ಅರುಣಾಚಲವನ್ನು ಚೀನಾದ ಭಾಗವಾಗಿ ತೋರಿಸಿಲ್ಲವೆಂದು 30 ಸಾವಿರ ವಿಶ್ವ ಭೂಪಟಗಳನ್ನೇ ನಾಶ ಮಾಡಿದ ಚೀನಾ

ಭಾರತದ ಈಶಾನ್ಯ ಭಾಗದಲ್ಲಿರುವ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಪರಿಗಣಿಸುತ್ತದೆ. ಭಾರತೀಯ ನಾಯಕರು ಅರುಣಾಚಲಕ್ಕೆ ಭೇಟಿ ನೀಡಿದಾಗೆಲ್ಲಾ ಚೀನಾ ಅಧಿಕೃತವಾಗಿ ಆಕ್ಷೇಪ ಎತ್ತುತ್ತದೆ.

Vijayasarthy SN | news18
Updated:March 26, 2019, 4:00 PM IST
ಅರುಣಾಚಲವನ್ನು ಚೀನಾದ ಭಾಗವಾಗಿ ತೋರಿಸಿಲ್ಲವೆಂದು 30 ಸಾವಿರ ವಿಶ್ವ ಭೂಪಟಗಳನ್ನೇ ನಾಶ ಮಾಡಿದ ಚೀನಾ
ಚೀನಾ ಧ್ವಜ
  • News18
  • Last Updated: March 26, 2019, 4:00 PM IST
  • Share this:
ಬೀಜಿಂಗ್(ಮಾ. 26): ಅರುಣಾಚಲ ಪ್ರದೇಶ ಮತ್ತು ತೈವಾನ್ ತನ್ನ ಭಾಗವೆಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದೆ. ಅರುಣಾಚಲ ಪ್ರದೇಶ ಭಾರತದ ಭಾಗವೆಂದು ಹಾಗೂ ತೈವಾನ್ ಸ್ವತಂತ್ರ ದೇಶವೆಂದು ಚೀನಾ ಯಾವತ್ತು ಮಾನ್ಯ ಮಾಡಿಲ್ಲ. ಇದೀಗ ಅರುಣಾಚಲ ಮತ್ತು ತೈವಾನ್ ಎರಡೂ ಕೂಡ ಚೀನಾದ ಭಾಗವಾಗಿ ತೋರಿಸಿಲ್ಲದ ಭೂಪಟಗಳ ಮೇಲೆ ಚೀನಾ ಕಣ್ಣು ಬಿದ್ದಿದೆ. ಇಂಥ 30 ಸಾವಿರ ವಿಶ್ವ ಭೂಪಟಗಳನ್ನ ಕಮ್ಯೂನಿಸ್ಟ್ ರಾಷ್ಟ್ರ ನಾಶ ಮಾಡಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಈ ವರ್ಲ್ಡ್ ಮ್ಯಾಪ್​ಗಳು ಹೊರ ದೇಶಕ್ಕೆ ರಫ್ತು ಆಗಲು ತಯಾರಾಗಿದ್ದವೆನ್ನಲಾಗಿದೆ.

ಇದನ್ನೂ ಓದಿ: ಕಟ್ಟರ್​ ಹಿಂದುತ್ವ, ಆರ್​ಎಸ್​ಎಸ್​ ಬೆಂಬಲ: 'ಜೂನಿಯರ್​​ ಪ್ರತಾಪ್​ ಸಿಂಹ' ಎಂದೇ ಕರೆಸಿಕೊಳ್ಳುವ ತೇಜಸ್ವಿ ಸೂರ್ಯ ಯಾರು?

ದೇಶದ ಸಾರ್ವಭೌಮತ್ವ ಮತ್ತು ಗಡಿ ಸಮಗ್ರತೆಯು ಯಾವುದೇ ದೇಶಕ್ಕಾದರೂ ಬಹಳ ಮುಖ್ಯ. ನಕ್ಷೆ ಕೂಡ ದೇಶಕ್ಕೆ ಬಹಳ ಮುಖ್ಯ. ಗಡಿಭಾಗಗಳನ್ನು ತಪ್ಪಾಗಿ ತೋರಿಸಿದ ಭೂಪಟಗಳನ್ನ ನಾಶ ಮಾಡಿದ ಚೀನಾ ಸರಕಾರದ ಕ್ರಮ ನ್ಯಾಯಯುತವಾಗಿಯೇ ಇದೆ. ತೈವಾನ್ ಮತ್ತು ದಕ್ಷಿಣ ಟಿಬೆಟ್ ಎರಡೂ ಕೂಡ ಚೀನಾದ ಭಾಗಗಳಾಗಿವೆ ಎಂದು ಚೀನಾದ ಪ್ರೊಫೆಸರ್ ಲಿಯು ವೆಂಝೋಂಗ್ ಹೇಳಿದ್ದಾರೆ.

ಇದನ್ನೂ ಓದಿ: "ಒಂದು ಹಾಸನ ಕರಿ ಎತ್ತು, ಇನ್ನೊಂದು ರಾಮನಗರ ಬಿಳಿ ಎತ್ತು"; ಎಚ್​​​ಡಿಕೆ ಮತ್ತು ಡಿಕೆಶಿ ಕಳ್ಳೆತ್ತುಗಳು ಎಂದ ರೈತ!

ಭಾರತದ ಈಶಾನ್ಯ ಭಾಗದಲ್ಲಿರುವ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಕೆಟ್ ಎಂದು ಚೀನಾ ಪರಿಗಣಿಸುತ್ತದೆ. ಅರುಣಾಚಲವು ಪ್ರಾಚೀನ ಕಾಲದಿಂದಲೂ ಟಿಬೆಟ್ ಪ್ರಾಂತ್ಯದ ಅವಿಭಾಜ್ಯ ಅಂಗವಾಗಿತ್ತೆಂಬುದು ಚೀನಾದ ವಾದ. ಅರುಣಾಚಲಕ್ಕೆ ಭಾರತದ ನಾಯಕರು ಭೇಟಿ ನೀಡಿದರೆ, ಅಥವಾ ಯಾವುದಾದರೂ ಕಾಮಗಾರಿಗಳು ನಡೆದರೆ ಚೀನಾ ಆಕ್ಷೇಪ ವ್ಯಕ್ತಪಡಿಸುತ್ತದೆ. ಅನೇಕ ಬಾರಿ ಅರುಣಾಚಲದ ಗಡಿಯೊಳಗೆ ಬರಲು ಚೀನೀ ಸೈನಿಕರು ಪ್ರಯತ್ನಿಸಿದ್ದುಂಟು.

ಇದನ್ನೂ ಓದಿ: ಹುಡುಗಿಗಾಗಿ ಬೆಂಗಳೂರಿನಲ್ಲಿ ನಡೆಯಿತು ಬರ್ಬರ ಹತ್ಯೆ!; ಸ್ಕೆಚ್​ ಹಾಕಿದವನೇ ಕೊಲೆಯಾಗಿಹೋದ

ಸ್ವತಂತ್ರ ದೇಶವಾಗಿರುವ ತೈವಾನ್ ಅನ್ನೂ ಕೂಡ ಚೀನಾ ತನ್ನ ಭಾಗವೆಂದು ಮೊದಲಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದೆ.
First published: March 26, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading