HOME » NEWS » National-international » CHINA DEFENDS BUILDING VILLAGE IN ARUNACHAL PRADESH SAYS CONSTRUCTION ON OWN TERRITORY MAK

Arunachal Pradesh: ನಮ್ಮ ಭೂಭಾಗದಲ್ಲಿ ನಾವು ಗ್ರಾಮ ನಿರ್ಮಿಸಿದ್ದೇವೆ; ಮತ್ತೊಮ್ಮೆ ತಗಾದೆ ತೆಗೆದ ಚೀನಾ

ಚೀನಾದ ಅಭಿವೃದ್ಧಿ ಮತ್ತು ನಿರ್ಮಾಣ ಚಟುವಟಿಕೆಗಳು ನಮ್ಮ ಭೂಪ್ರದೇಶದೊಳಗೆ ಸಾಮಾನ್ಯವಾಗಿದೆ. ಇದು ನಮ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಟೀಕೆಗೆ ಅವಕಾಶವಿಲ್ಲ ಎಂದು ಹುವಾ ಹೇಳಿದ್ದಾರೆ ಎಂಬುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

news18-kannada
Updated:January 22, 2021, 10:03 AM IST
Arunachal Pradesh: ನಮ್ಮ ಭೂಭಾಗದಲ್ಲಿ ನಾವು ಗ್ರಾಮ ನಿರ್ಮಿಸಿದ್ದೇವೆ; ಮತ್ತೊಮ್ಮೆ ತಗಾದೆ ತೆಗೆದ ಚೀನಾ
ಅರುಣಾಚಲ ಪ್ರದೇಶದಲ್ಲಿ ಚೀನಾ ನಿರ್ಮಿಸಿರುವ ಗ್ರಾಮ.
  • Share this:
ನವ ದೆಹಲಿ: ಲಡಾಖ್​ನಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ಮುಸುಕಿನ ಗದ್ದಾಟ ನಡೆಯುತ್ತಲೇ ಇದೆ. ಗಡಿಯಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿ ಇದೆ. ಅದರಲ್ಲೂ ಕಳೆದ ಜೂನ್​ ತಿಂಗಳ ಘರ್ಷಣೆಯ ನಂತರ ಬಿಸಿ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಅರುಣಾಚಲ ಪ್ರದೇಶದ ಕೆಲವು ಭೂ ಭಾಗಗಳೂ ಸಹ ತನಗೇ ಸೇರಬೇಕು ಎಂದು ಚೀನಾ ಕಳೆದ ಹಲವು ವರ್ಷಗಳಿಂದ ತಗಾದೆ ತೆಗೆಯುತ್ತಲೇ ಇದೆ. ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆಯೂ ಭಾರತಕ್ಕೆ ಚೀನಾ ಜೊತೆಗೆ ವಿವಾದ ಇದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದ್ದು, ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿದ್ದು ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಈ ನಡುವೆ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಚೀನಾ, "ಅರುಣಾಚಲ ಪ್ರದೇಶದಲ್ಲಿ 101 ಮನೆಗಳುಳ್ಳ ಗ್ರಾಮವೊಂದನ್ನು ನಿರ್ಮಿಸಿರುವುದು ನಿಜ. ನಮ್ಮ ಭೂ ಪ್ರದೇಶದೊಳಗೆ ಅಭಿವೃದ್ಧಿ ಕಾರ್ಯಗಳು ನಡೆಯುವುದು ಸಾಮಾನ್ಯ" ಎಂದು ಗುರುವಾರ ಸ್ಪಷ್ಟಪಡಿಸಿದೆ.

ಗುರುವಾರ ಮಾಧ್ಯಮ ಸಭೆಯೊಂದರ ಪ್ರಶ್ನೆಗೆ ಉತ್ತರ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್​, "ಜಂಗ್ನಾನ್ ಪ್ರದೇಶದ (ದಕ್ಷಿಣ ಟಿಬೆಟ್) ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಅದನ್ನು ಅರುಣಾಚಲ ಪ್ರದೇಶ ಎಂದು ಕರೆಯುವವರನ್ನು ನಾವು ಈವರೆಗೆ ನೋಡಿಲ್ಲ" ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಮೂಲಕ ಅರುಣಾಚಲ ಪ್ರದೇಶ ಚೀನಾದ ಭೂ ಭಾಗ ಎಂಬುದನ್ನು ಚೀನಾ ಮತ್ತೊಮ್ಮೆ ಪುನರುಚ್ಚರಿಸಿದೆ.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹಲವು ದಶಕಗಳಿಂದ ಹೇಳುತ್ತಿದೆ. ಈ ಸಂಬಂಧ ಭಾರತ ಮತ್ತು ಚೀನಾ ನಡುವೆ ಶಾಶ್ವತ ಬಿಕ್ಕಟ್ಟು ಇದೆ. ಆದರೆ ಈಶಾನ್ಯ ರಾಜ್ಯವು ದೇಶದ ಅವಿಭಾಜ್ಯ ಅಂಗ ಎಂಬುದು ಭಾರತದ ಸ್ಥಿರ ನಿಲುವು.

"ಚೀನಾದ ಅಭಿವೃದ್ಧಿ ಮತ್ತು ನಿರ್ಮಾಣ ಚಟುವಟಿಕೆಗಳು ನಮ್ಮ ಭೂಪ್ರದೇಶದೊಳಗೆ ಸಾಮಾನ್ಯವಾಗಿದೆ. ಇದು ನಮ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಟೀಕೆಗೆ ಅವಕಾಶವಿಲ್ಲ" ಎಂದು ಹುವಾ ಹೇಳಿದ್ದಾರೆ ಎಂಬುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

"ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿದ್ದು. ಇದು ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ. ಆಗಸ್ಟ್ 26, 2019 ರ ಉಪಗ್ರಹ ಚಿತ್ರದಲ್ಲಿ ಅಲ್ಲಿ ಯಾವುದೇ ಗ್ರಾಮದ ಕುರುಹು ಇರಲಿಲ್ಲ. ಹಾಗಾಗಿ ಇದೀಗ ನೂತನವಾಗಿ ರೂಪಗೊಂಡಿರುವ ಗ್ರಾಮ ಕಳೆದ ವರ್ಷ ನಿರ್ಮಾಣವಾಗಿದೆ" ಎಂದು ಅಂದಾಜಿಸಲಾಗಿದೆ.

ನವೆಂಬರ್ 1, 2020 ದಿನಾಂಕ ನಮೂದಿಸಲ್ಪಟ್ಟಿರುವ ಈ ಉಪಗ್ರಹ ಚಿತ್ರಗಳನ್ನು ಹಲವಾರು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮವು ವಾಸ್ತವಿಕ ಗಡಿ ರೇಖೆಯಿಂದ ಅಂದಾಜು 4.5 ಕಿಮೀ ಒಳಗಿದೆ.

ಇದನ್ನೂ ಓದಿ: Indo-China Conflict: ಅರುಣಾಚಲ ಪ್ರದೇಶದ ಗಡಿಯಲ್ಲಿ ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!ಈ ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಪಡೆದಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ. ಭಾರತ ಸರ್ಕಾರ ತನ್ನ ಅಧಿಕೃತ ನಕ್ಷೆ ಎಂದು ಬಳಸುವ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಆನ್ಲೈನ್ ನಕ್ಷೆಯಲ್ಲೂ ಚೀನಾದ ಈ ಗ್ರಾಮ ಭಾರತದ ಭೂಭಾಗದಲ್ಲಿರುವುದು ಕಾಣಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Youtube Video

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, "ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ. ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ. ಗಡಿ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯ ಉತ್ತಮ ಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಗಡಿ ಪ್ರದೇಶದ ಜನರಿಗೆ ಅನುಕೂಲವಾಗಲು ಅಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದೆ.
Published by: MAshok Kumar
First published: January 22, 2021, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories