• Home
 • »
 • News
 • »
 • national-international
 • »
 • Lockdown In China: ಡ್ರ್ಯಾಗನ್ ನಾಡಿನಲ್ಲಿ ಸದ್ದಿಲ್ಲದೇ ಲಾಕ್‌ಡೌನ್ ಜಾರಿ; ಚೀನಾದಲ್ಲಿ ಮತ್ತೆ ಆವರಿಸಿದ ಆತಂಕ!

Lockdown In China: ಡ್ರ್ಯಾಗನ್ ನಾಡಿನಲ್ಲಿ ಸದ್ದಿಲ್ಲದೇ ಲಾಕ್‌ಡೌನ್ ಜಾರಿ; ಚೀನಾದಲ್ಲಿ ಮತ್ತೆ ಆವರಿಸಿದ ಆತಂಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಮಾಜ ಮತ್ತು ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕೋವಿಡ್ ಝೀರೋ ನೀತಿಯನ್ನು ಜಾರಿಗೆ ತರಲು ಸ್ಥಳೀಯ ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ನೇರವಾಗಿ ವ್ಯವಹಾರಗಳೊಂದಿಗೆ ನಿರ್ಬಂಧಗಳನ್ನು ಸಂವಹನ ಮಾಡುತ್ತಿದ್ದಾರೆ ಅಥವಾ ನಗರದ ಸಣ್ಣ ವಿಭಾಗಗಳನ್ನು ಕ್ರಮೇಣವಾಗಿ ಮುಚ್ಚುತ್ತಿದ್ದಾರೆ.

ಮುಂದೆ ಓದಿ ...
 • Share this:

  ಸುಮಾರು ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಕೋವಿಡ್-19 (Covid 19) ಪತ್ತೆಯಾದ ಚೀನಾದ ನಗರವಾದ ವುಹಾನ್‌ನಲ್ಲಿರುವ ರೆಸ್ಟೋರೆಂಟ್‌ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ. ದೇಶದ ಅತಿದೊಡ್ಡ ಐಫೋನ್ (iPhone) ಕಾರ್ಖಾನೆಯ ನೆಲೆಯಾಗಿರುವ ಝೆಂಗ್‌ಝೌದಿಂದ ಕೆಲವೇ ವಿಮಾನಗಳು ಸಂಚಾರ ನಡೆಸುತ್ತಿವೆ. ಶೆನ್‌ಜೆನ್‌ನ ಟೆಕ್ ಹಬ್‌ನಲ್ಲಿರುವ ತರಗತಿಗಳಲ್ಲಿ ಮಕ್ಕಳ ಹಾಜರಾತಿಯೇ ಇಲ್ಲ. ಈ ವರ್ಷದ ಆರಂಭದಲ್ಲಿ ಶಾಂಘೈನಲ್ಲಿ (Shanghai) ನಿಯೋಜಿಸಲಾದ ಲಾಕ್‌ಡೌನ್ (Lockdown) ಆದೇಶಗಳನ್ನು ಈ ಯಾವುದೇ ಸ್ಥಳಗಳಲ್ಲಿ ಘೋಷಿಸಲಾಗಿಲ್ಲ ಆದರೂ ಇಲ್ಲಿನ ಜನರು, ವ್ಯಾಪಾರ ಸ್ಥಳಗಳು ಹಾಗೂ ಮನರಂಜನಾ ಸ್ಥಳಗಳು ಲಾಕ್‌ಡೌನ್‌ ನಿರ್ಬಂಧಿತವಾಗಿದ್ದ ಸಮಯದಲ್ಲಿ ಹೇಗಿದ್ದವೋ ಹಾಗೆಯೇ ಮುಂದುವರಿಯುತ್ತಿವೆ.


  ಸಮಾಜ ಮತ್ತು ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕೋವಿಡ್ ಝೀರೋ ನೀತಿಯನ್ನು ಜಾರಿಗೆ ತರಲು ಸ್ಥಳೀಯ ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ನೇರವಾಗಿ ವ್ಯವಹಾರಗಳೊಂದಿಗೆ ನಿರ್ಬಂಧಗಳನ್ನು ಸಂವಹನ ಮಾಡುತ್ತಿದ್ದಾರೆ ಅಥವಾ ನಗರದ ಸಣ್ಣ ವಿಭಾಗಗಳನ್ನು ಕ್ರಮೇಣವಾಗಿ ಮುಚ್ಚುತ್ತಿದ್ದಾರೆ.


  ಇದನ್ನೂ ಓದಿ: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ


  ಉದ್ದೇಶಿತ ಲಾಕ್‌ಡೌನ್ ವಿಧಾನ


  13 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ವುಹಾನ್, ನಿರ್ಬಂಧಗಳನ್ನು ಸದ್ದಿಲ್ಲದೆ ವಿಧಿಸುತ್ತಿರುವ ಅನೇಕ ಸ್ಥಳಗಳಲ್ಲಿ ಒಂದಾಗಿದೆ. ಹನ್ಯಾಂಗ್ ಮತ್ತು ಜಿಯಾಂಗಾನ್ ಎಂಬ ಎರಡು ಜಿಲ್ಲೆಗಳಲ್ಲಿ ಲಾಕ್‌ಡೌನ್‌ಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ನಗರದ ಮಧ್ಯಭಾಗದಲ್ಲಿ, ವುಚಾಂಗ್‌ನಲ್ಲಿರುವ ವೆಸ್ಟಿನ್ ಹೋಟೆಲ್‌ಗೆ ರೆಸ್ಟೋರೆಂಟ್ ಅನ್ನು ಮುಚ್ಚಲು ತಿಳಿಸಲಾಗಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಉದ್ದೇಶಿತ ಲಾಕ್‌ಡೌನ್ ಕಾರ್ಯವಿಧಾನವನ್ನು ನಗರವು ಕಾರ್ಯಗತಗೊಳಿಸುತ್ತಿದೆ ಎಂಬುದಾಗಿ ನಗರದ ನಿವಾಸಿಯೊಬ್ಬರು ತಿಳಿಸಿದ್ದು ಯಾವುದೇ ಆದೇಶವು ಪ್ರತಿಯೊಬ್ಬರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.


  ನಿರ್ಬಂಧಗಳ ಬಗ್ಗೆ ಕೆಲವೊಂದು ಗೊಂದಲ


  ವುಹಾನ್‌ನಲ್ಲಿನ ಹೆಚ್ಚಿನ ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿದ್ದರೂ, ಕೆಲವು ತೆರೆದಿರಬೇಕು, ನಿರ್ಬಂಧಗಳ ಬಗ್ಗೆ ಕೆಲವೊಂದು ಗೊಂದಲಗಳನ್ನು ಪ್ರತಿಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ಕೋವಿಡ್-19 ಪರಿಸ್ಥಿತಿಯನ್ನು ಅವಲಂಬಿಸಿಕೊಂಡು ಆದೇಶಗಳು ಅನ್ವಯವಾಗುತ್ತವೆ ಎಂಬುದು ನಿವಾಸಿಗಳ ಹೇಳಿಕೆಯಾಗಿದೆ.


  ತೈವಾನೀಸ್ ಕಂಪನಿ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ವಿಶಾಲವಾದ ಐಫೋನ್ ಅಸೆಂಬ್ಲಿ ಸೈಟ್‌ಗೆ ನೆಲೆಯಾಗಿರುವ ಮಧ್ಯ ಚೀನಾದ ನಗರವಾದ ಝೆಂಗ್‌ಝೌನಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಸಣ್ಣ ಪ್ರಮಾಣದ ಲಾಕ್‌ಡೌನ್ ನಿರ್ಬಂಧಗಳನ್ನು ಹೇರಿದ್ದು ಚಿಕ್ಕದಾದ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಿದ್ದಾರೆ. ಸುಮಾರು 13 ಮಿಲಿಯನ್ ನಿವಾಸಿಗಳಿರುವ ನಗರವು ಇದೀಗ ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿಗೆ ಒಳಗಾಗಿದೆ.


  ಸ್ತಬ್ಧವಾದ ಶಾಲೆಗಳು


  ಚೀನಾದ ಗಾರ್ಮೆಂಟ್ ಉದ್ಯಮದ ನೆಲೆಯಾಗಿರುವ ಗುವಾಂಗ್‌ಝೌ, ದಕ್ಷಿಣದಲ್ಲಿ ಫುಝೌ ಮತ್ತು ಶಾಂಘೈ ಸೇರಿದಂತೆ ಇತರ ಪ್ರಮುಖ ಉತ್ಪಾದನಾ ವಲಯಗಳು ಝೆಂಗ್‌ಝೌ ಮತ್ತು ವುಹಾನ್‌ನ ನೀತಿಯನ್ನು ಅನುಸರಿಸುತ್ತಿವೆ. ಸಣ್ಣ ಪ್ರದೇಶ ಇಲ್ಲವೇ ನೆರೆಹೊರೆಯ ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿದ್ದು ವ್ಯವಹಾರಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ. ಶಾಂಘೈ ಮತ್ತು ಶೆನ್‌ಜೆನ್‌ನಲ್ಲಿನ ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನು ಮುಚ್ಚುವ ಅಪರೂಪದ ಪ್ರಕಟಣೆಗಳನ್ನು ನೀಡುತ್ತಿದ್ದು ಕೋವಿಡ್-19 ನಿರ್ಬಂಧಗಳಿಂದಾಗಿ ಮಕ್ಕಳ ದೈಹಿಕ ತರಗತಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೋಷಕರಿಗೆ ಸಂದೇಶ ಕಳುಹಿಸಲಾಗುತ್ತಿದೆ.


  ಇದನ್ನೂ ಓದಿ: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ


  ಅಧಿಕಾರಿಗಳ ಮುಚ್ಚುಮರೆಯ ಕ್ರಮ


  ಅಧಿಕಾರಿಗಳು ಮುಚ್ಚುಮರೆಯ ಕ್ರಮಗಳನ್ನು ನಡೆಸುತ್ತಿದ್ದು ಇದರಿಂದ ಕುಟುಂಬಗಳು ನರಳುವಂತಾಗಿವೆ ಎಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ. ಕೋವಿಡ್ ನಿರ್ಬಂಧಗಳನ್ನು ಅಲ್ಲಲ್ಲಿ ವಿಧಿಸುತ್ತಿರುವುದರಿಂದ ಒಂದು ರೀತಿಯ ಬಂಧನಕ್ಕೆ ತಾವು ಒಳಗಾಗಿರುವುದಾಗಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ ಹಾಗೂ ಶಾಲೆಗಳು ಈ ವರ್ಷದಲ್ಲಿ 100 ದಿನಗಳಿಗಿಂತಲೂ ಕಡಿಮೆ ಅವಧಿಗಳಿಗೆ ಮಾತ್ರವೇ ದೈಹಿಕ ಹಾಜರಾತಿಯ ತರಗತಿಗಳನ್ನು ನಡೆಸಿವೆ ಎಂದು ಪೋಷಕರೊಬ್ಬರು ಮಾಹಿತಿ ನೀಡಿದ್ದಾರೆ.


  ಚೀನಾದಾದ್ಯಂತ ರಹಸ್ಯ ನಿರ್ಬಂಧಗಳನ್ನು ಅಧಿಕಾರಿಗಳು ಹೇರುತ್ತಿರುವುದು ಒಂದು ರೀತಿಯ ಇಕ್ಕಟ್ಟಿಗೆ ಜನಜೀವನವನ್ನು ದೂಡುತ್ತಿದೆ ಎಂದು ಬೀಜಿಂಗ್ ಮೂಲದ ಕನ್ಸಲ್ಟೆನ್ಸಿ ಟ್ರಿವಿಯಂ ಚೀನಾದ ಹಿರಿಯ ವಿಶ್ಲೇಷಕ ಆಂಡಿ ಚೆನ್ ತಿಳಿಸಿದ್ದಾರೆ. ಕೋವಿಡ್ ಶೂನ್ಯ ವಿಧಾನದ ಭವಿಷ್ಯದ ಮಾರ್ಗದರ್ಶನಗಳು ಸೇರಿದಂತೆ ಕೇಂದ್ರದಿಂದ ಸ್ಪಷ್ಟವಾದ ಸೂಚನೆಗಳನ್ನು ಜನರು ನಿರೀಕ್ಷಿಸುತ್ತಿರುವಾಗ ತಳಮಟ್ಟದ ಅಧಿಕಾರಿಗಳು ಲಾಕ್‌ಡೌನ್ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

  Published by:Precilla Olivia Dias
  First published: