ನೈರುತ್ಯ ಚೀನಾದಲ್ಲಿ ಕಲ್ಲಿದ್ದಲು ಗಣಿ ದುರಂತ - 16 ಕಾರ್ಮಿಕರು ಸಾವು
ಚಾಂಗ್ ಕ್ವಿಂಗ್ ನಗರದಿಂದ ಹೊರ ಪ್ರದೇಶದಲ್ಲಿ ಈ ಸಾಂಗ್ ಜೋ ಕಲ್ಲಿದ್ದಲು ಗಣಿಕಾರಿಕೆ ನಿಕ್ಷೇಪವು ಇದೆ. ಇದು ಚಾಂಗ್ಕಿಂಗ್ ಎನರ್ಜಿ ಎಂಬ ರಾಜ್ಯ ಇಂಧನ ಸಂಸ್ಥೆಗೆ ಸೇರಿದ್ದಾಗಿದೆ. ಇನ್ನು, ಕಾರ್ಮಿಕರನ್ನು ರಕ್ಷಿಸುವುದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಬೀಜಿಂಗ್(ಸೆ.27): ನೈರುತ್ಯ ಚೀನಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ವೇಳೆ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 16 ಕಾರ್ಮಿಕರು ಅಸುನೀಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಮತ್ತೋರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಂದು ಭಾನುವಾರ ಬೆಳಗ್ಗೆ ಕನ್ವೆಯರ್ ಸ್ಫೋಟದಲ್ಲಿ ಅಪಾಯಕಾರಿ ಹಂತದ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾಗಿದೆ. ಈ ವೇಳೆ ಕಲ್ಲಿದ್ದಲು ಗಣಿಯ ತಳಭಾಗದಲ್ಲೇ ಸಿಲುಕಿ ಹಾಕಿಕೊಂಡಿದ್ದ 16 ಕಾರ್ಮಿಕರು ಕಾರ್ಬನ್ ಮಾನಕ್ಸೈಡ್ ವಿಷ ಸೇವಿಸಿ ಸಾವನ್ನಪ್ಪಿದ್ಧಾರೆ ಎಂದು ಚೀನಾ ಸರ್ಕಾರಿ ಅಧೀನದ ಕ್ಸಿನುವಾ ಸುದ್ದಿ ಸಂಸ್ಥೆ ಹೇಳಿದೆ.
ಚಾಂಗ್ ಕ್ವಿಂಗ್ ನಗರದಿಂದ ಹೊರ ಪ್ರದೇಶದಲ್ಲಿ ಈ ಸಾಂಗ್ ಜೋ ಕಲ್ಲಿದ್ದಲು ಗಣಿಕಾರಿಕೆ ನಿಕ್ಷೇಪವು ಇದೆ. ಇದು ಚಾಂಗ್ಕಿಂಗ್ ಎನರ್ಜಿ ಎಂಬ ರಾಜ್ಯ ಇಂಧನ ಸಂಸ್ಥೆಗೆ ಸೇರಿದ್ದಾಗಿದೆ. ಇನ್ನು, ಕಾರ್ಮಿಕರನ್ನು ರಕ್ಷಿಸುವುದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸದ್ಯ ದುರಂತಕ್ಕೆ ಕಾರಣ ಏನೆಂದು ಗೊತ್ತಾಗಿಲ್ಲ. ಚೀನಾದಲ್ಲಿ ಗಣಿಗಾರಿಕೆಯ ಅಪಘಾತಗಳು ಸಾಮಾನ್ಯವಾಗಿವೆ. ಅಲ್ಲಿನ ಕಂಪೆನಿಗಳು ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿವೆ. ಹೀಗಾಗಿ ಈ ಘಟನೆ ಸಂಭವಿಸಿರಬಹುದು ಎಂದೇಳಲಾಗುತ್ತಿದೆ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ