ನವದೆಹಲಿ(ಡಿ.02): ಗಡಿ ಬಿಕ್ಕಟ್ಟಿನ ನಡುವೆಯೂ ದಶಕಗಳಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರ ಚೀನಾ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಶುರು ಮಾಡಿದೆ. ಲಡಾಕ್ ಗಡಿಯಲ್ಲಿ ಕಟ್ಟುನಿಟ್ಟಿನ ಸರಬರಾಜು ಮತ್ತು ರಿಯಾಯಿತಿ ದರದಲ್ಲಿ ಅಕ್ಕಿ ರಫ್ತು ಮಾಡುತ್ತಿರುವ ಕಾರಣಕ್ಕೆ ಚೀನಾ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಕಳೆದ ಮೂರು ದಶಕಗಳಲ್ಲೇ ಮೊದಲ ಬಾರಿಗೆ ಚೀನಾ ಭಾರತದಿಂದ ಅಕ್ಕಿ ಖರೀಸುತ್ತಿದೆ ಎಂದು ಭಾರತೀಯ ಕೈಗಾರಿಕಾ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಭಾರತವು ವಿಶ್ವದಲ್ಲೇ ಅತೀ ದೊಡ್ಡ ಅಕ್ಕಿ ರಫ್ತುದಾರ.ಅಂತೆಯೇ ಚೀನಾ ಅತೀ ದೊಡ್ಡ ಆಮದುದಾರ. ಈ ಮೊದಲು ಬೀಜಿಂಗ್ ವಾರ್ಷಿಕವಾಗಿ ಸುಮಾರು 4 ಮಿಲಿಯನ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಗುಣಮಟ್ಟದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಭಾರತದಿಂದ ಅಕ್ಕಿ ಖರೀದಿಸುವುದನ್ನು ನಿಲ್ಲಿಸಿತ್ತು. ಈಗ ಮತ್ತೆ ಮೂರು ದಶಕಗಳ ಬಳಿಕ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದೆ.
ಉತ್ತರಪ್ರದೇಶ; ಮರಳು ತುಂಬಿದ ಲಾರಿ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ 8 ಜನ ಸಾವು
ಭಾರತ-ಚೀನಾ ಗಡಿ ವಿವಾದದಿಂದಾಗಿ ಎರಡೂ ದೇಶಗಳ ನಡುವೆ ರಾಜಕೀಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಚೀನಾ ಭಾರತದಲ್ಲಿ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿದೆ.
ಚೀನಾ ದಶಕಗಳ ಬಳಿಕ ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿ ಮಾಡಿದೆ. ಭಾರತೀಯ ಬೆಳೆಯ ಗುಣಮಟ್ಟವನ್ನು ನೋಡಿದ ನಂತರ ಮುಂದಿನ ವರ್ಷ ಅವರು ಅಕ್ಕಿ ಖರೀದಿಯನ್ನು ಹೆಚ್ಚಿಸಬಹುದು ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಡಿಸೆಂಬರ್-ಫೆಬ್ರವರಿ ಅವಧಿಗೆ 100,000 ಟನ್ ಅಕ್ಕಿಯನ್ನು ಪ್ರತಿ ಟನ್ಗೆ 300 ಡಾಲರ್ನಂತೆ ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕೈಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ