗಳು ಕೃಷಿ ಉದ್ಯಮದ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ.


99 ವರ್ಷದ ಲೀಸ್‌ನಿಂದ ಹಂಬಂಟೋಟಾ ಬಂದರಿನಿಂದ ಹಿಡಿದು ಹೊಚ್ಚ ಹೊಸ ಕೊಲಂಬೊ ಬಂದರು ನಗರ ಯೋಜನೆಯವರೆಗೆ ಚೀನಾ ದೇಶಕ್ಕೆ ತನ್ನ ಕಾರ್ಯಹಸ್ತವನ್ನು ಚಾಚುವುದು ಹಾಗೂ ಪ್ರಯಾಣ ನಡೆಸುವುದು ಅತಿ ಸುಲಭವಾಗಿದೆ. ಶ್ರೀಲಂಕಾ ಹೊರತುಪಡಿಸಿ, ಸೀಶೆಲ್ಸ್, ಮಾರಿಷಸ್, ಮಾಲ್ಡೀವ್ಸ್, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪೂರ್ವ ಆಫ್ರಿಕಾದ ರಾಷ್ಟ್ರಗಳೊಂದಿಗೆ ಸಾಗರ ಹೈಪರ್‌ಲಿಂಕ್‌ಗಳನ್ನು ಬೆಸೆಯುವ ಮೂಲಕ ಚೀನಾ ದೇಶವು ಎಲ್ಲಾ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ತನ್ನ ಕಬಂಧ ಬಾಹುಗಳನ್ನು ವ್ಯವಸ್ಥಿತವಾಗಿ ವಿಸ್ತರಿಸುತ್ತಿದೆ ಎಂಬ ಅಂಶ ಇಲ್ಲಿ ಮುಖ್ಯವಾದುದು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: