• Home
  • »
  • News
  • »
  • national-international
  • »
  • China: ನಾಶದ ಹಂತದಲ್ಲಿ ಚೀನಾದ ಉದ್ಯಮಗಳು, ಓಮಿಕ್ರಾನ್ ರೂಪಾಂತರದಿಂದ ಗಂಡಾಂತರ

China: ನಾಶದ ಹಂತದಲ್ಲಿ ಚೀನಾದ ಉದ್ಯಮಗಳು, ಓಮಿಕ್ರಾನ್ ರೂಪಾಂತರದಿಂದ ಗಂಡಾಂತರ

ಕ್ಸಿ ಜಿನ್​ಪಿಂಗ್

ಕ್ಸಿ ಜಿನ್​ಪಿಂಗ್

ಚೀನಾಕ್ಕೆ ಕೋವಿಡ್‌ ಸಾಮೂಹಿಕ ಪರೀಕ್ಷೆಯು ಆದಾಯದ ಒಂದು ಮೂಲಾಧಾರವಾಗಿದೆ. ಆದರೆ ಈಗ, ಕೋವಿಡ್ ಪರೀಕ್ಷೆಗೆ ಹೆಚ್ಚಿನ ಬೇಡಿಕೆಯಿಲ್ಲ.

  • Share this:

ಬೀಜಿಂಗ್: ಚೀನಾದಲ್ಲಿ ಕೋವಿಡ್‌ ಹೆಚ್ಚು ಹೆಚ್ಚು ಸಮಸ್ಯೆಗಳನ್ನು (Covid-19 In China) ಸೃಷ್ಟಿಸುತ್ತಿದೆ. 2022ರ ಕೊನೆಯಲ್ಲಿ ಓಮಿಕ್ರಾನ್ ರೂಪಾಂತರದಿಂದ ಸೋಂಕುಗಳ ಸಂಖ್ಯೆಯಲ್ಲಿ ಭಾರೀ ಉಲ್ಬಣ ಕಂಡುಬಂದಿತು. ಡಿಸೆಂಬರ್‌ನಲ್ಲಿ ಸುಮಾರು 60,000 ಕೋವಿಡ್ ಸಾವುಗಳಾಗಿವೆ ಎಂದು ಬಹಿರಂಗಪಡಿಸಲಾಗಿದೆ. ಆದರೆ ಮತ್ತೊಂದು ವರದಿಯ ಪ್ರಕಾರ ಈ ಸಂಖ್ಯೆಗಳು ಅಲ್ಲಿಯ ಒಟ್ಟು ಸಾವು (Covid 19 Deaths In China)  ನೋವುಗಳ ಹತ್ತನೇ ಒಂದು ಭಾಗವಾಗಿರಬಹುದು ಎಂದೂ ಹೇಳಲಾಗಿದೆ.


ಚೀನಾದಲ್ಲಿ ಕೋವಿಡ್‌ ಶೂನ್ಯ ನೀತಿಯನ್ನು ಹಿಂತೆಗೆದುಕೊಂಡಿದ್ದರಿಂದ ಮತ್ತೆ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಯ್ತು. ಇಂದರಿಂದಾಗಿ ಮತ್ತೆ ಕಾರ್ಖಾನೆಗಳು ಮುಚ್ಚಲ್ಪಟ್ಟವು ಮತ್ತು ಬೇಡಿಕೆಗಳ ಕುಸಿತದೊಂದಿಗೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ. ಅಲ್ಲದೇ, ಹಠಾತ್ ಕೋವಿಡ್‌ ನೀತಿ ಬದಲಾವಣೆಯು ಉದ್ಯೋಗ ನಷ್ಟಗಳ ಅನಿರೀಕ್ಷಿತ ಸುನಾಮಿಯನ್ನೇ ಉಂಟುಮಾಡಿತು.


ಕೋವಿಡ್ ನಿಯಮಗಳ ಬದಲಾವಣೆ ಉದ್ಯಮಗಳ ನಾಶ
ಚೀನಾಕ್ಕೆ ಕೋವಿಡ್‌ ಸಾಮೂಹಿಕ ಪರೀಕ್ಷೆಯು ಆದಾಯದ ಒಂದು ಮೂಲಾಧಾರವಾಗಿದೆ. ಆದರೆ ಈಗ, ಕೋವಿಡ್ ಪರೀಕ್ಷೆಗೆ ಹೆಚ್ಚಿನ ಬೇಡಿಕೆಯಿಲ್ಲ. ಅಲ್ಲದೇ ಕಟ್ಟುನಿಟ್ಟಾದ ಶೂನ್ಯ-ಕೋವಿಡ್ ನೀತಿಯನ್ನು ಹಠಾತ್ತನೆ ರದ್ದುಗೊಳಿಸಿದ ನಂತರ ಚೀನಾದ ವೈರಸ್ ಪರೀಕ್ಷೆಯ ಬೃಹತ್ ಯಂತ್ರೋಪಕರಣಗಳ ಬೇಡಿಕೆ ರಾತ್ರೋ ರಾತ್ರಿ ಕುಸಿತ ಕಂಡಿತು. ಇದರಿಂದಾಗಿ ಪರೀಕ್ಷಾ ಕಿಟ್‌ಗಳನ್ನು ತಯಾರಿಸುವ ಮತ್ತು ಪ್ರಯೋಗಾಲಯದಲ್ಲಿ ಫಲಿತಾಂಶಗಳನ್ನು ವಿಶ್ಲೇಷಿಸುವ ಕಂಪನಿಗಳ ಆದಾಯ ಕುಸಿತ ಕಂಡಿತು.


ಹಣದ ಬಿಕ್ಕಟ್ಟು
ಅಲ್ಲದೇ ಅಂಥ ಕಂಪನಿಗಳು ಕೆಲಸಗಾರರನ್ನು ವಜಾಗೊಳಿಸುವುದು, ವೇತನ ಕಡಿತ ಮಾಡುವುದನ್ನು ಆರಂಭಿಸಿವೆ ಎಂದು ಹೇಳಲಾಗಿದೆ. ಕೋವಿಡ್-ಸಂಬಂಧಿತ ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆಯ ಕುಸಿತದ ನಂತರ ಚೀನಾದಾದ್ಯಂತ ಕಾರ್ಖಾನೆಗಳು ಹಣದ ಬಿಕ್ಕಟ್ಟು ಅನುಭವಿಸುತ್ತಿವೆ.


ಚೀನಾದ ಬೀದಿಗಳಲ್ಲಿ ಪ್ರತಿಭಟನೆಯ ಬಿಸಿ
ನೈಋತ್ಯ ಚೀನಾದ ನಗರವಾದ ಚಾಂಗ್‌ಕಿಂಗ್‌ನಲ್ಲಿ, ಕೋವಿಡ್ ಟೆಸ್ಟ್ ಕಿಟ್ ತಯಾರಕರೊಂದಿಗಿನ ವೇತನ ವಿವಾದದಲ್ಲಿ ಸಿಲುಕಿರುವ ನೂರಾರು ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಅವರು ಸಾವಿರಾರು ರ್‍ಯಾಪಿಡ್‌ ಆಂಟಿಜೆನ್‌ ಕಿಟ್‌ಗಳನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದು ನಗರದ ಸ್ಥಾವರವೊಂದರಲ್ಲಿ ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರ ಪ್ರತಿಭಟನೆಯನ್ನು ತೋರಿಸುತ್ತದೆ.
ಇನ್ನು, ಪೂರ್ವದ ನಗರವಾದ ಹ್ಯಾಂಗ್‌ಝೌನಲ್ಲಿ, ಹಲವಾರು ಕಾರ್ಮಿಕರು ಪರೀಕ್ಷಾ ಕಿಟ್ ಕಾರ್ಖಾನೆಯ ಛಾವಣಿಯ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಇನ್ನೊಂದು ಕಾರ್ಖಾನೆಯಲ್ಲಿ ಕೂಲಿ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಮಿಕರು ದಿನಗಟ್ಟಲೆ ಪ್ರತಿಭಟನೆ ನಡೆಸಿದ್ದರು. ಕಾರ್ಖಾನೆಯೊಂದರಲ್ಲಿ ಪೊಲೀಸರು ಮತ್ತು ನೂರಾರು ಕಾರ್ಮಿಕರ ನಡುವಿನ ಉದ್ವಿಗ್ನ ಘರ್ಷಣೆಯು ನೂಕುನುಗ್ಗಲಿಗೆ ಕಾರಣವಾಯಿತು ಎಂಬುದನ್ನು ವೀಡಿಯೊ ತೋರಿಸಿದೆ. ಅವರಲ್ಲಿ ಹತ್ತಾರು ಮಂದಿಯನ್ನು ಪೊಲೀಸರು ಕರೆದೊಯ್ದಿದ್ದಾರೆ.


ಈ ಮಧ್ಯೆ, "ಕೆಲಸಗಾರರಿಗೆ ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಯಾವುದೇ ಆಶ್ರಯವಿಲ್ಲ" ಎಂದು ನ್ಯೂಯಾರ್ಕ್ ಮೂಲದ ಚೀನಾ ಲೇಬರ್ ವಾಚ್‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಲಿ ಕಿಯಾಂಗ್ ಹೇಳಿದ್ದಾರೆ.


ಇದನ್ನೂ ಓದಿ: Pakistan: ನಿಜಕ್ಕೂ ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆಯಾ ಪಾಕ್​? ಶೆಹಬಾಜ್ ಷರೀಫ್ ನಾಟಕದ ಅಸಲಿಯತ್ತೇನು?


"ಈ ಪ್ರತಿಭಟನೆಗಳು ಬಹಳ ಹಿಂಸಾತ್ಮಕವಾಗಿವೆ. ಏಕೆಂದರೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಚಾನೆಲ್‌ಗಳು ಬಹಳ ಸೀಮಿತವಾಗಿವೆ. ಕಂಪನಿಯು ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಲಿ ಹೇಳಿದ್ದಾರೆ.


ಚೀನಾದ ಶೂನ್ಯ-ಕೋವಿಡ್ ಹೇಗೆ ಸಮರ್ಥನೀಯವಲ್ಲ?
ಚೀನಾದಲ್ಲಿ ಕೋವಿಡ್‌ ಪರೀಕ್ಷೆ ಮತ್ತು ಇತರ ಸಾಂಕ್ರಾಮಿಕ ನಿಯಂತ್ರಣಗಳಿಗೆ ಹಣವನ್ನು ನೀಡಲು, ಕೆಲವು ಪ್ರಾಂತ್ಯಗಳಲ್ಲಿ ಸಾರ್ವಜನಿಕ ಯೋಜನೆಗಳಿಂದ ಹಣವನ್ನು ನೀಡಲಾಗಿದೆ. ಆದರೆ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಬೋನಸ್‌ಗಳನ್ನು ಕಡಿತಗೊಳಿಸಲಾಗಿದೆ.


ಇದನ್ನೂ ಓದಿ: US Consulate: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ಏಷ್ಯಾದ ಅತಿದೊಡ್ಡ ಯುಎಸ್ ರಾಯಭಾರ ಕಚೇರಿ, ಇದರ ವಿಶೇಷತೆಗಳೇನು?


ಇದರಿಂದಾಗಿ ಚೀನಾದ ನೈಋತ್ಯದಲ್ಲಿರುವ ಗೈಝೌ ಸೇರಿದಂತೆ ಹಲವಾರು ಪ್ರಾಂತ್ಯಗಳು ಮತ್ತು ಪುರಸಭೆಗಳು ಪರೀಕ್ಷೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದವು. ಈ ಹಿಂದೆ ಭಾರೀ ಪ್ರಮಾಣದ ಲಾಭವನ್ನು ಪಡೆದ ಲ್ಯಾಬ್ ಪರೀಕ್ಷಾ ಸಂಸ್ಥೆಗಳು, ಸರ್ಕಾರಗಳು ಪಾವತಿಗಳಲ್ಲಿ ವಿಳಂಬವಾಗಿದೆ ಎಂದು ವರದಿ ಮಾಡಲು ಪ್ರಾರಂಭಿಸಿದವು ಎನ್ನಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: