Russia ಆಯ್ತು, ಈಗ ದಾಳಿಗೆ ಸಜ್ಜಾದ ಚೀನಾ! ಏನು ಮಾಡೋದಕ್ಕೆ ಹೊರಟಿದೆ ಡ್ರ್ಯಾಗನ್ ರಾಷ್ಟ್ರ?

ಅಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮೇಲೆ ದಾಳಿ ನಡೆಸುತ್ತಿದೆ. ಶತಾಯಗತಾಯ ಉಕ್ರೇನ್‌ನನ್ನು ಮಟ್ಟಹಾಕಲೇ ಬೇಕು ಅಂತ ಸಮರ ಸಾರಿದೆ. ರಷ್ಯಾದ ಈ ಯುದ್ಧ ಇತ್ತ ಚೀನಾಕ್ಕೆ ಸ್ಫೂರ್ತಿ ನೀಡಿದಂತಿದೆ. ಮೊದಲೇ ಕಾಲು ಕೆರೆದುಕೊಂಡು ಯುದ್ಧಕ್ಕೆ ಬರುವ ಚೀನಾ, ಈಗ ದೊಡ್ಡದೊಂದು ಪ್ಲಾನ್ ಮಾಡಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಷ್ಯಾ (Russia) ಉಕ್ರೇನ್ (Ukraine) ಮೇಲೆ ದಾಳಿ ಮಾಡಿದ್ದೆ ಮಾಡಿದ್ದು, ಜಗತ್ತಿನ (World) ಎದುರು ವಿಶ್ವದ ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುತ್ತಿದ್ದ ಅಮೆರಿಕದ (America) ಬಣ್ಣ ಬಟಾಬಯಲಾಗಿದೆ.  ಅಫ್ಘಾನಿಸ್ತಾನವನ್ನು(Afghanistan) ತಾಲಿಬಾನಿಗಳ (Taliban) ಕೈಗೆ ಸಿಲುಕಿಸಿ ಅಫ್ಘಾನಿಸ್ತಾನದಿಂದ ತನ್ನ ಸೇನಾಪಡೆಗಳನ್ನು ಪಡೆದಿದ್ದ ಅಮೆರಿಕ, ರಷ್ಯಾ ವಿರುದ್ಧ ಪರೋಕ್ಷವಾಗಿ ಉಕ್ರೇನ್ ಗೆ ಯುದ್ಧಕ್ಕೆ (War) ಬೆಂಬಲ ನೀಡಿ ಈಗ ಕೇವಲ, ರಷ್ಯಾದ ವಿರುದ್ಧ ಆರ್ಥಿಕ (Economic) ನಿರ್ಬಂಧ ವಿಧಿಸುವ ನಾಟಕ ಆಡುತ್ತಿದೆ.. ಇತ್ತ ರಷ್ಯಾದ ದಾಳಿಯಿಂದ ತತ್ತರಿಸಿ ಹೋಗುತ್ತಿರುವ ಉಕ್ರೇನ್ ಜಗತ್ತಿನ ಎದುರು ಅಂಗಲಾಚಿ ಸಹಾಯಕ್ಕೆ ಬೇಡಿಕೊಳ್ಳುತ್ತಿದ್ದೆ..

  ಪ್ರಾಬಲ್ಯ ಇರುವ ರಷ್ಯಾ ಹೇಗೆ ಉಕ್ರೇನ್ ಮೇಲೆ ದಾಳಿ ನಡೆಸಿ ಅಬ್ಬರ ಮೆರೆಯುತ್ತಿದೆಯೋ ಅದರ ಲಾಭವನ್ನು ಮತ್ತೊಂದು ಕುತಂತ್ರಿ ರಾಷ್ಟ್ರ ಪಡೆದುಕೊಳ್ಳಲು ಯೋಜನೆ ರೂಪಿಸುತ್ತಿದೆ..

  ಹೌದು ಅಮೆರಿಕ ಸೇರಿ ವಿಶ್ವದ ಪ್ರಾಬಲ್ಯ ಇರುವ ರಾಷ್ಟ್ರಗಳು ಹೇಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂಬುದನ್ನ ಕಾದು ನೋಡಿ, ಚೀನಾ ಸಹ ಬಾಲ ಬಿಚ್ಚಲು ಸಿದ್ಧವಾಗಿದೆ.. ಹಲವಾರು ವರ್ಷಗಳಿಂದ ಚೀನಾ ಕಣ್ಣಿಟ್ಟಿರುವ ರಾಷ್ಟ್ರವನ್ನ ವಶಪಡಿಸಿಕೊಳ್ಳಲು ಕುತಂತ್ರಿ ಡ್ರ್ಯಾಗನ್ ರಾಷ್ಟ್ರ ಹೊಂಚು ಹಾಕುತ್ತಿದೆ..

  ತೈವಾನ್ ಕಬಳಿಸಲು ಚೀನಾ ತಂತ್ರ.

  ಟಿಬೆಟನ್ ತನ್ನ ಸ್ವತ್ತಿಗೆ ತೆಗೆದುಕೊಂಡ ಚೀನಾ ಹೇಗಾದರೂ ಸರಿ ತೈವಾನ್ ಅನ್ನು ಕೂಡ ತನ್ನ ಪ್ರದೇಶಕ್ಕೆ ವಿಲೀನ ಮಾಡಿಕೊಳ್ಳಬೇಕು ಎಂದು ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದೆ. ಹೀಗಾಗಿ ಹಲವಾರು ಬಾರಿ ತೈವಾನ್ ಮೇಲೆ ಸಣ್ಣ ಪ್ರಮಾಣದಲ್ಲಿ ಆಕ್ರಮಣಗಳನ್ನು ಮಾಡಿ ಎಚ್ಚರಿಕೆಯನ್ನು ನೀಡುತ್ತಾ ಬಂದಿರುವ ಚೀನಾ, ಈಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದನ್ನು ನೆಪವಾಗಿಟ್ಟುಕೊಂಡು, ತೈವಾನ್ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸಿದೆ.

  ಆದರೆ ತೈವಾನ ಮೇಲೆ ಚೀನಾ ಆಕ್ರಮಣ ಮಾಡುವುದಕ್ಕೂ ಕಾದು ನೋಡುವ ಲೆಕ್ಕಚಾರಕ್ಕೆ ಮೊರೆಹೋಗಿದೆ.ಯಾಕಂದ್ರೆ ರಷ್ಯಾದ ಮೇಲೆ ಈಗಾಗಲೇ ಹಲವು ರಾಷ್ಟ್ರಗಳು ಕೆಂಗಣ್ಣು ಬೀರಿದೆ. ಹೀಗಾಗಿ ರಷ್ಯಾದ ಮೇಲೆ ವಿಶ್ವದ ಇತರ ರಾಷ್ಟ್ರಗಳು ತಿರುಗಿ ಬಿದ್ದಿರುವಂತೆ ತನ್ನ ಮೇಲೂ ತಿರುಗಿ ಬೀಳಬಹುದು ಎಂಬ ಭಯವಿದೆ. ಅದರಲ್ಲೂ ತೈವಾನ್ ಗೆ ಅಮೇರಿಕಾದ ಬೆಂಬಲ ಇರುವುದರಿಂದ ಚೀನಾ ತೈವಾನ್ ಮೇಲೆ ದಾಳಿ ಮಾಡಲು ಹಿಂದೆಮುಂದೆ ನೋಡುತ್ತಿದೆ.

  ಇದನ್ನೂ ಓದಿ: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?

  ತೈವಾನ್ ಆಸ್ತಿತ್ವಕ್ಕೆ ಬಂದಿದ್ದು ಹೇಗೆ...

  ಎರಡನೇ ಮಹಾಯುದ್ಧದ ಅನಂತರ ಚೀನಾದಲ್ಲಿ ಕೌಮಿಂಟಾಂಗ್ ನೇತೃತ್ವದ ಗಣರಾಜ್ಯ ಮತ್ತು ಚೀನಾದ ಕಮ್ಯುನಿಸ್ಟರ ನಡುವೆ ಅಂತರ್ಯುದ್ಧ ನಡೆದಾಗ, ಜಪಾನಿಯರು ಯುದ್ಧದಲ್ಲಿ ಸೋತರು. ಅನಂತರ ಚೀನಾದ ಎಲ್ಲೆಡೆ ಭಾರೀ ಹೋರಾಟಗಳು ನಡೆದವು. ರಾಷ್ಟ್ರೀಯವಾದಿಗಳನ್ನು ಫಾರ್ಮೋಸಾ ದ್ವೀಪಕ್ಕೆ ಓಡಿಸಲಾಯಿತು.

  ಮಾರ್ಷಲ್ ಚಿಯಾಂಗ್-ಕೈ – ಶೇಕ್ ನೇತೃತ್ವದಲ್ಲಿ ರಾಷ್ಟ್ರೀಯವಾದಿಗಳು ಚೀನಾದ ಕರಾವಳಿಯಿಂದ 80-90 ಕಿಮೀ ದೂರದಲ್ಲಿರುವ ಫಾರ್ಮೋಸಾದಲ್ಲಿ ಆಶ್ರಯ ಪಡೆದರು. ಅಂದಿನಿಂದ ಈ ಪ್ರದೇಶವನ್ನು ಚೀನಾಕ್ಕೆ ಸಂಯೋಜಿಸುವ ಉದ್ದೇಶದಿಂದ ಈ ದ್ವೀಪವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ತೈವಾನ್ ಅಸ್ತಿತ್ವಕ್ಕೆ ಬಂದದ್ದು ಹೀಗೆ. ಅದೀಗ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.

  ಇನ್ನು, 1995-96ರಲ್ಲಿ, ಚೀನಾ - ತೈವಾನ್‌ ಕಿತ್ತಾಟ ಇನ್ನೂ ಗಂಭೀರ ಸ್ವರೂಪ ಪಡೆದಿತ್ತು. ಚೀನಾ ತೈವಾನ್ ಸುತ್ತಮುತ್ತಲಿನ ಸಮುದ್ರಗಳಲ್ಲಿ ಕ್ಷಿಪಣಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ ಬಳಿಕ ಯುಎಸ್ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ.. ಹೀಗಾಗಿ ಇದು ಚೀನಾಗೆ ನುಂಗಲಾರದ ತುತ್ತಾಗಿದೆ.

  ತೈವಾನ್ ಗೆ ಅಮೇರಿಕಾದ ಬೆಂಬಲ..

  ತೈವಾನ್ ಸಮೀಪದಲ್ಲಿರುವ ಜಪಾನ್​ನ ಓಕಿನಾವಾ ಮತ್ತು ಯೊಕೊಹಾಮಾದಲ್ಲಿ ಅಮೆರಿಕ ವಾಯುನೆಲೆಗಳನ್ನು ಹೊಂದಿದೆ. ಗುವಾಮ್ ಅತಿದೊಡ್ಡ ವಾಯುನೆಲೆಯಾಗಿದ್ದು, ಅಲ್ಲಿ 96 ಮಿಲಿಯನ್ ಲೀಟರ್ ಪೆಟ್ರೋಲ್ ಸಂಗ್ರಹಿಸಿದ್ದಾರೆ. ಎಫ್ 20, ಎಫ್ 35 ಸ್ಟೆಲ್ತ್ ಏರ್​ಕ್ರಾಫ್ಟ್​, ಬಿ 52 ಬಾಂಬರ್​, ಬಿ 1, ಬಿ 2 ಬಾಂಬರ್​ಗಳು ಅಲ್ಲಿಂದ ಕಾರ್ಯನಿರ್ವಹಿಸುತ್ತವೆ. ಚೀನಾದ ಮುಖ್ಯ ಭೂಭಾಗ ಮತ್ತು ಸಮೀಪದಲ್ಲಿ ದಾಟಿ ಹೋಗುತ್ತಿರುವ ಯಾವುದೇ ಚೀನೀ ನೌಕಾಪಡೆಯ ಮೇಲೆ ದಾಳಿ ಮಾಡಬಹುದು.

  ಚೀನಾ ತೈವಾನ್ ಮೇಲೆ ದಾಳಿ ಮಾಡುವುದು ಅಷ್ಟು ಸುಲಭದ ಮಾತಲ್ಲ

  ಇನ್ನು ಕುತಂತ್ರಿ ಚೀನಾ ಯೋಜನೆ ರೂಪಿಸಿ ರುವಂತೆಯೇ ತೈವಾನ್ ಮೇಲೆ ದಾಳಿ ಮಾಡುವುದು ಅಷ್ಟೊಂದು ಸುಲಭವಾದ ಮಾತಲ್ಲ.ತೈವಾನ್ ರಕ್ಷಣೆಗೆ ಒಂದು ಕಡೆ ಅಮೇರಿಕಾ ಟೊಂಕಕಟ್ಟಿ ನಿಂತಿದೆ. ಅಲ್ಲದೇ ಚೀನಾ ಮೇಲೆ ಕೆಂಗಣ್ಣು ಬೀರುತ್ತಿರುವ ಭಾರತ ಸಹ ತೈವಾನ್ ಗೆ ಸಹಾಯ ಮಾಡಬಹುದು. ಅಲ್ಲದೇ ವಿಶ್ವದ ಹಲವು ರಾಷ್ಟ್ರಗಳಿಗೆ ತೈವಾನ್ ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿ ಇರುವುದರಿಂದ ತೈವಾನ್ ಏನಾದರೂ ಚೀನಾ ಕೈವಶವಾದರೆ ದಕ್ಷಿಣ ಚೀನಾ ಸಮುದ್ರ ಮಾರ್ಗದಲ್ಲಿ ಜಾಗತಿಕ ನೌಕೆಗಳ ಸಂಚಾರವೇ ಕಷ್ಟಸಾಧ್ಯವಾಗುವುದರಿಂದ ಅದನ್ನು ಉಳಿಸಿಕೊಳ್ಳುವುದು ಬಹು ಮುಖ್ಯ.

  ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡ ವಿದ್ಯಾರ್ಥಿಗಳಿಗೆ ಥಳಿತ..! ಆಗಿದ್ದೇನು?

  ಹೀಗಾಗಿ ದಕ್ಷಿಣ ಚೀನಾ ಸಮುದ್ರ ಏನಾದರೂ ಚೀನಾದ ವಶಕ್ಕೆ ಹೋಗುವುದು ಎಂದಾದರೆ ಒಂದು ಅತ್ಯಗತ್ಯ ಪೂರೈಕೆ ಸರಪಳಿಯನ್ನೇ ಜಗತ್ತು ಕಳೆದುಕೊಳ್ಳುತ್ತದೆ. ಹೀಗಾಗಿ ತೈವಾನ್ ವಿಚಾರದಲ್ಲಿ ಅಮೆರಿಕ ಸೇರಿದಂತೆ ಎಲ್ಲರಿಗೂ ನಿರ್ಣಾಯಕವಾಗಿ ಹೋರಾಡಲೇಬೇಕಾದ ಸ್ಥಿತಿ ಇದೆ. ಹೀಗಾಗಿ ಭಾರತ-ಅಮೆರಿಕಾ ಸೇರಿ ಐರೋಪ್ಯ ರಾಷ್ಟ್ರಗಳು ಸಹ ಚೀನಾ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದರಿಂದ ಪ್ರಸ್ತುತ ಕುತಂತ್ರಿ ಚೀನಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
  Published by:ranjumbkgowda1 ranjumbkgowda1
  First published: