WhatsApp, Gmail ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನ ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

ಇದುವರೆಗೂ ಸುಮಾರು 10 ಲಕ್ಷ ಚೀನಿ ಮುಸ್ಲಿಮರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲಿಸರು ತಮಗೆ ನೀಡಿದ ಕಿರುಕುಳದ ಕಥೆಗಳು ಹಲವು ಬಾರಿ ಜಗತ್ತಿನ ಮುಂದೆ ಅನಾವರಣಗೊಂಡಿವೆ.

ಇದುವರೆಗೂ ಸುಮಾರು 10 ಲಕ್ಷ ಚೀನಿ ಮುಸ್ಲಿಮರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲಿಸರು ತಮಗೆ ನೀಡಿದ ಕಿರುಕುಳದ ಕಥೆಗಳು ಹಲವು ಬಾರಿ ಜಗತ್ತಿನ ಮುಂದೆ ಅನಾವರಣಗೊಂಡಿವೆ.

ಇದುವರೆಗೂ ಸುಮಾರು 10 ಲಕ್ಷ ಚೀನಿ ಮುಸ್ಲಿಮರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲಿಸರು ತಮಗೆ ನೀಡಿದ ಕಿರುಕುಳದ ಕಥೆಗಳು ಹಲವು ಬಾರಿ ಜಗತ್ತಿನ ಮುಂದೆ ಅನಾವರಣಗೊಂಡಿವೆ.

 • Share this:
  ಬೀಜಿಂಗ್: ಉಯ್ಗಿರ್ ಮುಸ್ಲಿಮರ (Uyghurs) ಮೇಲಿನ ದಾಳಿಯನ್ನು ಚೀನಾ (China)ತೀವ್ರಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಚೀನಾದ ಸೈನಿಕರು ಮತ್ತು ಪೊಲೀಸರು ವಾಟ್ಸಪ್ ಮತ್ತು ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಚೀನಾ ಸರ್ಕಾರ ಇವರನ್ನು 'ಪ್ರಿ-ಕ್ರಿಮಿನಲ್ಸ್' ಎಂದು ಹೇಳುತ್ತಿದೆ. ಅಂದ್ರೆ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿರುವ ಮಹಿಳೆಯರು ಭವಿಷ್ಯದಲ್ಲಿ ಗಂಭೀರ ಅಪರಾಧಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಇದನ್ನು ಸೈಬರ್ ಕ್ರೈಂ (Cyber'Pre-Crimes) ಅಂತಾನೂ ವ್ಯಾಖ್ಯಾನಿಸಲಾಗುತ್ತಿದೆ. 'ಇನ್ ದ ಕ್ಯಾಂಪಸ್: ಚೀನಾ ಹೈ ಟೆಕ್ ಪೆನಲ್' (In The Camps: China's High-Tech Penal Colony) ಎಂಬ ಪುಸ್ತಕದಲ್ಲಿ ಚೀನಾದ ವರ್ತನೆಯನ್ನು ಬಹಿರಂಗಗೊಳಿಸಲಾಗಿದೆ.

  ಓರ್ವ ವಿದ್ಯಾರ್ಥಿನಿಯಿಂದ ಬೆಳಕಿಗೆ:
  ಈ ಪುಸ್ತಕದ ಬಗ್ಗೆ 'ಬ್ಯುಸಿನೆಸ್ ಇನ್ ಸೈಡರ್' ಲೇಖನವೊಂದನ್ನ ಪ್ರಕಟಿಸಿದೆ. ಚೀನಾದಲ್ಲಿ ಸಾರ್ವಜನಿಕರು ವಾಟ್ಸಪ್ ಮತ್ತು ಜಿ ಮೇಲ್ ಬಳಸುವಂತಿಲ್ಲ. ಕಾರಣ ಈ ಎರಡೂ ಸರ್ಕಾರಿ ಪ್ಲಾಟ್‍ಫಾರಂಗಳು. ಆದ್ರೆ ಕೆಲವರು ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್ (ವಿಪಿಎನ್ Virtual Private Network -VPN) ಮೂಲಕ ಈ ಎರಡೂ ಪ್ಲಾಟ್‍ಫಾರಂಗಳನ್ನು ಬಳಸುತ್ತಿದ್ದಾರೆ. ವಾಷಿಂಗ್ಟನ್ ನಲ್ಲಿದ್ದ ಚೀನಾ ವಿದ್ಯಾರ್ಥಿನಿ ಶಿನಿಜಿಂಯಾಂಗ್ ತೆರಳಿದ್ದರು. ಅಲ್ಲಿ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. 2017ರಲ್ಲಿ ಇದು ಕೊನೆಯ ಘಟನೆಯಾಗಿತ್ತು. ವೇರಾ ಜೋವಾ (Vera Zhou) ಹೆಸರಿನ ವಿದ್ಯಾರ್ಥಿ ಪ್ರಕಾರ 2018ರ ಹೊಸ ವರ್ಷದವರೆಗೂ ಜೈಲಿನಲ್ಲಿದ್ದಳು.

  ಆರು ತಿಂಗಳ ಬಳಿಕ ಬಿಡುಗಡೆ:
  ವಾಟ್ಸಪ್ ಮತ್ತು ಜಿ ಮೇಲ್ ಬಳಸಿದ ಪರಿಣಾಮ ವೇರಾ ಜೋವಾ ಆರು ತಿಂಗಳು ಜೈಲುವಾಸ ಅನುಭವಿಸುವಂತಾಯ್ತು. ಆರು ತಿಂಗಳ ಬಳಿಕ ಕಾನೂನು ನಿಯಮಗಳನ್ನು ಪಾಲಿಸಬೇಕು, ಪ್ರತಿನಿತ್ಯ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ಹಾಕಿ ವೇರಾ ಜೋವಾಗೆ ಜಾಮೀನು ನೀಡಲಾಗಿತ್ತು. ಚೀನಾದಲ್ಲಿ ಉಯ್ಗಿರ್ ಮತ್ತು ಹುಯಿ (Uyghurs and Hui) ಎಂಬ ಎರಡು ಮುಸ್ಲಿಂ ಸಮುದಾಯಗಳಿವೆ. ಈ ಎರಡೂ ಸಮುದಾಯಗಳ ಮೇಲೆ ಚೀನಾ ಪೊಲೀಸ್ ಹದ್ದಿನಗಣ್ಣು ಇರಿಸಿದೆ. ಇದುವರೆಗೂ ಸುಮಾರು 10 ಲಕ್ಷ ಚೀನಿ ಮುಸ್ಲಿಮರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲಿಸರು ತಮಗೆ ನೀಡಿದ ಕಿರುಕುಳದ ಕಥೆಗಳು ಹಲವು ಬಾರಿ ಜಗತ್ತಿನ ಮುಂದೆ ಅನಾವರಣಗೊಂಡಿವೆ.

  ಇದನ್ನು ಓದಿ: ನಶೆಯಲ್ಲಿ ಕಾರು ಚಾಲನೆ; ವ್ಯಕ್ತಿಯ ಇಡೀ ಜೀವನವನ್ನೇ ಬದಲಿಸಿದ ಅಪಘಾತ

  ಜೋವಾ ಪ್ರಕಾರ ತಮ್ಮ ಜೊತೆ 11 ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಚೀನಾ ಸರ್ಕಾರ 2017ರಲ್ಲಿ ಪ್ರಿ ಕ್ರಿಮಿನಿಲ್ಸ್ ಕಾನೂನು ಜಾರಿಗೆ ತಂದಿದ್ದು, ಇದರ ಆಧಾರದ ಮೇಲೆ ಸಾವಿರಾರು ಜನರನ್ನು ಚೀನಾ ಪೊಲೀಸರು ಮತ್ತು ಸೈನಿಕರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ವಶಕ್ಕೆ ಪಡೆದುಕೊಂಡಾದ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿರುವ ಬಗ್ಗೆಯೂ ವರದಿಯಾಗಿದೆ.

  ಇದನ್ನು ಓದಿ: ಅಷ್ಟಮಿಯ ದಿನದಿಂದ ಮಗಳ ಫೋಟೋ ಹಂಚಿಕೊಂಡ ನಟಿ ಅನುಷ್ಕಾ

  ಹೈಟೆಕ್ ಮಾನಿಟರಿಂಗ್ ಆರೋಪ
  ವಶಕ್ಕೆ ಪಡೆದುಕೊಳ್ಳುತ್ತಿರುವ ಜನರ ಮೇಲೆ ಚೀನಾ ಸರ್ಕಾರ ಹೈಟೆಕ್ ಮಾನಿಟರಿಂಗ್ ಆರೋಪಗಳನ್ನು ಮಾಡುತ್ತಿದೆ. ಜನರು ಸರ್ಕಾರದ ವಿರುದ್ಧ ಯಾವುದೇ ಆನ್‍ಲೈನ್ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಯಾರೋ ಒಬ್ಬರ ಮೇಲೆ ಸೂಜಿ ಮೊಣೆಯಷ್ಟು ಅನುಮಾನ ಮೂಡಿದ್ರೂ, ಅವರನ್ನು ಪ್ರಿ ಕ್ರಿಮಿನಿಲ್ಸ್ ಕಾನೂನಿನಡಿಯಲ್ಲಿ ವಶಕ್ಕೆ ಪಡೆದು ಕಿರುಕುಳ ನೀಡಲಾಗುತ್ತದೆ. ಇಂಟರ್ ನೆಟ್ ಪೂರೈಕೆದಾರರು ತಮ್ಮ ಬಳಕೆದಾರರ ಡೇಟಾವನ್ನು ಸರ್ಕಾರದ ಜೊತೆ ಹಂಚಿಕೊಳ್ಳಬೇಕು ಎಂಬುಬುವುದು ಪ್ರಿ ಕ್ರಿಮಿನಲ್ಸ್ ನಲ್ಲಿದೆ.

  ನಾನು ವಾಟ್ಸಪ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದರಿಂದ ನನ್ನನ್ನು ಬಂಧಿಸಲಾಯ್ತು. ನಾನು ವಾಟ್ಸಪ್ ನಲ್ಲಿ ಕಜಕ್‍ಸ್ತಾನದಲ್ಲಿರುವ ಸಂಬಂಧಿ ಜೊತೆ ಚಾಟ್ ಮಾಡುತ್ತಿದ್ದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ ಹೇಳಿಕೆ ನೀಡಿದ್ದಾರೆ. ಮತ್ತೊಬ್ಬ ಮಹಿಳೆ ಮಾತನಾಡಿ, ಮಗುವಿನ ಶಾಲೆಗಾಗಿ ಜಿಮೇಲ್ ಮೂಲಕ ಲಾಗಿನ್ ಆಗಿದ್ದರಿಂದ ನನ್ನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಿದ್ದಾರೆ

  -ಮಹ್ಮದ್​ ರಫೀಕ್​
  Published by:Seema R
  First published: