China Defence Budget 17.58 ಲಕ್ಷ ಕೋಟಿ ರೂಪಾಯಿ! ಯುದ್ಧಕ್ಕೆ ಸಿದ್ಧವಾಗಲು ಸೈನಿಕರಿಗೆ ಸೂಚನೆ

ಚೀನಾದ ಸೇನೆಯ ಬಜೆಟ್ ಭಾರತಕ್ಕಿಂತ ಎಷ್ಟು ಹೆಚ್ಚು?

ಚೀನಾದ ಸೇನೆಯ ಬಜೆಟ್ ಭಾರತಕ್ಕಿಂತ ಎಷ್ಟು ಹೆಚ್ಚು?

ಸದ್ಯ ಭಾರತದ ಜೊತೆ ಚೀನಾ ಕಾಲು ಕೆರೆದುಕೊಂಡು ಜಗಳ ಮಾಡುವುದರಲ್ಲಿ ತಲ್ಲೀನವಾಗಿದೆ. ಪೂರ್ವ ಲಡಾಖ್​ನಲ್ಲಿ ಭಾರತದೊಂದಿಗಿನ ಬಿಕ್ಕಟ್ಟು ಮತ್ತು ಅಮೆರಿಕದೊಂದಿಗೆ ಹೆಚ್ಚುತ್ತಿರುವ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆಯು ಚೀನಾಕ್ಕೆ ತಲೆಬಿಸಿ ಹೆಚ್ಚಿಸಿದೆ.

  • Share this:

ಚೀನಾ ಇಂದು (ಫೆಬ್ರುವರಿ 5) ತನ್ನ ವಾರ್ಷಿಕ ರಕ್ಷಣಾ ಬಜೆಟ್ (China Defence Budget) ಮಂಡಿಸಿದ್ದು ಹಿಂದಿನ ವರ್ಷಕ್ಕಿಂತ ಈವರ್ಷ ರಕ್ಷಣೆಗೆ ಮಾಡುವ ವೆಚ್ಚವನ್ನು ಶೇಕಡಾ 7.1 ರಷ್ಟು ಹೆಚ್ಚಳ ಮಾಡಿದೆ. 23,000 ಕೋಟಿ ಅಮೆರಿಕನ್ ಡಾಲರ್ ಮೀಸಲಿಟ್ಟಿದೆ. ಚೀನಾದ ಈವರ್ಷದ ರಕ್ಷಣಾ ಬಜೆಟ್ ಗಾತ್ರ ಭಾರತದ ರೂಪಾಯಿಯಲ್ಲಿ ಒಟ್ಟು 17,57,786.50 ಕೋಟಿ ಅರ್ಥಾತ್ 17.58 ಲಕ್ಷ ಕೋಟಿ! ಅಂದಹಾಗೆ ಭಾರತೀಯರು ಗಮನಿಸಲೇಬೇಕಾದ ವಿಷಯವೆಂದರೆ ಇದು ಭಾರತ ರಕ್ಷಣೆಗೆ ವಿನಿಯೋಗಿಸುವ ಹಣಕ್ಕಿಂತ (Indian Defence Budget) ಮೂರು ಪಟ್ಟು ಹೆಚ್ಚು ದೊಡ್ಡ ಬಜೆಟ್ ಆಗಿದೆ. 2022ನೇ ವರ್ಷದ ಭಾರತದ ರಕ್ಷಣಾ ಬಜೆಟ್ ಗಾತ್ರ 5.25 ಲಕ್ಷ ಕೋಟಿ (ಸುಮಾರು USD 70 ಶತಕೋಟಿ) ಆಗಿದೆ.


ಕಳೆದ ವರ್ಷ USD 209 ಶತಕೋಟಿಯ ರಕ್ಷಣಾ ಬಜೆಟ್ ಮಂಡಿಸಿದ್ದ ಚೀನಾ ಈವರ್ಷ USD 230 ಶತಕೋಟಿಗೆ ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚಳ ಮಾಡಿದೆ. ಈಮೂಲಕ ಶತ್ರು ಪಾಳಯಕ್ಕೆ ಖಡಕ್ ಎಚ್ಚರಿಕೆಯ ಸಂದೇಶವನ್ನೇ ಕಮ್ಯುನಿಸ್ಟ್ ಆಡಳಿತದ ದೇಶ ನೀಡಿದಂತಾಗಿದೆ. ಅಮೆರಿಕದ ನಂತರ ನಂತರ ಚೀನಾವು ವಿಶ್ವದ ಎರಡನೇ ಅತಿದೊಡ್ಡ ರಕ್ಷಣಾ ಬಜೆಟ್ ಮಂಡಿಸಿದಂತಾಗಿದೆ.


ಸಮಗ್ರ ಯುದ್ಧಕ್ಕೆ ಸಿದ್ಧವಾಗಲು ಸೂಚನೆ!
ರಕ್ಷಣಾ ಬಜೆಟ್ ಅನ್ನು ಸಿದ್ಧಪಡಿಸಿದ ಕುರಿತು ಚೀನಾದ ಸಂಸತ್ತಿಗೆ ಪ್ರಸ್ತುತಪಡಿಸಿದ ತಮ್ಮ ವರದಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್ಎ) ಸಮಗ್ರ ಯುದ್ಧಕ್ಕೆ ಸನ್ನದ್ಧತೆ ಮಾಡಿಕೊಳ್ಳಬೇಕು. ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಚೀನಾ ಸರ್ಕಾರದ ಪ್ರತಿನಿಧಿಯೋರ್ವರು ತಿಳಿಸಿದ್ದಾರೆ.


ಇದನ್ನೂ ಓದಿ: Shocking News: ಉಕ್ರೇನ್‌ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ರಾ ರಷ್ಯಾ ಸೈನಿಕರು?


ಚೀನಾದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಚೀನಾ ಸೇನೆಯು ಭವಿಷ್ಯದಲ್ಲಿ ಮಿಲಿಟರಿ ಹೋರಾಟಗಳನ್ನು ನಡೆಸಬೇಕಾಗಿದೆ. ಮತ್ತು ಅಂತಹ ಹೋರಾಟಗಳನ್ನು ಅತ್ಯಂತ ಬಲಿಷ್ಠ ಸೇನೆಯನ್ನು ಹೊಂದುವ ಮೂಲಕವೇ ಗೆಲ್ಲಲು ಸಾಧ್ಯವಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.


ಜಗಳ ಮಾಡುವುದೇ ಕೆಲಸ!
ಸದ್ಯ ಭಾರತದ ಜೊತೆ ಚೀನಾ ಕಾಲು ಕೆರೆದುಕೊಂಡು ಜಗಳ ಮಾಡುವುದರಲ್ಲಿ ತಲ್ಲೀನವಾಗಿದೆ. ಪೂರ್ವ ಲಡಾಖ್​ನಲ್ಲಿ ಭಾರತದೊಂದಿಗಿನ ಬಿಕ್ಕಟ್ಟು ಮತ್ತು ಅಮೆರಿಕದೊಂದಿಗೆ ಹೆಚ್ಚುತ್ತಿರುವ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆಯು ಚೀನಾಕ್ಕೆ ತಲೆಬಿಸಿ ಹೆಚ್ಚಿಸಿದೆ.


ನಾವು ರಾಷ್ಟ್ರೀಯ ರಕ್ಷಣೆ ಮತ್ತು ಮಿಲಿಟರಿಯ ಸುಧಾರಣೆಯನ್ನು ಮುಂದುವರಿಸುತ್ತೇವೆ. ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನವೀನ ಉಪಕರಣಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಚೀನಾದ ರಕ್ಷಣ ಬಜೆಟ್ ಕುರಿತ ವರದಿಯಲ್ಲಿ ಲೀ ಎಂಬ ಸರ್ಕಾರಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.


ಜನರ ಜೊತೆ ಬಾಂಧವ್ಯ ಹೆಚ್ಚಿಸಿಕೊಳ್ತಾರಂತೆ!
ಎಲ್ಲ ಹಂತಗಳಲ್ಲಿಯೂ ಸರ್ಕಾರವು ರಾಷ್ಟ್ರೀಯ ರಕ್ಷಣೆ ಮತ್ತು ಸಶಸ್ತ್ರ ಪಡೆಗಳ ಅಭಿವೃದ್ಧಿಗೆ ಬಲವಾದ ಬೆಂಬಲವನ್ನು ನೀಡಬೇಕು. ಮಿಲಿಟರಿ ಮತ್ತು ಸರ್ಕಾರದ ನಡುವೆ ಜೊತೆಗೆ ಮಿಲಿಟರಿ ಮತ್ತು ಜನರ ನಡುವಿನ ಬಾಂಧವ್ಯವು ಚೆನ್ನಾಗಿ ಇರುತ್ತದೆ. ಹಂತಹಂತವಾಗಿ ಬೆಳವಣಿಗೆಯನ್ನು ಹೊಂದುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ರಕ್ಷಣಾ ಬಜೆಟ್ನಲ್ಲಿನ ಹೆಚ್ಚಳಕ್ಕೆ ಅಮೆರಿಕಾ ಹೇಗೆ ಪ್ರತಿಕ್ರಿಯಿಸುತ್ತದೆ. ಮುಂದಿನ ವರ್ಷ ಚೀನಾ ತನ್ನ ರಕ್ಷಣಾ ಬಜೆಟ್ ಅನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದನ್ನು ನಾವು ನೋಡುತ್ತೇವೆ, ಆದರೆ ಇದು ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಕಾರಣವಾಗುತ್ತದೆ ಎಂದು ತೋರುತ್ತಿದೆ ಎಂದು ಜಾಗತಿಕ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕರೊಬ್ಬರು ಅಭಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Ceasefire: ಕದನ ವಿರಾಮ ಘೋಷಿಸಿದ ರಷ್ಯಾ, ನಾಗರಿಕರಿಗಾಗಿ ಕಾರಿಡಾರ್​ಗಳು


ಅಮೆರಿಕದ ಪೆಂಟಗಾನ್ ತನ್ನ ಮಿಲಿಟರಿಯನ್ನು ಆಧುನಿಕ ಹಂತಕ್ಕೆ ಒಯ್ಯಲು ಪ್ರಯತ್ನಿಸುತ್ತಿದೆ. ಮುಂದಿನ ಆರ್ಥಿಕ ವರ್ಷಕ್ಕೆ 770 ಶತಕೋಟಿ ಅಮೆರಿಕನ್ ಡಾಲರ್ಗಿಂತ ಹೆಚ್ಚಿನ ಮೊತ್ತವನ್ನು ರಕ್ಷಣಾ ಬಜೆಟ್​ಗಾಗಿ ವಿನಿಯೋಗಿಸಲು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮುಂದಾಗಲಿದ್ದಾರೆ ಎಂದು ವರದಿಯಾಗಿದೆ.

Published by:guruganesh bhat
First published: